Please enable javascript.ನಾನೇ ಬಜೆಟ್ ಮಂಡಿಸುತ್ತೇನೆ : ಡಿವಿಎಸ್ - ನಾನೇ ಬಜೆಟ್ ಮಂಡಿಸುತ್ತೇನೆ : ಡಿವಿಎಸ್ - Vijay Karnataka

ನಾನೇ ಬಜೆಟ್ ಮಂಡಿಸುತ್ತೇನೆ : ಡಿವಿಎಸ್

ವಿಕ ಸುದ್ದಿಲೋಕ 20 Mar 2012, 8:55 pm
Subscribe

ಹಣಕಾಸು ಖಾತೆ ಹೊಂದಿರುವ ತಾವೇ ಬುಧವಾರ ಬೆಳಗ್ಗೆ 11ಗಂಟೆಗೆ ಬಜೆಟ್ ಮಂಡಿಸುತ್ತೇನೆ... ಹೀಗೆಂದವರು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ.

ನಾನೇ ಬಜೆಟ್ ಮಂಡಿಸುತ್ತೇನೆ : ಡಿವಿಎಸ್
ಬೆಂಗಳೂರು : ಹಣಕಾಸು ಖಾತೆ ಹೊಂದಿರುವ ತಾವೇ ಬುಧವಾರ ಬೆಳಗ್ಗೆ 11ಗಂಟೆಗೆ ಬಜೆಟ್ ಮಂಡಿಸುತ್ತೇನೆ... ಹೀಗೆಂದವರು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ.

ಬಿಜೆಪಿಯಲ್ಲಿ ಎದ್ದಿರುವ ಸುನಾಮಿ ನಡುವೆಯೂ ಗೃಹಕಚೇರಿ ಕೃಷ್ಣಾ ಮತ್ತು ನಿವಾಸ ಅನುಗ್ರಹದಲ್ಲಿ ಮಂಗಳವಾರ ನಡೆದ ಜನತಾದರ್ಶನದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನಾನೇ ಬಜೆಟ್ ಮಂಡಿಸುವುದಾಗಿ ಪುನರುಚ್ಚರಿಸಿದರು. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಸಂದೇಹ ಬೇಡ ಎಂದು ಸ್ಪಷ್ಟಪಡಿಸಿದರು. ನಾಡಿನ ಎಲ್ಲ ಜನರಿಗೂ, ಎಲ್ಲ ವರ್ಗ ಹಾಗೂ ಜನಾಂಗದವರಿಗೂ ಮುಟ್ಟುವಂತಹ ಉತ್ತಮ ಬಜೆಟ್ ಮಂಡಿಸುತ್ತೇನೆ ಎಂದು ಹೇಳಿದರು.

ಗೊಂದಲ ಪರಿಹಾರ: ಬಜೆಟ್ ಮುಂದೋಗುತ್ತದೆ ಎಂದು ಹೇಳುತ್ತಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ನಾಜೂಕಾಗಿ ಉತ್ತರಿಸಿದ ಸಿಎಂ ಇದನ್ನು ಯಾರು ಹೇಳಿದರು ಎಂದು ಮರುಪ್ರಶ್ನೆ ಹಾಕಿದರು.

ಮಂಗಳವಾರವೇ ವಿಧಾನಸೌಧದ ಅಧಿವೇಶನ ಆರಂಭಗೊಂಡಿದೆ. ಬುಧವಾರ ಬಜೆಟ್ ಮಂಡನೆಯಾಗಲಿದೆ. ವಾಡಿಕೆಯಂತೆ ಹಣಕಾಸು ಸಚಿವರು ಹಾಗೂ ಮುಖ್ಯಮಂತ್ರಿ ಬಜೆಟ್ ಮಂಡಿಸುತ್ತಾರೆ. ಹಾಗೆಯೇ ನಾನೂ ಸಹ ಬುಧವಾರ ಬಜೆಟ್ ಮಂಡಿಸುತ್ತೇನೆ ಎಂದು ತಿಳಿಸಿದರು.

ಪಕ್ಷದಲ್ಲಿನ ಎಲ್ಲ ಗೊಂದಲಗೂ ಪರಿಹಾರ ಕಾಣಲಿವೆ. ರೆಸಾರ್ಟ್‌ನಲ್ಲಿ ಉಳಿದುಕೊಂಡಿರುವ ಕೆಲ ಸಚಿವರು ಹಾಗೂ ಶಾಸಕರು ನಮ್ಮವರೇ. ಹೀಗಾಗಿ ಈ ಬಗ್ಗೆ ಹೆಚ್ಚಿನದ್ದೇನೂ ಕಲ್ಪಿಸುವುದು ಬೇಡ. ಎಲ್ಲರೂ ವಿಧಾನಮಂಡಲದ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಾರೆಂಬ ವಿಶ್ವಾಸ ನನಗಿದೆ. ಕೆಲ ಶಾಸಕರು ಭಾಗವಹಿಸುವುದಿಲ್ಲ ಎನ್ನುವ ವರದಿ ಸರಿಯಲ್ಲ ಎಂದು ಹೇಳಿದರು.

ರಾಜ್ಯದ ಹಿತ ಕಾಪಾಡುವ ಹೊಣೆಗಾರಿಕೆ 224 ಶಾಸಕರ ಮೇಲಿದ್ದು, ವಿಧಾನಮಂಡಲ ಅಧಿವೇಶನದಲ್ಲಿ ಮುಕ್ತ ಚರ್ಚೆ ನಡೆಯಬೇಕೆಂಬ ಬಯಕೆ ನನ್ನದು ಎಂದರು.

ಸುಖಾಂತ್ಯ ಕಾಣಲಿದೆ: ಕೃಷ್ಣಾದಲ್ಲಿ ಮುಖ್ಯಮಂತ್ರಿ ಭೇಟಿಯಾಗಿದ್ದ ಅರಣ್ಯ ಸಚಿವ ಸಿ.ಪಿ. ಯೋಗಿಶ್ವರ್ ಸುದ್ದಿಗಾರರೊಂದಿಗೆ ಮಾತನಾಡಿ, ಇದು ನಾಯಕರೊಂದಿಗಿನ ಜಗಳ ಸರಿಹೋಗಲಿದೆ. ಎರಡು ದಿನಗಳಲ್ಲಿ ಇದು ಸುಖಾಂತ್ಯ ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ಭೇಟಿ: ಇದಕ್ಕೂ ಮುನ್ನ ಆರ್‌ಎಸ್‌ಎಸ್‌ನ ಹಿರಿಯ ನಾಯಕ ಲಾಲ್‌ಜಿ ಟಂಡನ್ ಅವರು ಮುಖ್ಯಮಂತ್ರಿ ಸದಾನಂದಗೌಡ ಅವರನ್ನು ಭೇಟಿ ಮಾಡಿ ಕೆಲಕಾಲ ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಲ್ಲಿ ಸದ್ಯ ಎದ್ದಿರುವ ಎಲ್ಲ ಗೊಂದಲಗಳು ಶೀಘ್ರವೇ ಬಗೆಹರಿಯಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ