Please enable javascript.ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ ಸಿಬಿಐ ವಿಚಾರಣೆ - ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ ಸಿಬಿಐ ವಿಚಾರಣೆ - Vijay Karnataka

ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ ಸಿಬಿಐ ವಿಚಾರಣೆ

ವಿಕ ಸುದ್ದಿಲೋಕ 7 Jul 2012, 11:59 pm
Subscribe

ಗಣಿ ಕಂಪನಿಗಳಿಂದ ಕಿಕ್‌ಬ್ಯಾಕ್ ಹಾಗೂ ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಶಾಸಕ ಕೃಷ್ಣಯ್ಯ ಶೆಟ್ಟಿ ಅವರನ್ನು ಸಿಬಿಐ ಅಧಿಕಾರಿಗಳು ಶನಿವಾರ ವಿಚಾರಣೆಗೆ ಒಳಪಡಿಸಿದ್ದಾರೆ.

ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ ಸಿಬಿಐ ವಿಚಾರಣೆ
ಬೆಂಗಳೂರು: ಗಣಿ ಕಂಪನಿಗಳಿಂದ ಕಿಕ್‌ಬ್ಯಾಕ್ ಹಾಗೂ ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಶಾಸಕ ಕೃಷ್ಣಯ್ಯ ಶೆಟ್ಟಿ ಅವರನ್ನು ಸಿಬಿಐ ಅಧಿಕಾರಿಗಳು ಶನಿವಾರ ವಿಚಾರಣೆಗೆ ಒಳಪಡಿಸಿದ್ದಾರೆ.

ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಸಿಬಿಐ ನೋಟಿಸ್ ಜಾರಿ ಮಾಡಿತ್ತು. ಕೃಷ್ಣಯ್ಯ ಶೆಟ್ಟಿ ಸಂಜೆ 4 ಗಂಟೆಗೆ ಆಗಮಿಸಿ ರಾತ್ರಿ 8ಕ್ಕೆ ವಾಪಸಾದರೆ, ಬಿಎಸ್‌ವೈ ಸಂಜೆ 4.45 ರ ಸುಮಾರಿಗೆ ಹಾಜರಾಗಿದ್ದರು. ಸಂಸದ ಬಿ.ವೈ. ರಾಘವೇಂದ್ರ ಜತೆಯಲ್ಲಿದ್ದರು.

ಗಂಗಾನಗರದಲ್ಲಿರುವ ಸಿಬಿಐ ಕಚೇರಿಗೆ ಆಗಮಿಸಿದ ಬಿಎಸ್‌ವೈ ಅವರನ್ನು ನಾಲ್ಕೂವರೆ ಗಂಟೆ ವಿಚಾರಣೆ ನಡೆಸಿ, ಪ್ರೇರಣಾ ಟ್ರಸ್ಟ್‌ಗೆ ದೇಣಿಗೆ, ಜೆಎಸ್‌ಡಬ್ಲ್ಯು ಕಂಪನಿಯಿಂದ ಕಪ್ಪ, ಹಣ ವರ್ಗಾವಣೆ ಮತ್ತಿತರ ವಿಷಯ ಕುರಿತು 20 ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಎಸ್‌ವೈಗೆ ಕೇಳಲೆಂದು ಸಿಬಿಐ ಅಧಿಕಾರಿಗಳು ಸಿದ್ಧ ಮಾಡಿಕೊಂಡಿದ್ದ ಎಲ್ಲ ಪ್ರಶ್ನೆಗಳನ್ನು ಸಮಯದ ಅಭಾವದಿಂದ ಕೇಳಲಾಗಲಿಲ್ಲ. ಅವರ ಕುಟುಂಬಕ್ಕೆ ಸೇರಿದ ಆಸ್ತಿ ಕುರಿತ ಬಹುತೇಕ ಪ್ರಶ್ನೆಗಳಿಗೆ ಬಿಎಸ್‌ವೈ ಉತ್ತರ ನೀಡಿದರು ಎನ್ನಲಾಗಿದೆ. ಬಿಎಸ್‌ವೈ ಹಾಗೂ ರಾಘವೇಂದ್ರ ರಾತ್ರಿ 9 ಗಂಟೆಗೆ ತಮ್ಮ ನಿವಾಸಕ್ಕೆ ವಾಪಸಾದರು.

ಇದಕ್ಕೂ ಮುನ್ನ ಕೃಷ್ಣಯ್ಯ ಶೆಟ್ಟರನ್ನು ಮೂರೂವರೆ ಗಂಟೆ ವಿಚಾರಣೆ ನಡೆಸಿ, ರಾಚೇನಹಳ್ಳಿ ಡಿನೋಟಿಫೈಗೆ ಸಂಬಂಧಿಸಿದ 20 ಪ್ರಶ್ನೆಗಳಿಗೆ ಉತ್ತರ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೃಷ್ಣಯ್ಯ ಶೆಟ್ಟಿ ಹಿಂಬಾಗಿಲಿನಿಂದ ರಾತ್ರಿ 8 ಗಂಟೆ ಸುಮಾರಿಗೆ ತೆರಳಿದರು.

ಭದ್ರತೆ: ಸಿಬಿಐ ಕಚೇರಿ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಾಧ್ಯಮದವರಿಗೆ ಪ್ರವೇಶ ನಿಷೇಧಿಸಲಾಗಿತ್ತು.

ಕಿಕ್‌ಬ್ಯಾಕ್ ಪ್ರಕರಣದಲ್ಲಿ ಬಿ.ವೈ. ರಾಘವೇಂದ್ರ, ಬಿ.ವೈ. ವಿಜಯೇಂದ್ರ ಹಾಗೂ ಅಳಿಯ ಸೋಹನ್‌ಕುಮಾರ್, ಜೆಎಸ್‌ಡಬ್ಲ್ಯು ಸಿಇಒ ವಿಕಾಸ್ ಶರ್ಮ ಹಾಗೂ ರಾಚೇನಹಳ್ಳಿ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಸಿದ್ದಯ್ಯ ಸೇರಿದಂತೆ ಕೆಲ ಅಧಿಕಾರಿಗಳನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ