Please enable javascript.ಲಂಚಪ್ರಪಂಚ: ಸುಲಭೋಪಾಯ ಬೇಡ - ಲಂಚಪ್ರಪಂಚ: ಸುಲಭೋಪಾಯ ಬೇಡ - Vijay Karnataka

ಲಂಚಪ್ರಪಂಚ: ಸುಲಭೋಪಾಯ ಬೇಡ

Vijaya Karnataka Web 7 May 2015, 4:41 am
Subscribe

ನಾನು ಇತ್ತೀಚೆಗೆ ಹೊಸ ಬೈಕ್ ತೆಗೆದುಕೊಂಡೆ. ಸಹಜ–ವಾಗಿಯೇ ನನಗೆ ಲೈಸೆನ್ಸ್ ಬೇಕಾಗಿತ್ತು. ಈ ಬಗ್ಗೆ ನಾನು ಗೆಳೆಯರೊಂದಿಗೆ ಪ್ರಸ್ತಾಪಿಸಿದಾಗ ಅವರು, ‘‘ಇದಕ್ಕೆ ಒಂದೆರಡು ಸಾವಿರ ರೂಪಾಯಿ ಖರ್ಚಾಗುತ್ತೆ,’’ ಎಂದರು.

ಲಂಚಪ್ರಪಂಚ: ಸುಲಭೋಪಾಯ ಬೇಡ
ನಾನು ಇತ್ತೀಚೆಗೆ ಹೊಸ ಬೈಕ್ ತೆಗೆದುಕೊಂಡೆ. ಸಹಜ–ವಾಗಿಯೇ ನನಗೆ ಲೈಸೆನ್ಸ್ ಬೇಕಾಗಿತ್ತು. ಈ ಬಗ್ಗೆ ನಾನು ಗೆಳೆಯರೊಂದಿಗೆ ಪ್ರಸ್ತಾಪಿಸಿದಾಗ ಅವರು, ‘‘ಇದಕ್ಕೆ ಒಂದೆರಡು ಸಾವಿರ ರೂಪಾಯಿ ಖರ್ಚಾಗುತ್ತೆ,’’ ಎಂದರು. ನಾನು ಚಕಿತನಾಗಿ ‘ಅಷ್ಟೊಂದೆಲ್ಲ ಯಾಕೆ?’’ ಎಂದೆ. ಅದಕ್ಕೆ ಅವರೆಲ್ಲ ‘‘ಆರ್‌ಟಿಒ ಕಚೇರಿ ಎದುರು ಏಜೆಂಟರು ನಿಂತಿರುತ್ತಾರೆ. ಅವರಿಗೆ ಇಷ್ಟು ದುಡ್ಡು ಕೊಟ್ಟರೆ ಬೇಗ ಮಾಡಿಸಿಕೊಡುತ್ತಾರೆ. ಇಲ್ಲಾವಾದರೆ ನೂರೆಂಟು ಕಿರಿಕ್,’’ ಎಂದರು. ನಾನು ಕೂಡ ಇದಕ್ಕೆ ಸಮ್ಮತಿಸಿದೆ. ಆದರೆ ಅದು ಸರಕಾರಕ್ಕೆ ಹೋಗುವ ಹಣ–ವಲ್ಲ ಎಂಬುದು ನೆನಪಾದ ಮೇಲೆ, ನಾನು ತಪ್ಪು ಹಾದಿ ಹಿಡಿಯುತ್ತಿದ್ದೇನೆ ಎಂದು ಹೊಳೆಯಿತು. ನೇರ–ವಾಗಿ ಅಧಿಕಾರಿಯೊಬ್ಬರನ್ನು ಭೇಟಿ, ಕಾನೂನುಬದ್ಧವಾಗಿ ಲೈಸೆನ್ಸ್ ಪಡೆಯುವುದಕ್ಕೆ ಏನು ಮಾಡಬೇಕೆಂದು ಕೇಳಿಕೊಂಡು ಬಂದೆ. ಈಗ ಅದೇ ರೀತಿಯಲ್ಲಿ ಅರ್ಜಿ ಹಾಕಿ, ಇಲಾಖೆಯ ಪರೀಕ್ಷೆ ಎದುರಿಸಿ, ಲೈಸೆನ್ಸ್ ಪಡೆ–ಯಲಿದ್ದೇನೆ.
-ಮನೋಜ್ ಕುಮಾರ್ ಬೆಂಗಳೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ