ಆ್ಯಪ್ನಗರ

Broom Vastu Tips: ಈ 2 ದಿನಗಳಲ್ಲಿ ಪೊರಕೆ ಖರೀದಿಸಿದ್ರೆ ದಾರಿದ್ರ್ಯ ಹಿಂಬಾಲಿಸುತ್ತೆ!

Jhadu Vastu Tips: ಮನೆ ಗುಡಿಸಲು ಪೊರೆಕೆ ಬೇಕೇ ಬೇಕು. ಆದರೆ ವಾಸ್ತು ಪ್ರಕಾರ ಪೊರಕೆಯನ್ನು ಎಲ್ಲಾ ದಿನ ಖರೀದಿ ಮಾಡುವುದು ಶುಭ ದಾಯಕವಲ್ಲ. ಈ ಎರಡು ದಿನ ಮನೆಗೆ ಪೊರಕೆಯನ್ನ ಖರೀದಿಸಿ ತಂದರೆ ಮನೆಯಲ್ಲಿರುವ ಭಾಗ್ಯಲಕ್ಷ್ಮಿ ಮನೆಯಿಂದ ಹೊರ ಹೋಗುತ್ತಾಳೆ ಎನ್ನಲಾಗುತ್ತದೆ. ಹಾಗಾಗಿ ಪೊರಕೆ ಖರೀದಿಸಬಾರದ ಎರಡು ದಿನಗಳ ಬಗ್ಗೆ ಇಲ್ಲಿ ತಿಳಿಯೋಣ.

Authored by ಆಶಾ ಸಂಪದ | Agencies 17 May 2024, 10:35 pm
ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಅದೃಷ್ಟ ಹಾಗೂ ಲಕ್ಷ್ಮಿಯ ಸ್ವರೂಪ ಎನ್ನಲಾಗುತ್ತದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಪೊರಕೆಯಿಂದ ಕಸಗುಡಿಸುವುದನ್ನು ಮಾಡಿದ್ರೆ ಅದೃಷ್ಟ ಕೈ ಬಿಟ್ಟು ಹೋಗುತ್ತೆ ಅನ್ನೋದಾಗಿ ವಾಸ್ತುಶಾಸ್ತ್ರದ ಪ್ರಕಾರ ತಿಳಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಕಸಗುಡಿಸುವುದರ ಬಗ್ಗೆ ಸಾಕಷ್ಟು ನಿಯಮಗಳ ಉಲ್ಲೇಖವಾಗಿದೆ. ಇನ್ನು ಶಾಸ್ತ್ರಗಳ ಪ್ರಕಾರ ವಾರದಲ್ಲಿ ಕೆಲವೊಂದು ದಿನಗಳಲ್ಲಿ ಪೊರಕೆಯನ್ನು ಖರೀದಿಸುವುದು ಅಶುಭ ಎಂಬುದಾಗಿ ಪರಿಗಣಿಸಲಾಗಿದೆ. ಹಾಗಿದ್ರೆ ಆ ಎರಡು ವಾರಗಳು ಯಾವುವು ಹಾಗೂ ಪೊರಕೆಯ ವಿಚಾರದ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಇರುವಂತಹ ಕೆಲವೊಂದು ಪ್ರಮುಖ ಮಾಹಿತಿಗಳು ಏನು ಎನ್ನುವುದನ್ನು ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.
Vijaya Karnataka Web Broom Vastu Tips


ಈ ದಿನ ಪೊರಕೆ ಖರೀದಿಸಬೇಡಿ
ವಾಸ್ತು ಶಾಸ್ತ್ರದ ಪ್ರಕಾರ, ಸೋಮವಾರದಂದು ಪೊರಕೆಯನ್ನು ಯಾವತ್ತೂ ಕೂಡ ಖರೀದಿ ಮಾಡಬಾರದು. ಇದರಿಂದಾಗಿ ನಿಮ್ಮ ಧನಾಗಮನದ ವಿಚಾರದಲ್ಲಿ ಸಾಕಷ್ಟು ಅಡೆತಡೆಗಳು ಉಂಟಾಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಯುಗಾದಿ ಅಪ್ಪಿತಪ್ಪಿಯು ಕೂಡ ಸೋಮವಾರದ ದಿನದಂದು ಪೊರಕೆಯನ್ನು ಖರೀದಿಸಿ ಮನೆಗೆ ತರಬಾರದು. ಈ ರೀತಿ ಮಾಡಿದರೆ ನಿಮ್ಮ ಮೇಲೆ ನೆಗೆಟಿವ್ ಎನರ್ಜಿ ಹೆಚ್ಚಾಗುತ್ತದೆ ಹಾಗೂ ನಿಮ್ಮ ಜೀವನದಲ್ಲಿ ಖರ್ಚುಗಳು ಹಾಗೂ ಸಾಲದ ಮೊತ್ತ ಕೂಡ ಹೆಚ್ಚಾಗುವಂತಹ ಸಾಧ್ಯತೆ ಇರುತ್ತದೆ. ನೀವು ಕೂಡ ಲಕ್ಷ್ಮೀದೇವಿಯನ್ನು ಪ್ರಸನ್ನ ಗೊಳಿಸಬೇಕು ಎನ್ನುವಂತಹ ಆಸಕ್ತಿ ಇದ್ದಲ್ಲಿ ಯಾವತ್ತೂ ಕೂಡ ಸೋಮವಾರದ ದಿನದಂದು ಕೊರತೆಯನ್ನು ಖರೀದಿಸುವಂತಹ ದುಸ್ಸಾಹಸಕ್ಕೆ ಕೈ ಹಾಕಬೇಡಿ. ಇದರಿಂದಾಗಿ ನೀವು ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು.

ಶನಿವಾರದ ದಿನದಂದು ಕೂಡ ಪೊರಕೆ ಖರೀದಿ ಮಾಡಬೇಡಿ
ಶನಿವಾರದ ದಿನದಂದು ಸಾಮಾನ್ಯವಾಗಿ ಎಣ್ಣೆ ಹಾಗೂ ಲೋಹದ ವಸ್ತುಗಳನ್ನು ಖರೀದಿ ಮಾಡುವುದು ಅಪಶಕುನ ಎಂಬುದಾಗಿ ಪರಿಗಣಿಸಲಾಗುತ್ತದೆ. ಅದೇ ರೀತಿಯಲ್ಲಿ ಪೊರಕೆಯನ್ನು ಖರೀದಿ ಮಾಡುವುದು ಕೂಡ ವಾಸ್ತು ಶಾಸ್ತ್ರದ ಪ್ರಕಾರ ಶನಿವಾರ ಸಮಸ್ಯೆಗಳನ್ನು ತರಬಹುದಾದಂತಹ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ. ಒಂದು ವೇಳೆ ನೀವು ನಿಮ್ಮ ಜೀವನದಲ್ಲಿ ಲಕ್ಷ್ಮಿಯ ಕೃಪಾಕಟಾಕ್ಷವನ್ನು ಹೊಂದಬೇಕು ಅಂತ ಇದ್ರೆ ಯಾವತ್ತು ಕೂಡ ಶನಿವಾರದ ದಿನದಂದು ಪೊರಕೆ ಯನ್ನು ಖರೀದಿ ಮಾಡುವುದಕ್ಕೆ ಹೋಗಬೇಡಿ. ಹಾರ್ದಿಕ ಸಂಕಷ್ಟವನ್ನು ಕೂಡ ನೀವು ಕಾಣಬೇಕಾದಂತಹ ಸಾಧ್ಯತೆ ಇರುತ್ತದೆ. ಕೇವಲ ಲಕ್ಷ್ಮೀದೇವಿಯ ಕೋಪಕ್ಕೆ ಮಾತ್ರವಲ್ಲದ ಶನಿಯ ಕೋಪಕ್ಕೆ ಕೂಡ ನೀವು ಗುರಿಯಾಗಬೇಕಾಗುತ್ತದೆ.
Money Plant: ಮನಿ ಪ್ಲಾಂಟ್ ಈ ಜಾಗದಲ್ಲಿಟ್ರೆ, ನಿಮ್ಮ ಜೇಬೂ ಬರಿದಾಗಬಹುದು..!

ಪೊರಕೆಯನ್ನು ಯಾವಾಗ ಖರೀದಿಸುವುದು ಉತ್ತಮ?
ಒಂದು ವೇಳೆ ಮನೆಗೆ ಹೊಸ ಪೊರಕೆಯನ್ನು ಖರೀದಿ ಮಾಡಬೇಕು ಎನ್ನುವಂತಹ ಪ್ಲಾನ್ ನಿಮ್ಮ ತಲೆಯಲ್ಲಿ ಇದ್ದರೆ ಶುಕ್ರವಾರ ಹಾಗೂ ಮಂಗಳವಾರದ ದಿನದಂದು ಇದನ್ನು ಖರೀದಿ ಮಾಡಬೇಕು. ಇದರಿಂದಾಗಿ ಲಕ್ಷ್ಮಿ ಮಾತೆಯ ಕೃಪೆ ನಿಮ್ಮ ಜೀವನದಲ್ಲಿ ಇರುತ್ತದೆ. ಇನ್ನು ಅಕ್ಷಯ ತೃತೀಯದ ದಿನದಂದು ಕೂಡ ನೀವು ಪೊರಕೆಯನ್ನು ಖರೀದಿ ಮಾಡುವುದು ಸಾಕಷ್ಟು ಶುಭ ಎಂಬುದಾಗಿ ಪರಿಗಣಿಸಲಾಗುತ್ತದೆ.

ಪಂಚಕದಲ್ಲಿ ಕೂಡ ಯಾವುದೇ ಕಾರಣಕ್ಕೂ ಕಸಪೊರಕೆಯನ್ನು ಖರೀದಿ ಮಾಡುವಂತಹ ಯೋಜನೆಗೆ ಹೋಗ್ಬೇಡಿ. ಇದರ ಜೊತೆಗೆ ಕೆಲವೊಂದು ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಕೂಡ ಇದನ್ನು ಖರೀದಿ ಮಾಡುವುದು ನಿಮಗೆ ಸಾಕಷ್ಟು ಅಶುಭ ಎಂಬುದಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಪಂಚಕ ಮುಗಿದ ನಂತರ ನೀವು ಕಸಪೊರಕೆಯನ್ನು ಖರೀದಿ ಮಾಡಬಹುದಾಗಿದೆ.
Ketu-Surya Yuti: ಕೇತು-ಸೂರ್ಯ ಸಂಯೋಗ, ಈ ರಾಶಿಯವರ ಕಷ್ಟದ ದಿನಗಳು ದೂರವಾಗಲಿವೆ!

ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಎಲ್ಲಿಡಬೇಕು ಗೊತ್ತಾ?
ಒಂದು ವೇಳೆ ನಿಮ್ಮ ಮನೆಯಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ಕೆಲಸಗಳು ಸರಿಯಾಗಿ ನಡೆಯಬೇಕು ಹಾಗೂ ನಿಮ್ಮ ಜೀವನದಲ್ಲಿ ಕೂಡ ಸಮೃದ್ಧಿ ಹೆಚ್ಚಾಗಬೇಕು ಎನ್ನುವಂತಹ ಆಸೆ ಇದ್ರೆ ನಿಮ್ಮ ಮನೆಯಲ್ಲಿ ಕೊರತೆಯನ್ನು ಉತ್ತರ ಪಶ್ಚಿಮ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡುವುದು ಒಳ್ಳೆಯದು. ಇದರಿಂದಾಗಿ ಲಕ್ಷ್ಮೀದೇವಿ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ. ನಿಮ್ಮ ಮನೆಯಲ್ಲಿ ಸಾಕಷ್ಟು ಸಕಾರಾತ್ಮಕ ಶಕ್ತಿಗಳು ಕೂಡ ಹೆಚ್ಚಾಗುತ್ತದೆ ಹಾಗೂ ನಕಾರಾತ್ಮಕ ಶಕ್ತಿಗಳು ಮನೆಯಿಂದ ಹೊರ ಹೋಗುತ್ತವೆ. ಆರ್ಥಿಕ ಸಂಕಷ್ಟದ ವಿಚಾರದಲ್ಲಿ ಕೂಡ ನೀವು ಯಾವುದೇ ಸಮಸ್ಯೆಗಳನ್ನು ಕಾಣುವುದಿಲ್ಲ ಎಲ್ಲ ಸಮಸ್ಯೆಗಳು ಪರಿಹಾರವಾಗಲಿವೆ.
ಲೇಖಕರ ಬಗ್ಗೆ
ಆಶಾ ಸಂಪದ
ಆಶಾ ಸಂಪದ ಅವರು ಅನುಭವಿ ಪತ್ರಕರ್ತರಾಗಿದ್ದು, ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ 2022ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2014ರಲ್ಲಿ ನ್ಯೂಸ್ ಚಾನೆಲ್ ಮೂಲಕ ವೃತ್ತಿಜೀವನ ಪ್ರಾರಂಭಿಸಿದ ಇವರು ಮಾಧ್ಯಮ ರಂಗದಲ್ಲಿ 9 ವರ್ಷ ಅನುಭವ ಹೊಂದಿದ್ದಾರೆ. ಪ್ರಸ್ತುತ ಜ್ಯೋತಿಷ್ಯ ವಿಭಾಗದ ಸಂಪಾದಕರಾಗಿ 1 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು, ಅದಕ್ಕೂ ಹಿಂದಿನಿಂದ ವಾರಪತ್ರಿಕೆಗಳಿಗೆ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳ ಬರವಣಿಗೆಯಿಂದ ಗುರುತಿಸಿಕೊಂಡಿರುತ್ತಾರೆ. ಕೆಲಸದ ಹೊರತಾಗಿ, ಓದು, ಪ್ರವಾಸ, ಫೋಟೋಗ್ರಫಿ, ಯೋಗ ಇವರ ಇಷ್ಟದ ಅಭ್ಯಾಸ-ಹವ್ಯಾಸಗಳು. ಎಸ್.ಎಲ್ ಭೈರಪ್ಪ ಇವರ ನೆಚ್ಚಿನ ಲೇಖಕರು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ