ಆ್ಯಪ್ನಗರ

Unlucky Vehicle Number: ದುರದೃಷ್ಟ ತರುವ ವೆಹಿಕಲ್ ನಂಬರ್‌ಗಳಿವು..!

Vehicle Number Plate: ಕೆಲವರು ಬಹಳ ಯೋಚಿಸಿ ಅವರಿಗೆ ಇಷ್ಟವಾಗುವ ಸಂಖ್ಯೆಗಳನ್ನೇ ಕಾರಿಗೆ ಸಿಗುವ ಹಾಗೆ ಮಾಡುತ್ತಾರೆ. ಆದರೆ ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ವಾಹನಕ್ಕೆ ಯಾವ ನಂಬರ್ ಅದೃಷ್ಟವಲ್ಲ ಎಂಬ ಮಾಹಿತಿ ಈ ಲೇಖನದಲ್ಲಿದೆ.

Authored by ಆಶಾ ಸಂಪದ | Agencies 16 May 2024, 4:10 pm
ಸಾಕಷ್ಟು ಬಾರಿ ನಿಮಗೆ ಅನಿಸಿರಬಹುದು ನಾವು ಯಾವುದೇ ಕೆಲಸವನ್ನು ಮಾಡಿದರೂ ಕೂಡ ಅದು ನಮಗೆ ದುರದೃಷ್ಟವನ್ನು ತರುತ್ತದೆ ಎಂದು. ಆದರೆ ಇದರಲ್ಲಿ ನಂಬರ್ ಆಟ ಕೂಡ ಇದೆ. ಸಂಖ್ಯಾಶಾಸ್ತ್ರದ ಬಗ್ಗೆ ತಿಳಿದಿರುವವರಿಗೆ ಈ ಬಗ್ಗೆ ಸ್ವಲ್ಪ ಮಟ್ಟಿಗೆ ಮಾಹಿತಿ ತಿಳಿದಿರುತ್ತದೆ. ಸಂಖ್ಯಾಶಾಸ್ತ್ರ ಈ ರೀತಿಯ ಅದೃಷ್ಟ ಹಾಗೂ ದುರದೃಷ್ಟದ ಸಮಯಗಳಲ್ಲಿ ಸಾಕಷ್ಟು ಪ್ರಮುಖವಾದ ಪರಿಣಾಮವನ್ನು ಬೀರುತ್ತದೆ ಅನ್ನೋದನ್ನ ನೆನಪಿನಲ್ಲಿಟ್ಟುಕೊಳ್ಳಿ.
Vijaya Karnataka Web number plate

ಉದಾಹರಣೆಗೆ ವಾಹನದ ಬಗ್ಗೆ ಮಾತನಾಡುವುದಾದರೆ ಆ ವಾಹನದ ನಂಬರ್ ಪ್ಲೇಟ್ ನಲ್ಲಿ ಇರುವಂತಹ ನಂಬರ್ ಆ ಓನರ್‌ಗೆ ಅದೃಷ್ಟ ತರುವಂತಹ ನಂಬರ್ ಆಗಿದ್ರೆ ಆ ವಾಹನದ ಬಾಳಿಕೆ ದೀರ್ಘಕಾಲದ ವರೆಗೆ ಬರುತ್ತದೆ. ಯಾವುದೇ ರೀತಿಯಲ್ಲಿ ಆ ಕಾರು ನಿಮಗೆ ಮಧ್ಯ ದಾರಿಯಲ್ಲಿ ಹೋಗುವಾಗ ಕೈ ಕೊಡೋದಿಲ್ಲ. ಕೆಲವೊಮ್ಮೆ ಅದೃಷ್ಟ ಇಲ್ಲದೆ ಇರುವಂತಹ ನಂಬರ್ ನಿಮ್ಮ ವಾಹನದ ನಂಬರ್ ಪ್ಲೇಟ್ ನಲ್ಲಿ ಇದ್ದರೆ ಅಪಘಾತಗಳು ಉಂಟಾಗುವಂತಹ ಸಾಧ್ಯತೆ ಸಾಕಷ್ಟು ಬಾರಿ ಕಂಡು ಬರುತ್ತದೆ. ಹೀಗಾಗಿ ನೀವು ನಿಮ್ಮ ವಾಹನದ ನಂಬರ್ ಪ್ಲೇಟ್ ಬಗ್ಗೆ ಗಂಭೀರವಾಗಿ ಗಮನ ವಹಿಸಬೇಕಾಗಿರುತ್ತದೆ. ಹಾಗಿದ್ರೆ ಯಾವ ರೀತಿಯಲ್ಲಿ ಸಂಖ್ಯಾ ಶಾಸ್ತ್ರದ ಪ್ರಕಾರ ದುರದೃಷ್ಟಕರ ನಂಬರ್ ಕಂಡುಹಿಡಿಯಬಹುದು ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ.

ಸಂಖ್ಯಾಶಾಸ್ತ್ರದ ಪ್ರಕಾರ ದುರದೃಷ್ಟಕರ ನಂಬರ್

ನಂಬರ್ 13
ತಮ್ಮ ವಾಹನಗಳಿಗೆ 13 ನಂಬರ್ ಅನ್ನು ಆಯ್ಕೆ ಮಾಡುವಂತಹ ವಾಹನಗಳ ಮಾಲೀಕರಿಗೆ ಅಷ್ಟೊಂದು ಇದು ಶುಭಕರವಾಗಿರುವುದಿಲ್ಲ. ಈ ನಂಬರ್ ಎನ್ನುವುದು ದುಷ್ಟ ಶಕ್ತಿಗಳು ಹಾಗೂ ದುಷ್ಟ ಪರಿಣಾಮಗಳಿಗೆ ಲಿಂಕ್ ಆಗಿರುವಂತಹ ನಂಬರ್ ಆಗಿದೆ ಎಂಬುದಾಗಿ ಸಂಖ್ಯಾಶಾಸ್ತ್ರ ತಿಳಿಸುತ್ತದೆ. ಸಂಖ್ಯಾಶಾಸ್ತ್ರ ತಿಳಿಸುವಂತೆ ಯಾರೆಲ್ಲಾ ವಾಹನದಲ್ಲಿ 13 ನಂಬರ್ ಅನ್ನು ಹೊಂದಿರುತ್ತಾರೋ ಅವರಿಗೆ ಕೆಟ್ಟ ಪರಿಣಾಮಗಳು ಉಂಟಾಗುವ ಸಾಧ್ಯತೆ ಅವರ ಜೀವನದಲ್ಲಿ ಇರುತ್ತೆ. ಹೀಗಾಗಿ ಜೀವನದಲ್ಲಿ ಒಳ್ಳೇದಾಗ್ಬೇಕು ಅಂತ ಇದ್ರೆ 13 ನಂಬರ್ ನಿಂದ ಆದಷ್ಟು ದೂರ ಇರುವುದೇ ಒಳ್ಳೆಯದು.

ನಂಬರ್ 1358
ಒಂದು ವೇಳೆ ನಿಮ್ಮ ವಾಹನದ ನಂಬರ್ ಪ್ಲೇಟ್ ನಲ್ಲಿ ಈ ರೀತಿಯ ನಂಬರ್ ಇದ್ರೆ ಅದು ಕೂಡ ದುರದೃಷ್ಟಕರ. ಈ ನಂಬರ್ ನಲ್ಲಿ ಇರುವಂತಹ 58 ನಂಬರ್ ಎನ್ನುವುದು ಇದಕ್ಕೆ ಮತ್ತಷ್ಟು ದುಷ್ಟ ಶಕ್ತಿಯನ್ನು ಸೇರಿಸುವ ಕೆಲಸವನ್ನು ಮಾಡುತ್ತದೆ. ಇನ್ನು ಈ ನಂಬರ್ ಪ್ಲೇಟ್ ನಲ್ಲಿ ಪ್ರಾರಂಭವಾಗುವ ಒಂದು ಹಾಗೂ ಮೂರು ನಂಬರ್ ಐದು ನಂಬರ್ ಗೆ ಜೋಡಿ ಆಗುವ ಸಾಧ್ಯತೆ ಇರುವುದಿಲ್ಲ ಹೀಗಾಗಿ ಅದು ಕೂಡ ಕೆಟ್ಟ ಪರಿಣಾಮವನ್ನು ತೋರುತ್ತದೆ. ಈ ನಂಬರ್ ಗಳು ಒಟ್ಟಾಗಿ ಕಾಣಿಸಿಕೊಳ್ಳುವುದರಿಂದ ಇದರ ಅರ್ಥ ಸಂಖ್ಯಾಶಾಸ್ತ್ರದ ಪ್ರಕಾರ ಜೀವನ ಅಷ್ಟೊಂದು ಸಮೃದ್ಧವಾಗಿರುವುದಿಲ್ಲ ಎನ್ನುವುದು.
Gajalakshmi Rajyoga 2024: ಇನ್ನು ಎರಡೇ ದಿನದಲ್ಲಿ ಗಜಲಕ್ಷ್ಮಿ ರಾಜಯೋಗ, ಇವರಿಗೆ ಸಕಲೈಶ್ವರ್ಯ ಪ್ರಾಪ್ತಿ..!

ನಂಬರ್ 666
ಸಂಖ್ಯಾಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರ ಎರಡು ಕೂಡ ಹೇಳುವ ಪ್ರಕಾರ 666 ನಂಬರ್ ಅನ್ನು ಆದಷ್ಟು ದೂರ ಇಟ್ಟುಕೊಳ್ಳುವುದೇ ಒಳ್ಳೆಯದು. ಆರು ಎನ್ನುವಂತಹ ನಂಬರ್ ದುಷ್ಟಶಕ್ತಿಯನ್ನು ಪ್ರತಿನಿಧಿಸುತ್ತದೆ ಹಾಗಾಗಿ ಇದನ್ನು ಹೊಂದಿರುವುದರಿಂದಾಗಿ ನಿಮ್ಮ ಸುತ್ತಮುತ್ತ ಕೆಟ್ಟ ಶಕ್ತಿಗಳ ಸಂಚಲನೆ ಇರುತ್ತದೆ. ಇನ್ನು ಕಾರು ಮಾರಾಟ ಮಾಡುವವರು ಕೂಡ ಈ ರೀತಿಯ ನಂಬರ್ ಅನ್ನು ವಾಹನದಲ್ಲಿ ಅಳವಡಿಸುವುದಕ್ಕೆ ಕೂಡ ಸ್ವಲ್ಪಮಟ್ಟಿಗೆ ಹಿಂದೆಮುಂದೆ ನೋಡ್ತಾರೆ ಹೀಗಾಗಿ ಹೆಚ್ಚಾಗಿ ಈ ರೀತಿ ನಂಬರ್ ಗಳನ್ನು ನೀವು ಕಾಣಲು ಸಾಧ್ಯವಿಲ್ಲ. ಒಂದು ವೇಳೆ ನಿಮ್ಮ ವಾಹನದಲ್ಲಿ ಕೂಡ ಈ ರೀತಿ 666 ನಂಬರ್ ಇದ್ರೆ ಅದನ್ನ ಬದಲಾಯಿಸುವುದಕ್ಕೆ ಇದು ಒಳ್ಳೆಯ ಸಮಯ.

ನಂಬರ್ 2104
ಕೆಲವೊಂದು ಸಂಖ್ಯಾಶಾಸ್ತ್ರದ ಪ್ರಕಾರ ಈ ನಂಬರ್ ಗಳನ್ನು ಒಟ್ಟಾಗಿ ಲೆಕ್ಕಾಚಾರ ಹಾಕಿದರೆ ಅದು ನೀವು ಮರಣ ಹೊಂದುತ್ತೀರಿ ಅನ್ನುವಂತಹ ಅರ್ಥವನ್ನು ನೀಡುತ್ತದೆ ಎಂಬುದಾಗಿ ಸಂಖ್ಯಾಶಾಸ್ತ್ರ ತಿಳಿಸುತ್ತದೆ. ಇದರ ಅರ್ಥವೇ ಹೇಳುವಾಗ ನೀವು ಈ ನಂಬರ್ ಅನ್ನು ನಿಮ್ಮ ವಾಹನಕ್ಕೆ ಅಳವಡಿಸುವುದು ನಿಜಕ್ಕೂ ಕೂಡ ಮೂರ್ಖತನ ಎಂದು ಹೇಳಬಹುದು. ಸಂಖ್ಯಾಶಾಸ್ತ್ರದ ಪ್ರಕಾರವೂ ಕೂಡ ಇದು ಆದಷ್ಟು ವಕ್ರದೃಷ್ಟಿಯನ್ನು ನೀಡುವಂತಹ ಕೆಟ್ಟ ಶಕ್ತಿಗಳನ್ನೇ ತನ್ನೊಂದಿಗೆ ತೆಗೆದುಕೊಂಡು ಹೋಗುತ್ತದೆ ಹಾಗೂ ಇದರ ಅರ್ಥವೂ ಕೂಡ ಕೆಟ್ಟ ಪರಿಣಾಮವನ್ನೇ ಉಂಟುಮಾಡುವಂತಹ ಅರ್ಥವಾಗಿದ್ದು ಇದರಿಂದ ಆದಷ್ಟು ದೂರ ಇರುವುದು ಒಳ್ಳೆಯದು ಹಾಗೂ ನಿಮ್ಮ ವಾಹನದ ನಂಬರ್ ಪ್ಲೇಟ್ ನಲ್ಲಿ ಕೂಡ ಈ ನಂಬರ್ ಇರಬಾರದು.

ನಂಬರ್ 3304
ಈ ನಂಬರ್ ಅನ್ನು ಒಟ್ಟಾಗಿ ಸೇರಿಸಿ ಇದರ ಅರ್ಥವನ್ನು ಹುಡುಕುವುದಾದರೆ ನಿಮ್ಮ ಜೀವನ ಅತ್ಯಂತ ಅಲ್ಪಾಯಸ್ಸನ್ನು ಹೊಂದಿದೆ ಎನ್ನುವುದಾಗಿ ತಿಳಿಸುತ್ತದೆ. ಹೀಗಾಗಿ ಇಂತಹ ನಂಬರ್ ಪ್ಲೇಟ್ ಅನ್ನು ಹೊಂದಿರುವಂತಹ ವಾಹನಗಳನ್ನು ನೀವು ಚಲಾಯಿಸುವುದು ಕೂಡ ಅತ್ಯಂತ ಅಪಾಯಕಾರಿ ಎಂಬುದಾಗಿ ಸಂಖ್ಯಾಶಾಸ್ತ್ರ ತಿಳಿಸುತ್ತದೆ. ಇಂತಹ ಕೆಟ್ಟ ಒಳಾರ್ಥವನ್ನು ಹೊಂದಿರುವಂತಹ ನಂಬರ್ ಅನ್ನು ನಿಮ್ಮ ವಾಹನದ ನಂಬರ್ ಪ್ಲೇಟ್ ನಲ್ಲಿ ಅಳವಡಿಸುವುದು ಕೂಡ ಅಪಾಯಕಾರಿಯಾಗಿರುತ್ತದೆ ಅನ್ನೋದನ್ನ ಸಂಖ್ಯಾಶಾಸ್ತ್ರ ತಿಳಿಸುತ್ತದೆ.
Lucky Girls: ಈ ರಾಶಿಯ ಹುಡುಗಿಯರಿಂದ ತಮ್ಮ ಗಂಡನ ಮನೆಯವರು ಕೋಟ್ಯಾಧಿಪತಿಯಾಗೋದು

ನಂಬರ್ 4242
ಸಂಖ್ಯಾಶಾಸ್ತ್ರದ ಭಾಷೆಯಲ್ಲಿ ಈ ನಂಬರ್ಗಳು ಒಟ್ಟು ಸೇರಿಸಿದ್ರೆ ಸುಲಭವಾಗಿ ಮರಣ ಹೊಂದುವಂತಹ ಸಂಕೇತವನ್ನು ಸೂಚಿಸುತ್ತವೆ. ಅಂದರೆ ಇಂತಹ ನಂಬರ್ ಪ್ಲೇಟ್ ಅನ್ನು ನಿಮ್ಮ ವಾಹನದ ಮೇಲೆ ಅಳವಡಿಸುವ ಮೂಲಕ ಯಾವ ಅರ್ಥವನ್ನು ಇದು ನೀಡುತ್ತದೆ ಅನ್ನೋದನ್ನ ನೀವು ಈ ಮೂಲಕ ತಿಳಿದುಕೊಳ್ಳಬಹುದು. ಹೀಗಾಗಿ ಇಂತಹ ನಂಬರ್ ಪ್ಲೇಟ್ ಅನ್ನು ಕೂಡ ನಿಮ್ಮ ವಾಹನದ ಮೇಲೆ ನೀವು ಆದಷ್ಟು ದೂರ ಇಡೋದು ಒಳ್ಳೆಯದು ಎಂದು ಹೇಳಬಹುದು.

ನಂಬರ್ 4444
ಸಂಖ್ಯಾಶಾಸ್ತ್ರದ ಪ್ರಕಾರ ನಾಲ್ಕು ಎನ್ನುವಂತಹ ಅಂಕೆಯ ಅರ್ಥವೇ ಮರಣ ಎಂಬುದಾಗಿ ಅರ್ಥವಾಗಿದೆ ಹೀಗಾಗಿ ಇದು ನಾಲ್ಕು ಬಾರಿ ಬಂದಿದೆ ಅಂದ್ರೆ ಇದರ ಕೆಟ್ಟ ಪರಿಣಾಮ ಎಷ್ಟಿದೆ ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇಷ್ಟೊಂದು ಅಪಾಯಕಾರಿಯಾಗಿರುವಂತಹ ಈ ನಂಬರ್ ಅನ್ನು ಕೂಡ ತಮ್ಮ ಕಾರಿನ ನಂಬರ್ ಪ್ಲೇಟ್ ಆಗಿ ಆಯ್ಕೆ ಮಾಡಬೇಕು ಎನ್ನುವ ಆಸೆಯನ್ನು ಹೊರದೇಶದಲ್ಲಿ ಸಾಕಷ್ಟು ಜನರು ಹೊಂದಿರುತ್ತಾರೆ ಹಾಗೂ ಅದೇ ಕಾರಣಕ್ಕಾಗಿ ಸಾವಿರಾರು ಡಾಲರ್ ಬಿಡ್ಡಿಂಗ್ ಕೂಡ ಮಾಡುತ್ತಾರೆ. ಜನ್ಮ ದಿನಾಂಕವನ್ನು ಲೆಕ್ಕಾಚಾರ ಮಾಡಿ ನೋಡುವುದಾದರೆ ಯಾವುದೇ ಕಾರಣಕ್ಕೂ ಈ ನಂಬರ್ ನಿಮಗೆ ಒಳ್ಳೆಯ ಪರಿಣಾಮಗಳನ್ನು ತರೋದಿಲ್ಲ ಅನ್ನೋದು ನಿಶ್ಚಿತ.

ನಂಬರ್ 6242
ಇದು ಕೂಡ ಸಂಖ್ಯಾಶಾಸ್ತ್ರದ ವಿಶೇಷ ಸಂಖ್ಯಾಶಾಸ್ತ್ರದ ಪ್ರಕಾರ ಅಪಘಾತಗಳನ್ನು ಸಾಂಕೇತಿಕವಾಗಿ ಸೂಚಿಸುವಂತಹ ನಂಬರ್ ಆಗಿದೆ. ಇವುಗಳ ದುರದೃಷ್ಟಕರ ನಂಬರ್ ಅನ್ನೋದನ್ನ ಯಾವುದೇ ಅನುಮಾನವಿಲ್ಲದೆ ನೀವು ಒಪ್ಪಿಕೊಳ್ಳಬಹುದಾಗಿದೆ.
Shani Vakri: 139 ದಿನಗಳವರೆಗೆ ಈ ರಾಶಿಗೆ ಶನಿದೇವನ ಕೃಪೆ.. ಇನ್ಮುಂದೆ ಸುಖದ ಸುಪ್ಪತ್ತಿಗೆ!

ನಂಬರ್ 8458
ಈ ನಂಬರ್ ನ ಎರಡು ಅರ್ಥಗಳನ್ನು ಸಂಖ್ಯಾಶಾಸ್ತ್ರದ ಮೂಲಕ ನಾವು ನೋಡಬಹುದಾಗಿದೆ. ಒಂದರ್ಥದ ಪ್ರಕಾರ ನೀವು ಶ್ರೀಮಂತರಾದ ನಂತರ ಮರಣ ಹೊಂದುತ್ತೀರಿ ಹಾಗೂ ಇನ್ನೊಂದು ಮಾತಿನ ಪ್ರಕಾರ ಮರಣ ಹೊಂದುವವರೆಗೂ ಕೂಡ ನೀವು ಶ್ರೀಮಂತರಾಗುವುದಿಲ್ಲ ಎಂಬುದಾಗಿದೆ. ಕ್ಯಾಂಟೋನಿಸ್ ಭಾಷೆಯ ಪ್ರಕಾರ ಇದು ಅವಳಿ ಶಾಪಗಳನ್ನು ನೀಡುವಂತಹ ನಂಬರ್ ಆಗಿರುವ ಕಾರಣದಿಂದಾಗಿ ಇದು ಕೂಡ ನಿಮಗೆ ಅಶುಭವನ್ನು ತರುವಂತಹ ನಂಬರ್ ಪ್ಲೇಟ್ ಆಗಿದೆ.

ಒಟ್ಟಾರೆ ಸಂಖ್ಯಾಶಾಸ್ತ್ರದಲ್ಲಿ ಸಾಕಷ್ಟು ನಂಬರ್ ಗಳನ್ನು ಈ ರೀತಿ ಅಶುಭವೆಂದು ನೀವು ಪರಿಗಣಿಸಲಾಗಿದೆ. ಹಾಗಾಗಿ ಇವುಗಳನ್ನು ನೀವು ನಂಬರ್ ಪ್ಲೇಟ್ ಗಳ ಮೇಲೆ ಅಳವಡಿಸಿದ್ರೆ ಅಪಾಯವನ್ನು ನೀವೇ ಆಹ್ವಾನ ಮಾಡಿದಂತಾಗುತ್ತದೆ. ಹೀಗಾಗಿ ಪ್ರತಿ ಬಾರಿ ಯಾವುದೇ ರೀತಿಯ ನಂಬರ್ ಅಥವಾ ನಂಬರ್ ಪ್ಲೇಟ್ ಅನ್ನು ಆಯ್ಕೆ ಮಾಡುವಾಗ ಸಂಖ್ಯಾಶಾಸ್ತ್ರಜ್ಞರ ಬಳಿ ಇದರ ಮಾಹಿತಿಯನ್ನು ಪಡೆದುಕೊಂಡು ಮುಂದುವರೆಯುವುದು ಉತ್ತಮ. ಯಾಕೆಂದರೆ ಕೆಲವರು ಹುಟ್ಟಿದ ಸಮಯ ಹಾಗೂ ಅವರ ಗ್ರಹಗತಿ ರಾಶಿಗೆ ತಕ್ಕನಾಗಿ ನಂಬರ್ ಆಯ್ಕೆ ಮಾಡುವುದು ಉತ್ತಮವಾಗಿರುತ್ತದೆ.
ಲೇಖಕರ ಬಗ್ಗೆ
ಆಶಾ ಸಂಪದ
ಆಶಾ ಸಂಪದ ಅವರು ಅನುಭವಿ ಪತ್ರಕರ್ತರಾಗಿದ್ದು, ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ 2022ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2014ರಲ್ಲಿ ನ್ಯೂಸ್ ಚಾನೆಲ್ ಮೂಲಕ ವೃತ್ತಿಜೀವನ ಪ್ರಾರಂಭಿಸಿದ ಇವರು ಮಾಧ್ಯಮ ರಂಗದಲ್ಲಿ 9 ವರ್ಷ ಅನುಭವ ಹೊಂದಿದ್ದಾರೆ. ಪ್ರಸ್ತುತ ಜ್ಯೋತಿಷ್ಯ ವಿಭಾಗದ ಸಂಪಾದಕರಾಗಿ 1 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು, ಅದಕ್ಕೂ ಹಿಂದಿನಿಂದ ವಾರಪತ್ರಿಕೆಗಳಿಗೆ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳ ಬರವಣಿಗೆಯಿಂದ ಗುರುತಿಸಿಕೊಂಡಿರುತ್ತಾರೆ. ಕೆಲಸದ ಹೊರತಾಗಿ, ಓದು, ಪ್ರವಾಸ, ಫೋಟೋಗ್ರಫಿ, ಯೋಗ ಇವರ ಇಷ್ಟದ ಅಭ್ಯಾಸ-ಹವ್ಯಾಸಗಳು. ಎಸ್.ಎಲ್ ಭೈರಪ್ಪ ಇವರ ನೆಚ್ಚಿನ ಲೇಖಕರು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ