ಆ್ಯಪ್ನಗರ

Nithya Bhavishya: ಮೇಷ ರಾಶಿಯವರೇ ನಿಮ್ಮ ಹೆಚ್ಚಿನ ಪ್ರಯತ್ನಗಳಿಗೆ ಯಶಸ್ಸು ಶೀಘ್ರದಲ್ಲಿಯೇ ಲಭ್ಯವಾಗಲಿದೆ

ಕನ್ಯಾ ರಾಶಿಯವರೇ ಶಿಸ್ತಿನಿಂದ ವ್ಯವಹರಿಸುವ ನಿಮ್ಮನ್ನು ಕಂಡರೆ ಕೆಲವರಿಗೆ ಆಗುವುದಿಲ್ಲ. ಏಕೆಂದರೆ ಅವರು ಶಿಸ್ತನ್ನು ಉಲ್ಲಂಘಿಘಿಸಿಯೇ ಬೆಳೆದವರು. ಹಾಗಾಗಿ ಅವರನ್ನು ತಿದ್ದಲು ಮುಂದಾಗದಿರಿ.

Vijaya Karnataka 20 Nov 2019, 10:00 am
ಮೇಷ:- ನೀವೇ ಆಶ್ಚರ್ಯಪಡುವ ರೀತಿಯಲ್ಲಿ ನಿಮ್ಮ ಹೆಚ್ಚಿನ ಪ್ರಯತ್ನಗಳಿಗೆ ಯಶಸ್ಸು ಶೀಘ್ರದಲ್ಲಿಯೇ ಲಭ್ಯವಾಗಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದರಿಂದ ನೆಮ್ಮದಿಯ ಜೀವನ ನಡೆಸುವಿರಿ. ಮಕ್ಕಳು ನಿಮಗೆ ಸಂತಸ ನೀಡುವರು.
Vijaya Karnataka Web dinabhavishya vk 2


ವೃಷಭ:- ಎಲ್ಲಿಂದಲೋ ಬರುವ ಬಂಧು ಒಬ್ಬರು ನಿಮ್ಮ ಮನಸ್ಸಿಗೆ ವಿಶೇಷ ಸಮಾಧಾನ ತಂದುಕೊಡಬಲ್ಲರು. ಅತ್ತೆ, ಸೊಸೆಯರಲ್ಲಿ ಹೊಂದಾಣಿಕೆ ಹೆಚ್ಚಾಗುವುದು. ಮಗನ ವೃತ್ತಿಯಲ್ಲಿ ಪ್ರಗತಿ ಕಂಡು ಬರುವುದು.

ವೃಶ್ಚಿಕ ರಾಶಿಯವರೇ ನಿಮ್ಮ ವ್ಯಾಪಾರದಲ್ಲಾಗುವ ಅನಿರೀಕ್ಷಿತ ಏರುಪೇರುಗಳಿಗೆ ಅಂಜಬೇಡಿ; ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ

ಮಿಥುನ:- ಇದ್ದಕ್ಕಿದ್ದಂತೆ ಎದುರಿಗಿರುವ ಹಣವೇ ಮಾಯವಾಗಿ ಬಿಡುವ ಸಾಧ್ಯತೆ ಇದೆ. ಲೇವಾದೇವಿ ವ್ಯವಹಾರ, ಬ್ಯಾಂಕಿನಲ್ಲಿ ಹಣದ ವ್ಯವಹಾರ ಮಾಡುವಾಗ ತುಂಬಾ ಎಚ್ಚರಿಕೆಯಿಂದ ಇರಿ. ನಿಮ್ಮ ಸುತ್ತಲು ಇರುವ ಕಳ್ಳರ ಬಗ್ಗೆ ಮಾಹಿತಿ ದೊರೆಯದೇ ಹೋಗಬಹುದು.

ಕಟಕ:- ಕಷ್ಟಗಳು ಮನುಜನನ್ನು ಶುದ್ಧಿಮಾಡಲು ಮತ್ತು ಮನಸ್ಸನ್ನು ಗಟ್ಟಿಮಾಡಲು ಬರುವುವು. ಹಾಗಂತ ಅದಕ್ಕೆ ಹೆದರಿ ಪಲಾಯನ ಮಾಡುವುದು ತರವಲ್ಲ. ಅವನ್ನು ಧೈರ್ಯವಾಗಿ ಎದುರಿಸಿದಲ್ಲಿ ಮುಂದಿನ ದಿನಗಳು ಚೆನ್ನಾಗಿರುವುವು.

ಸಿಂಹ:- ಕೆಲವೊಮ್ಮೆ ನಿಮ್ಮ ಏಕಪಕ್ಷೀಯ ನಿರ್ಧಾರದಿಂದಾಗಿ ಬಂಧುಬಾಂಧವರ ಮತ್ತು ಸಮಾಜದ ಕೆಲ ಜನರ ಕೆಂಗಣ್ಣಿಗೆ ಗುರಿಯಾಗುವಿರಿ. ಆದಷ್ಟು ನಿಮ್ಮ ಸಂಸ್ಥೆಯ ಸದಸ್ಯರೊಂದಿಗೆ ಇಲ್ಲವೆ ಮನೆಯ ಸದಸ್ಯರೊಡನೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ.

ಸಿಂಹ ರಾಶಿಯವರೇ ಹಣಕಾಸಿನ ವ್ಯವಹಾರಗಳು ಈ ತಿಂಗಳಲ್ಲಿ ಲಾಭವಾಗಿ ಪರಿಣಮಿಸುತ್ತವೆ;ನಿಮ್ಮ ನವೆಂಬರ್‌ ತಿಂಗಳ ಭವಿಷ್ಯ ನೋಡಿ

ಕನ್ಯಾ:- ಶಿಸ್ತಿನಿಂದ ವ್ಯವಹರಿಸುವ ನಿಮ್ಮನ್ನು ಕಂಡರೆ ಕೆಲವರಿಗೆ ಆಗುವುದಿಲ್ಲ. ಏಕೆಂದರೆ ಅವರು ಶಿಸ್ತನ್ನು ಉಲ್ಲಂಘಿಘಿಸಿಯೇ ಬೆಳೆದವರು. ಹಾಗಾಗಿ ಅವರನ್ನು ತಿದ್ದಲು ಮುಂದಾಗದಿರಿ.

ತುಲಾ:- ಹೊಸ ಕೆಲಸಕ್ಕೆ ಪ್ರಯತ್ನಿಸಿ, ಆದರೆ ಈಗಿರುವ ಕೆಲಸವನ್ನು ತೊರೆದು ಹೊಸ ಪ್ರಯತ್ನವನ್ನು ಮಾಡದಿರಿ. ಹೊಸ ಕೆಲಸ ಸಿಗುವುದು ಗ್ಯಾರಂಟಿ ಆದ ಮೇಲೆ ಈಗಿರುವ ಕೆಲಸ ಬಿಡಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ವೃಶ್ಚಿಕ:- ಭಗವಂತನ ಒಲುಮೆ ಯಾವ ಕ್ಷಣದಲ್ಲಿ ಹೇಗೆ ಆಗುವುದು ಎಂಬುದು ಯಾರಿಗೂ ತಿಳಿಯದ ವಿಚಾರ. ಅಂತೆಯೇ ನಿಮಗೆ ಸಹಾಯ ಮಾಡಲಾರರು ಎಂದುಕೊಂಡವರಿಂದಲೇ ಸಹಾಯ ಸಹಕಾರಗಳು ಲಭ್ಯವಾಗಲಿವೆ.

ಧನುಸ್ಸು:- ತಿಳಿದೇ ಇರದಂತಹ ಮೂಲದಿಂದ ಧನಲಾಭಕ್ಕೆ ಅಪರೂಪವಾದ ಅವಕಾಶಗಳು ಬರುವುವು. ಅವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ. ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದುವಿರಿ.

ಮಕರ:- ಗೊಂದಲವಿಲ್ಲ ಎಂದುಕೊಂಡು ಕೆಲಸಕ್ಕೆ ಕೈಹಾಕುವಾಗಲೇ ವಿಘ್ನಗಳು ಎದುರಾಗುವ ಸಾಧ್ಯತೆ ಇದೆ. ಮನೆ ಸಮೀಪವಿರುವ ಗಣಪತಿ ಮಂದಿರಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿ. ಒಳಿತಾಗುವುದು.

ಹೆಚ್ಚು ಹಣವನ್ನು ಗಳಿಸುವ ಕನಸಿದ್ದರೆ ಮನೆಯಲ್ಲಿ ಈ ವರ್ಣ ಚಿತ್ರಗಳನ್ನು ತೂಗುಹಾಕಿ..!

ಕುಂಭ:- ನಿಮ್ಮ ಮನೋಕಾರ್ಯಗಳು ದೈವಾನುಗ್ರಹದಿಂದ ಹಂತಹಂತವಾಗಿ ನೆರವೇರುತ್ತಿರುವುದು ನಿಮಗೆ ಅತೀವ ಸಂತಸ ತಂದಿದೆ. ಇದು ನಿಜಕ್ಕೂ ನೀವು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಎಂದುಕೊಳ್ಳಬಹುದು. ಬಾಕಿ ಇರುವ ಕೆಲಸಗಳನ್ನು ಶೀಘ್ರದಲ್ಲಿಯೇ ಮುಗಿಸಿಕೊಳ್ಳಿ.

ಮೀನ:- ವಿನಾಕಾರಣ ಜಗಳ ತೆಗೆದು ಮನಃಶಾಂತಿ ಕೆಡಿಸುವ ಜನರಿಂದ ದೂರ ಇರುವುದು ಒಳ್ಳೆಯದು. ಇನ್ನು ಕೆಲವರು ನೀವು ಮಾಡುತ್ತಿರುವ ವೃತ್ತಿಯ ಹಾದಿ ತಪ್ಪಿಸುವ ಪ್ರಕ್ರಿಯೆಯಲ್ಲಿ ತೊಡಗುವರು. ಅಂತಹವರ ಬಗ್ಗೆ ಎಚ್ಚರಿಕೆಯಿರಲಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ