Please enable javascript.Shukra Ketu Yuti 2023: 10 ವರ್ಷಗಳ ಬಳಿಕ ಕನ್ಯಾ ರಾಶಿಯಲ್ಲಿ ಶುಕ್ರ ಕೇತು, ಇವರಿಗೆ ಬರಲಿದೆ ಅದ್ಭುತ ದಿನಗಳು..! - shukra ketu yuti 2023 in virgo after 10 years will make these zodiac sign people to have wonderful days ahead - Vijay Karnataka

Shukra Ketu Yuti 2023: 10 ವರ್ಷಗಳ ಬಳಿಕ ಕನ್ಯಾ ರಾಶಿಯಲ್ಲಿ ಶುಕ್ರ ಕೇತು, ಇವರಿಗೆ ಬರಲಿದೆ ಅದ್ಭುತ ದಿನಗಳು..!

Authored byಮನಿಷಾ ಆನಂದ | Agencies 17 Nov 2023, 1:00 pm
Subscribe

Venus Ketu Conjunction: ಅನೇಕ ವರ್ಷಗಳ ನಂತರ, ಕನ್ಯಾ ರಾಶಿಯಲ್ಲಿ ಶುಕ್ರ ಮತ್ತು ಕೇತುವಿನ ಸಂಯೋಜನೆಯು ರೂಪುಗೊಳ್ಳುತ್ತಿದೆ. ಇದರ ಪರಿಣಾಮವನ್ನು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ಕಾಣಬಹುದಾದರೂ, ಕೆಲವು ರಾಶಿಗಳು ಹೆಚ್ಚಿನ ಲಾಭವನ್ನು ಪಡೆಯಲಿವೆ. ಆ ಲಕ್ಕಿ ರಾಶಿಗಳ ಬಗ್ಗೆ ಇಲ್ಲಿ ತಿಳಿಯಿರಿ.

ಹೈಲೈಟ್ಸ್‌:

  • ಕನ್ಯಾ ರಾಶಿಯಲ್ಲಿ ಶುಕ್ರ ಮತ್ತು ಕೇತುವಿನ ಸಂಯೋಗ
  • ರಾಶಿಗಳ ಮೇಲೆ ಶುಕ್ರ ಮತ್ತು ಕೇತುವಿನ ಪ್ರಭಾವ
  • ಶುಕ್ರ ಮತ್ತು ಕೇತುವಿನ ಸಂಯೋಗದಿಂದ ಈ ರಾಶಿಗೆ ಅದೃಷ್ಟ
Shukra Ketu Yuti 2023
ಶುಕ್ರ ಕೇತು ಸಂಯೋಗ 2023-PC:VijayakarnatakaWeb,Pixabay
ಜ್ಯೋತಿಷ್ಯದ ಪ್ರಕಾರ, ಗ್ರಹಗಳು ರಾಶಿಚಕ್ರವನ್ನು ಬದಲಾಯಿಸುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಒಂದು ಗ್ರಹವು ಒಂದು ರಾಶಿಯಲ್ಲಿ ಸಂಚರಿಸಿದಾಗ ಅಥವಾ ರಾಶಿಯನ್ನು ಬದಲಾಯಿಸಿದಾಗ, ಅದರ ಪರಿಣಾಮವು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೂ ಕಂಡುಬರುತ್ತದೆ. ಜ್ಯೋತಿಷ್ಯದ ಪ್ರಕಾರ, ಶುಕ್ರನು ಕನ್ಯಾ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ನಿಗೂಢ ಗ್ರಹ ಕೇತು ಈಗಾಗಲೇ ಅಲ್ಲಿ ಚಲಿಸುತ್ತಿದ್ದು, ಕನ್ಯಾ ರಾಶಿಯಲ್ಲಿ ಶುಕ್ರ ಮತ್ತು ಕೇತುವಿನ ಸಂಯೋಜನೆಯು ಸುಮಾರು 10 ವರ್ಷಗಳ ನಂತರ ರೂಪುಗೊಳ್ಳುತ್ತಿದೆ. ಇದು ಕೆಲವು ರಾಶಿಯ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರಿದರೆ, ಇನ್ನೂ ಕೆಲವು ರಾಶಿಯ ವ್ಯಕ್ತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ, ಆದರೆ ಈ ಸಂಯೋಜನೆಯ ರಚನೆಯಿಂದ ಹೆಚ್ಚಿನ ಪ್ರಯೋಜನವಾಗುವ ಮೂರು ರಾಶಿ ಚಿಹ್ನೆಗಳಿವೆ. ಅವುಗಳ ಬಗ್ಗೆ ತಿಳಿಯೋಣ.
Friday Lucky Zodiac Sign: ಇಂದು ಬುಧಾದಿತ್ಯ ಯೋಗ, ಇವರ ಜೇಬು ಫುಲ್ ಹಣ..!
Leo

ಸಿಂಹ ರಾಶಿ

ಸಿಂಹ ರಾಶಿ
ಶುಕ್ರ ಮತ್ತು ಕೇತುವಿನ ಸಂಯೋಗವು ಸಿಂಹ ರಾಶಿಗೆ ಸೇರಿದ ಜನರಿಗೆ ಶುಭಫಲಗಳನ್ನು ಉಂಟು ಮಾಡಲಿದೆ. ನಿಮ್ಮ ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ ಇರುತ್ತದೆ ಹಾಗು ಹಠಾತ್ ಹಣವನ್ನು ಸ್ವೀಕರಿಸುವಿರಿ, ಇದರಿಂದಾಗಿ ಸಿಂಹ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ, ಜೊತೆಗೆ ಗೌರವವೂ ಹೆಚ್ಚಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಈ ಸಮಯದಲ್ಲಿ ನಿವಾರಣೆಯಾಗುತ್ತವೆ.
Budhaditya Rajyoga: ಬುಧಾದಿತ್ಯ ರಾಜಯೋಗದಿಂದ 3 ರಾಶಿಗೆ ಭಾರೀ ಧನಲಾಭ, ಲಕ್‌ ಜೊತೆ ಲೈಫ್ ಚೇಂಜ್!
ಮೇಷ ರಾಶಿ
ಮೇಷ ರಾಶಿಗೆ ಸೇರಿದ ಜನರಿಗೆ ಈ ಸಮಯದಲ್ಲಿ ಭೌತಿಕ ಸೌಕರ್ಯಗಳ ಪ್ರಾಪ್ತಿಯಾಗುವುದು. ನೀವು ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತೀರಿ, ವ್ಯವಹಾರದಲ್ಲಿ ಉತ್ತಮ ಲಾಭವಿರುತ್ತದೆ, ಹಳೆಯ ಹೂಡಿಕೆಗಳು ಸಹ ಲಾಭದಾಯಕವಾಗುತ್ತವೆ. ಮೇಷ ರಾಶಿಯವರ ವೈವಾಹಿಕ ಜೀವನದಲ್ಲಿ ಮಾಧುರ್ಯ ಇರುತ್ತದೆ, ಕಳೆದುಹೋದ ಹಣವು ಹಿಂತಿರುಗುವುದರಿಂದ ಮನಸ್ಸಿಗೆ ಶಾಂತಿ ಸಿಗುವುದು.

Virgo

ಕನ್ಯಾ ರಾಶಿ

" />ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಇದು ಉತ್ತಮ ಸಮಯವಾಗಿರುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದರೊಂದಿಗೆ, ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ, ಕೆಲಸದ ಕ್ಷೇತ್ರದಲ್ಲಿ ಪ್ರಗತಿಯ ಹಾದಿ ಸುಗಮವಾಗುತ್ತದೆ. ಈ ಅವಧಿಯಲ್ಲಿ ಕನ್ಯಾ ರಾಶಿಗೆ ಸೇರಿದ ಜನರು ಧಾರ್ಮಿಕ ಅಥವಾ ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ, ಮನಸ್ಸು ಸಂತೋಷವಾಗಿರುತ್ತದೆ, ಹಾಗೆ ಆದಾಯವು ಹೆಚ್ಚಾಗುತ್ತದೆ.
3 Planets In Vrischika: ನಾಳೆಯಿಂದ ವೃಶ್ಚಿಕ ರಾಶಿಯಲ್ಲಿ 3 ಶುಭ ಗ್ರಹ, ಇವರಿಗೆ ಗೋಲ್ಡನ್‌ ಟೈಮ್‌ ಶುರು.!

ಈ ಮೂರು ರಾಶಿಗಳಲ್ಲಿ ನಿಮ್ಮ ರಾಶಿಯೂ ಒಂದಾಗಿದ್ದರೆ, ಕನ್ಯಾ ರಾಶಿಯಲ್ಲಿ ಶುಕ್ರ ಮತ್ತು ಕೇತುವಿನ ಸಂಯೋಗದ ಸಮಯದ ಹೆಚ್ಚಿನ ಲಾಭವನ್ನು ಪಡೆಯಲು ಇಂದೇ ಸಿದ್ಧರಾಗಿರಿ.
ಮನಿಷಾ ಆನಂದ
ಲೇಖಕರ ಬಗ್ಗೆ
ಮನಿಷಾ ಆನಂದ
ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್‌ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್‌ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್‌ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ