Please enable javascript.Rajbhang Rajyog 2023: ರಾಜಭಂಗ ರಾಜಯೋಗದಿಂದ ಈ 3 ರಾಶಿಯವರಿಗೆ ರಾಜರ ಜೀವನ..! - these 3 zodiac sign people lead their life like a king in august by rajbhang rajyog - Vijay Karnataka

Rajbhang Rajyog 2023: ರಾಜಭಂಗ ರಾಜಯೋಗದಿಂದ ಈ 3 ರಾಶಿಯವರಿಗೆ ರಾಜರ ಜೀವನ..!

Authored byಮನಿಷಾ ಆನಂದ | Agencies 9 Aug 2023, 5:01 pm
Subscribe

Rajbhang Rajyog in August: ಸೂರ್ಯ ಮತ್ತು ಶುಕ್ರನ ಸಂಯೋಜನೆಯಿಂದ ರಾಜಭಂಗ ರಾಜಯೋಗ ರೂಪುಗೊಳ್ಳುವುದು. ಈ ಶುಭ ಯೋಗವು ಮೂರು ರಾಶಿಯವರಿಗೆ ರಾಜ ಯೋಗವನ್ನು ತರುವುದು. ಯಾವ 3 ರಾಶಿಗಿದೆ ರಾಜಭಂಗ ರಾಜಯೋಗ..?

ಹೈಲೈಟ್ಸ್‌:

ಹೈಲೈಟ್ಸ್ :
  • ರಾಜಭಂಗ ರಾಜಯೋಗ ಎಂದರೇನು?
  • ರಾಜಭಂಗ ರಾಜಯೋಗದ ಶುಭ ಫಲಗಳಿವು
  • ರಾಶಿಗಳ ಮೇಲೆ ರಾಜಭಂಗ ರಾಜಯೋಗದ ಪ್ರಭಾವ
Rajbhang Rajyoga
ರಾಜಭಂಗ ರಾಜಯೋಗ - PC: Pexel, Times Of India
ಜ್ಯೋತಿಷ್ಯ ಶಾಸ್ತ್ರದಲ್ಲಿ, ನಿಮ್ಮ ರಾಶಿಯಲ್ಲಿ ಯಾವ ಗ್ರಹ ಚಲಿಸುತ್ತಿದೆ ಎಂಬುದನ್ನು ನೋಡುವ ಮೂಲಕ ನಿಮ್ಮ ಭವಿಷ್ಯವನ್ನು ಹೇಳಬಹುದಾಗಿದೆ. ಅಂತಹ ಕೆಲವು ಗ್ರಹಗಳ ಬದಲಾವಣೆಯಿಂದ ರಾಜಭಂಗ ರಾಜಯೋಗ ರೂಪಗೊಳ್ಳುತ್ತದೆ. ರಾಜಭಂಗ ರಾಜಯೋಗ ಯಾರ ರಾಶಿಯಲ್ಲಿರುತ್ತದೆಯೋ ಆತ ಹಣವನ್ನು ಸಂಪಾದಿಸಲು ಕಷ್ಟಪಟ್ಟು ಕೆಲಸ ಮಾಡುವ ಅಗತ್ಯವೇ ಇರುವುದಿಲ್ಲ. ಅಂತಹ ಜನರ ಹತ್ತಿರಕ್ಕೆ ಹಣ ಸ್ವತಃ ತಾನೇ ತಾನಾಗಿ ಬರುತ್ತದೆ. ಆದ್ದರಿಂದ ರಾಜಭಂಗ ರಾಜ ಯೋಗ ಎಂದರೇನು..? ಅದು ನಿಮ್ಮ ರಾಶಿಚಕ್ರ ಚಿಹ್ನೆಗೆ ಹೇಗೆ ಪ್ರಭಾವ ಉಂಟು ಮಾಡುತ್ತದೆ..? ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
Shukra Vakri 2023: ಶುಕ್ರ ವಕ್ರಿಯಿಂದ ಮುಂದಿನ 2 ತಿಂಗಳು ಯಾವ ರಾಶಿಗೆ ಶುಭ? ಯಾರಿಗೆ ಅಶುಭ?
sun

ಸೂರ್ಯ - PC: Pixabay

1. ರಾಜಭಂಗ ರಾಜಯೋಗ ಎಂದರೇನು?
ಜ್ಯೋತಿಷ್ಯದ ಪ್ರಕಾರ, ಒಂದು ರಾಶಿಯಲ್ಲಿ ಎರಡು ಗ್ರಹಗಳು ಸಂಚರಿಸಿದರೆ, ರಾಜಭಂಗ ರಾಜ ಯೋಗವು ರೂಪುಗೊಳ್ಳುತ್ತದೆ. ಪ್ರಸ್ತುತ ಸೂರ್ಯನು ಕರ್ಕಾಟಕ ರಾಶಿಯಲ್ಲಿ ಕುಳಿತಿದ್ದಾನೆ. ಆಗಸ್ಟ್ 7 ರಂದು, ಶುಕ್ರನು ಹಿಮ್ಮುಖವಾಗಿ ಕಟಕ ರಾಶಿಗೆ ಮರಳಲಿದ್ದಾನೆ. ಆಗ ಸಂಭವಿಸುವ ಸೂರ್ಯ ಮತ್ತು ಶುಕ್ರನ ಈ ಸಂಯೋಜನೆಯು ರಾಜಭಂಗ ರಾಜ ಯೋಗವನ್ನು ಸೃಷ್ಟಿಸುತ್ತದೆ. ಈ ಯೋಗವು ಕೆಲವು ರಾಶಿಯವರಿಗೆ ತುಂಬಾ ಮಂಗಳಕರ ಮತ್ತು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

Weekly Lucky Horoscope: ಆಗಸ್ಟ್ ಎರಡನೇ ವಾರ ಈ 5 ರಾಶಿಗಳಿಗೆ ಹಣದ ಸುರಿಮಳೆ ಗ್ಯಾರೆಂಟಿ..!
2. ರಾಜಭಂಗ ರಾಜಯೋಗದಿಂದ ಈ ರಾಶಿಗಳು ಹೆಚ್ಚು ಪ್ರಯೋಜನ ಪಡೆಯಲಿದೆ:
1. ಮೇಷ ರಾಶಿ -

ಕರ್ಕ ರಾಶಿಯಲ್ಲಿ ಶುಕ್ರ ಮತ್ತು ಸೂರ್ಯ ಸಂಯೋಜಿಸಿದಾಗ, ಮೇಷ ರಾಶಿಯ ಜನರು ಈ ವಿಶಿಷ್ಟವಾದ ರಾಜಯೋಗದಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ. ಮೇಷ ರಾಶಿಯವರು ಈ ಸಮಯದಲ್ಲಿ ವೃತ್ತಿಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸುತ್ತಾರೆ ಹಾಗು ಕೆಲಸದಲ್ಲಿ ಬಡ್ತಿ ಪಡೆಯುವ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ. ಮೇಷ ರಾಶಿಯ ಮೇಲೆ ಎಲ್ಲೆಡೆಯಿಂದ ಹಣದ ಮಳೆಯಾಗುತ್ತದೆ. ನೀವು ಮುಟ್ಟಿದೆಲ್ಲಾ ಚಿನ್ನವಾಗುವ ಸುವರ್ಣ ಸಮಯವಿದು. ಈ ಅವಧಿಯಲ್ಲಿ ನೀವು ಇಷ್ಟ ಪಡುವ ಮನೆ ಮತ್ತು ವಾಹನದಂತಹ ಬೆಲೆಬಾಳುವ ವಸ್ತುಗಳನ್ನು ಸುಲಭವಾಗಿ ಖರೀದಿಸುವ ಯೋಗವಿದೆ.

Cancer

ಕಟಕ ರಾಶಿ

2. ಕಟಕ ರಾಶಿ -
ನೀವು ಕೆಲವು ಸಮಯದಿಂದ ಬರಿ ಕಷ್ಟಗಳನ್ನೇ ನೋಡಿರಬಹುದು, ಆದರೀಗ ನೀವು ಖಂಡಿತವಾಗಿಯೂ ಅದರಿಂದ ಹೊರಬಂದು ಸುಖ, ಸಂತೋಷದಿಂದ ಜೀವಿಸುತ್ತೀರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಜೊತೆಗೆ ನೀವು ಮಾಡುತ್ತಿರುವ ಕೆಲಸ ಯಾವುದೇ ಆಗಿರಲಿ ಅದರಲ್ಲಿ ನೀವು ಪ್ರಗತಿಯನ್ನು ಪಡೆಯುತ್ತೀರಿ ಮತ್ತು ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಈ ಸಮಯದಲ್ಲಿ ಮೊದಲಿಗಿಂತ ಉತ್ತಮವಾಗಿರುತ್ತದೆ.

Horoscope August 2023: ಆಗಸ್ಟ್‌ 2023 ರಲ್ಲಿ ಈ 5 ರಾಶಿಯವರದ್ದೇ ಹವಾ.. ಸಮೃದ್ಧ ಜೀವನ..!
3. ತುಲಾ ರಾಶಿ -
ಉದ್ಯೋಗ, ಹಣ, ಕುಟುಂಬದ ವಿಷಯದಲ್ಲಿ ಈ ಸಮಯವು ತುಲಾ ರಾಶಿಯವರಿಗೆ ಅತ್ಯತ್ತಮವಾಗಿ ಪರಿಣಮಿಸಲಿದೆ. ಗಳಿಕೆಯ ಹೊಸ ವಿಧಾನಗಳನ್ನು ಪಡೆಯುವುದರ ಜೊತೆಗೆ, ನಿಮ್ಮ ಅದೃಷ್ಟವನ್ನು ಬದಲಾಯಿಸುವ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವ ಭಾಗ್ಯ ನಿಮ್ಮ ಪಾಲಿಗಿದೆ. ವೃತ್ತಿಜೀವನದಲ್ಲಿ ಮಾತ್ರವಲ್ಲ ಎಲ್ಲಾ ಕಡೆಯಿಂದಲೂ ನೀವು ಪ್ರಗತಿ ಹಾಗು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ.

Libra

ತುಲಾ ರಾಶಿ

ಮೇಲೆ ಹೇಳಿರುವ ಮೂರು ರಾಶಿಗಳಲ್ಲಿ ನಿಮ್ಮ ರಾಶಿಯು ಇದ್ದರೆ, ಬರುವ ಸಮಯ ನಿಮ್ಮ ಪಾಲಿಗೆ ಹಣ, ಅದೃಷ್ಟ ಎಲ್ಲವನ್ನು ನೀಡಲಿದೆ. ಅದರಿಂದ ನೀವು ಈ ರಾಜಭಂಗ ರಾಜಯೋಗದಲ್ಲಿ ರಾಜರಂತೆ ಬದುಕುವ ಕಾಲ ದೂರವಿಲ್ಲ.
ಮನಿಷಾ ಆನಂದ
ಲೇಖಕರ ಬಗ್ಗೆ
ಮನಿಷಾ ಆನಂದ
ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್‌ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್‌ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್‌ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ