Please enable javascript.Shukra Gochar Effects 2024,Shukra Gochar 2024: ಶುಕ್ರನಿಂದ ಇವರ ನೆಮ್ಮದಿ ಭಂಗ, ಟೆನ್ಶನ್ ಹೆಚ್ಚಳ..! - venus transit increases tension of these zodiac sign - Vijay Karnataka

Shukra Gochar 2024: ಶುಕ್ರನಿಂದ ಇವರ ನೆಮ್ಮದಿ ಭಂಗ, ಟೆನ್ಶನ್ ಹೆಚ್ಚಳ..!

Authored byಸಹನಾ | Vijaya Karnataka Web 17 May 2024, 1:00 pm
Subscribe

Venus Transit: ಮೇ 19 ರಂದು ಶುಕ್ರನ ರಾಶಿ ಬದಲಾವಣೆಯು 12 ರಾಶಿಗಳ ಮೇಲೆ ಶುಭ ಹಾಗು ಅಶುಭ ಪ್ರಭಾವವನ್ನು ಬೀರಲಿದೆ. ಆದರೆ ಕೆಲವು ರಾಶಿಯವರು ಸಾಕಷ್ಟು ನಷ್ಟವನ್ನು ಅನುಭವಿಸುವರು. ಆ ರಾಶಿಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

venus transit increases tension of these zodiac sign
Shukra Gochar 2024: ಶುಕ್ರನಿಂದ ಇವರ ನೆಮ್ಮದಿ ಭಂಗ, ಟೆನ್ಶನ್ ಹೆಚ್ಚಳ..!
ಜ್ಯೋತಿಷ್ಯದ ಪ್ರಕಾರ, ಮೇ 19 ರಂದು ಬೆಳಗ್ಗೆ 8.42ಕ್ಕೆ ಶುಕ್ರ ಗ್ರಹವು ಮೇಷ ರಾಶಿಯಿಂದ ಹೊರಬಂದು, ವೃಷಭ ರಾಶಿಯಲ್ಲಿ ಸಂಚರಿಸಲಿದೆ. ಇದರ ಪ್ರಭಾವವನ್ನು ಎಲ್ಲಾ 12 ರಾಶಿಗಳ ಮೇಲೆ ಕಾಣಬಹುದು. ಕೆಲವು ರಾಶಿಯವರಿಗೆ ಶುಕ್ರನಿಂದ ಅಶುಭವಾಗಲಿದೆ. ಆ ದುರಾದೃಷ್ಟಕರ ರಾಶಿಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

​ಮಿಥುನ ರಾಶಿ

​ಮಿಥುನ ರಾಶಿ

ಮಿಥುನ ರಾಶಿಯವರು ಶುಕ್ರ ಸಂಚಾರದ ಸಮಯದಲ್ಲಿ ಎಚ್ಚರದಿಂದಿರಬೇಕು. ಹೆಚ್ಚು ಹಣವನ್ನು ಖರ್ಚು ಮಾಡಬೇಡಿ. ವಹಿವಾಟುಗಳಲ್ಲಿ ಎಚ್ಚರಿಕೆಯಿರಲಿ. ಸಂಯಮದಿಂದ ಕೆಲಸ ಮಾಡಿದರೆ ಯಶಸ್ಸು ಲಭಿಸುವುದು. ಯಾರ ಮೇಲು ಹೆಚ್ಚು ನಂಬಿಕೆ ಇಡಬೇಡಿ, ನಷ್ಟ ಅನುಭವಿಸಬಹುದು.

Mangal Gochar 2024: ಮಂಗಳನಿಂದ ಬದಲಾಗಲಿದೆ ಇವರ ಭವಿಷ್ಯ.. ಸುವರ್ಣ ಸಮಯ ಶುರು..!

​ಕನ್ಯಾ ರಾಶಿ

​ಕನ್ಯಾ ರಾಶಿ

ಶುಕ್ರ ಸಂಚಾರದ ಅವಧಿಯಲ್ಲಿ ಕನ್ಯಾ ರಾಶಿಯವರು ಜೋಪಾನವಾಗಿರಿ. ಆರ್ಥಿಕ ಸಂಕಷ್ಟ ಎದುರಾಗಬಹುದು. ವಹಿವಾಟುಗಳಲ್ಲಿ ಎಚ್ಚರಿಕೆಯಿರಲಿ. ಕುಟುಂಬ ಜೀವನದಲ್ಲಿ ತೊಂದರೆ ಎದುರಾಗಬಹುದು. ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಬಹುದು. ವ್ಯಾಪಾರದಲ್ಲಿ ನಷ್ಟ ಸಂಭವಿಸುವುದು. ಆರೋಗ್ಯದ ಬಗ್ಗೆ ಕಾಳಜಿವಹಿಸಿ.

​ತುಲಾ ರಾಶಿ​

​ತುಲಾ ರಾಶಿ​

ತುಲಾ ರಾಶಿಯವರು ಶುಕ್ರ ಸಂಚಾರದ ಸಮಯದಲ್ಲಿ ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಪ್ರೀತಿಯಲ್ಲಿರುವವರು ಸಂಗಾತಿಯೊಂದಿಗೆ ಮನಸ್ತಾಪ ಹೊಂದಬಹುದು. ವ್ಯಾಪಾರಿಗಳು ಎಚ್ಚರದಿಂದಿರಿ. ಹೆಚ್ಚು ಖರ್ಚಾಗುವ ಸಂಭವವಿದೆ. ಕೆಲಸ ಮಾಡುವಂತವರು ಎಚ್ಚರದಿಂದಿರಿ. ಕೆಲಸದ ಸ್ಥಳದಲ್ಲಿ ವಾದ ವಿವಾದವನ್ನು ತಪ್ಪಿಸಿ.

Friday Lucky Zodiac Sign: ಇಂದು ಹರ್ಷಣ ಯೋಗ, ಇವರಿಗೆ ಭರಪೂರ ಲಾಭ..!

​ವೃಶ್ಚಿಕ ರಾಶಿ

​ವೃಶ್ಚಿಕ ರಾಶಿ

ಶುಕ್ರ ಸಂಚಾರದಿಂದ ವೃಶ್ಚಿಕ ರಾಶಿಯವರಿಗೆ ಅಶುಭವಾಗಲಿದೆ. ನಿಮ್ಮ ಹಣ ನಷ್ಟವಾಗಬಹುದು. ಆರ್ಥಿಕ ಸಂಕಷ್ಟ ಎದುರಾಗುವುದು. ವಾದ ವಿವಾದಗಳನ್ನು ತಪ್ಪಿಸಿ. ಯಾರ ಮೇಲು ಹೆಚ್ಚು ನಂಬಿಕೆ ಇಡಬೇಡಿ. ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಹೊರಗಿನ ಆಹಾರವನ್ನು ತಪ್ಪಿಸಿ. ಕೆಲಸದಲ್ಲಿ ಎಚ್ಚರದಿಂದಿರಿ.

ಧನು ರಾಶಿ

ಧನು ರಾಶಿ

ಧನು ರಾಶಿಯವರು ಈ ಅವಧಿಯಲ್ಲಿ ಎಚ್ಚರದಿಂದಿರಿ. ಯಶಸ್ಸು ಗಳಿಸಲು ಕಠಿಣ ಪರಿಶ್ರಮ ಮಾಡಬೇಕು. ಕುಟುಂಬ ಜೀವನದಲ್ಲಿ ಮನಸ್ತಾಪ ಉಂಟಾಗಬಹುದು. ವಾದ ವಿವಾದಗಳಿಂದ ದೂರವಿರಿ. ವ್ಯಾಪಾರಿಗಳಿಗೆ ಇದು ಉತ್ತಮ ಸಮಯವಲ್ಲ. ಆರೋಗ್ಯದ ಬಗ್ಗೆ ಕಾಳಜಿವಹಿಸಿ.

Shani Number: ಮುಂದಿನ 230 ದಿನ ಈ ಸಂಖ್ಯೆಯವರಿಗೆ ಶನಿ ಬಲ, ಅದೃಷ್ಟವೋ ಅದೃಷ್ಟ..!

ಮೀನ ರಾಶಿ

ಮೀನ ರಾಶಿ

ಶುಕ್ರ ಸಂಚಾರದ ಅವಧಿಯಲ್ಲಿ ಮೀನ ರಾಶಿಯವರು ಜೋಪಾನದಿಂದಿರಿ. ಈ ಸಮಯದಲ್ಲಿ ನಿಮಗೆ ನಿಮ್ಮ ಮಾತಿನ ಬಗ್ಗೆ ನಿಯಂತ್ರಣವಿರಲಿ, ಇಲ್ಲದಿದ್ದರೆ ವಿಷಯ ಹದಗೆಡಬಹುದು. ಯಾವುದಾದರೂ ಹಳೆಯ ರೋಗ ಮತ್ತೆ ಕಾಣಿಸಿಕೊಳ್ಳಬಹುದು. ಕೆಲಸಕ್ಕಾಗಿ ಹೆಚ್ಚು ಓಡಾಡಬೇಕಾಗಬಹುದು.

ಲೇಖಕರ ಬಗ್ಗೆ
ಸಹನಾ
ಸಹನ ಇವರು ಎರಡು ವರ್ಷಗಳ ಕಾಲ ಡಿಜಿಟಲ್ ವಿಭಾಗದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡಿದ್ದು, ಪ್ರಸ್ತುತ ವಿಜಯ ಕರ್ನಾಟಕದ ಜ್ಯೋತಿಷ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ಹೊರತಾಗಿ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿ ಹಾಗು ಕಲಿಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸ್ಕೆಚ್ ಹಾಗು ಪೇಂಟಿಂಗ್ ಮಾಡುವುದು, ಕರಕುಶಲ ಕಲೆ, ಸಂಗೀತ ಕೇಳುವುದು, ಫೋಟೋಗ್ರಫಿ, ಯೋಗ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ