ಆ್ಯಪ್ನಗರ

Lucky Month: ಯಾವ ರಾಶಿಯವರಿಗೆ ಯಾವ ತಿಂಗಳು ಅದೃಷ್ಟದ ತಿಂಗಳು ಗೊತ್ತೇ..?

  • Lucky Month for Zodiac Signs in Kannada: ಟೀ ಕುಡಿಯಲು ಸಾಲ ಮಾಡುತ್ತಿದ್ದ ವ್ಯಕ್ತಿ ಇಂದು ಕಂತೆ ಕಂತೆ ನೋಟನ್ನು ಎಣಿಸುತ್ತಿದ್ದಾನೆ ಎಂದರೆ ಅವನಿಗೆ ಅದೃಷ್ಟದ ಸಮಯ ಶುರುವಾಗಿದೆ ಎಂದರ್ಥ. ಹೌದು, ಕೆಲವೊಬ್ಬರಿಗೆ ಕೆಲವೊಂದು ಸಮಯ ಅದೃಷ್ಟದ ಸಮಯವಾಗಿರುತ್ತೆ. ಯಾವ ರಾಶಿಗೆ ಯಾವ ತಿಂಗಳು ಅದೃಷ್ಟ ತಿಂಗಳು ಗೊತ್ತೇ..?
  • Authored byಮನಿಷಾ ಆನಂದ | Vijaya Karnataka Web 26 Jul 2023, 5:21 pm
    "ಅವನು ಹೋದ ತಿಂಗಳು ಹೇಗಿದ್ದ, ಈ ತಿಂಗಳು ಬರುತ್ತಿದ್ದ ಹಾಗೆ ನೋಡಿ, ಹೇಗೆ ಬದಲಾಗಿ ಬಿಟ್ಟ, ಈಗ ನಾವೆಲ್ಲ ಅವನ ಕಣ್ಣಿಗೆ ಕಾಣುವುದೇ ಇಲ್ಲ, ಅದೃಷ್ಟ ಎನ್ನುವುದು ಅವನ ಕಾಲಡಿಗೆ ಬಂದು ಬಿದ್ದಿದೆ", ಈ ರೀತಿಯ ವರ್ಣನೆಯನ್ನು ನೀವು ಕೂಡ ನಿಮ್ಮ ಜೀವನದಲ್ಲಿ ನಿಮಗೆ ತಿಳಿದ ಯಾರ ಬಗ್ಗೆಯಾದರೂ ಮಾಡಿರಬಹುದು, ಒಮ್ಮೆ ಜ್ಞಾಪಿಸಿಕೊಳ್ಳಿ. ನಮ್ಮ ಕಣ್ಣೆದುರಿಗೆ ಅಲ್ಲಿ ಇಲ್ಲಿ ಸಾಲ ಮಾಡಿಕೊಂಡು, ಅವರಿವರ ಹತ್ತಿರ ಬೈಗುಳ ಕೇಳಿಕೊಂಡು ಬದುಕುತ್ತಿದ್ದ ವ್ಯಕ್ತಿ ಈಗ ತಾನೇ ಮತ್ತೊಬ್ಬರಿಗೆ ಸಾಲ ಕೊಡುವ ಮಟ್ಟಿಗೆ ಬೆಳೆದಿದ್ದಾನೆ ಎಂದರೆ ಅವನ ಅದೃಷ್ಟ ಈ ತಿಂಗಳು ಹೇಗೆ ಬದಲಾಗಿದೆ ಎನಿಸುತ್ತದೆ. ಇಂತಹ ಟೈಮ್ ನಮಗೆ ಯಾವಾಗ ಬರುತ್ತೆ ಎಂದು ಹಾತೊರೆಯುತ್ತೇವೆ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂದು ಹೇಳುತ್ತಾರಲ್ಲ, ಅದೇ ಇದು. ನಿಮ್ಮ ರಾಶಿಗೆ ತಕ್ಕಂತೆ ನಿಮಗೆ ಅದೃಷ್ಟ ತರುವ ತಿಂಗಳು ಯಾವುದು ಗೊತ್ತೇ..? ಈ ಲೇಖನ ಓದಿ..
    Vijaya Karnataka Web know which one is the lucky month for each zodiac sign as per astrology
    Lucky Month: ಯಾವ ರಾಶಿಯವರಿಗೆ ಯಾವ ತಿಂಗಳು ಅದೃಷ್ಟದ ತಿಂಗಳು ಗೊತ್ತೇ..?


    ಮೇಷ ರಾಶಿ

    ಮೇಷ ರಾಶಿಯವರಿಗೆ ಶುಭಕರ ಎಂದರೆ ಮಾರ್ಚ್ ತಿಂಗಳು. ಅಂದುಕೊಂಡ ಎಲ್ಲ ಕೆಲಸಗಳು ಈ ತಿಂಗಳಲ್ಲಿ ಆಗುತ್ತವಂತೆ. ಸದಾ ಉತ್ಸಾಹದಿಂದ ಹಾಗೂ ಸಾಹಸಮಯ ಪ್ರವೃತ್ತಿಯಿಂದ ಬದುಕುವ ಮೇಷ ರಾಶಿ ಜನರಿಗೆ ಮಾರ್ಚ್ ತಿಂಗಳು ಯಶಸ್ಸಿನ ಆಗರ ಎಂದು ಯಾರು ಬೇಕಾದರೂ ಹೇಳಬಹುದು.

    ವೃಷಭ ರಾಶಿ

    ನಿಶ್ಚಿತ ಮನೋಭಾವ, ನಿರ್ಧಾರಗಳಲ್ಲಿ ಸದೃಢತೆ ಹಾಗೂ ಸ್ವಾಭಿಮಾನದ ಜೊತೆಗೆ ಬದುಕುವ ವೃಷಭ ರಾಶಿಯವರಿಗೆ ಅದೃಷ್ಟದ ಮೇಲೆ ಅದೃಷ್ಟ ತರುತ್ತದೆ ಏಪ್ರಿಲ್ ತಿಂಗಳು. ಅದೆಷ್ಟೋ ದಿನಗಳಿಂದ, ವಾರಗಳಿಂದ ಮಾಡಿ ಮುಗಿಸಿ ಜಯ ಸಾಧಿಸಬೇಕು ಅಂದುಕೊಂಡ ಕೆಲಸಗಳು ಏಪ್ರಿಲ್ ತಿಂಗಳಲ್ಲಿ ಹೂ ಎತ್ತಿದಂತೆ ಇವರಿಗೆ ಆಗುತ್ತವೆ.
    Auspicious Yogas: ಶ್ರಾವಣದಲ್ಲೇ ತ್ರಿಕೋನ, ಗಜಕೇಸರಿ ಯೋಗ: ಈ 6 ರಾಶಿಗಳಿಗೆ ಧನಾಗಮನ..!

    ಮಿಥುನ ರಾಶಿ

    ತಮ್ಮ ಬಹುಮುಖ ಸ್ವಭಾವದೊಂದಿಗೆ ಸದಾ ಸಮಾಜಮುಖಿಯಾಗಿ ಬದುಕುವ ಮಿಥುನ ರಾಶಿಯವರಿಗೆ ತಮ್ಮ ಬೌದ್ಧಿಕ ಬೆಳವಣಿಗೆಯ ಜೊತೆಗೆ ಮಾತಿನ ಸಂವಹನದಿಂದಲೇ ಕೆಲಸ ಸಾಧಿಸುವ ಅದೃಷ್ಟ ಸಿಗುವುದು ಮೇ ತಿಂಗಳಿನಲ್ಲಿ. ಈ ತಿಂಗಳು ದೊಡ್ಡ ದೊಡ್ಡ ಕೆಲಸಗಳಲ್ಲಿ, ದೊಡ್ಡ ಜನರ ಪರಿಚಯ ಹಾಗೂ ಬೆಂಬಲದೊಂದಿಗೆ ಇವರಿಗೆ ಯಶಸ್ಸು ಸಿಗುತ್ತದೆ.

    ಕರ್ಕಾಟಕ ರಾಶಿ

    ಪೋಷಣೆಯ ಹಾಗೂ ಮಾತೃತ್ವದ ಗುಣ ಹೊಂದಿರುವ ಕರ್ಕಾಟಕ ರಾಶಿಯವರು ಭಾವನಾತ್ಮಕ ಜೀವಿಗಳು. ಸಂಬಂಧದಲ್ಲಿ ಸಾಮರಸ್ಯತೆ, ವೃತ್ತಿ ಜೀವನದಲ್ಲಿ ಪ್ರಗತಿ, ಅಂದುಕೊಂಡ ಕೆಲಸದಲ್ಲಿ ಯಶಸ್ಸು ಹೆಚ್ಚಾಗಿ ಸಿಗುವುದು ಜೂನ್ ತಿಂಗಳಿನಲ್ಲಿ. ಒಟ್ಟಿನಲ್ಲಿ ಜೂನ್ ತಿಂಗಳು ಕರ್ಕಾಟಕ ರಾಶಿಯವರಿಗೆ ಅದೃಷ್ಟದ ವರದಾನ ಎಂದು ಹೇಳಬಹುದು.
    August Grah Gochar 2023: ಆಗಸ್ಟ್‌ನಲ್ಲಿ ಈ 5 ರಾಶಿಯವರ ಲೈಫೇ ಚೇಂಜ್! ಹಣವೋ ಹಣ..

    ಸಿಂಹ ರಾಶಿ

    ಸದಾ ತಮ್ಮನ್ನು ಬೇರೆಯವರು ಗುರುತಿಸಬೇಕು, ನಾವು ಮತ್ತೊಬ್ಬರನ್ನು ಮುನ್ನಡೆಸುವ ಅವಕಾಶ ಸಿಗಬೇಕು ಎಂದು ಆಸೆ ಪಡುವ ಸಿಂಹ ರಾಶಿಯವರಿಗೆ ಜುಲೈ ತಿಂಗಳು ಹೇಳಿ ಮಾಡಿಸಿದ ಹಾಗಿದೆ. ಇವರ ವರ್ಚಸ್ಸು, ಸೃಜನಶೀಲತೆ ಮತ್ತು ಬಯಸಿದ್ದೆಲ್ಲಾ ಈ ತಿಂಗಳಲ್ಲಿ ಇವರಿಗೆ ಒಲಿದು ಬರುತ್ತದೆ. ಮನೆ ಅಥವಾ ಸೈಟ್ ತೆಗೆದುಕೊಳ್ಳಬೇಕು ಎನ್ನುವ ಆಸೆ ಕೂಡ ಜುಲೈ ತಿಂಗಳಲ್ಲಿ ಕೈಗೂಡುತ್ತದೆ.

    ​ಕನ್ಯಾ ರಾಶಿ

    ಕೆಲಸದಲ್ಲಿ ಚಾಕಚಕ್ಯತೆ, ನಿರ್ಧಾರಗಳಲ್ಲಿ ಸದೃಢತೆ ಎಲ್ಲರೂ ಒಟ್ಟಿಗೆ ಮುನ್ನಡೆಯಬೇಕು ಎನ್ನುವ ಮನೋಭಾವ ಕನ್ಯಾ ರಾಶಿಯವರದು. ಇವರಿಗೆ ಆಗಸ್ಟ್ ತಿಂಗಳು ಬಹಳ ಅದೃಷ್ಟ ಎಂದು ಸಾಬೀತಾಗಿದೆ. ಈ ತಿಂಗಳಿನಲ್ಲಿ ವೃತ್ತಿ ಜೀವನದಲ್ಲಿ ಪ್ರಗತಿ, ಆರ್ಥಿಕ ಲಾಭ ಹಾಗೂ ವೈಯಕ್ತಿಕ ಜೀವನದಲ್ಲಿ ಬೆಳವಣಿಗೆಯನ್ನು ಹೆಚ್ಚಾಗಿ ಕಾಣಬಹುದು. ಅಂದುಕೊಂಡ ಬಹುತೇಕ ಕೆಲಸಗಳು ಆಗಸ್ಟ್ ತಿಂಗಳಿನಲ್ಲಿ ಕನ್ಯಾ ರಾಶಿಯವರಿಗೆ ಆಗುತ್ತವೆ.
    Venus Retrograde 2023: ಹಿಮ್ಮುಖ ಚಲನೆಯಲ್ಲಿರುವ ಶುಕ್ರ..! ಈ 4 ರಾಶಿಯವರಿಗೆ

    ತುಲಾ ರಾಶಿ

    ರಾಜ ತಾಂತ್ರಿಕ ನಿಪುಣತೆ ಹಾಗೂ ಸಂಬಂಧಗಳಲ್ಲಿ ಸಕಾರಾತ್ಮಕತೆ ಬಯಸುವ ತುಲಾ ರಾಶಿಯವರಿಗೆ ಪ್ರಣಯ ಭೇಟಿಗಳು ಹಾಗೂ ಕಲಾತ್ಮಕ ಪ್ರಯತ್ನಗಳು ಸೆಪ್ಟಂಬರ್ ತಿಂಗಳಿನಲ್ಲಿ ಹೆಚ್ಚು. ಅದೃಷ್ಟದ ಸಂಕೇತವಾಗಿರುವ ಈ ತಿಂಗಳಿನಲ್ಲಿ ಬುದ್ಧಿವಂತಿಕೆಯಿಂದ ಮಾಡುವ ಎಲ್ಲಾ ಕೆಲಸಗಳು ಇವರಿಗೆ ಸಫಲವಾಗುತ್ತವೆ.

    ​ವೃಶ್ಚಿಕ ರಾಶಿ

    ಅಂದುಕೊಂಡಿದ್ದಕ್ಕಿಂತ ಹೆಚ್ಚು ಲಾಭ ಹಾಗೂ ಅದೃಷ್ಟ ವೃಶ್ಚಿಕ ರಾಶಿಯವರಿಗೆ ಸಿಗುತ್ತದೆ ಎಂದರೆ ಅದು ಅಕ್ಟೋಬರ್ ತಿಂಗಳಿನಲ್ಲಿ. ಭಾವನಾತ್ಮಕ ಜೀವಿಗಳಾದ ವೃಶ್ಚಿಕ ರಾಶಿಯವರು ತಮ್ಮ ವೈಯಕ್ತಿಕ ಬೆಳವಣಿಗೆ ಜೊತೆಗೆ ಆಧ್ಯಾತ್ಮಿಕ ಒಳನೋಟ ಮತ್ತು ಆರ್ಥಿಕ ಲಾಭಗಳನ್ನು ತಂದುಕೊಡುವ ಹೆಚ್ಚು ಅವಕಾಶಗಳನ್ನು ಈ ತಿಂಗಳಿನಲ್ಲಿ ಕಾಣಬಹುದು.
    Rich Zodiac Signs 2024: ಈ 4 ರಾಶಿಯವರು 2024 ರಲ್ಲಿ ಬೇಡವೆಂದರೂ ಶ್ರೀಮಂತರಾಗುವರು..!

    ಧನಸ್ಸು ರಾಶಿ

    ಧನು ರಾಶಿಯವರು ಆಶಾವಾದಿಗಳು ಜೊತೆಗೆ ಸಾಹಸ ಮನೋಭಾವ ಇರುವ ಜನರು. ಇವರಿಗೆ ನವೆಂಬರ್ ತಿಂಗಳು ಚೆನ್ನಾಗಿ ಆಗಿಬರುತ್ತದೆ. ತಾವು ಅಂದುಕೊಂಡ ಪ್ರಯಾಣ, ಉನ್ನತ ಶಿಕ್ಷಣ ಹಾಗೂ ವೈಯಕ್ತಿಕ ಸಾಧನೆಗಳಿಗೆ ನವೆಂಬರ್ ತಿಂಗಳು ಧನು ರಾಶಿಯವರಿಗೆ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ.

    ಮಕರ ರಾಶಿ

    ಮಕರ ರಾಶಿಯವರಿಗೆ ಅದೃಷ್ಟ ಡಿಸೆಂಬರ್ ತಿಂಗಳಿನಲ್ಲಿ ಕೈಗೂಡುತ್ತದೆ. ಇವರ ಶಿಸ್ತು ಬದ್ಧ ಜೀವನಕ್ಕೆ ಹಾಗೂ ಮಹತ್ವಕಾಂಕ್ಷೆಯ ಸ್ವಭಾವಕ್ಕೆ ಈ ತಿಂಗಳು ಚೆನ್ನಾಗಿ ಹೊಂದಾಣಿಕೆಯಾಗುತ್ತದೆ. ವಿವಿಧ ಆಯಾಮದಲ್ಲಿ ಆರ್ಥಿಕ ಪ್ರತಿಫಲಗಳ ಜೊತೆಗೆ ವೃತ್ತಿ ಜೀವನದಲ್ಲಿ ಪ್ರಗತಿ ಹಾಗೂ ಅದೃಷ್ಟದ ಅವಕಾಶಗಳ ಬಾಗಿಲು ತೆರೆದಿರುವುದನ್ನು ಮಕರ ರಾಶಿಯವರು ಈ ತಿಂಗಳು ಕಾಣಬಹುದು.

    ಕುಂಭ ರಾಶಿ

    ವರ್ಷದ ಮೊದಲನೇ ತಿಂಗಳು ಅಂದರೆ ಜನವರಿ ತಿಂಗಳು ಕುಂಭ ರಾಶಿಯವರಿಗೆ ಬಹಳ ಅದೃಷ್ಟ ಎಂದು ಹೇಳಬಹುದು. ನವೀನ ಅವಕಾಶಗಳು, ಬಹು ಆಯಾಮದಲ್ಲಿ ಬದಲಾವಣೆ, ಬೌದ್ಧಿಕ ಪ್ರಗತಿ ಜೊತೆಗೆ ಅಂದುಕೊಂಡ ಎಲ್ಲ ಕೆಲಸಗಳಲ್ಲಿ ಯಶಸ್ಸು ಜನವರಿ ತಿಂಗಳಿನಲ್ಲಿ ಇವರ ಹತ್ತಿರ ಹುಡುಕಿಕೊಂಡು ಬರುತ್ತದೆ.
    Cool Zodiac Sign: ತಲೆ ಮೇಲೆ ತಲೆ ಬಿದ್ದರೂ ಈ 7 ರಾಶಿಯವರು ಮಾತ್ರ ಕೂಲ್‌.. ಕೂಲ್‌..!

    ​ಮೀನ ರಾಶಿ

    ಕನಸಿನ ಲೋಕದಲ್ಲಿ ಮುಳುಗಿರುವ ಮೀನ ರಾಶಿಯವರಿಗೆ ಚಂದ್ರನ ಬಲದೊಂದಿಗೆ ಫೆಬ್ರವರಿ ತಿಂಗಳು ಅದೃಷ್ಟದ ಅವಧಿಯಾಗಿದೆ. ಸದಾ ಸಹಾನುಭೂತಿ, ಸೃಜನಶೀಲ ಮನೋಭಾವ, ಆಧ್ಯಾತ್ಮಿಕ ಬೆಳವಣಿಗೆ, ಪ್ರಣಯದಲ್ಲಿ ಆಸಕ್ತಿ ಮತ್ತು ಸಂಪರ್ಕಗಳನ್ನು ಹೆಚ್ಚಾಗಿ ಫೆಬ್ರವರಿ ತಿಂಗಳಿನಲ್ಲಿ ಮೀನ ರಾಶಿಯವರು ಕಾಣಬಹುದು.

    ಲೇಖಕರ ಬಗ್ಗೆ
    ಮನಿಷಾ ಆನಂದ
    ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್‌ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್‌ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್‌ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ

    ಮುಂದಿನ ಲೇಖನ

    Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
    ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ