Please enable javascript.ಕಾರು ಕೊಳ್ಳುವ ಪ್ಲ್ಯಾನ್‌ನಲ್ಲಿದ್ದೀರಾ? : ಇಲ್ಲಿವೆ ಕೈಗೆಟಕುವ ಮೌಲ್ಯದ 5 ಡೀಸೆಲ್ ಕಾರುಗಳ ಡೀಟೇಲ್ಸ್ - 5 affordable diesel cars in indian market knowhere details in kannada - Vijay Karnataka

ಕಾರು ಕೊಳ್ಳುವ ಪ್ಲ್ಯಾನ್‌ನಲ್ಲಿದ್ದೀರಾ? : ಇಲ್ಲಿವೆ ಕೈಗೆಟಕುವ ಮೌಲ್ಯದ 5 ಡೀಸೆಲ್ ಕಾರುಗಳ ಡೀಟೇಲ್ಸ್

Authored byಸುನೀಲ್ | Vijaya Karnataka Web 23 Nov 2023, 1:41 pm
Subscribe

ವಾಹನ ಖರೀದಿಸುವ ಪ್ಲ್ಯಾನ್‌ನಲ್ಲಿದ್ದೀರಾ...? ಬಜೆಟ್ ಸ್ನೇಹಿ ಕಾರು ಯಾವುದು ಎಂಬ ಹುಡುಕಾಟದಲ್ಲಿದ್ದೀರಾ...? ಹಾಗಾದರೆ ನಿಮ್ಮ ಹುಡುಕಾಟಕ್ಕೆ ನೆರವಾಗುವಂತಹ ಕೆಲವೊಂದು ವಿಷಯಗಳು ಇಲ್ಲಿವೆ.

5 affordable diesel cars in indian market knowhere details in kannada
ಕಾರು ಕೊಳ್ಳುವ ಪ್ಲ್ಯಾನ್‌ನಲ್ಲಿದ್ದೀರಾ? : ಇಲ್ಲಿವೆ ಕೈಗೆಟಕುವ ಮೌಲ್ಯದ 5 ಡೀಸೆಲ್ ಕಾರುಗಳ ಡೀಟೇಲ್ಸ್
ಭಾರತದಲ್ಲಿ ಡೀಸೆಲ್ ವಾಹನಗಳೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಬರೀ ಇಂಧನ ದಕ್ಷತೆಯ ಕಾರಣದಿಂದ ಮಾತ್ರ ಡೀಸೆಲ್ ಕಾರುಗಳು ಭಾರತದಲ್ಲಿ ಜನಪ್ರಿಯತೆ ಗಳಿಸಿಲ್ಲ, ಬದಲಾಗಿ ಅದರ ಟಾರ್ಕ್‌ ಸಮೃದ್ಧ ಕಾರ್ಯಕ್ಷಮತೆ ಕೂಡಾ ಇದರ ಖ್ಯಾತಿಗೆ ಕಾರಣವಾಗಿದೆ. ಇದು ವಾಹನಗಳನ್ನು ಹೈವೇಯ ಸವಾರಿ ಅಥವಾ ನಗರ ಸಂಚಾರಕ್ಕೂ ಸೂಕ್ತವಾಗಿಸುತ್ತವೆ. ಹೀಗಾಗಿ, ಸಾಕಷ್ಟು ಮಂದಿ ಡೀಸೆಲ್ ಕಾರುಗಳನ್ನೇ ಜಾಸ್ತಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅಂತೆಯೇ ಕೈಗೆಟಕುವ ಮೌಲ್ಯದ ಐದು ಡೀಸೆಲ್ ಕಾರುಗಳ ಬಗೆಗಿನ ಮಾಹಿತಿ ಇಲ್ಲಿದೆ.

ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್

ಟಾಟಾ ಮೋಟರ್ಸ್‌ನ ಜನಪ್ರಿಯ ವಾಹನಗಳಲ್ಲಿ ನೆಕ್ಸಾನ್ ಕೂಡಾ ಒಂದು. ಟಾಟಾ ಮೋಟರ್ಸ್‌ನ ಅಧಿಕ ಮಾರಾಟವಾಗುವ ವಾಹನಗಳಲ್ಲೂ ನೆಕ್ಸಾನ್ ಕೊಡುಗೆ ಇದೆ. ನೆಕ್ಸಾನ್ 1.5-ಲೀಟರ್ ಟರ್ಬೋಚಾರ್ಜ್ಡ್‌ ರಿವೋಟರ್ಕ್ ಡಿಸೇಲ್ ಎಂಜಿನ್‌ನಿಂದ ಶಕ್ತಿಯನ್ನು ಪಡೆಯುತ್ತದೆ. ಈ ಎಂಜಿನ್ 111 ಎಚ್‌ಪಿ ಗರಿಷ್ಟ ಶಕ್ತಿ ಹಾಗೂ 260 ನ್ಯೂಟನ್ ಮೀಟರ್ ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್‌ ಮ್ಯಾನ್ಯುವಲ್ ಅಥವಾ ಎಎಂಟಿ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಟಾಟಾ ನೆಕ್ಸಾನ್‌ನ ಡೀಸೆಲ್ ವೇರಿಯೆಂಟ್‌ ಫೇಸ್‌ಲಿಫ್ಟ್‌ನ ಎಕ್ಸ್‌ಶೋರೂಮ್ ಬೆಲೆ 11 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ.
| Image Courtesy : cars.tatamotors.com

ಟಾಟಾ ಆಲ್ಟ್ರೋಜ್

ಟಾಟಾ ಆಲ್ಟ್ರೋಜ್

ಟಾಟಾ ಮೋಟರ್ಸ್‌ನ ಇನ್ನೊಂದು ಜನಪ್ರಿಯ ಕಾರು ಟಾಟಾ ಆಲ್ಟ್ರೋಜ್. ಇದು ಕೂಡಾ 1.5-ಲೀಟರ್ ಟರ್ಬೊಚಾರ್ಜ್ಡ್‌ ರಿವೋಟರ್ಕ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಎಂಜಿನ್ 87 ಎಚ್‌ಪಿ ಶಕ್ತಿ ಮತ್ತು 200 ನ್ಯೂಟನ್ ಮೀಟರ್ ಟಾರ್ಕ್ ಹೊರಹಾಕುತ್ತದೆ. ಈ ಎಂಜಿನ್ ಐದು ಸ್ಪೀಡ್‌ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಿ ಬರುತ್ತದೆ. ಈ ಡೀಸೆಲ್ ಕಾರಿನ ಎಕ್ಸ್‌ಶೋರೂಮ್ ಬೆಲೆ 8.79 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ.
| Image Courtesy : cars.tatamotors.com

​Also Read : 2023ರ ಅಕ್ಟೋಬರ್‌ನಲ್ಲಿ ಅಧಿಕ ಮಾರಾಟವಾದ ಹ್ಯಾಚ್‌ಬ್ಯಾಕ್‌ಗಳಿವು

ಮಹೀಂದ್ರಾ ಎಕ್ಸ್‌ಯುವಿ 300

ಮಹೀಂದ್ರಾ ಎಕ್ಸ್‌ಯುವಿ 300

ಮಹೀಂದ್ರಾದ ಜನಪ್ರಿಯ ಎಸ್‌ಯುವಿಗಳಲ್ಲಿ ಎಕ್ಸ್‌ಯುವಿ 300 ಕೂಡಾ ಒಂದು. ಈ ಎಸ್‌ಯುವಿ 1.5-ಲೀಟರ್ ಟರ್ಬೋಚಾರ್ಜ್ಡ್‌ ಫೋರ್‌ ಸಿಲಿಂಡರ್ ಡೀಸೆಲ್‌ ಎಂಜಿನ್‌ನಿಂದ ಶಕ್ತಿ ಪಡೆಯುತ್ತದೆ. ಈ ಎಂಜಿನ್ 113 ಎಚ್‌ಪಿ ಶಕ್ತಿ ಮತ್ತು 300 ಎನ್‌ಎಂ ಟಾರ್ಕ್‌ ಉತ್ಪಾದಿಸುತ್ತದೆ. ಈ ಎಂಜಿನ್ ಆರು ಸ್ಪೀಡ್ ಮ್ಯಾನ್ಯುವಲ್ ಅಥವಾ ಆರು ಸ್ಪೀಡ್ ಎಎಂಟಿ ಗೇರ್‌ಬಾಕ್ಸ್‌ನೊಂದಿಗೆ ಜೋಡಿಯಾಗಿ ಬರುತ್ತದೆ. ಎಕ್ಸ್‌ಯುವಿ 300 ಎಸ್‌ಯುವಿಯ ಡೀಸೆಲ್ ವೇರಿಯೆಂಟ್‌ನ ಎಕ್ಸ್‌ಶೋರೂಮ್ ಬೆಲೆ 10.21 ಲಕ್ಷ ರೂಪಾಯಿಯಿಂದ ಶುರುವಾಗುತ್ತದೆ.
| Image Courtesy : auto.mahindra.com

​Also Read : 7 Seater Cars : ಭಾರತದ 5 ಜನಪ್ರಿಯ 7 ಏಳು ಸೀಟಿನ ಪೆಟ್ರೋಲ್ ಕಾರುಗಳು

ಕಿಯಾ ಸೊನೆಟ್‌

ಕಿಯಾ ಸೊನೆಟ್‌

ಕಿಯಾ ಕೂಡಾ ಭಾರತದಲ್ಲಿ ತನ್ನದೇ ಆದ ಮಾರುಕಟ್ಟೆಯನ್ನು ಹೊಂದಿದೆ. ಕಿಯಾದ ಜನಪ್ರಿಯ ವಾಹನಗಳಲ್ಲಿ ಸೊನೆಟ್‌ ಕೂಡಾ ಒಂದು. ಈ ಕಾರು 1.5-ಲೀಟರ್ ಟರ್ಬೋ ಚಾರ್ಜ್ಡ್‌ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 112 ಎಚ್‌ಪಿ ಶಕ್ತಿ ಮತ್ತು 250 ನ್ಯೂಟನ್ ಮೀಟರ್ ಟಾರ್ಕ್‌ ಅನ್ನು ಹೊರಹಾಕುತ್ತದೆ. ಈ ಕಾರು ಅರು ಸ್ಪೀಡ್ ಎಟಿ ಟಾರ್ಕ್ ಕನ್ವರ್ಟರ್‌ ಗೇರ್‌ಬಾಕ್ಸ್‌ನೊಂದಿಗೆ ಜೋಡಿಯಾಗಿ ಬರುತ್ತದೆ. ಭಾರತದಲ್ಲಿ ಕಿಯಾ ಸೊನೆಟ್ ಡೀಸೆಲ್ ವೇರಿಯೆಂಟ್‌ನ ಎಕ್ಸ್‌ಶೋರೂಮ್ ಬೆಲೆ 9.95 ಲಕ್ಷ ರೂಪಾಯಿಯಿಂದ ಶುರುವಾಗುತ್ತದೆ.
| Image Courtesy : www.kia.com

​Also Read : ಯುಎಸ್‌ಎ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ `ಮೇಡ್ ಇನ್ ಇಂಡಿಯಾ' ಕೆಟಿಎಂ ಡ್ಯೂಕ್ 390, ಡ್ಯೂಕ್ 250

ಹ್ಯುಂಡೈ ವೆನ್ಯೂ

ಹ್ಯುಂಡೈ ವೆನ್ಯೂ

ಈ ಪಟ್ಟಿಯಲ್ಲಿರುವ ಇನ್ನೊಂದು ಕಾರು ಹ್ಯುಂಡೈ ವೆನ್ಯೂ. ಇದರ ಎಕ್ಸ್‌ಶೋರೂಮ್ ಬೆಲೆ ಶುರುವಾಗುವುದು 10.46 ಲಕ್ಷ ರೂಪಾಯಿಯಿಂದ. ಹ್ಯುಂಡೈ ವೆನ್ಯೂ 1.5-ಲೀಟರ್ ಟರ್ಬೋಚಾರ್ಜ್ಡ್‌ ಡೀಸೆಲ್ ಎಂಜಿನ್‌ನಿಂದ ಶಕ್ತಿ ಪಡೆಯುತ್ತದೆ. ಈ ಎಂಜಿನ್ 115 ಎಚ್‌ಪಿ ಶಕ್ತಿ ಮತ್ತು 250 ನ್ಯೂಟನ್ ಮೀಟರ್ ಟಾರ್ಕ್‌ ಅನ್ನು ಹೊರಹಾಕುತ್ತದೆ. ಈ ಎಂಜಿನ್ ಐದು ಸ್ಪೀಡ್ ಮ್ಯಾನ್ಯುವಲ್ ಅಥವಾ ಐದು ಸ್ಪೀಡ್ ಎಎಂಟಿ ಗೇರ್‌ಬಾಕ್ಸ್‌ನೊಂದಿಗೆ ಜೋಡಿಯಾಗಿ ಬರುತ್ತದೆ. ಹ್ಯುಂಡೈ ವೆನ್ಯೂ ಕೂಡಾ ಭಾರತದ ವಾಹನ ಮಾರುಕಟ್ಟೆಯಲ್ಲಿ ಕೈಗೆಟಕುವ ಮೌಲ್ಯದಲ್ಲಿ ಸಿಗುವ ಡೀಸೆಲ್ ಎಸ್‌ಯುವಿಗಳಲ್ಲಿ ಒಂದಾಗಿದೆ.
| Image Courtesy : www.hyundai.com

ಸುನೀಲ್
ಲೇಖಕರ ಬಗ್ಗೆ
ಸುನೀಲ್
"2007ರ ಸೆಪ್ಟೆಂಬರ್‌ನಿಂದ ಪತ್ರಿಕೋದ್ಯಮದ ಪಯಣ ಶುರು. ಪ್ರಮುಖ ದಿನಪತ್ರಿಕೆಯೊಂದರಲ್ಲಿ ಉಪಸಂಪಾದಕನಾಗಿ ವೃತ್ತಿ ಜೀವನ ಆರಂಭ. ಇದಾದ ಆರು ತಿಂಗಳ ಬಳಿಕ ನ್ಯೂಸ್ ಚಾನೆಲ್‌ನಲ್ಲಿ ಕೆಲಸ. 2008ರಿಂದ ಶುರುವಾದ ಸುದ್ದಿ ವಾಹಿನಿಯ ಪಯಣ ನ್ಯೂಸ್‌ ಡೆಸ್ಕ್‌ನ ವಿವಿಧ ಜವಾಬ್ದಾರಿಗಳ ನಿರ್ವಹಣೆಯೊಂದಿಗೆ 2019ರ ತನಕ ಸಾಗಿತ್ತು. ಅಲ್ಲಿಂದ ಮತ್ತೊಂದು ಬದಲಾವಣೆಯ ಕ್ಷಣ. 2019ರಿಂದ ಡಿಜಿಟಲ್ ಮಾಧ್ಯಮದಲ್ಲಿ ಹೊಸ ಕಲಿಕೆಯೊಂದಿಗೆ ಹೊಸ ಜೀವನ ಶುರು. ಇಲ್ಲಿಂದ ಈ ಕ್ಷಣದವರೆಗೆ ವಿಜಯ ಕರ್ನಾಟಕ ಬಳಗದೊಂದಿಗೆ ನನ್ನ ವೃತ್ತಿ ಬದುಕು ಸಾಗಿದೆ. ಇಷ್ಟು ವರ್ಷದ ಪಯಣದಲ್ಲಿ ವಿವಿಧ ಸಂಸ್ಥೆಗಳಲ್ಲಿ ಹಲವು ವಿಭಾಗಗಳಲ್ಲಿ ಕೆಲಸದ ಅನುಭವ ಪಡೆದ ತೃಪ್ತಿ ನನ್ನದು. ಎಲ್ಲಾ ಪತ್ರಕರ್ತರಿಗೂ ಪ್ರಮುಖವಾಗಿರುವ ಓದು ನನ್ನ ಹವ್ಯಾಸಗಳಲ್ಲಿ ಒಂದು. ಬಿಡುವಾದಾಗ ಪ್ರವಾಸಕ್ಕೆ ಹೋಗುವುದು ಕೂಡಾ ನನ್ನ ಜೀವನದ ಖುಷಿಯ ಭಾಗ. "... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ