ಆ್ಯಪ್ನಗರ

ಗೋಕುಲಾಷ್ಟಮಿಗೆ ನೈವೇದ್ಯ

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಪೂಜೆ, ಪುನಸ್ಕಾರಗಳ ಜತೆಗೆ ವಿಶೇಷ ತಿನಿಸುಗಳನ್ನು ಮಾಡಿ ದೇವರಿಗೆ ನೈವೇದ್ಯ ಮಾಡುತ್ತಾರೆ. ಉಡುಪಿಯಲ್ಲಿ ವಿಶೇಷವಾಗಿ ಅರಳಿನ ಉಂಡೆ, ಚಕ್ಕುಲಿ ತಯಾರಿಸಿ ಶ್ರೀಕೃಷ್ಣನಿಗೆ ನೈವೇದ್ಯಕ್ಕೆ ಇಡುತ್ತಾರೆ. ಶ್ರೀಕೃಷ್ಣನ ವಿಶೇಷ ಪೂಜೆಯಲ್ಲಿ ಭಕ್ತರಿಗೆ ಅದನ್ನೇ ಪ್ರಸಾದ ರೂಪದಲ್ಲಿ ಹಂಚುತ್ತಾರೆ.

Vijaya Karnataka 17 Aug 2019, 12:00 am
ಬೋಧಿವೃಕ್ಷ ಸುದ್ದಿಲೋಕ
Vijaya Karnataka Web puri unde


ಕಾರದ ಚಕ್ಕುಲಿ
ಬೇಕಾಗುವ ಸಾಮಾನುಗಳು: ಒಂದು ಪಾವು ಅಕ್ಕಿ, ಒಂದು ಪಾವು ಕಡ್ಲೆಬೇಳೆ, ಒಂದು ಪಾವು ಉದ್ದಿನಬೇಳೆ, ಒಂದು ಪಾವು ಹುರಿಗಡ್ಲೆ, ಕಾರದ ಪುಡಿ, ಉಪ್ಪು ರುಚಿಗೆ ತಕ್ಕಷ್ಟು, ಎಳ್ಳು, ಜೀರಿಗೆ, ಎರಡು ಸೌಟು ಕರಗಿದ ತುಪ್ಪ, ಕರಿಯಲು ಎಣ್ಣೆ.

ಮಾಡುವ ವಿಧಾನ:
ಅಕ್ಕಿ, ಕಡ್ಲೆಬೇಳೆ, ಉದ್ದಿನಬೇಳೆ ಈ ಮೂರನ್ನೂ ಹುರಿದುಕೊಂಡು, ಅದಕ್ಕೆ ಹುರಿಗಡ್ಲೆ ಸೇರಿಸಿ ಗಿರಣಿಯಲ್ಲಿ ಹಿಟ್ಟು ಮಾಡಿಸಿ. ಹಿಟ್ಟಿಗೆ ತಕ್ಕಷ್ಟು ಉಪ್ಪು, ಕಾರದಪುಡಿ, ಎಳ್ಳು ಜೀರಿಗೆ ಎರಡು ಕರಗಿಸಿದ ತುಪ್ಪ ಒಂದು ಸೇರು ಹಿಟ್ಟಿಗೆ ಸೇರಿಸಿ ಗಟ್ಟಿಯಾಗಿ ನಾದಿ ಕಲಸಿ. ಚಕ್ಕುಲಿ ಒರಳಿಗೆ ಹಾಕಿ ಚಕ್ಕುಲಿ ಒತ್ತಿ ಕಾದ ಎಣ್ಣೆಯಲ್ಲಿ ಕರಿಯಿರಿ.


ಅರಳಿನ ಉಂಡೆ
ಬೇಕಾಗುವ ಸಾಮಗ್ರಿಗಳು: ಅರಳಿನ ಪುಡಿ ಮೂರು ಕಪ್‌, ಬೆಲ್ಲದ ಪುಡಿ ಮೂರು ಕಪ್‌, ಗೋಡಂಬಿ ಚೂರುಗಳು ಅರ್ಧ ಕಪ್‌, ಏಲಕ್ಕಿ ಒಂದು ಚಮಚ, ತುಪ್ಪ ಎರಡು ಚಮಚ.
ಮಾಡುವ ವಿಧಾನ: ಗೋಡಂಬಿಯನ್ನು ತುಪ್ಪದಲ್ಲಿ ಕೆಂಬಣ್ಣ ಬರುವವರೆಗೆ ಹುರಿಯಬೇಕು. ಬೆಲ್ಲಕ್ಕೆ ಕಾಲು ಕಪ್‌ ನೀರು ಹಾಕಿ ನೂಲು ಪಾಕ ತಯಾರಿಸಿ. ಪಾಕಕ್ಕೆ ಅರಳಿನ ಪುಡಿ, ಏಲಕ್ಕಿ ಪುಡಿ ಹಾಕಿ. ಚೆನ್ನಾಗಿ ಮಿಶ್ರ ಮಾಡಿ. ಯಾವ ಗಾತ್ರದ ಉಂಡೆಗಳು ಬೇಕೋ ಹಾಗೆ ಮಾಡಿ.


ಅಂಟಿನುಂಡೆ
ಬೇಕಾಗುವ ಸಾಮಗ್ರಿ: ಒಣ ದ್ರಾಕ್ಷಿ, ಬಾದಾಮಿ, ಗೋಡಂಬಿ, ಹಸಿಶುಂಠಿ, ಒಣ ಖರ್ಜೂರ, ಕೊಬ್ಬರಿ ತುರಿ ತಲಾ ಒಂದು ಕಪ್‌. ಅರ್ಧ ಕಪ್‌ ಅಂಟು, ಬೆಲ್ಲ ಎರಡು ಕಪ್‌, ಗಸಗಸೆ ಕಾಲು ಕಪ್‌, ಕರಿಯಲು ತುಪ್ಪ.

ಮಾಡುವ ವಿಧಾನ: ಬಾದಾಮಿ, ಗೋಡಂಬಿ, ಒಣಖರ್ಜೂರ, ಶುಂಠಿ, ಸಣ್ಣಗೆ ಹೆಚ್ಚಿಕೊಂಡು ತುಪ್ಪದಲ್ಲಿ ಕರಿದುಕೊಳ್ಳಿ, ಅಂಟು, ದ್ರಾಕ್ಷಿಯನ್ನೂ ಕರಿದುಕೊಳ್ಳಿ. ಗಸಗಸೆ, ಒಣಕೊಬ್ಬರಿ ಬೆಚ್ಚಗೆ ಮಾಡಿಕೊಳ್ಳಿ. ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಒಂದೆಳೆ ಪಾಕ ಮಾಡಿ. ಎಲ್ಲಾ ಪದಾರ್ಥಗಳನ್ನೂ ಹಾಕಿ ಚೆನ್ನಾಗಿ ಕೈಯಾಡಿಸಿ ಒಲೆ ಆರಿಸಿ. ಹಲ್ವದಂತೆಯೂ ಬಳಸಬಹುದು. ಉಂಡೆ ಕಟ್ಟುವುದಿದ್ದರೆ, ಗೋಧಿಧಿ ಹಿಟ್ಟನ್ನು ಹದವಾಗಿ ಹುರಿದು ಕೈಗೆ ಹಚ್ಚಿಕೊಂಡು ಉಂಡೆ ಕಟ್ಟಿ.


ಉದ್ದಿನಬೇಳೆ ಚಕ್ಕುಲಿ

ಬೇಕಾಗುವ ಸಾಮಗ್ರಿಗಳು: ಉದ್ದಿನಬೇಳೆ ಅರ್ಧ ಕಪ್‌, ಅಕ್ಕಿ ಹಿಟ್ಟು ಎರಡೂವರೆ ಕಪ್‌, ಖಾರಧಿಧಿಧಿಧಿ ಎರಡು ಚಮಚ, ಜೀರಿಗೆ ಒಂದು ಚಮಚ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಉದ್ದಿನಬೇಳೆಯನ್ನು ಒಂದು ಕಪ್‌ ನೀರು ಸೇರಿಸಿ ಕುಕ್ಕರ್‌ನಲ್ಲಿ ಬೇಯಿಸಿಕೊಂಡು, ತಣ್ಣಗಾದ ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಹಿಟ್ಟು ದೋಸೆ ಹಿಟ್ಟಿನ ಹದದಲ್ಲಿರಲಿ. ಈಗ ರುಬ್ಬಿಕೊಂಡ ಉದ್ದಿನ ಹಿಟ್ಟಿಗೆ ಉಪ್ಪು, ಖಾರದ ಪುಡಿ, ಜೀರಿಗೆ, ಅಕ್ಕಿಹಿಟ್ಟು ಸೇರಿಸಿ ಗಟ್ಟಿಯಾಗಿ ಕಲೆಸಿ. ಹಿಟ್ಟು ಸ್ವಲ್ಪ ನೀರು-ನೀರಾಗಿದ್ದರೆ ಇನ್ನೂ ಸ್ವಲ್ಪ ಅಕ್ಕಿ ಹಿಟ್ಟು ಹಾಕಿ ಕಲೆಸಿ. ಕಲೆಸಿಕೊಂಡ ಹಿಟ್ಟನ್ನು ಚಕ್ಕುಲಿ ಒರಳಿನಲ್ಲಿ ಒತ್ತಿ, ಚಕ್ಕುಲಿಗಳನ್ನು ತಯಾರಿಸಿ ಕಾದ ಎಣ್ಣೆಯಲ್ಲಿ ಕರಿದರೆ ರುಚಿಯಾದ ಗರಿಗರಿ ಚಕ್ಕುಲಿ ರೆಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ