Please enable javascript.ಬಜೆಟ್‌ನತ್ತ ಷೇರು ಮಾರುಕಟ್ಟೆ ಚಿತ್ತ - ಬಜೆಟ್‌ನತ್ತ ಷೇರು ಮಾರುಕಟ್ಟೆ ಚಿತ್ತ - Vijay Karnataka

ಬಜೆಟ್‌ನತ್ತ ಷೇರು ಮಾರುಕಟ್ಟೆ ಚಿತ್ತ

ಏಜೆನ್ಸೀಸ್ 17 Feb 2013, 10:19 pm
Subscribe

ಷೇರು ಮಾರುಕಟ್ಟೆ ಕೇಂದ್ರ ಬಜೆಟ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯ ನಡೆಯನ್ನು ಅನುಸಿರುವ ಸಾಧ್ಯತೆ ಇದೆ. ಫೆಬ್ರವರಿ 28ರಂದು ಕೇಂದ್ರ ಬಜೆಟ್ ನಡೆಯಲಿದೆ.

ಬಜೆಟ್‌ನತ್ತ ಷೇರು ಮಾರುಕಟ್ಟೆ ಚಿತ್ತ
ಹೊಸದಿಲ್ಲಿ: ಷೇರು ಮಾರುಕಟ್ಟೆ ಕೇಂದ್ರ ಬಜೆಟ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯ ನಡೆಯನ್ನು ಅನುಸಿರುವ ಸಾಧ್ಯತೆ ಇದೆ. ಫೆಬ್ರವರಿ 28ರಂದು ಕೇಂದ್ರ ಬಜೆಟ್ ನಡೆಯಲಿದೆ.

ಷೇರು ಮಾರುಕಟ್ಟೆಗಳು ಈಗಿನ ಶ್ರೇಣಿಯನ್ನು ಈ ವಾರ ಹಾಗೆಯೇ ಮುಂದುವರಿಸುವ ಲಕ್ಷಣ ಇದೆ. ತ್ರೈಮಾಸಿಕ ಫಲಿತಾಂಶಗಳ ಅವಧಿಯೂ ಮುಗಿದಿದೆ. ಹೀಗಾಗಿ ಹೂಡಿಕೆದಾರರು ಎಚ್ಚರಿಕೆಯಿಂದ ಬಜೆಟ್ ನಿರೀಕ್ಷೆಯಲ್ಲಿದ್ದಾರೆ ಎನ್ನುತ್ತಾರೆ ಆದಿತ್ಯ ಟ್ರೇಡಿಂಗ್ ಸಲ್ಯೂಷನ್ಸ್‌ನ ಸಂಸ್ಥಾಪಕ ವಿಕಾಸ್ ಜೈನ್.

ಕಳೆದ ವಾರ ಡಬ್ಲ್ಯುಪಿಐ ಹಣದುಬ್ಬರ ಫಲಿತಾಂಶಕ್ಕೆ ಪೆಟೆಯಲ್ಲಿ ನಿರೀಕ್ಷಿತ ಪ್ರತಿಕ್ರಿಯೆಯನ್ನು ಕೊಟ್ಟಿಲ್ಲ. ಸಂಸತ್ತಿನಲ್ಲಿ ಗುರುವಾರದಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ನಂತರ ಷೇರು ಪೇಟೆ ಚೇತರಿಸುವ ಲಕ್ಷಣ ಇದೆ.

ಜಾಗತಿಕ ಮಾರುಕಟ್ಟೆ ಪರಿಸ್ಥಿತಿ ಕೂಡ ಮಹತ್ವ ಪೂರ್ಣ. ಎನ್‌ಎಸ್‌ಇಯ ಮಟ್ಟ ಯಾವ ದಿಕ್ಕಿನತ್ತ ಸಾಗಬಹುದು ಎಂಬುದನ್ನು ಮುಂದಿನ ದಿನಗಳು ನಿರ್ಣಯಿಸಲಿವೆ ಎನ್ನುತ್ತಾರೆ ಗೋಯೆಲ್.

ಮಾರುಕಟ್ಟೆ ಬಜೆಟ್‌ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದೆ. ಅವುಗಳು ಫಲಪ್ರದವಾದರೆ ಸೂಚ್ಯಂಕಗಳು ಏರುವುದು ನಿಶ್ಚಿತ ಎನ್ನುತ್ತಾರೆ ಕೊಟಾಕ್ ಸೆಕ್ಯುರಿಟೀಸ್‌ನ ಪಿಸಿಜಿ ಮುಖ್ಯಸ್ಥ ದಿಪೇನ್ ಷಾ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಈ ತಿಂಗಳಿನಲ್ಲಿ ಇದುವರೆಗೆ ಶೇ.1.6ರಷ್ಟು ಇಳಿಕೆ ದಾಖಲಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ