ಆ್ಯಪ್ನಗರ

ಮಲ್ಯ, ಚೋಕ್ಸಿ ಸೇರಿ 50 ಸುಸ್ತಿದಾರರ 68,000 ಕೋಟಿ ರೂ. ಸಾಲ ರೈಟ್‌ ಆಫ್‌

ಮೆಹುಲ್‌ ಚೋಕ್ಸಿಯವರ ಗೀತಾಂಜಲಿ ಜೆಮ್ಸ್‌ ಲಿ.ನ 5,492 ಕೋಟಿ ರೂ, ವಿಜಯ್‌ ಮಲ್ಯ ಅವರ ಕಿಂಗ್‌ಫಿಶರ್‌ ಏರ್‌ಲೈನ್ಸ್‌ನ 1,943 ಕೋಟಿ ರೂ, ಬಾಬಾ ರಾಮ್‌ದೇವ್‌ ಅವರ ಪತಂಜಲಿ ಗ್ರೂಪ್‌ನ ಭಾಗವಾಗಿರುವ ರುಚಿ ಸೋಯಾ ಇಂಡಸ್ಟ್ರೀಸ್‌ನ 2,212 ಕೋಟಿ ರೂ. ಸುಸ್ತಿ ಸಾಲ ತಾಂತ್ರಿಕವಾಗಿ ಬರ್ಖಾಸ್ತಾಗಿದೆ.

Agencies 28 Apr 2020, 2:12 pm
ಮುಂಬಯಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದ ಆರೋಪಿ ನೀರವ್‌ ಮೋದಿಯ ಚಿಕ್ಕಪ್ಪ ಮೆಹುಲ್‌ ಚೋಕ್ಸಿ, ಉದ್ಯಮಿ ವಿಜಯ್‌ ಮಲ್ಯ ಸೇರಿದಂತೆ 50 ಮಂದಿ ಪ್ರಮುಖ ಸುಸ್ತಿದಾರರ 68,607 ಕೋಟಿ ರೂ. ಸಾಲವನ್ನು ರೈಟ್‌ಆಫ್‌ (ಸಾಲದ ದಾಖಲೆಯನ್ನು ತಾಂತ್ರಿಕವಾಗಿ ಕಡತದಿಂದ ಹೊರಗಿಡುವುದು) ಮಾಡಿರುವುದಾಗಿ ಆರ್‌ಟಿಐ ಅಡಿಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಆರ್‌ಬಿಐ ಉತ್ತರಿಸಿದೆ.
Vijaya Karnataka Web Mehul Choksi Vijay Mallya


ಆರ್‌ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ ಎಂಬುವರು 50 ಪ್ರಮುಖ ಸಾಲ ಸುಸ್ತಿದಾರರ ಈಗಿನ ಸಾಲದ ವಿವರಗಳನ್ನು ಕೋರಿದ್ದರು. ಈ ಆರ್‌ಟಿಐ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಆರ್‌ಬಿಐ, 2019ರ ಸೆ. 30ರ ತನಕ 68,607 ಕೋಟಿ ರೂ. ಸಾಲವನ್ನು ರೈಟ್‌ ಆಫ್‌ ಮಾಡಿರುವುದನ್ನು ತಿಳಿಸಿದೆ.

ಮೆಹುಲ್‌ ಚೋಕ್ಸಿಯವರ ಗೀತಾಂಜಲಿ ಜೆಮ್ಸ್‌ ಲಿ.ನ 5,492 ಕೋಟಿ ರೂ, ವಿಜಯ್‌ ಮಲ್ಯ ಅವರ ಕಿಂಗ್‌ಫಿಶರ್‌ ಏರ್‌ಲೈನ್ಸ್‌ನ 1,943 ಕೋಟಿ ರೂ, ಬಾಬಾ ರಾಮ್‌ದೇವ್‌ ಅವರ ಪತಂಜಲಿ ಗ್ರೂಪ್‌ನ ಭಾಗವಾಗಿರುವ ರುಚಿ ಸೋಯಾ ಇಂಡಸ್ಟ್ರೀಸ್‌ನ 2,212 ಕೋಟಿ ರೂ. ಸುಸ್ತಿ ಸಾಲ ತಾಂತ್ರಿಕವಾಗಿ ಬರ್ಖಾಸ್ತಾಗಿದೆ.

ಆರ್‌ಬಿಐ ನೀಡಿರುವ ಪಟ್ಟಿಯಲ್ಲಿಉಳಿದಂತೆ ಆರ್‌ಇಐ ಅಗ್ರೊ ಲಿಮಿಟೆಡ್‌ನ 4,314 ಕೋಟಿ ರೂ, ಜತಿನ್‌ ಮೆಹ್ತಾ ಅವರ ವಿನ್‌ಸಮ್‌ ಡೈಮಂಡ್ಸ್‌ ಆ್ಯಂಡ್‌ ಜ್ಯುವೆಲ್ಲರಿಯ 4,076 ಕೋಟಿ ರೂ. ಸಾಲವನ್ನೂ ಬರ್ಖಾಸ್ತುಗೊಳಿಸಲಾಗಿದೆ.

ಮೆಹುಲ್‌ ಚೋಕ್ಸಿ ಈಗ ಆಂಟಿಗುವಾ ಮತ್ತು ಬಾರ್ಬಡೋಸ್‌ ದ್ವೀಪಗಳ ಪೌರತ್ವ ಪಡೆದು ಅಲ್ಲಿದ್ದಾರೆ. ನೀರವ್‌ ಮೋದಿ ಲಂಡನ್‌ನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಮಲ್ಯ ಸಹ ಲಂಡನ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಲಂಡನ್‌ ಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆಯಲ್ಲಿ ಮಲ್ಯ ಅವರಿಗೆ ಹಿನ್ನಡೆಯಾಗಿದ್ದು, ಮಲ್ಯ ಗಡಿಪಾರಿಗೆ ಲಂಡನ್‌ ಕೋರ್ಟ್‌ ಅಸ್ತು ಎಂದಿದೆ. ಈ ನಡುವೆಯೇ ಅವರ ಸಾಲವನ್ನು ತಾಂತ್ರಿಕವಾಗಿ ಕಡತದಿಂದ ಹೊರಗಿಡಲಾಗಿದೆ.

ಏನಿದು ರೈಟ್‌ ಆಫ್‌?

ಬ್ಯಾಂಕ್‌ಗಳು ಮರು ವಸೂಲಾಗುವ ಸಾಧ್ಯತೆಯೇ ಕ್ಷೀಣಿಸಿದ ಸುಸ್ತಿ ಸಾಲಗಳನ್ನು ತಮ್ಮ ಬ್ಯಾಲೆನ್ಸ್‌ ಶೀಟ್‌ನಿಂದ ಪ್ರತ್ಯೇಕಗೊಳಿಸಲು 'ರೈಟ್‌ ಆಫ್‌' ಪದ್ಧತಿಯನ್ನು ಬಳಸುತ್ತವೆ. ಇದು ಲೆಕ್ಕಪತ್ರಗಳ ಅನುಕೂಲಕ್ಕಾಗಿ ಬಳಸಬಹುದಾದ ವಿಧಾನ. ಇದರಿಂದ ಬ್ಯಾಂಕ್‌ಗಳಿಗೆ ತೆರಿಗೆಯಲ್ಲಿ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಆದರೆ ರೈಟ್‌ ಆಫ್‌ ಎಂದರೆ ಸಾಲ ಮನ್ನಾ ಅಲ್ಲ. ಸಾಲ ವಸೂಲಾತಿಯನ್ನು ಮುಂದೆಯೂ ಮಾಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ