ಆ್ಯಪ್ನಗರ

ಕಾರು, ಅಡಮಾನ ಸಾಲ ದರ ಏರಿಕೆ ಸಂಭವ

ಅಡಮಾನ ಹಾಗೂ ಕಾರು ಸಾಲಗಳ ಬಡ್ಡಿ ದರಗಳು ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ಏರಿಕೆಯಾಗುವ ಸಂಭವ ಇದೆ...

Vijaya Karnataka Web 10 Feb 2018, 5:00 am

ಹೊಸದಿಲ್ಲಿ: ಅಡಮಾನ ಹಾಗೂ ಕಾರು ಸಾಲಗಳ ಬಡ್ಡಿ ದರಗಳು ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ಏರಿಕೆಯಾಗುವ ಸಂಭವ ಇದೆ. ಬ್ಯಾಂಕ್‌ಗಳು ತಮ್ಮ ಲಾಭವನ್ನು ಉಳಿಸಿಕೊಳ್ಳುವ ಸಲುವಾಗಿ ಬಡ್ಡಿ ದರವನ್ನು ಏರಿಸುವ ನಿರೀಕ್ಷೆ ಇದೆ. ಬ್ಯಾಂಕ್‌ಗಳಿಗೆ ಸಾಲಕ್ಕೆ ತಗಲುವ ವೆಚ್ಚದಲ್ಲಿ ಇತ್ತೀಚಿನ ಏರಿಕೆ ಕೂಡ ಪ್ರಭಾವ ಬೀರಬಹುದು ಎಂದು ತಜ್ಞರು ಹೇಳಿದ್ದಾರೆ.

ಜತೆಗೆ ಬ್ಯಾಂಕ್‌ಗಳು ಠೇವಣಿಗಳ ಬಡ್ಡಿ ದರವನ್ನು ಏರಿಸಿ ಆಕರ್ಷಿಸಲೂ ಯತ್ನಿಸುತ್ತಿವೆ ಎಂದು ಹೇಳಲಾಗಿದೆ. ರಿಸರ್ವ್‌ ಬ್ಯಾಂಕ್‌ ಮೂಲ ದರ ಆಧಾರಿತ ಸಾಲ ವಿತರಣೆ ಪದ್ಧತಿಯನ್ನು ನೂತನ ಎಂಸಿಎಲ್‌ಆರ್‌ ಪದ್ಧತಿಗೆ ಲಿಂಕ್‌ ಕಲ್ಪಿಸಲು ಬ್ಯಾಂಕ್‌ಗಳಿಗೆ ಸೂಚಿಸಿದೆ. ಏ.1ರಿಂದ ಇದು ಅನ್ವಯವಾಗಲಿದೆ.

ಕಳೆದ ಕೆಲವು ತಿಂಗಳುಗಳಿಂದ ಬ್ಯಾಂಕ್‌ಗಳಿಗೆ ಸರಕಾರಿ ಬಾಂಡ್‌ಗಳ ಖರೀದಿ ತುಟ್ಟಿಯಾಗಿದ್ದು, ಇದೂ ಸಾಲದ ಬಡ್ಡಿ ದರ ಹೆಚ್ಚಳಕ್ಕೆ ಒತ್ತಡ ಸೃಷ್ಟಿಸಿದೆ. ಮತ್ತೊಂದು ಕಡೆ ಕಾರ್ಪೊರೇಟ್‌ ವಲಯ ಕೂಡ ಬ್ಯಾಂಕ್‌ಗಳಿಂದ ದೊಡ್ಡ ಪ್ರಮಾಣದ ಸಾಲ ಪಡೆಯಲು ಮುಂದಾಗುತ್ತಿದ್ದು, ಸಾಲದ ಬಡ್ಡಿ ದರ ಏರಿಸಲು ಅವಕಾಶ ಉಂಟಾಗಿದೆ ಎನ್ನುತ್ತಾರೆ ತಜ್ಞರು. ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌ ತನ್ನ ಎಂಸಿಎಲ್‌ಆರ್‌ ದರವನ್ನು ( ಮಾರ್ಜಿನಲ್‌ ಕಾಸ್ಟ್‌ ಆಫ್‌ ಫಂಡ್ಸ್‌-ಆಧಾರಿತ ಸಾಲ) ಬುಧವಾರ ಅಲ್ಪ ಪ್ರಮಾಣದಲ್ಲಿ ವೃದ್ಧಿಸಿದೆ. ಇತರ ಖಾಸಗಿ ಬ್ಯಾಂಕ್‌ಗಳೂ ಇದನ್ನು ಅನುಸರಿಸುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ