ವರ್ಷ ವರ್ಷವೂ ತೆರಿಗೆ ಸಂಗ್ರಹ ಹೆಚ್ಚುತ್ತಲೇ ಇದ್ದು, ಪ್ರಸಕ್ತ ಹಣಕಾಸು ವರ್ಷದಲ್ಲೂ ಈ ಟ್ರೆಂಡ್ ಮುಂದುವರಿದಿದೆ. ಕೇಂದ್ರ ಸರ್ಕಾರವು 2024ನೇ ಹಣಕಾಸು ವರ್ಷದಲ್ಲಿ ಆಗಸ್ಟ್ 10ರ ವರೆಗೆ ಒಟ್ಟು 6.53 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹಿಸಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೇರ ತೆರಿಗೆ ಸಂಗ್ರಹದಲ್ಲಿ ಏರಿಕೆ ದಾಖಲಾಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 15.7ರಷ್ಟು ಹೆಚ್ಚು ಎಂದು ಶುಕ್ರವಾರ ಸರ್ಕಾರ ಬಿಡುಗಡೆ ಮಾಡಿದ ಅಂಕಿ - ಅಂಶಗಳು ಹೇಳಿವೆ.
ಮರುಪಾವತಿಯನ್ನು ಕಡಿತಗೊಳಿಸಿದ ಬಳಿಕ ಸರಕಾರ ಆಗಸ್ಟ್ 10 ರವರೆಗೆ 5.84 ಲಕ್ಷ ಕೋಟಿ ರೂ. ನಿವ್ವಳ ನೇರ ತೆರಿಗೆಯನ್ನು ಸಂಗ್ರಹಿಸಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 17.33ರಷ್ಟು ಹೆಚ್ಚಾಗಿದೆ. ಅಲ್ಲದೆ ಈ ಬಾರಿಯ ಒಟ್ಟು ಬಜೆಟ್ ಅಂದಾಜಿನ ಶೇ. 32.03ರ ನೇರ ತೆರಿಗೆ ಸರಕಾರದ ಬೊಕ್ಕಸ ಸೇರಿದೆ. ಈ ಪ್ರಮಾಣದ ಮೊತ್ತ ಆರ್ಥಿಕ ವರ್ಷದ ಮೊದಲ ಐದು ತಿಂಗಳು 10 ದಿನಗಳಲ್ಲಿ ಸಂಗ್ರಹವಾಗಿದೆ.
ಇನ್ನು ಇದೇ ಅವಧಿಯಲ್ಲಿ ಕೇಂದ್ರ ಸರ್ಕಾರ 0.69 ಲಕ್ಷ ಕೋಟಿ ರೂ. ಮೊತ್ತವನ್ನು ಮರುಪಾವತಿಯ ರೂಪದಲ್ಲಿ ಜನರು ಮತ್ತು ಕಂಪನಿಗಳಿಗೆ ಪಾವತಿಸಿದೆ. ಏಪ್ರಿಲ್ 1, 2023 ರಿಂದ ಆಗಸ್ಟ್ 10, 2023ರವರೆಗೆ ಈ ಮೊತ್ತವನ್ನು ಮರುಪಾವತಿ ಮಾಡಲಾಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಪಾವತಿಸಲಾದ ಮರುಪಾವತಿಗಿಂತ ಶೇ. 3.73ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ನೇರ ತೆರಿಗೆಯಲ್ಲಿ ಜನರು ವೈಯಕ್ತಿಕವಾಗಿ ಪಾವತಿಸುವ ಆದಾಯ ತೆರಿಗೆ ಹಾಗೂ ಕಂಪನಿಗಳು ಮತ್ತು ಸಂಸ್ಥೆಗಳು ಪಾವತಿಸುವ ಕಾರ್ಪೊರೇಟ್ ತೆರಿಗೆ ಸೇರಿರುತ್ತದೆ. ಸರಕು ಮತ್ತು ಸೇವೆಗಳಿಗೆ ಪಾವತಿಸುವ ಪರೋಕ್ಷ ತೆರಿಗೆ ಇದರಡಿಯಲ್ಲಿ ಬರುವುದಿಲ್ಲ. ಇದನ್ನು ಜಿಎಸ್ಟಿ ಸಂಗ್ರಹ ಎನ್ನಲಾಗುತ್ತದೆ.
ಜುಲೈನಲ್ಲಿ 1.65 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಜುಲೈ ತಿಂಗಳಲ್ಲಿ 1.65 ಲಕ್ಷ ಕೋಟಿ ರೂಪಾಯಿ ಜಿಎಸ್ಟಿ ಆದಾಯ ಹರಿದು ಬಂದಿದೆ. ಈ ಮೂಲಕ ಕಳೆದ ವರ್ಷದ ಜೂನ್ ಅವಧಿಗೆ ಹೋಲಿಸಿದರೆ ಪರೋಕ್ಷ ತೆರಿಗೆ ಆದಾಯ ಶೇಕಡಾ 11ರಷ್ಟು ಏರಿಕೆ ಕಂಡಿತ್ತು.