ಆ್ಯಪ್ನಗರ

ಬರುತ್ತಿದೆ 4 ಪ್ರಮುಖ ಕಂಪನಿಗಳ ಐಪಿಒ, ಇಲ್ಲಿದೆ ಪ್ರೈಸ್‌ ಬ್ಯಾಂಡ್, ಗ್ರೇ ಮಾರ್ಕೆಟ್‌ ಪ್ರೀಮಿಯಂ ವಿವರ

ಮುಕ್ಕಾ ಪ್ರೋಟೀನ್ಸ್, ಪ್ಲಾಟಿನಮ್ ಇಂಡಸ್ಟ್ರೀಸ್, ಎಕ್ಸಿಕಾಮ್ ಟೆಲಿ ಸಿಸ್ಟಮ್ಸ್ ಹಾಗೂ ಭಾರತ್ ಹೈವೇಸ್ ಇನ್ವಿಟಿ ಮ್ಯಾನೇಜ್‌ಮೆಂಟ್‌ ಆರಂಭಿಕ ಷೇರು ಕೊಡುಗೆ (ಐಪಿಒ) ಈ ವಾರ ಬರಲಿವೆ. ಹೀಗೆ ಫೆಬ್ರವರಿ 26 ಮತ್ತು ಫೆಬ್ರವರಿ 28ರ ನಡುವೆ ಒಟ್ಟು 4 ಕಂಪನಿಗಳು ಐಪಿಒಗಳನ್ನು ಪ್ರಾರಂಭಿಸುತ್ತಿದ್ದು, ಇವುಗಳ ಬಗ್ಗೆ ಗ್ರೇ ಮಾರುಕಟ್ಟೆಯಲ್ಲಿ ಈಗಾಗಲೇ ಭಾರೀ ಕುತೂಹಲ ಸೃಷ್ಟಿಯಾಗಿದೆ.

Written byಎನ್‌. ಸಚ್ಚಿದಾನಂದ | Agencies 24 Feb 2024, 2:07 pm

ಹೈಲೈಟ್ಸ್‌:

  • ಈ ವಾರ ಬರಲಿವೆ ಮುಕ್ಕಾ ಪ್ರೋಟೀನ್ಸ್, ಪ್ಲಾಟಿನಮ್ ಇಂಡಸ್ಟ್ರೀಸ್ ಸೇರಿ ನಾಲ್ಕು ಕಂಪನಿಗಳ ಐಪಿಒ
  • ಎಕ್ಸಿಕಾಮ್ ಟೆಲಿ ಸಿಸ್ಟಮ್ಸ್ ಹಾಗೂ ಭಾರತ್ ಹೈವೇಸ್‌ನಿಂದ ಆರಂಭಿಕ ಷೇರು ಕೊಡುಗೆ ಆರಂಭ
  • ಫೆಬ್ರವರಿ 26 - 28ರ ನಡುವೆ ಚಂದಾದಾರಿಕೆಗಾಗಿ ತೆರೆದಿರಲಿವೆ ಒಟ್ಟು 4 ಕಂಪನಿಗಳ ಐಪಿಒ
  • ಈ ಕಂಪನಿಗಳ ಬಗ್ಗೆ ಈಗಾಗಲೇ ಗ್ರೇ ಮಾರುಕಟ್ಟೆಯಲ್ಲಿ ಭಾರೀ ಕುತೂಹಲ ಸೃಷ್ಟಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web IPO
ನೀವು ಐಪಿಒದಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿಟ್ಟುಕೊಳ್ಳಿ. ಏಕೆಂದರೆ ಮುಂದಿನ ಒಂದು ವಾರದಲ್ಲಿ ನಾಲ್ಕು ಕಂಪನಿಗಳು ಐಪಿಒ ತೆರೆಯುತ್ತಿದ್ದು, ಹೂಡಿಕೆದಾರರಿಗೆ ಹೂಡಿಕೆಗೆ ಉತ್ತಮ ಅವಕಾಶಗಳು ಸೃಷ್ಟಿಯಾಗಿವೆ.
ಫೆಬ್ರವರಿ 26 ಮತ್ತು ಫೆಬ್ರವರಿ 28ರ ನಡುವೆ ಒಟ್ಟು ನಾಲ್ಕು ಕಂಪನಿಗಳು ಐಪಿಒಗಳನ್ನು ಪ್ರಾರಂಭಿಸುತ್ತಿವೆ. ಇವುಗಳ ಬಗ್ಗೆ ಗ್ರೇ ಮಾರುಕಟ್ಟೆಯಲ್ಲಿ ಈಗಾಗಲೇ ಭಾರೀ ಕುತೂಹಲ ಸೃಷ್ಟಿಯಾಗಿದ್ದು, ಇವುಗಳಲ್ಲಿ ಕೆಲವು ಶೇ. 67ರಷ್ಟು ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತಿವೆ. ಅವುಗಳ ವಿವರ ಇಲ್ಲಿದೆ,

ಮುಕ್ಕಾ ಪ್ರೋಟೀನ್ಸ್ ಐಪಿಒ


ದೇಶದ ಅತಿದೊಡ್ಡ ಮೀನು ಊಟದ ಕಂಪನಿಯಾದ ಮುಕ್ಕಾ ಪ್ರೋಟೀನ್‌ನ ಐಪಿಒ ಫೆಬ್ರವರಿ 26 ರಿಂದ ಫೆಬ್ರವರಿ 28ರವರೆಗೆ ಚಂದಾದಾರಿಕೆಗೆ ತೆರೆದಿರಲಿದೆ. ಐಪಿಒದಿಂದ ಕಂಪನಿ 225 ಕೋಟಿ ರೂ. ಹಣ ಸಂಗ್ರಹಿಸಲು ಹೊರಟಿದ್ದು, ಕರಾವಳಿ ಕರ್ನಾಟಕ ಮೂಲದ ಈ ಕಂಪನಿಯು ದೇಶದಲ್ಲೇ ಅತಿ ದೊಡ್ಡ ಮೀನು ಊಟ ಮತ್ತು ಮೀನಿನ ಎಣ್ಣೆಯನ್ನು ತಯಾರಿಸುವ ಕಂಪನಿಯಾಗಿದೆ. ಕಂಪನಿಯು 15ಕ್ಕೂ ಹೆಚ್ಚು ದೇಶಗಳಿಗೆ ಮೀನು ಊಟವನ್ನು ರಫ್ತು ಮಾಡುತ್ತದೆ.

ಬರಲಿದೆ ಮತ್ತೊಂದು ಟಾಟಾ ಕಂಪನಿಯ ಐಪಿಒ, ಟಾಟಾ ಆಟೋಕಾಂಪ್ ಸಿಸ್ಟಮ್ಸ್ ಐಪಿಒಗೆ ಸಿದ್ಧತೆ
  • ಪ್ರೈಸ್‌ ಬ್ಯಾಂಡ್‌: ಪ್ರತಿ ಷೇರಿಗೆ 25-30 ರೂ. ದರ
  • ಗ್ರೇ ಮಾರ್ಕೆಟ್ ಪ್ರೀಮಿಯಂ: 43%
  • ಐಪಿಒ ಗಾತ್ರ: 225 ಕೋಟಿ ರೂ.
  • ಹೊಸ ಷೇರುಗಳ ವಿತರಣೆ: 225 ಕೋಟಿ ರೂ.
  • ಒಎಫ್‌ಎಸ್‌: ಇಲ್ಲ
  • ಚಿಲ್ಲರೆ ಕೋಟಾ: 35%
  • ಕ್ಯೂಐಬಿ ಕೋಟಾ: 50%
  • ಎನ್‌ಐಐ ಕೋಟಾ: 15%
  • ಕನಿಷ್ಠ ಹೂಡಿಕೆ: 1 ಲಾಟ್‌ನಲ್ಲಿ 525 ಷೇರುಗಳು ಅಂದರೆ 14,700 ರೂ.
  • ಗರಿಷ್ಠ ಹೂಡಿಕೆ: 13 ಲಾಟ್‌ಗಳು ಅಂದರೆ ರೂ 1,91,100 ರೂ.
  • ಷೇರು ಪಟ್ಟಿ ದಿನಾಂಕ: ಮಾರ್ಚ್ 4, 2024

ಐಪಿಒದಲ್ಲಿ ಫಸ್ಟ್‌ಕ್ರೈನ ಎಲ್ಲಾ 77,900 ಷೇರುಗಳನ್ನು ಮಾರಲಿದ್ದಾರೆ ರತನ್ ಟಾಟಾ

ಪ್ಲಾಟಿನಮ್ ಇಂಡಸ್ಟ್ರೀಸ್ ಐಪಿಒ


ಪ್ಲಾಟಿನಂ ಇಂಡಸ್ಟ್ರೀಸ್‌ನ ಐಪಿಒ ಚಂದಾದಾರಿಕೆಗಾಗಿ ಫೆಬ್ರವರಿ 27ರಿಂದ 29ರವರೆಗೆ ತೆರೆದಿರಲಿದೆ. ಪ್ಲಾಟಿನಮ್ ಇಂಡಸ್ಟ್ರೀಸ್ ಒಂದು ಬಹು-ಉತ್ಪನ್ನಗಳ ಕಂಪನಿಯಾಗಿದ್ದು ಪ್ರಮುಖವಾಗಿ ಸ್ಟೆಬಿಲೈಸರ್‌ಗಳನ್ನು ತಯಾರಿಸುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಕಂಪನಿ ಪಿವಿಸಿ ಸ್ಟೆಬಿಲೈಸರ್‌ಗಳು, ಸಿಪಿವಿಸಿ ಉತ್ಪನ್ನಗಳು ಹಾಗೂ ಲೂಬ್ರಿಕೆಂಟ್‌ಗಳನ್ನು ತಯಾರಿಸುತ್ತದೆ.

  • ಪ್ರೈಸ್ ಬ್ಯಾಂಡ್‌: ಪ್ರತಿ ಷೇರಿಗೆ 162-171 ರೂ.
  • ಗ್ರೇ ಮಾರ್ಕೆಟ್ ಪ್ರೀಮಿಯಂ: 18%
  • ಐಪಿಒ ಗಾತ್ರ: 216 ಕೋಟಿ ರೂ.
  • ಫ್ರೆಶ್ ಇಶ್ಯೂ: 216 ಕೋಟಿ ರೂ
  • ಒಎಫ್‌ಎಸ್‌: ಇಲ್ಲ
  • ಚಿಲ್ಲರೆ ಕೋಟಾ: 35%
  • ಕ್ಯೂಐಬಿ ಕೋಟಾ: 50%
  • ಎನ್‌ಐಐ ಕೋಟಾ: 15%
  • ಕನಿಷ್ಠ ಹೂಡಿಕೆ: 1 ಲಾಟ್‌ನಲ್ಲಿ 87 ಷೇರುಗಳು ಅಂದರೆ 14,877 ರೂ.
  • ಗರಿಷ್ಠ ಹೂಡಿಕೆ: 13 ಲಾಟ್‌ಗಳು ಅಂದರೆ ರೂ 1,93,401
  • ಐಪಿಒ ಪಟ್ಟಿ ದಿನಾಂಕ: ಮಾರ್ಚ್ 5, 2024

ಎಕ್ಸಿಕಾಮ್ ಟೆಲಿ ಸಿಸ್ಟಮ್ಸ್ ಐಪಿಒ


ಎಲೆಕ್ಟ್ರಾನಿಕ್ ವಾಹನಗಳಿಗೆ ಚಾರ್ಜರ್‌ಗಳನ್ನು ತಯಾರಿಸುವ ಕಂಪನಿಯಾದ ಎಕ್ಸಿಕಾಮ್ ಟೆಲಿ ಸಿಸ್ಟಮ್ಸ್‌ನ ಐಪಿಒ ಫೆಬ್ರವರಿ 27 ರಿಂದ 29ರವರೆಗೆ ಚಂದಾದಾರಿಕೆಗೆ ತೆರೆದಿರಲಿದೆ. ಕಂಪನಿಯು ಎಲೆಕ್ಟ್ರಿಕ್ ವೆಹಿಕಲ್ ಚಾರ್ಜರ್‌ಗಳು ಮತ್ತು ಸ್ಮಾರ್ಟ್ ಚಾರ್ಜಿಂಗ್ ಸಿಸ್ಟಮ್‌ಗಳನ್ನು ತಯಾರಿಸುತ್ತದೆ. ವಿದ್ಯುತ್ ಪರಿಹಾರಗಳ ವ್ಯವಹಾರದಲ್ಲಿಯೂ ಇರುವ ಕಂಪನಿ ಭಾರತ ಮತ್ತು ವಿದೇಶಗಳಲ್ಲಿನ ಟೆಲಿಕಾಂ ವಲಯದಲ್ಲಿನ ವಿದ್ಯುತ್ ನಿರ್ವಹಣೆಗಾಗಿ ಡಿಸಿ ಪವರ್ ಸಿಸ್ಟಮ್‌ಗಳನ್ನು ವಿನ್ಯಾಸಗೊಳಿಸಿ ತಯಾರಿಸುತ್ತದೆ. ಇದರ ಸೇವೆಯನ್ನೂ ಕಂಪನಿ ನೀಡುತ್ತದೆ.

  • ಪ್ರೈಸ್ ಬ್ಯಾಂಡ್: ಪ್ರತಿ ಷೇರಿಗೆ 135-142 ರೂ.
  • ಗ್ರೇ ಮಾರ್ಕೆಟ್ ಪ್ರೀಮಿಯಂ: 67%
  • ಐಪಿಒ ಗಾತ್ರ: 429 ಕೋಟಿ ರೂ.
  • ಫ್ರೆಶ್ ಇಶ್ಯೂ: 329 ಕೋಟಿ ರೂ.
  • ಒಎಫ್‌ಎಸ್‌: 70,42,200 ಈಕ್ವಿಟಿ ಷೇರುಗಳು
  • ಚಿಲ್ಲರೆ ಕೋಟಾ: 10%
  • ಕ್ಯೂಐಬಿ ಕೋಟಾ: 75%
  • ಎನ್‌ಐಐ ಕೋಟಾ: 15%
  • ಕನಿಷ್ಠ ಹೂಡಿಕೆ: 1 ಲಾಟ್‌ನಲ್ಲಿ 100 ಷೇರುಗಳು ಅಂದರೆ 14,200 ರೂ.
  • ಗರಿಷ್ಠ ಹೂಡಿಕೆ: 14 ಲಾಟ್‌ಗಳು ಅಂದರೆ 1,98,800 ರೂ.
  • ಐಪಿಒ ಪಟ್ಟಿ ದಿನಾಂಕ: ಮಾರ್ಚ್ 5, 2024

ಭಾರತ್ ಹೈವೇಸ್ ಐಪಿಒ


ಭಾರತ್ ಹೈವೇಸ್ ಇನ್ವಿಟಿಯ ಐಪಿಒ ಚಂದಾದಾರಿಕೆಗಾಗಿ ಫೆಬ್ರವರಿ 28ರಿಂದ ಮಾರ್ಚ್ 1ರವರೆಗೆ ತೆರೆದಿರಲಿದೆ. ಭಾರತ್ ಹೈವೇಸ್ ಇನ್ವಿಟಿಯು ಭಾರತದಲ್ಲಿನ ಮೂಲಸೌಕರ್ಯ ಆಸ್ತಿಗಳ ಬಂಡವಾಳವನ್ನು ಸ್ವಾಧೀನಪಡಿಸಿಕೊಳ್ಳಲು, ನಿರ್ವಹಿಸಲು ಮತ್ತು ಹೂಡಿಕೆ ಮಾಡಲು ಮತ್ತು ಸೆಬಿ ಇನ್ವಿಟ್ ನಿಯಮಗಳ ಅಡಿಯಲ್ಲಿ ಅನುಮತಿಸಲಾದ ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ನ ಚಟುವಟಿಕೆಗಳನ್ನು ನಿರ್ವಹಿಸಲು ಸ್ಥಾಪಿಸಲಾದ ಮೂಲಸೌಕರ್ಯ ಹೂಡಿಕೆ ಟ್ರಸ್ಟ್ ಆಗಿದೆ.

  • ಪ್ರೈಸ್ ಬ್ಯಾಂಡ್‌: ಪ್ರತಿ ಷೇರಿಗೆ 98-100 ರೂ.
  • ಗ್ರೇ ಮಾರ್ಕೆಟ್ ಪ್ರೀಮಿಯಂ: -%
  • ಐಪಿಒ ಗಾತ್ರ: 2,500 ಕೋಟಿಗಳು
  • ಕ್ಯೂಐಬಿ ಕೋಟಾ: 75%
  • ಎನ್‌ಐಐ ಕೋಟಾ: 25%
  • ಕನಿಷ್ಠ ಹೂಡಿಕೆ: 1 ಲಾಟ್‌ನಲ್ಲಿ 150 ಷೇರುಗಳು ಅಂದರೆ 15,000 ರೂ.
  • ಗರಿಷ್ಠ ಹೂಡಿಕೆ: 13 ಲಾಟ್‌ಗಳು ಅಂದರೆ 1,95,000 ರೂ.
  • ಐಪಿಒ ಪಟ್ಟಿ ದಿನಾಂಕ: ಮಾರ್ಚ್ 6, 2024
ಲೇಖಕರ ಬಗ್ಗೆ
ಎನ್‌. ಸಚ್ಚಿದಾನಂದ
2019ರಿಂದ ವಿಜಯ ಕರ್ನಾಟಕ ವೆಬ್‌ನಲ್ಲಿ ಉಪಸಂಪಾದಕರಾಗಿದ್ದಾರೆ. 2015ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಇವರು ಸದ್ಯ ‘ವಿಕ’ ವೆಬ್‌ನ ವಾಣಿಜ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ ಇವರ ಆಸಕ್ತಿಯ ಕ್ಷೇತ್ರಗಳಾಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ