ಆ್ಯಪ್ನಗರ

ನೆಲಕಚ್ಚಿದ ಷೇರುಪೇಟೆ, ಕುಸಿತದಲ್ಲೂ ಗರಿಷ್ಠ ಗಳಿಕೆ ದಾಖಲಿಸಿವೆ 10 ಸ್ಮಾಲ್‌ಕ್ಯಾಪ್‌ ಸ್ಟಾಕ್‌ಗಳು!

ವಾರದ ಮೊದಲ ದಿನವೇ ನಿಫ್ಟಿ ಸ್ಮಾಲ್‌ಕ್ಯಾಪ್ 250 ಸೂಚ್ಯಂಕ ಅತ್ಯಂತ ಕೆಟ್ಟ ಪ್ರದರ್ಶನ ತೋರಿ ಶೇ. 4.26ರಷ್ಟು ಅಂದರೆ 408.55 ಅಂಕ ಕುಸಿದಿದೆ. ಆದರೆ ಈ ಕುಸಿತದ ನಡುವೆಯೂ ಗರಿಷ್ಠ ಗಳಿಕೆ ದಾಖಲಿಸಿದ ಟಾಪ್‌ 10 ನಿಫ್ಟಿ ಸ್ಮಾಲ್‌ಕ್ಯಾಪ್ 250 ಷೇರುಗಳ ಪಟ್ಟಿ ಇಲ್ಲಿದೆ.

DSIJ 14 Feb 2022, 5:27 pm
ವಾರದ ಮೊದಲ ದಿನದ ವಹಿವಾಟಿನಲ್ಲೇ ಭಾರತೀಯ ಇಕ್ವಿಟಿ ಮಾರುಕಟ್ಟೆ ಕೆಂಪು ಬಣ್ಣದೊಂದಿಗೆ ತೀವ್ರವಾಗಿ ಕುಸಿತ ಕಂಡಿದೆ.
Vijaya Karnataka Web Top Gainers


ಇಂದಿನ ವಹಿವಾಟಿನಲ್ಲಿ ನಿಫ್ಟಿ 50 ಸೂಚ್ಯಂಕವು ಶೇ. 3.06 ಅಂದರೆ 531.95 ಅಂಕಗಳ ಕುಸಿತ ಕಂಡಿತು. ಹಿಂದಿನ ಮುಕ್ತಾಯಕ್ಕಿಂತ ಶೇ. 1.72ರಷ್ಟು ಕಡಿಮೆ ಮಟ್ಟದಲ್ಲಿ ಅಂದರೆ 17,076.15 ಅಂಕಗಳಲ್ಲಿ ಸೂಚ್ಯಂಕ ವಹಿವಾಟು ಆರಂಭಿಸಿತು. ಒಂದು ಹಂತದಲ್ಲಿ 17,099.50ಕ್ಕೆ ಏರಿಕೆಯಾಗಿದ್ದೇ ಸೂಚ್ಯಂಕದ ಗರಿಷ್ಠ ಮಟ್ಟವಾಗಿದೆ. 16,809.65 ಕನಿಷ್ಠ ಮಟ್ಟವಾಗಿದೆ. ನಿಫ್ಟಿ 50ರಲ್ಲಿ ಇಂದಿನ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್ ಲಿಮಿಟೆಡ್, ಎಚ್‌ಡಿಎಫ್‌ಸಿ ಲಿಮಿಟೆಡ್, ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಬಜಾಜ್ ಫೈನಾನ್ಸ್ ಲಿಮಿಟೆಡ್ ಭಾರೀ ಕುಸಿತ ಕಂಡಿವು. ಈ ಐದು ಷೇರುಗಳೇ ಸೂಚ್ಯಂಕದ ಕುಸಿತಕ್ಕೆ ಶೇ. 37.82ರಷ್ಟು ಕೊಡುಗೆ ನೀಡಿವೆ.

Top trending stock: ಷೇರುಪೇಟೆ ಮಹಾ ಕುಸಿತದ ನಡುವೆಯೂ ಜಿಗಿತ ಕಂಡ ಟಿಸಿಎಸ್ ಸ್ಟಾಕ್ಸ್‌! ಕಾರಣವೇನು ಗೊತ್ತಾ?
ಬಹುತೇಕ ವಲಯಗಳ ಸೂಚ್ಯಂಕಗಳು ಋಣಾತ್ಮಕವಾಗಿ ದಿನದ ವಹಿವಾಟು ಮುಗಿಸಿದವು. ನಿಫ್ಟಿ ಸ್ಮಾಲ್‌ಕ್ಯಾಪ್ 250 ಅತ್ಯಂತ ಕೆಟ್ಟ ಪ್ರದರ್ಶನ ತೋರಿ ಶೇ. 4.26ರಷ್ಟು ಅಂದರೆ 408.55 ಅಂಕ ಕುಸಿಯಿತು. ಇದೇ ಸೂಚ್ಯಂಕವು ಹಿಂದಿನ ಮುಕ್ತಾಯಕ್ಕಿಂತ ಶೇ. 2.21ರಷ್ಟು ಕಡಿಮೆ ಮಟ್ಟದಲ್ಲಿ ಅಂದರೆ 9,361.40ರಲ್ಲಿ ವಹಿವಾಟು ಆರಂಭಿಸಿತು. ನಿಫ್ಟಿ ಸ್ಮಾಲ್‌ಕ್ಯಾಪ್ 250ರ ಜತೆ ಇತರ ವಲಯದ ಸೂಚ್ಯಂಕಗಳಾದ ನಿಫ್ಟಿ ಪಿಎಸ್‌ಯು ಬ್ಯಾಂಕ್, ನಿಫ್ಟಿ ಮೆಟಲ್, ನಿಫ್ಟಿ ಮೀಡಿಯಾ, ನಿಫ್ಟಿ ಫೈನಾನ್ಶಿಯಲ್ ಸರ್ವಿಸಸ್ ಮತ್ತು ನಿಫ್ಟಿ ಬ್ಯಾಂಕ್ ಕೂಡ ಗರಿಷ್ಠ ನಷ್ಟ ಅನುಭವಿಸಿವೆ.

ಸೋಮವಾರ ಫೆಬ್ರವರಿ 14, 2022 ರಂದು ಗರಿಷ್ಠ ಗಳಿಕೆ ದಾಖಲಿಸಿದ ಟಾಪ್‌ 10 ನಿಫ್ಟಿ ಸ್ಮಾಲ್‌ಕ್ಯಾಪ್ 250 ಷೇರುಗಳ ಪಟ್ಟಿ ಇಲ್ಲಿದೆ,

ಕಂಪನಿ ಹೆಸರುಆರಂಭಗರಿಷ್ಠಕನಿಷ್ಠಎಲ್‌ಟಿಪಿಬದಲಾವಣೆ% ಬದಲಾವಣೆ
ಯುಫ್ಲೆಕ್ಸ್‌ ಲಿ.
546.75
590 528.05
551
41.55
8.16
ಸೀಕ್ವೆಂಟ್‌ ಸೈಂಟಿಫಿಕ್‌ ಲಿ.143.55
162.75
142.1
153.45
7.7
5.28
ಜಾನ್ಸನ್‌ ಕಂಟ್ರೋಲ್ಸ್‌ - ಹಿಟಾಟಿ ಏರ್‌ಕಂಡೀಷನಿಂಗ್‌ ಇಂಡಿಯಾ ಲಿ.1,802.00
1,899.00
1,755.00
1,854.90
45.35
2.51
ಭಾರತ್‌ ಡೈನಾಮಿಕ್ಸ್‌ ಲಿ.442
479
436
460
7.85
1.74
ಎರಿಸ್‌ ಲೈಫ್‌ಸೈನ್ಸಸ್‌ ಲಿ.687.35
705.3
672.3
699.9
11.25
1.63
ಶಾರ್ದಾ ಕ್ರಾಪ್‌ಕೆಮ್‌ ಲಿ.524.2
580
504
567
8.4
1.50
ಏಜಿಸ್‌ ಲಾಜಿಸ್ಟಿಕ್ಸ್‌ ಲಿ.210
227
210
219.05
2.55
1.18
ಕಾವೇರಿ ಸೀಡ್‌ ಕಂಪನಿ ಲಿ.507.5
522
498.7
510.5
5.25
1.04
ಕ್ಯಾಪ್ರಿ ಗ್ಲೋಬಲ್‌ ಕ್ಯಾಪಿಟಲ್‌ ಲಿ.542.4
628.3
542.4
579.5
5.1
0.89
ಐಐಎಫ್‌ಎಲ್‌ ವೆಲ್ತ್‌ ಮ್ಯಾನೇಜ್‌ಮೆಂಟ್‌ ಲಿ.1,600.00
1,629.55
1,504.95
1,619.00
9.5
0.59

ಷೇರು ಮಾರುಕಟ್ಟೆಗೆ ಹೊಸಬರೇ? ಇಲ್ಲಿ ಕ್ಲಿಕ್ಮಾಡುವ ಮೂಲಕ ಷೇರು ಪೇಟೆ ಜಗತ್ತಿನಲ್ಲಿ ನಿಮ್ಮ 'ಮೊದಲ ಹೆಜ್ಜೆ'ಯನ್ನು ಇಡಿ.

Disclaimer: This above is third party content and TIL hereby disclaims any and all warranties, express or implied, relating to the same. TIL does not guarantee, vouch for or endorse any of the above content or its accuracy nor is responsible for it in any manner whatsoever. The content does not constitute any investment advice or solicitation of any kind. Users are advised to check with certified experts before taking any investment decision and take all steps necessary to ascertain that any information and content provided is correct, updated and verified.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ