Please enable javascript.ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿ: ಕತ್ತಿ - ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿ: ಕತ್ತಿ - Vijay Karnataka

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿ: ಕತ್ತಿ

ವಿಕ ಸುದ್ದಿಲೋಕ 24 Oct 2014, 4:31 am
Subscribe

ಸಂಕೇಶ್ವರ : ರಾಜ್ಯ ಜನಸಂಖ್ಯೆ 2014 ಕ್ಕೆ 6 ಕೋಟಿಯಷ್ಟಾಗಿದೆ. ಇದರಿಂದ ಸುಗಮ ಆಡಳಿತ ನಡೆಸಲು ಕಷ್ಟಕರವಾಗುತ್ತಿದೆ. ಕರ್ನಾಟಕದ ಮಧ್ಯ ಭಾಗದ ತುಂಗಭದ್ರಾ ನದಿಯಿಂದ ಈಚೆಗೆ ಬರುವ ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ವಿಜಾಪೂರ, ಬಾಗಲಕೋಟ ಧಾರ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿ: ಕತ್ತಿ
ಸಂಕೇಶ್ವರ : ರಾಜ್ಯ ಜನಸಂಖ್ಯೆ 2014 ಕ್ಕೆ 6 ಕೋಟಿಯಷ್ಟಾಗಿದೆ. ಇದರಿಂದ ಸುಗಮ ಆಡಳಿತ ನಡೆಸಲು ಕಷ್ಟಕರವಾಗುತ್ತಿದೆ. ಕರ್ನಾಟಕದ ಮಧ್ಯ ಭಾಗದ ತುಂಗಭದ್ರಾ ನದಿಯಿಂದ ಈಚೆಗೆ ಬರುವ ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ವಿಜಾಪೂರ, ಬಾಗಲಕೋಟ ಧಾರವಾಡ, ಕಾರವಾರ, ಹಾವೇರಿ, ಗದಗ ಅದೇ ರೀತಿ ಹೈದ್ರಾಬಾದ ಕರ್ನಾಟಕದ ಜಿಲ್ಲೆಗಳಾದ ರಾಯಚೂರು, ಗುಲಬರ್ಗಾ, ಬೀದರ, ಕೊಪ್ಪಳ, ಬಳ್ಳಾರಿ, ಶಹಾಪೂರ ಮುಂ. 13 ಜಿಲ್ಲೆಗಳನ್ನು ಸೇರಿಸಿ ಅಂದಾಜು 3 ಕೋಟಿ ಜನಸಂಖ್ಯೆವುಳ್ಳ ಈ ಪ್ರದೇಶವನ್ನು ಪ್ರತ್ಯೇಕ ರಾಜ್ಯವನ್ನಾಗಿ ವಿಂಗಡಿಸಿ ಗಂಡು ಮೆಟ್ಟಿನ ಭಾಷೆಯ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವನ್ನಾಗಿ ರಚಿಸಬೇಕೆಂದು ಉಮೇಶ ಕತ್ತಿ ಹೇಳಿದರು.

ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತ, 13 ಜಿಲ್ಲೆಗಳ ಉತ್ತರ ಕರ್ನಾಟಕದ ಕನ್ನಡಪರ ಸಂಘಟನೆಗಳು, ವಿಚಾರವಾದಿಗಳು, ವಿದ್ವಾಂಸರು, ಸಾಹಿತಿಗಳು, ಸಂಸದರು, ಶಾಸಕರು, ಚುನಾಯಿತ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮುಂತಾದವರ ಮನಸ್ಸಿನಲ್ಲಿ ಈ ಪ್ರತ್ಯೇಕ ರಾಜ್ಯದ ರಚನೆಯಾಗಬೇಕೆಂಬುದು ಇಚ್ಛೆ ಇದೆ ಆದರೆ ಆ ಕೂಗು ಹೊರಬರುತ್ತಿಲ್ಲ ಅಷ್ಟೇ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಭಾಷಾವಾರು ರಾಜ್ಯಗಳ ರಚನೆಯಾದಾಗ ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ವಿಜಾಪೂರ, ಧಾರವಾಡ, ಕಾರವಾರ ಸೇರಿದಂತೆ ಅನೇಕ ಪ್ರದೇಶಗಳು ಮುಂಬಯಿ ಪ್ರಾಂತದಲ್ಲಿ ಆಡಳಿತಕ್ಕೆ ಒಳಪಟ್ಟಿದ್ದವು. ಅದೇ ರೀತಿ ಹೈದ್ರಾಬಾದ ಕರ್ನಾಟಕದ ರಾಯಚೂರು, ಗುಲಬರ್ಗಾ, ಬೀದರ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳು ಹೈದ್ರಾಬಾದ ಪ್ರಾಂತದಲ್ಲಿ ಆಡಳಿತಕ್ಕೆ ಒಳಪಟ್ಟಿದ್ದವು. 1956 ರಲ್ಲಿ ಮೈಸೂರ ರಾಜ್ಯದ ಉದಯವಾದ ಸಂದರ್ಭದಲ್ಲಿ ರಾಜ್ಯದ ಜನಸಂಖ್ಯೆ ಒಂದೂವರೆ ಕೋಟಿ ಹೊಂದಿದ ರಾಜ್ಯವಾಗಿತ್ತು.

ಕಾಂಗ್ರೆಸ ಪಕ್ಷವು ಚುನಾವಣಾ ಪೂರ್ವದಲ್ಲಿ ಹಮ್ಮಿಕೊಂಡ ಕಾಂಗ್ರೆಸ ನಡಿಗೆ-ಕಷ್ಣೆಯ ಕಡೆಗೆ ಎಂಬ ಪಾದಯಾತ್ರೆಯಲ್ಲಿ ಘೋಷಿಸಿದಂತೆ ರಾಜ್ಯದಲ್ಲಿ ಕಾಂಗ್ರೆಸ ಸರಕಾರವು ಆಯ್ಕೆಯಾದರೆ ಪ್ರತಿವರ್ಷ ಉತ್ತರ ಕರ್ನಾಟಕದ ಅಭಿವದ್ಧಿಗೆ 10,000 ಕೋಟಿ ಸಂಪನ್ಮೂಲ ಒದಗಿಸುವುದಾಗಿ ಆಶ್ವಾಸನೆ ನೀಡಿದ್ದರು. ಕಳೆದ ಒಂದೂವರೆ ವರ್ಷದಲ್ಲಿ ಆಡಳಿತ ನಡೆಸುತ್ತಿರುವ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಉತ್ತರ ಕರ್ನಾಟಕಕ್ಕೆ ನೀಡಿದ ಅನುದಾನವೆಷ್ಟು ಎಂಬುದನ್ನು ಸ್ಪಷ್ಠ ಪಡಿಸಲಿ ಎಂದು ಉಮೇಶ ಕತ್ತಿ ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ