Please enable javascript.ಕರಾಟೆ ಕಲಿಯಿರಿ, ಮಾನ ರಕ್ಷಣೆ ಮಾಡಿಕೊಳ್ಳಿ - Karate, awareness, Jatha, Mysore, - Vijay Karnataka

ಕರಾಟೆ ಕಲಿಯಿರಿ, ಮಾನ ರಕ್ಷಣೆ ಮಾಡಿಕೊಳ್ಳಿ

ವಿಕ ಸುದ್ದಿಲೋಕ 28 Jul 2014, 9:42 pm
Subscribe

‘ನಮ್ಮ ರಕ್ಷಣೆ ನಮ್ಮಿಂದಲೇ’.‘ಕರಾಟೆ ಕಲಿಯಿರಿ ಮಾನ ರಕ್ಷಣೆ ಮಾಡಿ ಕೊಳ್ಳಿ’.‘ನಮ್ಮ ರಕ್ಷಣೆ ಆತ್ಮ ರಕ್ಷಣೆ’. ‘ಆತ್ಮ ರಕ್ಷಣೆಯ ಕಲೆ ಮಹಿಳೆಯರಿಗೆ ನೆಲೆ’. ‘ ಅತ್ಯಾಚಾರಿಯನ್ನು ನಿರ್ವೀಯಗೊಳಿಸಿ’. ಹೀಗೆ ನೂರಾರು ಮಂದಿ ನಾನಾ ಘೋಷ ವಾಕ್ಯಗಳ ಫಲಕಗಳನ್ನು ಹಿಡಿದು ಮಹಿಳೆಯರು ಮತ್ತು ಮಕ್ಕಳೊಂದಿಗೆ ಜಾಥಾ ನಡೆಸಿದರು.

karate awareness jatha mysore
ಕರಾಟೆ ಕಲಿಯಿರಿ, ಮಾನ ರಕ್ಷಣೆ ಮಾಡಿಕೊಳ್ಳಿ
ಮಹಿಳಾ ದೌರ್ಜನ್ಯ ಹಿನ್ನೆಲೆ: ಕರಾಟೆ ಕಲಿಯಲು ಜಾಗೃತಿ ಜಾಥಾ

ಮೈಸೂರು: ‘ನಮ್ಮ ರಕ್ಷಣೆ ನಮ್ಮಿಂದಲೇ’.‘ಕರಾಟೆ ಕಲಿಯಿರಿ ಮಾನ ರಕ್ಷಣೆ ಮಾಡಿ ಕೊಳ್ಳಿ’.‘ನಮ್ಮ ರಕ್ಷಣೆ ಆತ್ಮ ರಕ್ಷಣೆ’. ‘ಆತ್ಮ ರಕ್ಷಣೆಯ ಕಲೆ ಮಹಿಳೆಯರಿಗೆ ನೆಲೆ’. ‘ ಅತ್ಯಾಚಾರಿಯನ್ನು ನಿರ್ವೀಯಗೊಳಿಸಿ’. ಹೀಗೆ ನೂರಾರು ಮಂದಿ ನಾನಾ ಘೋಷ ವಾಕ್ಯಗಳ ಫಲಕಗಳನ್ನು ಹಿಡಿದು ಮಹಿಳೆಯರು ಮತ್ತು ಮಕ್ಕಳೊಂದಿಗೆ ಜಾಥಾ ನಡೆಸಿದರು.

ಪ್ರಸ್ತುತ ಮಹಿಳೆಯರು ಮತ್ತು ಹೆಣ್ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾ ಚಾರ, ಲೈಂಗಿಕ ದೌರ್ಜನ್ಯಗಳಿಗೆ ಮಹಿಳೆ ಯರೇ ಪರಿಹಾರ ಕಂಡು ಕೊಳ್ಳಬೇಕು. ಕಾಮುಕರಿಂದ ತಮ್ಮ ರಕ್ಷಣೆಗೆ ತಾವೇ ನಿಲ್ಲಬೇಕು. ಅದಕ್ಕಾಗಿ ಕರಾಟೆಯಂತಹ ಸಮರ ಕಲೆ ಕಲಿಯಬೇಕು ಎಂದು ಸಾರಿ ಈ ಬಗ್ಗೆ ಅರಿವು ಮೂಡಿಸಲು ಮೈಸೂರು ಕರಾಟೆ ಅಸೋಸಿ ಯೇಷನ್ ನಗರದಲ್ಲಿ ಭಾನುವಾರ ಜಾಥಾ ನಡೆಸಿತು.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿ ರುವ ಅತ್ಯಾಚಾರ ಹಾಗೂ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ ಹಾಗೂ ಇಂತಹ ಪ್ರಕರಣಗಳಿಂದ ಪಾರಾಗುವಂತೆ ಮಹಿಳೆಯರು ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಜಾಥಾದ ಉದ್ಧೇಶ ವಾಗಿತ್ತು.

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆಯೋಜಿಸಲಾಗಿದ್ದ ಜಾಥಾಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಚಾಲನೆ ನೀಡಿದರು.
ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನದಿಂದ ಹೊರಟ ಜಾಥಾ ಚಾಮ ರಾಜ ವೃತ್ತ, ಹಾರ್ಡಿಂಗ್ ವೃತ್ತ, ಬಿ.ಎನ್. ರಸ್ತೆ, ಗನ್‌ಹೌಸ್ ವೃತ್ತ ಮಾರ್ಗವಾಗಿ ಸಾಗಿ ಮಹಾರಾಜ ಸಂಸ್ಕೃತ ಪಾಠಶಾಲೆ ವೃತ್ತದಲ್ಲಿ ಅಂತ್ಯಗೊಂಡಿತು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಮೈಸೂರು ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಎಂ. ಮಹದೇವಸ್ವಾಮಿ, ಕಾರ್ಯದರ್ಶಿ ಚಿದಾನಂದ, ಸಿದ್ದರಾಜು, ನಾಗರಾಜು, ದೀಪಕ್ ಕುಮಾರ್ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ