Please enable javascript.ನಾಲ್ಕು ಗ್ರಾಪಂಗೆ ಒಬ್ಬರೇ ಪಿಡಿಒ ! - ನಾಲ್ಕು ಗ್ರಾಪಂಗೆ ಒಬ್ಬರೇ ಪಿಡಿಒ ! - Vijay Karnataka

ನಾಲ್ಕು ಗ್ರಾಪಂಗೆ ಒಬ್ಬರೇ ಪಿಡಿಒ !

Vi.Ka. Suddiloka 14 Feb 2014, 12:01 pm
Subscribe

ನಾಲ್ಕು ಗ್ರಾಪಂಗೆ ಒಬ್ಬರೇ ಪಿಡಿಒ! ತಾಲೂಕಿನ ಗೋಗಿ (ಕೆ) ಗ್ರಾಮ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪಿಡಿಒ ಪುತ್ರಪ್ಪಗೌಡ ಅವರಿಗೆ ನಾಲ್ಕು ಗ್ರಾಪಂಗಳ ಜವಾಬ್ದಾರಿ ನೀಡಿದ್ದು ಅಭಿವೃದ್ಧಿ ಕಾರ್ಯಗಳಿಗೆ ಭಾರಿ ಹಿನ್ನಡೆಯನ್ನುಂಟಾಗಿದೆ. ಹೀಗಾಗಿ ಬಹುತೇಕ ಪಿಡಿಓಗಳು ಎರಡ್ಮೂರು ಗ್ರಾಪಂಗಳ ಜವಾಬ್ದಾರಿ ಹೊತ್ತು ನಿತ್ಯ ಕಸರತ್ತು ನಡೆಸುತ್ತಿದ್ದಾರೆ.

ನಾಲ್ಕು ಗ್ರಾಪಂಗೆ ಒಬ್ಬರೇ ಪಿಡಿಒ !
ಮಲ್ಲಿಕಾರ್ಜುನ ಮುದ್ನೂರ ಶಹಾಪುರ (ಗ್ರಾಮೀಣ): ನಾಲ್ಕು ಗ್ರಾಪಂಗೆ ಒಬ್ಬರೇ ಪಿಡಿಒ! ತಾಲೂಕಿನ ಗೋಗಿ (ಕೆ) ಗ್ರಾಮ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪಿಡಿಒ ಪುತ್ರಪ್ಪಗೌಡ ಅವರಿಗೆ ನಾಲ್ಕು ಗ್ರಾಪಂಗಳ ಜವಾಬ್ದಾರಿ ನೀಡಿದ್ದು ಅಭಿವೃದ್ಧಿ ಕಾರ್ಯಗಳಿಗೆ ಭಾರಿ ಹಿನ್ನಡೆಯನ್ನುಂಟಾಗಿದೆ. ಹೀಗಾಗಿ ಬಹುತೇಕ ಪಿಡಿಓಗಳು ಎರಡ್ಮೂರು ಗ್ರಾಪಂಗಳ ಜವಾಬ್ದಾರಿ ಹೊತ್ತು ನಿತ್ಯ ಕಸರತ್ತು ನಡೆಸುತ್ತಿದ್ದಾರೆ.

ಪಿಡಿಒಗಳ ಕೊರತೆಯಿಂದ ತಾಲೂಕಿನಾದ್ಯಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಭಾರಿ ಹಿನ್ನಡೆಯನ್ನುಂಟಾಗಿದೆ. ತಾಲೂಕಿನಲ್ಲಿ ಒಟ್ಟು 36 ಗ್ರಾಪಂಗಳಿಗೆ ಕೇವಲ 17 ಜನ ಪಿಡಿಒಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಗೋಗಿ (ಕೆ) ಗ್ರಾಪಂ ಪಿಡಿಒ ಪುತ್ರಪ್ಪಗೌಡಗೆ ಗೋಗಿ (ಕೆ) ಗ್ರಾಪಂ ಸೇರಿ ಇನ್ನೂ ಮೂರು ಗ್ರಾಪಂಗಳ ಜವಾಬ್ದಾರಿ ನೀಡಲಾಗಿದೆ.

ಇದರಂತೆ ಇತರೆ ಪಿಡಿಒಗಳಿಗೆ ಎರಡ್ಮೂರು ಪಂಚಾಯಿತಿ ಜಿಮ್ಮೇದಾರಿ ನೀಡಲಾಗಿದೆ. ಒಂದೇ ಪಂಚಾಯಿತಿಯ ಕಾರ್ಯಗಳನ್ನು ಕಟ್ಟುನಿಟ್ಟಿನಲ್ಲಿ ನಿಭಾಯಿಸಲು ಹೆಣಗಾಡುತ್ತಿರುವ ಸಂದರ್ಭದಲ್ಲಿ ಒಬ್ಬ ಪಿಡಿಒಗೆ ಹೆಚ್ಚುವರಿವಾಗಿ ಗ್ರಾಪಂಗಳ ಕೆಲಸ ಕೊಟ್ಟರೆ ಅಭಿವೃದ್ಧಿ ಹೇಗೆ ಸಾಧ್ಯ ಎಂಬುದು ಸಾರ್ವಜನಿಕರಲ್ಲಿ ಪ್ರಶ್ನೆ ಕಾಡಲಾರ ಂಭಿಸಿದೆ. ತಾಲೂಕಿನ ಯಾವುದೇ ಗ್ರಾಪಂ ಕಚೇರಿಗೆ ತೆರಳಿದರೂ ಅಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಷ್ಟೊಂದು ಸುಲಭವಾಗಿ ಕೈಗೆ ಸಿಗುವುದಿಲ್ಲ. ಅಲ್ಲದೆ ಅವರ ಮೊ ಬೈಲ್ ಕೂಡ ಸ್ವಿಚ್ ಆಫ್ ಇರುತ್ತದೆ ಎಂಬ ಆರೋಪ ಕೇಳಿ ಬರುವುದು ಸಾಮಾನ್ಯವಾಗಿದೆ.

ಒಂದಕ್ಕಿಂತ ಹೆಚ್ಚು ಗ್ರಾಪಂಗಳ ಜವಾಬ್ದಾರಿ ಒಬ್ಬರಿಗೆ ನೀಡಿದ ಕಾರಣ ಕೆಲಸದ ಒತ್ತಡದಿಂದಾಗಿ ತಾಲೂಕಿನ ಪಿಡಿಒಗಳು ಸಾರ್ವಜನಿಕರ ಕೈಗೆ ಸುಲಭವಾಗಿ ಸಿಗುತ್ತಿ ಲ್ಲ. ಹೀಗಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳು ಜರುಗುತ್ತಿಲ್ಲ. ಅಲ್ಲದೆ ಕೆಲಸಕ್ಕೆ ರಾಜೀನಾಮೆ ನೀಡುವ ಮಾತುಗಳು ಸಹ ಕೇಳಿ ಬರುತ್ತಿವೆ.

ರಾಷ್ಟ್ರ ಮಟ್ಟದ ಉದ್ಯೋಗ ಖಾತರಿ ಯೋಜನೆಯಡಿ ಅರ್ಹ ಫಲಾನುಭಗಳಿಗೆ ಕೆಲಸ ದೊರೆಯದೇ ಗುಳೆ ಹೋಗುವ ಸಂದರ್ಭ ಬಂದಿದೆ. ಕಾರಣ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ರಾಜ್ಯ ಆಡಳಿತದ ಗಮನ ಸೆಳೆಯಬೇಕು.

ತಾಲೂಕಿನ, ಗೋಗಿ, ಸಗರ, ಬೆಂಡೆಬಂಬಳಿ, ಚಟ್ನಳ್ಳಿ, ಮದ್ರಿಕಿ, ಹೊಸಕೇರಾ, ನಾಗನಟಗಿ, ಚಾಮನಾಳ, ಹಯ್ಯಾಳ(ಬಿ) ಸೇರಿದಂತೆ ಬಹುತೇಕ ಪಂಚಾಯಿತಿ ವ್ಯಾಪ್ತಿಯ ಜನರು ಕಳೆದ ಎರಡು ತಿಂಗಳಿಂದ ಕೆಲಸಲ್ಲದೆ ಗುಳೆ ಹೊರಟು ಹೋಗಲು ಸಿದ್ಧರಾಗಿರುವುದು ಕಂಡು ಬರುತ್ತಿದೆ ಎಂದು ಗೋಗಿಯ ಜಯಕುಮಾರ ಗುಳೇದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೆಚ್ಚುವರಿ ಕೆಲಸ ಹೊತ್ತ ಪಿಡಿಒ

ಪುತ್ರಪ್ಪಗೌಡ-ಗೋಗಿ (ಪಿ), ಗೋಗಿ (ಕೆ), ಹಯ್ಯಾಳ (ಬಿ), ಹೊಸಕೇರಾ. ಮಾಧವರಾವ್ ಭಾಲ್ಕಿ-ಬೆಂಡೆಬೆಂಬಳಿ, ಉಳ್ಳೇಸುಗೂರ, ಹೋತಪೇಠ. ಅಜೀತಕು ಮಾರ-ಸಗರ, ಹತ್ತಿಗುಡೂರ, ಉಕ್ಕಿನಾಳ. ಅಕ್ಕನಾಗಮ್ಮ -ಕಾಡಂಗೇರಾ(ಬಿ), ತಡಿಬಿಡಿ. ಶಾರದಮ್ಮ- ಕನ್ಯಾಕೋಳುರ, ಕೋಳೂರ (ಎಂ). ಹೊನ್ನಪ್ಪ ಸಿ.-ಮುಡ ಬೂಳ, ಶಿರವಾಳ. ಭಿಮರಾಯ ಬಿರಾದಾರ-ಕಕ್ಕಸಗೇರಾ, ವನದುರ್ಗ. ವೆಂಕಣ್ಣ-ಚಟ್ನಳ್ಳಿ, ಖಾನಾಪುರ.

ಪಿಡಿಒಗಳ ನೇಮಕಾತಿಯಲ್ಲಿ ವಿಳಂಬ ಆಗಿದ್ದರಿಂದ ತಾಲೂಕಿನಲ್ಲಿ ಅಭಿವೃದ್ಧಿಗೆ ತೊಡಕಾಗಿದೆ. ಒಬ್ಬರು ಹೆಚ್ಚಿನ ಜವಾಬ್ದಾರಿ ಹೊರುವ ಅನಿವಾರ್ಯತೆವಾಗಿದೆ.ನಮ್ಮಲ್ಲಿರುವ 17 ಜನ ಪಿಡಿಒಗಳು 36 ಗ್ರಾಪಂ ಕಾರ್ಯಗಳನ್ನು ನಿಭಾಯಿಸುತ್ತಿದ್ದಾರೆ. ಪಿಡಿಒಗಳ ನೇಮಕಾತಿಯಾಗಿದ್ದು, ಗುರುಮಠಕಲ್‌ನಲ್ಲಿ ಅವರಿಗೆ ತರಬೇತಿ ನೀಡಲಾಗುತ್ತಿದೆ. ಮಾರ್ಚ್ ಅಂತ್ಯದಲ್ಲಿ ಅವರನ್ನು ಬಳಸಿಕೊಳ್ಳಲಾಗುವುದು.

-ನರಸಿಂಗ್‌ರಾವ್ ಮುತಾಲಿಕ್, ತಾಪಂ ಇಒ ಶಹಾಪುರ.

ತಾಲೂಕಿನಾದ್ಯಂತ ಪಿಡಿಒಗಳ ಅಭಾವ ಇದೆ. ಕೂಡಲೇ ಅವರನ್ನು ನೇಮಿಸಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಆಯಾ ಪಂಚಾಯಿತಿಗೆ ಪ್ರತ್ಯೇಕ ಪಿಡಿಒಗಳ ನೇಮಕಾತಿ ಅಗತ್ಯ. ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಅಭಿವೃದ್ಧಿಗೆ ಸಹಕರಿಸಬೇಕು.

-ಮಹೇಶಗೌಡ ಸುಬೇದಾರ. ಬಿಜೆಪಿ ಯುವ ಮುಖಂಡ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ