ಆ್ಯಪ್ನಗರ

ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಕಿರು ಪರೀಕ್ಷೆ

ತಾಂತ್ರಿಕ ಶಿಕ್ಷಣ ಇಲಾಖೆಯು ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ರಿಸಲ್ಟ್‌ ಸುಧಾರಣೆಗೆ ಹೊಸ ಕ್ರಮ ಕೈಗೊಂಡಿದೆ. ಅವರಿಗೆ ತಮ್ಮ ಫಲಿತಾಂಶ ಸುಧಾರಿಸಿಕೊಳ್ಳಲು ಮೇಕ್‌ಅಪ್‌ ಕಿರು ಪರೀಕ್ಷೆ ನಡೆಸಲು ಮುಂದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಳನ್ನು, ಕಿರು ಪರೀಕ್ಷೆಯ ದಿನಾಂಕಗಳನ್ನು ಇಲ್ಲಿ ತಿಳಿಸಲಾಗಿದೆ.

Authored byಸುನೀಲ್ ಬಿ ಎನ್ | Vijaya Karnataka Web 21 May 2024, 2:04 pm

ಹೈಲೈಟ್ಸ್‌:

  • ಪಾಲಿಟೆಕ್ನಿಕ್ ಸ್ಟೂಡೆಂಟ್ಸ್‌ಗೆ ಕಿರು ಪರೀಕ್ಷೆ.
  • ಜೂನ್ 14 ರಿಂದ 20 ರವರೆಗೆ ಮೇಕ್‌ಅಪ್‌ ಕಿರು ಪರೀಕ್ಷೆ.
  • ಕಿರು ಪರೀಕ್ಷೆಗೂ ಮೊದಲು ಮೇಕ್‌ಅಪ್‌ ತರಗತಿಗಳನ್ನು ನಡೆಸಲಾಗುತ್ತದೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web short exam for polytechnic students
makeup cie short exam for diploma students
ಕರ್ನಾಟಕ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ಪಾಲಿಟೆಕ್ನಿಕ್ ಸಂಸ್ಥೆಗಳ 1ನೇ ಸೆಮಿಸ್ಟರ್‌ನಿಂದ 6ನೇ ಸೆಮಿಸ್ಟರ್ ವರೆಗೆ ನಿರಂತರ ಆಂತರಿಕ ಮೌಲ್ಯಮಾಪನದ ಅಡಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಲು ಮೇಕ್‌ಅಪ್‌ ಕಿರು ಪರೀಕ್ಷೆ ನಡೆಸಲು ಮುಂದಾಗಿದೆ. 1 ರಿಂದ 5ನೇ ಸೆಮಿಸ್ಟರ್‌ ಸಿ-20 ಪಠ್ಯಕ್ರಮದಲ್ಲಿ 2020-21, 2021-22, 2022-23 ಹಾಗೂ 2023-24ನೇ ಸಾಲಿನಲ್ಲಿ ಶೇಕಡಾ 40 ಕ್ಕಿಂತ ಕಡಿಮೆ ಸಿಐಇ (Continuous Internal Evaluation) ಅಂಕಗಳಿರುವ ವಿದ್ಯಾರ್ಥಿಗಳಿಗೆ ಸಿಇಇ ಅಂಕಗಳನ್ನು ಹೆಚ್ಚಿಸಿಕೊಳ್ಳುವ ಸಂಬಂಧ ಸಂಸ್ಥೆಗಳ ಮಟ್ಟದಲ್ಲಿ ಮೇಕಪ್‌ ತರಗತಿಗಳು, ಮೇಕಪ್‌ ಸಿಇಐ ಕಿರು ಪರೀಕ್ಷೆಗಳನ್ನು ಜರುಗಿಸಲು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
2020-21ನೇ ಶೈಕ್ಷಣಿಕ ಸಾಲಿನಿಂದ 2023-14ನೇ ಸಾಲಿನವರೆಗೆ ಶೇಕಡ.40 ಕ್ಕಿಂತ ಕಡಿಮೆ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಈ ಕಿರು ಪರೀಕ್ಷೆಯಲ್ಲಿ ಅಂಕ ಉತ್ತಮ ಪಡಿಸಿಕೊಳ್ಳುವುದಕ್ಕೆ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಹಿನ್ನೆಲೆ ಜೂನ್ 3 ರಿಂದ ಜೂನ್ 12 ರವರೆಗೆ ಮೇಕ್‌ಅಪ್‌ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ. ಇದಾದ ನಂತರದಲ್ಲಿ ಜೂನ್ 14 ರಿಂದ 20 ರವರೆಗೆ ಮೇಕ್‌ಅಪ್‌ ಕಿರು ಪರೀಕ್ಷೆಗಳನ್ನು ನಡೆಸಲು ದಿನಾಂಕಗಳನ್ನು ನಿಗದಿ ಮಾಡಲಾಗಿದೆ.

ವಿದ್ಯಾರ್ಥಿಗಳ ಆಂತರಿಕ ಅಂಕಗಳ ಪರಿಶೀಲನೆ ಮತ್ತು ವೆಬ್‌ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡುವುದಕ್ಕೆ ಜೂನ್ 20, 2024 ರವರೆಗೆ ಅವಕಾಶ ನೀಡಲಾಗಿದೆ.

ಪದವಿ, ಪಿಜಿ ಓದುತ್ತಿರುವವರಿಗೆ ರೂ.1 ಲಕ್ಷವರೆಗೆ ವಿದ್ಯಾರ್ಥಿವೇತನ: ಲೈಫ್‌ ಗುಡ್‌ ಸ್ಕಾಲರ್‌ಶಿಪ್‌ಗೆ ಅರ್ಜಿ ಹಾಕಿ

2023-24ನೇ ಶೈಕ್ಷಣಿಕ ಸಾಲಿನಲ್ಲಿ 1, 3 ಮತ್ತು 5ನೇ ಸೆಮಿಸ್ಟರ್‌ನಲ್ಲಿ ಅನರ್ಹತೆ ಪಡೆದಿರುವ ಹಾಗೂ ಹಿಂದಿನ ವರ್ಷದ ಕಿರು ಪರೀಕ್ಷೆಗಳಲ್ಲಿ ಶೇಕಡ.40 ಕ್ಕಿಂತ ಕಡಿಮೆ ಅಂಕ ಪಡೆದು ಮತ್ತೆ ಸಹ ಅನರ್ಹತೆ ಪಡೆದಿರುವ ಪದವಿ ವಿದ್ಯಾರ್ಥಿಗಳು ಪ್ರಸ್ತುತ ಜರುಗುತ್ತಿರುವ ಮೇ 2024 ರ ಎಸ್‌ಇಇ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ಅರ್ಹರಾಗುವುದಿಲ್ಲ. ಆದರೂ ಯಾವುದೇ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಲ್ಲಿ ಅಂತಹವರ ಫಲಿತಾಂಶವು ಮಾನ್ಯ ಮಾಡಲಾಗುವುದಿಲ್ಲವೆಂದು ತಿಳಿಸಲಾಗಿದೆ.

ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ ವಿಳಾಸ : https://dce.karnataka.gov.in

1, 2, 3, 4, ಮತ್ತು 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಕಿರು ಪರೀಕ್ಷೆ ವೇಳಾಪಟ್ಟಿ

ಮೇಕಪ್ ತರಗತಿಗಳು : 03-06-2024 To 12-06-2024
ಮೇಕಪ್ ಸಿಐಇ ಕಿರು ಪರೀಕ್ಷೆಗಳು : 14-06-2024 To 20-06-2024
ಆಂತರಿಕ ಅಂಕಗಳ ಪರಿಶೀಲನೆ ಮತ್ತು ವೆಬ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡುವುದು: 20-06-2024

6ನೇ ಸೆಮಿಸ್ಟರ್‌ನ ಇಂಟರ್ನ್‌ಶಿಪ್‌ಗೆ ಸಂಬಂಧಿಸಿದಂತೆ ಅಗತ್ಯ ಹಾಜರಾತಿಯೊಂದಿಗೆ ಲಾಗ್‌ ಶೀಟ್‌ ಮತ್ತು ಇಂಟರ್ನ್‌ಶಿಪ್‌ ಸರ್ಟಿಫಿಕೇಟ್‌ ಗಳನ್ನು ಸಲ್ಲಿಸಿದ್ದೂ ಹಾಗೂ ಪ್ರಾಜೆಕ್ಟ್‌ ವರ್ಕ್‌ ನಲ್ಲಿ ಹಾಜರಾತಿ ತೃಪ್ತಿಕರವಾಗಿದ್ದು ಸಿಐಇ-1, ಸಿಐಇ-2 ಅಥವಾ ಸಿಐಇ-3 ನಲ್ಲಿ ಶೇಕಡ-40 ಕ್ಕಿಂತ ಕಡಿಮೆ ಅಂಕಗಳು ಬಂದಿದ್ದರೆ ಆಯಾ ಸಿಐಇ ಗಳನ್ನು ಮಾತ್ರ ಮೇಲ್ಕಂಡ ಮೇಕಪ್‌ ಸಿಐಇ ಸಮಯದಲ್ಲಿ ಉತ್ತಮಪಡಿಸಿಕೊಳ್ಳಲು ಅವಕಾಶವಿರುತ್ತದೆ. ಮತ್ತು ಸುಧಾರಿಸಿರುವ ಸಿಐಇ'ಗಳಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ವಿದ್ಯಾರ್ಥಿಗಳು ಒದಗಿಸುವುದು ಕಡ್ಡಾಯವಾಗಿರುತ್ತದೆ.

ಖಾಸಗಿ ಶಾಲೆಗಳಲ್ಲಿ ಶೇ.30 ರವರೆಗೂ ಶುಲ್ಕ ಹೆಚ್ಚಳ: ಡೊನೇಷನ್ ಹಾವಳಿ ಕಡಿವಾಣಕ್ಕೆ ಎಸ್ಎಫ್ಐ ಆಗ್ರಹ

ಖಾಸಗಿ ಅನುದಾನಿತ ಮತ್ತು ಸರ್ಕಾರಿ ಪದವಿ ಕಾಲೇಜುಗಳ ಪ್ರವೇಶ ಶುಲ್ಕ ಬಿಡುಗಡೆ

ಕಾಲೇಜು ಶಿಕ್ಷಣ ಇಲಾಖೆಯು 2024-25ನೇ ಸಾಲಿನ ಪದವಿ ಕೋರ್ಸ್‌ಗಳ ಪ್ರವೇಶಾತಿ ಸಂಬಂಧ, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹಾಗೂ ಖಾಸಗಿ ಸರ್ಕಾರಿ ಅನುದಾನಿತ ಪದವಿ ಕಾಲೇಜುಗಳಲ್ಲಿ ವಿಧಿಸಲಾಗುವ ಪ್ರವೇಶ ಶುಲ್ಕವನ್ನು ವಿದ್ಯಾರ್ಥಿಗಳ ಮಾಹಿತಿಗಾಗಿ ಬಿಡುಗಡೆ ಮಾಡಲಾಗಿದೆ. ದ್ವಿತೀಯ ಪಿಯುಸಿ ನಂತರ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡುವ ಮೂಲಕ ದಾಖಲಾತಿ ಶುಲ್ಕವನ್ನು ಚೆಕ್‌ ಮಾಡಿಕೊಳ್ಳಬಹುದು.
ಲೇಖಕರ ಬಗ್ಗೆ
ಸುನೀಲ್ ಬಿ ಎನ್
"ಸುನೀಲ್ ಬಿ ಎನ್ ರವರು ಅನುಭವಿ ಬರಹಗಾರರಾಗಿದ್ದು, ಕಳೆದ 7 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು 2015 ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ನಂತರ ಹಲವು ಡೊಮೈನ್‌ಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಸುನೀಲ್ ರವರು ವೈವಿಧ್ಯಮಯ ಪರಿಣತಿಯನ್ನು ಹೊಂದಿದ್ದು, ತಂತ್ರಜ್ಞಾನ, ಸಿನಿಮಾ, ಉದ್ಯೋಗ, ಶಿಕ್ಷಣ, ಜೀವನಶೈಲಿ ಸೇರಿದಂತೆ ಸುದ್ದಿ ವಿಭಾಗದಲ್ಲೂ ಕೆಲಸದ ಅನುಭವ ಹೊಂದಿದ್ದಾರೆ. ಕಳೆದ 3.6 ವರ್ಷಗಳಿಂದ ಸುನೀಲ್‌ ರವರು ಉದ್ಯೋಗ ಮತ್ತು ಶಿಕ್ಷಣ ವಿಭಾಗದಲ್ಲಿ ತಮ್ಮ ಬರವಣಿಗೆ ಕೃಷಿಯನ್ನು ಕೇಂದ್ರೀಕರಿಸಿದ್ದು, ಈ ವಿಷಯಗಳಲ್ಲಿ ಉದ್ಯಮದ ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಬೆಳೆಸಿಕೊಂಡಿದ್ದಾರೆ. ಈ ಎರಡು ಡೊಮೇನ್‌ಗಳಲ್ಲಿನ ಬೆಳವಣಿಗೆ ಹಾಗೂ ಬದಲಾವಣೆ ಕುರಿತು ಲೇಟೆಸ್ಟ್‌ ಮಾಹಿತಿಗಳನ್ನು ರಚಿಸುವ ಮೂಲಕ ಓದುಗರಿಗೆ ಸಹಾಯ ಮಾಡುವ ಹಾಗೂ ಅವರಿಗೆ ಉಪಯುಕ್ತ ಮಾಹಿತಿ ನೀಡುವಲ್ಲಿ ಸದಾ ಉತ್ಸುಕರಾಗಿ ಕೆಲಸ ಮಾಡುತ್ತಿದ್ದಾರೆ. ಬರವಣಿಗೆ ಹೊರತಾಗಿ, ಸುನೀಲ್‌ ಬಿ ಎನ್‌ ರವರು ಹಲವು ಉತ್ತಮ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಿಡುವಿನ ವೇಳೆ ಪ್ರಯಾಣಿಸಲು ಹಾಗೂ ಹೊಸ ಸ್ಥಳಗಳನ್ನು ಅನ್ವೇಷಿಸಲು ಇಷ್ಟಪಡುತ್ತಾರೆ. ಪ್ರಯಾಣವನ್ನು ಶಿಕ್ಷಣದ ಒಂದು ಭಾಗ ಎಂದುಕೊಂಡಿರುವ ಇವರು, ತಮ್ಮ ಈ ಹವ್ಯಾಸದಿಂದ ಅವರ ದೃಷ್ಟಿಕೋನವನ್ನು ವಿಸ್ತರಿಸಲು ಮತ್ತು ವಿಭಿನ್ನ ಸಂಸ್ಕೃತಿಗಳ ಉತ್ತಮ ತಿಳುವಳಿಕೆಯನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಭಾವಿಸಿದ್ದಾರೆ. ಅತ್ಯಾಸಕ್ತಿಯ ಓದುಗರು ಆಗಿದ್ದು ಕಥೆ, ಕಾದಂಬರಿ, ನಾಟಕಗಳ ಪುಸ್ತಕಗಳನ್ನು ಓದುವುದನ್ನು ಇಷ್ಟಪಡುತ್ತಾರೆ. ಬಿಡುವಿನ ವೇಳೆ ಚೆಸ್‌ ಆಡುವುದು ಮತ್ತು ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕವು ವಿಶ್ರಾಂತಿ ಪಡೆಯುತ್ತಾರೆ. "... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌