ಆ್ಯಪ್ನಗರ

ಸಿಟಿಇಟಿ 2023 ಪ್ರವೇಶ ಪತ್ರ ಈ ದಿನಾಂಕದಂದು ಬಿಡುಗಡೆ: ಪರೀಕ್ಷೆ ಮಾದರಿ ಹೇಗಿರುತ್ತದೆ ಗೊತ್ತೇ?

ಸೆಂಟ್ರಲ್‌ ಟೀಚರ್ಸ್‌ ಎಲಿಜಿಬಿಲಿಟಿ ಟೆಸ್ಟ್‌ ಪ್ರವೇಶ ಪತ್ರವನ್ನು ಸಿಬಿಎಸ್‌ಇ ಆಗಸ್ಟ್‌ 18 ರಂದು ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪ್ರವೇಶ ಪತ್ರ, ಡೌನ್‌ಲೋಡ್‌ ವಿಧಾನ ಕುರಿತು ಕೆಳಗಿನಂತೆ ಮಾಹಿತಿ ಚೆಕ್‌ ಮಾಡಬಹುದು.

Authored byಸುನೀಲ್ ಬಿ ಎನ್ | Vijaya Karnataka Web 14 Aug 2023, 7:18 pm

ಹೈಲೈಟ್ಸ್‌:

  • ಸಿಟಿಇಟಿ 2023 ಪ್ರವೇಶ ಪತ್ರ ಬಿಡುಗಡೆ ಯಾವಾಗ?
  • ಸಿಟಿಇಟಿ 2023 ಪಾಸಿಂಗ್ ಅಂಕಗಳು ಏಷ್ಟು?
  • ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ctet 2023 july session admit card to release soon on ctet.nic.in
ctet 2023 july session admit card to release soon on ctet.nic.in
ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು ಜುಲೈ ಸೆಷನ್‌ನ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಶುಲ್ಕವನ್ನು ಯಶಸ್ವಿಯಾಗಿ ಪಾವತಿ ಮಾಡಿದ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಸಿಟಿಇಟಿ ಅಧಿಕೃತ ವೆಬ್‌ಸೈಟ್‌ ನಲ್ಲಿ, ' ಸಿಟಿಇಟಿ 2023 ಜುಲೈ ಸೆಷನ್‌ ಅಡ್ಮಿಟ್‌ ಕಾರ್ಡ್‌ ಅನ್ನು ಅಭ್ಯರ್ಥಿಗಳು ctet.nic.in ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ದಿನಾಂಕ 18-08-2023 ರಿಂದ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು' ಎಂದು ತಿಳಿಸಲಾಗಿದೆ.

ದಿನಾಂಕ 27-04-2023 ರಿಂದ 26-05-2023 ರ ವರೆಗೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿದವರು ಓಎಂಆರ್‌ ಆಧಾರಿತ ಆಫ್‌ಲೈನ್‌ ಟಿಇಟಿ ಪರೀಕ್ಷೆಗೆ ಹಾಜರಾಗಬೇಕು. ಪರೀಕ್ಷೆಯನ್ನು ಆಗಸ್ಟ್‌ 20 ರಂದು ನಿಗದಿಪಡಿಸಿದ್ದು, ದೇಶದಾದ್ಯಂತ ಪರೀಕ್ಷೆ ನಡೆಯಲಿದೆ.

ಯುಜಿಸಿಇಟಿ 2023 ಅಣಕು ಸೀಟು ಹಂಚಿಕೆ ಫಲಿತಾಂಶ, ಕಟ್‌ಆಫ್‌ ಅಂಕಗಳು ಬಿಡುಗಡೆ

ಅಡ್ಮಿಟ್‌ ಕಾರ್ಡ್‌ನಲ್ಲಿ ಅಭ್ಯರ್ಥಿಗಳು ತಮ್ಮ ಪರೀಕ್ಷೆ ಕೇಂದ್ರ, ಸಮಯ, ಎಕ್ಸಾಮ್ ಸಿಟಿ, ಬೆಲ್‌ ಸಮಯ, ರಿಪೋರ್ಟಿಂಗ್ ಟೈಮ್‌, ಇತರೆ ಮಾಹಿತಿಗಳನ್ನು ಚೆಕ್‌ ಮಾಡಿಕೊಳ್ಳಬಹುದು. ಆನ್‌ಲೈನ್‌ ಮೋಡ್‌ನಿಂದ ಆಫ್‌ಲೈನ್‌ ಮೋಡ್‌ ನಲ್ಲಿ ಪರೀಕ್ಷೆ ನಡೆಸುತ್ತಿರುವ ಕಾರಣ, ಪರೀಕ್ಷೆ ಕೇಂದ್ರಗಳಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ. ಆದ್ದರಿಂದ ತಮ್ಮ ಜಿಲ್ಲೆ, ತಾಲ್ಲೂಕುಗಳ ಹತ್ತಿರದಲ್ಲಿ ಪರೀಕ್ಷೆ ಕೇಂದ್ರಗಳು ಇರಲಿದ್ದು, ಗಮನಿಸಿಕೊಳ್ಳಬಹುದು.

ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ ಪಾಸಾಗಲು ಗಳಿಸಬೇಕಾದ ಅಂಕಗಳು
ಸಾಮಾನ್ಯ ಕೆಟಗರಿ ಅಭ್ಯರ್ಥಿಗಳು 150 ಅಂಕಗಳಿಗೆ ಕನಿಷ್ಠ 90 ಅಂಕಗಳನ್ನು ಗಳಿಸಬೇಕು.
ಮೀಸಲಾತಿಗೆ ಒಳಪಟ್ಟ ಅಭ್ಯರ್ಥಿಗಳು 150 ಅಂಕಗಳಿಗೆ ಕನಿಷ್ಠ 82.5 ಅಂಕಗಳನ್ನು ಗಳಿಸಬೇಕು.
3 ಗಂಟೆಗಳ ಅವಧಿ ಪರೀಕ್ಷೆ ಇದಾಗಿದ್ದು, 150 ಮಲ್ಟಿಪಲ್ ಚಾಯ್ಸ್‌ ಪ್ರಶ್ನೆಗಳನ್ನು ಪರೀಕ್ಷೆ ಒಳಗೊಂಡಿರುತ್ತದೆ.

ಪ್ರಾಥಮಿಕ ಶಾಲಾ ಶಿಕ್ಷಕರಾಗಲು B.Ed ಕಡ್ಡಾಯವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ ಮಾದರಿ
CTET ಪರೀಕ್ಷೆ ಎರಡು ಪ್ರಶ್ನೆ ಪತ್ರಿಕೆಗಳನ್ನು ಹೊಂದಿರುತ್ತದೆ. ಪತ್ರಿಕೆ-1 ಮತ್ತು ಪತ್ರಿಕೆ-2.
ಪತ್ರಿಕೆ-1 - 1 ರಿಂದ 5ನೇ ತರಗತಿ ಬೋಧಿಸಲ್ಪಡುವ ಶಿಕ್ಷಕರಿಗಾಗಿ.
ಪತ್ರಿಕೆ-2 - 6 ರಿಂದ 8ನೇ ತರಗತಿ ಬೋಧಿಸಲ್ಪಡುವ ಶಿಕ್ಷಕರಿಗಾಗಿ.

ಸೂಚನೆ : 2 ಹಂತದ ತರಗತಿಗೆ ಅರ್ಹತೆ ಪಡೆಯಲು, 2 ಪತ್ರಿಕೆಗಳ ಪರೀಕ್ಷೆಗೆ ಹಾಜರಾಗಬೇಕು. ಪ್ರಶ್ನೆಪತ್ರಿಕೆ ಪ್ರತಿ ಪ್ರಶ್ನೆಗೆ ಒಂದು ಅಂಕದಂತೆ, ಒಟ್ಟು 150 ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ತಪ್ಪು ಉತ್ತರಗಳಿಗೆ ಋಣಾತ್ಮಕ ಮೌಲ್ಯಮಾಪನ ಇರುತ್ತದೆ.

CTET ಪತ್ರಿಕೆ-1 ರ ವಿಷಯಗಳು ಏನಿರುತ್ತವೆ?
1 ರಿಂದ 5ನೇ ತರಗತಿ ಬೋಧಿಸಲ್ಪಡುವ ಶಿಕ್ಷಕರಿಗಾಗಿ ಪತ್ರಿಕೆ-1 ಪರೀಕ್ಷೆ ನಡೆಸಲಿದೆ.
ಪಠ್ಯಕ್ರಮದ ವಿಷಯಗಳು : ಶಿಶು ವಿಕಸನ ಮತ್ತು ಬೋಧನಾ ಕ್ರಮ, ಭಾಷೆ-1, ಭಾಷೆ-2, ಪರಿಸರ ಅಧ್ಯಯನ, ಗಣಿತ ಸೇರಿದಂತೆ ಪ್ರತಿ ವಿಷಯಗಳಿಗೆ ಸಂಬಂಧಿಸಿದಂತೆ 30 ಅಂಕಗಳಿಗೆ 30 ಪ್ರಶ್ನೆಗಳಂತೆ, ಒಟ್ಟು 150 ಅಂಕಗಳಿಗೆ ಪತ್ರಿಕೆ-1 ಪರೀಕ್ಷೆ ಬರೆಯಬೇಕಿರುತ್ತದೆ.

CTET ಪತ್ರಿಕೆ-2 ರ ವಿಷಯಗಳು ಏನಿರುತ್ತವೆ?
6 ರಿಂದ 8ನೇ ತರಗತಿ ಬೋಧಿಸಲ್ಪಡುವ ಶಿಕ್ಷಕರಿಗಾಗಿ ಪತ್ರಿಕೆ-2 ಪರೀಕ್ಷೆ ನಡೆಸಲಿದೆ.
ವಿಷಯಗಳು: ಶಿಶು ವಿಕಸನ ಹಾಗೂ ಬೋಧನಾ ಕ್ರಮ, ಭಾಷೆ-1(ಕಡ್ಡಾಯ), ಭಾಷೆ-2(ಕಡ್ಡಾಯ) ಈ ಮೂರು ಪ್ರತಿ ವಿಭಾಗಗಳಲ್ಲಿ 30 ಅಂಕಗಳಿಗೆ, ಪ್ರತಿ ವಿಷಯಗಳಿಗೆ 30 ಪ್ರಶ್ನೆಗಳನ್ನು ಕೇಳಲಾಗುತ್ತದೆ.
- ಗಣಿತ ಮತ್ತು ವಿಜ್ಞಾನ( ಗಣಿತ, ವಿಜ್ಞಾನ ಶಿಕ್ಷಕರಿಗಾಗಿ) 60 ಅಂಕಗಳಿಗೆ, 60 ಪ್ರಶ್ನೆಗಳನ್ನು ಕೇಳಲಾಗುತ್ತದೆ.
- ಸಮಾಜ ಪಾಠಗಳು / ಸಮಾಜ ವಿಜ್ಞಾನ ( ಸಮಾಜ ವಿಜ್ಞಾನ ಶಿಕ್ಷಕರಿಗಾಗಿ) 60 ಅಂಕಗಳಿಗೆ, 60 ಪ್ರಶ್ನೆಗಳನ್ನು ಕೇಳಲಾಗುತ್ತದೆ.
- ಒಟ್ಟು 150 ಅಂಕಗಳಿಗೆ ಪತ್ರಿಕೆ-2 ಪರೀಕ್ಷೆ ಬರೆಯಬೇಕಿರುತ್ತದೆ.

CTET ಪರೀಕ್ಷೆ ಶಿಫ್ಟ್‌ಗಳ ಸಮಯವೇನು?
CTET ಪರೀಕ್ಷೆಯ ಮೊದಲ ಶಿಫ್ಟ್‌ ಪರೀಕ್ಷೆ ಬೆಳಿಗ್ಗೆ 09-30 ರಿಂದ 12 ಗಂಟೆವರೆಗೆ. ಮಧ್ಯಾಹ್ನ ಶಿಫ್ಟ್‌ ಪರೀಕ್ಷೆ 02-30 ರಿಂದ ಸಂಜೆ 05 ಗಂಟೆವರೆಗೆ ಇರುತ್ತದೆ.

CTET 2021 ಅರ್ಹತಾ ಅಂಕಗಳು ಎಷ್ಟು?
ಸಿಟಿಇಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಕನಿಷ್ಠ ಶೇಕಡ.60 ಅಂಕಗಳನ್ನು, ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯಬೇಕು. ವರ್ಗಾವಾರು ಕಟ್‌ ಆಫ್‌ ಅಂಕಗಳನ್ನು ಸಿಬಿಎಸ್‌ಇ ಬಿಡುಗಡೆ ಮಾಡುತ್ತದೆ.

CTET ಉತ್ತರ ಪತ್ರಿಕೆ ಮರು ಮೌಲ್ಯಮಾಪನ ಇರುತ್ತದೆಯೇ?
ಖಂಡಿತ ಇಲ್ಲ. ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನಕ್ಕಾಗಿ, ಅಂಕಗಳ ಮರು ಏಣಿಕೆಗೆ ಆಗಲಿ ಮನವಿ ಮಾಡಲು ಸಾಧ್ಯವಿಲ್ಲ.

CTET ಪರೀಕ್ಷೆ ಪಠ್ಯಕ್ರಮ ಏನು?
ಅಭ್ಯರ್ಥಿಗಳು ವೆಬ್‌ಸೈಟ್‌ https://ctet.nic.in/WebInfo/Page/Page?PageId=1&LangId=P ಗೆ ಭೇಟಿ ನೀಡಿ ಪಠ್ಯಕ್ರಮ ಮತ್ತು ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಚೆಕ್‌ ಮಾಡಬಹುದು. ಹಾಗೆಯೇ ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು.

ಶಾಲಾ ಶಿಕ್ಷಣ ಇಲಾಖೆಯ ಖಡಕ್‌ ಸೂಚನೆ: ಅನಧಿಕೃತ ಶಾಲೆಗಳಿಗೆ ಬೀಗ ಗ್ಯಾರಂಟಿ
ಲೇಖಕರ ಬಗ್ಗೆ
ಸುನೀಲ್ ಬಿ ಎನ್
"ಸುನೀಲ್ ಬಿ ಎನ್ ರವರು ಅನುಭವಿ ಬರಹಗಾರರಾಗಿದ್ದು, ಕಳೆದ 7 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು 2015 ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ನಂತರ ಹಲವು ಡೊಮೈನ್‌ಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಸುನೀಲ್ ರವರು ವೈವಿಧ್ಯಮಯ ಪರಿಣತಿಯನ್ನು ಹೊಂದಿದ್ದು, ತಂತ್ರಜ್ಞಾನ, ಸಿನಿಮಾ, ಉದ್ಯೋಗ, ಶಿಕ್ಷಣ, ಜೀವನಶೈಲಿ ಸೇರಿದಂತೆ ಸುದ್ದಿ ವಿಭಾಗದಲ್ಲೂ ಕೆಲಸದ ಅನುಭವ ಹೊಂದಿದ್ದಾರೆ. ಕಳೆದ 3.6 ವರ್ಷಗಳಿಂದ ಸುನೀಲ್‌ ರವರು ಉದ್ಯೋಗ ಮತ್ತು ಶಿಕ್ಷಣ ವಿಭಾಗದಲ್ಲಿ ತಮ್ಮ ಬರವಣಿಗೆ ಕೃಷಿಯನ್ನು ಕೇಂದ್ರೀಕರಿಸಿದ್ದು, ಈ ವಿಷಯಗಳಲ್ಲಿ ಉದ್ಯಮದ ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಬೆಳೆಸಿಕೊಂಡಿದ್ದಾರೆ. ಈ ಎರಡು ಡೊಮೇನ್‌ಗಳಲ್ಲಿನ ಬೆಳವಣಿಗೆ ಹಾಗೂ ಬದಲಾವಣೆ ಕುರಿತು ಲೇಟೆಸ್ಟ್‌ ಮಾಹಿತಿಗಳನ್ನು ರಚಿಸುವ ಮೂಲಕ ಓದುಗರಿಗೆ ಸಹಾಯ ಮಾಡುವ ಹಾಗೂ ಅವರಿಗೆ ಉಪಯುಕ್ತ ಮಾಹಿತಿ ನೀಡುವಲ್ಲಿ ಸದಾ ಉತ್ಸುಕರಾಗಿ ಕೆಲಸ ಮಾಡುತ್ತಿದ್ದಾರೆ. ಬರವಣಿಗೆ ಹೊರತಾಗಿ, ಸುನೀಲ್‌ ಬಿ ಎನ್‌ ರವರು ಹಲವು ಉತ್ತಮ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಿಡುವಿನ ವೇಳೆ ಪ್ರಯಾಣಿಸಲು ಹಾಗೂ ಹೊಸ ಸ್ಥಳಗಳನ್ನು ಅನ್ವೇಷಿಸಲು ಇಷ್ಟಪಡುತ್ತಾರೆ. ಪ್ರಯಾಣವನ್ನು ಶಿಕ್ಷಣದ ಒಂದು ಭಾಗ ಎಂದುಕೊಂಡಿರುವ ಇವರು, ತಮ್ಮ ಈ ಹವ್ಯಾಸದಿಂದ ಅವರ ದೃಷ್ಟಿಕೋನವನ್ನು ವಿಸ್ತರಿಸಲು ಮತ್ತು ವಿಭಿನ್ನ ಸಂಸ್ಕೃತಿಗಳ ಉತ್ತಮ ತಿಳುವಳಿಕೆಯನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಭಾವಿಸಿದ್ದಾರೆ. ಅತ್ಯಾಸಕ್ತಿಯ ಓದುಗರು ಆಗಿದ್ದು ಕಥೆ, ಕಾದಂಬರಿ, ನಾಟಕಗಳ ಪುಸ್ತಕಗಳನ್ನು ಓದುವುದನ್ನು ಇಷ್ಟಪಡುತ್ತಾರೆ. ಬಿಡುವಿನ ವೇಳೆ ಚೆಸ್‌ ಆಡುವುದು ಮತ್ತು ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕವು ವಿಶ್ರಾಂತಿ ಪಡೆಯುತ್ತಾರೆ. "... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌