ಆ್ಯಪ್ನಗರ

ಯುಜಿಸಿಇಟಿ-2020 ಮೊದಲನೇ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ

2020ನೇ ಸಾಲಿಗೆ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಫಾರ್ಮಸಿ, ನ್ಯಾಚುರೋಪತಿ ಮತ್ತು ಯೋಗ ಮುಂತಾದ ಕೋರ್ಸ್‌ಗಳ ಪ್ರವೇಶಕ್ಕಾಗಿ..

Vijaya Karnataka Web 21 Nov 2020, 1:04 pm
2020ನೇ ಸಾಲಿಗೆ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಫಾರ್ಮಸಿ, ನ್ಯಾಚುರೋಪತಿ ಮತ್ತು ಯೋಗ ಮುಂತಾದ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೊದಲನೇ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟಿಸಲಾಗಿದೆ.
Vijaya Karnataka Web ugcet 2020 seat allotment schedule
ugcet 2020 seat allotment schedule


ಸೀಟ್ ಮ್ಯಾಟ್ರಿಕ್ಸ್‌ ಹಾಗೂ ಶುಲ್ಕದ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ http://kea.kar.nic.in ನಲ್ಲಿ ವಿದ್ಯಾರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ವೇಳಾಪಟ್ಟಿಯ ಪ್ರಕಾರ ತಮ್ಮ ಇಚ್ಛೆ / ಆಯ್ಕೆಗಳನ್ನು ಆನ್‌ಲೈನ್‌ ಮೂಲಕ ದಾಖಲಿಸಬಹುದಾಗಿದೆ.
ಕಾರ್ಯಗಳು ದಿನಾಂಕಗಳು
ಸೀಟ್ ಮ್ಯಾಟ್ರಿಕ್ಸ್‌ ಮತ್ತು ಶುಲ್ಕದ ವಿವರಗಳ ಪ್ರಕಟಣೆ 19-11-2020
ಇಚ್ಛೆ / ಆಯ್ಕೆಗಳನ್ನು ದಾಖಲಿಸುವುದು (ಆದ್ಯತಾ ಕ್ರಮದಲ್ಲಿ) 22-11-2020 ರಿಂದ 25-11-2020 ರ ಬೆಳಿಗ್ಗೆ 11-00 ವರೆಗೆ
ಅಣಕು ಸೀಟು ಹಂಚಿಕೆಯ ಫಲಿತಾಂಶ 26-11-2020 ರ ನಂತರ
ಆಯ್ಕೆಗಳನ್ನು ಬದಲಾಯಿಸಲು ಅವಕಾಶ (ಅಣಕು ಸೀಟು ಹಂಚಿಕೆಯ ಫಲಿತಾಂಶವನ್ನು ಪರಿಶೀಲಿಸಿದ ನಂತರ ಇಚ್ಛೆ / ಆಯ್ಕೆಗಳನ್ನು ಅವಶ್ಯವಿದ್ದಲ್ಲಿ ಬದಲಾಯಿಸಬಹುದಾಗಿದೆ / ಸೇರಿಸಬಹುದಾಗಿದೆ / ಅಳಿಸಬಹುದಾಗಿದೆ) 26-11-2020 ರಿಂದ 28-11-2020 ರ ಬೆಳಿಗ್ಗೆ 11 ಗಂಟೆವರೆಗೆ.
ನೈಜ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆ29-11-2020 ರ ನಂತರ
ಪೋಷಕರ ಜೊತೆ ಚರ್ಚಿಸಿ ಸೂಕ್ತವಾದ ಆಯ್ಕೆಮಾಡಿಕೊಳ್ಳಲು ಪ್ರಮುಖ ದಿನಾಂಕಗಳು30-11-2020 ರಿಂದ 01-12-2020
Choice 1 ಆಯ್ಕೆ ಮಾಡಿದ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡುವುದು30-11-2020 ರಿಂದ 02-12-2020
ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕೊನೆಯ ದಿನಾಂಕ ( ಎಲ್ಲಾ ಮೂಲ ದಾಖಲಾತಿಗಳೊಂದಿಗೆ - ವೆರಿಫಿಕೇಶನ್‌ ಸ್ಲಿಪ್ ನಮೂದಿಸಿರುವಂತೆ)02-12-2020 ರ ಸಂಜೆ 05-30 ಗಂಟೆಯೊಳಗೆ.

ಆಡಳಿತ ನ್ಯಾಯಾಧೀಕರಣದಲ್ಲಿ ವಕೀಲ ವೃತ್ತಿ ತರಬೇತಿ: ಅರ್ಜಿ ಆಹ್ವಾನ

ಅಭ್ಯರ್ಥಿಗಳು ದಾಖಲಿಸುವ ಇಚ್ಛೆ / ಆಯ್ಕೆಗಳನ್ನು ಪರಿಗಣಿಸಿ ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆಯನ್ನು ಮಾಡುವುದರಿಂದ, ಅಭ್ಯರ್ಥಿಗಳು ನೇರವಾಗಿ ಆಯ್ಕೆಗಳನ್ನು ದಾಖಲಿಸದೇ, ತಮಗೆ ಇಷ್ಟವಿರುವ ಕೋರ್ಸ್‌ / ಕಾಲೇಜುಗಳ ಒಂದು ಪಟ್ಟಿಯನ್ನು ಮಾಡಿಕೊಂಡು, ಪೋಷಕರೊಡನೆ ಚರ್ಚಿಸಿ. ನಂತರ ಆಯ್ಕೆಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ನಿಗದಿತ ಲಿಂಕ್‌ ನಲ್ಲಿ ದಾಖಲಿಸಲು ಸೂಚಿಸಿದೆ.

ಹಾಗೂ ಆಯ್ಕೆಗಳನ್ನು ನಮೂದಿಸುವಾಗ, ಆದ್ಯತಾ ಕ್ರಮ ಅನುಸರಿಸಲು ಸಹ ಸೂಚಿಸಿದೆ. ಸೀಟು ಹಂಚಿಕೆಗೆ ಅಭ್ಯರ್ಥಿಗಳು ಇಚ್ಛೆಗಳನ್ನು / ಆಯ್ಕೆಗಳನ್ನು ನಮೂದಿಸುವ ಬಗ್ಗೆ ವಿಶ್ಲೇಷಣೆ ಸಹಿತ ವಿವರವಾದ ಮಾಹಿತಿಯನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಅಮೆಜಾನ್‌ನಿಂದ 10 ಲಕ್ಷ ಉದ್ಯೋಗಾವಕಾಶ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌