Please enable javascript.ಅಸಾದುದ್ದೀನ್‌ ಓವೈಸಿ ವ್ಯಕ್ತಿಚಿತ್ರ, Asaduddin Owaisi News in Kannada, Asaduddin Owaisi Top Stories, Videos and Photos

ಅಸಾದುದ್ದೀನ್ ಓವೈಸಿ

ಹೈದರಾಬಾದ್|ತೆಲಂಗಾಣ|AIMIM|AWAITED

ಆಲ್‌ ಇಂಡಿಯಾ ಮಜ್ಲಿಸ್‌ ಇ ಇತ್ತೆಹದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಭಾರತದ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು. ಅವರ ಪಕ್ಷ ಹೈದರಾಬಾದ್‌ ನಗರಕ್ಕೇ ಹೆಚ್ಚಾಗಿ ಸೀಮಿತವಾಗಿದ್ದರೂ, ತಮ್ಮ ಮಾತು, ವಾಗ್ಝರಿ, ವಿವಾದಗಳ ಮೂಲ ಆಗಾಗ ದೇಶದಲ್ಲೆಡೆ ಸುದ್ದಿಗೆ ಗ್ರಾಸವಾಗುವವರು ಓವೈಸಿ. ಓವೈಸಿಯವರದ್ದು ಮೂಲತಃ ರಾಜಕೀಯ ಕುಟುಂಬ. ಸ್ವಾತಂತ್ರ್ಯ ಪೂರ್ವದಿಂದಲೂ ಓವೈಸಿ ಕುಟುಂಬ ರಾಜಕಾರಣದಲ್ಲಿ ತೊಡಗಿಸಿಕೊಂಡಿದೆ.

  • 2024
  • 2019
ರಾಜಕೀಯ ವಿವರ
ಪಕ್ಷAIMIM
ಕ್ಷೇತ್ರಹೈದರಾಬಾದ್
ರಾಜ್ಯದ ಹೆಸರುತೆಲಂಗಾಣ
ಕ್ರಿಮಿನಲ್‌ ಮೊಕದ್ದಮೆ ವಿವರYes (5)
ಉದ್ಯೋಗPolitician
ವೈಯಕ್ತಿಕ ವಿವರ
ಹೆಸರುಅಸಾದುದ್ದೀನ್ ಓವೈಸಿ
ಶಿಕ್ಷಣGraduate Professional
ಒಟ್ಟು ಆಸ್ತಿ23.9Crore
ಸಾಲ7.1Crore
ವಯಸ್ಸು54
Disclaimer:This Data is as according as the publicly available affidavit information, submitted by the candidates to the Election Commission of India.
ಅಸಾದುದ್ದೀನ್ ಓವೈಸಿ ಬಗ್ಗೆ

ಆಲ್‌ ಇಂಡಿಯಾ ಮಜ್ಲಿಸ್‌ ಇ ಇತ್ತೆಹದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಭಾರತದ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು. ಅವರ ಪಕ್ಷ ಹೈದರಾಬಾದ್‌ ನಗರಕ್ಕೇ ಹೆಚ್ಚಾಗಿ ಸೀಮಿತವಾಗಿದ್ದರೂ, ತಮ್ಮ ಮಾತು, ವಾಗ್ಝರಿ, ವಿವಾದಗಳ ಮೂಲ ಆಗಾಗ ದೇಶದಲ್ಲೆಡೆ ಸುದ್ದಿಗೆ ಗ್ರಾಸವಾಗುವವರು ಓವೈಸಿ.

ಓವೈಸಿಯವರದ್ದು ಮೂಲತಃ ರಾಜಕೀಯ ಕುಟುಂಬ. ಸ್ವಾತಂತ್ರ್ಯ ಪೂರ್ವದಿಂದಲೂ ಓವೈಸಿ ಕುಟುಂಬ ರಾಜಕಾರಣದಲ್ಲಿ ತೊಡಗಿಸಿಕೊಂಡಿದೆ. ಇಂಥ ರಾಜಕೀಯ ಕುಟುಂಬದಲ್ಲಿ ಮೇ 13, 1969ರಲ್ಲಿ ಸುಲ್ತಾನ್‌ ಸಲಾಹುದ್ದೀನ್‌ ಓವೈಸಿ ಹಾಗೂ ನಜ್ಮುನ್ನೀಸಾ ಪುತ್ರನಾಗಿ ಜನಿಸಿದರು ಅಸಾದುದ್ದೀನ್‌ ಓವೈಸಿ.

ಓವೈಸಿ ಹುಟ್ಟುವ ಮೊದಲೇ ಅವರ ಅಜ್ಜ ಎಂಐಎಂ ಎಂದಿದ್ದ ಪಕ್ಷವನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯಲು ಆಲ್‌ ಇಂಡಿಯಾ ಮಜ್ಲಿಸ್‌ ಇ ಇತ್ತೆಹದುಲ್ ಮುಸ್ಲಿಮೀನ್ ಎಂದು ಮರುನಾಮಕರಣ ಮಾಡಿದ್ದರು. ಪಕ್ಷಕ್ಕೆ ಹೊಸ ರೂಪವನ್ನೂ ನೀಡಿದ್ದರು. ಅವರ ತಂದೆಯೂ ಓವೈಸಿ ಹುಟ್ಟುವ ಮೊದಲೇ ಅಂದರೆ 1962ರಲ್ಲೇ ಆಂಧ್ರ ಪ್ರದೇಶ ವಿಧಾನಸಭೆಗೆ ಆಯ್ಕೆಯಾಗಿದ್ದರು. 1984ರಲ್ಲಿ ಹೈದರಾಬದ್‌ನಿಂದ ಲೋಕಸಭೆ ಚುನಾವಣೆಗೂ ಸ್ಪರ್ಧಿಸಿದ್ದ ಅವರು ಗೆಲುವು ಸಾಧಿಸಿದ್ದಲ್ಲದೆ 2004ರವರೆಗೂ ಕ್ಷೇತ್ರವನ್ನು ಪ್ರನಿಧಿಸಿದ್ದರು.

ಕಾಲೇಜು ದಿನಗಳಲ್ಲಿ ಓವೈಸಿ ಕ್ರಿಕೆಟ್‌ ಆಟಗಾರ

ಇಂಥಹ ರಾಜಕೀಯ ಕುಟುಂಬದಿಂದ ಬಂದ ಅಸಾದುದ್ದೀನ್‌ ಓವೈಸಿಗೆ ಶಾಲಾ ದಿನಗಳಲ್ಲಿ ಕ್ರಿಕೆಟ್‌ ಎಂದರೆ ಅಚ್ಚುಮೆಚ್ಚು, ಒಸ್ಮಾನಿಯಾ ವಿವಿ ಅಡಿಯಲ್ಲಿ ಬರುವ ನಿಜಾಮ್‌ ಕಾಲೇಜಿನಲ್ಲಿ ಬಿಎ ಓದುತ್ತಿರುವಾಗ ಓವೈಸಿ ಕ್ರಿಕೆಟ್‌ನಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ದಕ್ಷಿಣ ವಲಯದ ಅಂತರ್‌ ವಿವಿ ಕ್ರೀಡಾಕೂಟಗಳಲ್ಲಿ ವೇಗದ ಬೌಲರ್‌ ಆಗಿ ಒಸ್ಮಾನಿಯಾ ವಿವಿಯನ್ನು ಪ್ರತಿನಿಧಿಸಿದ್ದರು.. ದಕ್ಷಿಣ ವಲಯದ ವಿವಿ ತಂಡಕ್ಕೂ ಆಯ್ಕೆಯಾಗಿದ್ದರು.

ಮುಂದೆ ಉನ್ನತ ವ್ಯಾಸಾಂಗಕ್ಕೆ ಲಂಡನ್‌ಗೆ ತೆರಳಿ ಲಿಂಕನ್ಸ್‌ ಇನ್‌ ಕಾಲೇಜು ಸೇರಿಕೊಂಡ ಅಸಾದುದ್ದೀನ್‌ ಓವೈಸಿ ಓದಿನತ್ತ ಹೆಚ್ಚು ಗಮನ ಹರಿಸಿದರು. ಕಾಲೇಜಿನಿಂದ ಕಾನೂನು ಪದವಿ ಪಡೆದು ಬಂದ ಓವೈಸಿ ವೃತ್ತಿಯಿಂದ ವಕೀಲರಾದರು.

ಉರ್ದು, ಹಿಂದಿ, ಇಂಗ್ಲಿಷ್‌ನಲ್ಲಿ ಅರಳು ಹುರಿದಂತೆ ಮಾತನಾಡುವ ಅಸಾದುದ್ದೀನ್‌ ಓವೈಸಿ 1994ರಲ್ಲಿ ಮೊದಲ ಬಾರಿಗೆ ತಮ್ಮ 25ನೇ ವಯಸ್ಸಿನಲ್ಲಿ ಚಾರ್‌ಮಿನಾರ್‌ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. 1967ರಿಂದ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿರುವ ಎಐಎಂಐಎಂನ ಭದ್ರಕೋಟೆ ಚಾರ್‌ಮಿನಾರ್‌ನಲ್ಲಿ ಓವೈಸಿ ನಿರಾಯಾಸವಾಗಿ ಜಯಭೇರಿ ಬಾರಿಸಿದರು.

ಶೇರ್ವಾನಿ, ತಲೆ ಮೇಲೊಂದು ಮುಸ್ಲಿಂ ಟೋಪಿ ತೊಟ್ಟು ಆಂಧ್ರ ವಿಧಾನಸಭೆಗೆ ಕಾಲಿಟ್ಟ ಅಸಾದುದ್ದೀನ್‌ ಓವೈಸಿ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಲಾರಂಭಿಸಿದರು. 1999ರಲ್ಲಿಯೂ ಕಣಕ್ಕಿಳಿದು ಗೆಲುವು ಸಾಧಿಸಿದರು. ಇದೇ ಓವೈಸಿ 2004ರಲ್ಲಿ ಲೋಕಸಭೆ ಚುನಾವಣೆಗೆ ಹೈದರಾಬಾದ್‌ ಕ್ಷೇತ್ರದಿಂದ ಕಣಕ್ಕಿಳಿದರು. ಅವರಿಗಾಗಿ ತಂದೆ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು.

ದಿಲ್ಲಿಗೆ ಕಾಲಿಟ್ಟ ಅಸಾದುದ್ದೀನ್‌ ಓವೈಸಿ

ಈ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮೊದಲ ಬಾರಿಗೆ ದಿಲ್ಲಿಗೆ ಕಾಲಿರಿಸಿದರು ಓವೈಸಿ. ಈ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಮುದ್ರೆ ಒತ್ತಿದರು ಅಸಾದುದ್ದೀನ್‌ ಓವೈಸಿ. 2009, 2014, 2019ರ ಚುನಾವಣೆಯಲ್ಲೂ ಸ್ಪರ್ಧಿಸಿ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ ಅವರು, ಇದೀಗ 5ನೇ ಬಾರಿಗೆ ಲೋಕಸಭೆ ಪ್ರವೇಶಿಸಲು ನೋಡುತ್ತಿದ್ದಾರೆ.

ಸಂಸತ್‌ನ ಹೊರಗೆ ಹಾಗೂ ಒಳಗೆ ಸತತವಾಗಿ ಸದ್ದು ಮಾಡುತ್ತಲೇ ಇರುವ ಓವೈಸಿ ಅವರಿಗೆ 2014ರಲ್ಲಿ ಸಂಸತ್‌ ರತ್ನ ಪ್ರಶಸ್ತಿ ಹಾಗೂ 2022ರಲ್ಲಿ ಲೋಕಮತ್‌ ಪಾರ್ಲಿಮೆಂಟ್‌ ಅವಾರ್ಡ್‌ ಕೂಡ ಸಂದಿವೆ.

ಅಣು ಒಪ್ಪಂದದ ಸಮಯದಲ್ಲಿ ಯುಪಿಎಗೆ ಬೆಂಬಲ

ಹಿರಂಗವಾಗಿ ಸದಾ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಅಂತರ ಕಾಪಾಡಿಕೊಂಡಿರುವ ಅಸಾದುದ್ದೀನ್‌ ಓವೈಸಿ 2008ರಲ್ಲಿ ಅಣು ಒಪ್ಪಂದದ ಸಮಯದಲ್ಲಿ ಯುಪಿಎಯನ್ನು ಬೆಂಬಲಿಸಿದ್ದರು. ಬಹುಮತ ಪರೀಕ್ಷೆಯ ವೇಳೆ ಕಾಂಗ್ರೆಸ್‌ಗೆ ಮತ ಹಾಕಿದ್ದ ಓವೈಸಿ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ಹಾಗೂ ಲಾಲ್‌ ಕೃಷ್ಣ ಅಡ್ವಾಣಿಯವರನ್ನು ಅಧಿಕಾರಕ್ಕೆ ಬರದಂತೆ ತಡೆಯುವುದೇ ತಮ್ಮ ಮೊದಲ ಗುರಿ ಎಂದು ಘೋಷಿಸಿದ್ದರು.

ಇಂಥ ಓವೈಸಿಯನ್ನು 2009ರ ಚುನಾವಣೆಯಲ್ಲಿ ಸೋಲಿಸಲೇಬೇಕು ಎಂದು ಹಲವು ಪಕ್ಷಗಳು ತಂತ್ರ ರೂಪಿಸಿದ್ದವು. ಆ ಚುನಾವಣೆಯಲ್ಲಿ ಹಲವು ಪಕ್ಷಗಳು ಒಟ್ಟಾಗಿ ಉರ್ದು ಪತ್ರಿಕೆ ದಿ ಸಿಯಾಸತ್‌ ಡೈಲಿಯ ಜಹೀದ್‌ ಅಲಿ ಖಾನ್‌ರನ್ನು ಓವೈಸಿ ವಿರುದ್ಧ ಕಣಕ್ಕಿಳಿಸಿದ್ದವು. ಟಿಡಿಪಿ, ಟಿಆರ್‌ಎಸ್‌, ಕಮ್ಯುನಿಸ್ಟ್‌ ಪಕ್ಷಗಳೆಲ್ಲ ಖಾನ್‌ಗೆ ಬೆಂಬಲ ಘೋಷಿಸಿದ್ದವು. ಆದರೆ ಫಲಿತಾಂಶ ಬಂದಾಗ ಓವೈಸಿ 1.10 ಲಕ್ಷಕ್ಕೂ ಅಧಿಕ ಮತಗಳಿಂದ ಭರ್ಜರಿ ಜಯ ದಾಖಲಿಸಿದ್ದರು.

ಇಂಥ ಓವೈಸಿ ಆಗಾಗ ವಿವಾದಗಳಿಗೆ ಒಳಗಾಗುವುದಿದೆ. ಆದರೆ, ದೇಶದ ವಿಷಯ ಬಂದಾಗ ಮಾತ್ರ ಅವರದು ಸ್ಟ್ರೇಟ್‌ ಡ್ರೈವ್‌. ‘ನನ್ನ ಹೋರಾಟ ಏನಿದ್ದರೂ ಭಾರತದ ಸಂವಿಧಾನದ ಮಿತಿಯೊಳಗೆ’ ಎನ್ನುವುದರಿಂದ ಹಿಡಿದು, ‘ಭಾರತದ ಒಳಗೊಳ್ಳುವ ರಾಜಕಾರಣವನ್ನು ಪಾಕಿಸ್ತಾನ ನೋಡಿ ಕಲಿಯಬೇಕು’ ಎಂದು ಇಮ್ರಾನ್‌ ಖಾನ್‌ಗೆ ಬುದ್ಧಿಮಾತು ಹೇಳುವವರೆಗೆ ಅವರ ದೇಶದ ಪರ ಬ್ಯಾಟಿಂಗ್‌ ನಡೆಸಿದ್ದಿದೆ. ಇದೇ ಓವೈಸಿ 2016ರಲ್ಲೊಮ್ಮೆ ದೇಶ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ಬಂಧಿತರಾಗಿದ್ದರು. ಇಸ್ಲಾಮಿಕ್‌ ಸ್ಟೇಟ್‌ನವರು ಎನ್ನಲಾದ ಐದು ಭಯೋತ್ಪಾದಕರಿಗೆ ಕಾನೂನು ಬೆಂಬಲ ನೀಡಿದ ಆರೋಪದ ಮೇಲೆ ಅವರನ್ನು ಜೈಲಿಗಟ್ಟಲಾಗಿತ್ತು.

ಓರ್ವ ತಮ್ಮ ಶಾಸಕ, ಇನ್ನೋರ್ವ ಸಂಪಾದಕ

ಓವೈಸಿ ಅವರ ಓರ್ವ ತಮ್ಮ ಅಕ್ಬರುದ್ದೀನ್‌ ಓವೈಸಿ ಶಾಸಕರಾಗಿದ್ದಾರೆ. ಸದ್ಯ ತೆಲಂಗಾಣ ವಿಧಾನಸಭೆ ಪ್ರತಿನಿಧಿಸುತ್ತಿರುವ ಅಕ್ಬರುದ್ದೀನ್‌ 6ನೇ ಬಾರಿಗೆ ಶಾಸಕರಾಗಿದ್ದಾರೆ. ಅವರ ಇನ್ನೋರ್ವ ತಮ್ಮ ಬರ್ಹಾನುದ್ದೀನ್‌ ಓವೈಸಿ ಇತೆಮಾದ್‌ ಪತ್ರಿಕೆಯ ಸಂಪಾದಕರಾಗಿದ್ದಾರೆ. ಓವೈಸಿ ಅವರು ಹೈದರಾಬಾದ್ ಮೂಲದ ಡೆಕ್ಕನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್‌ ಟೆಕ್ನಾಲಜಿ ಮತ್ತು ಓವೈಸಿ ಹಾಸ್ಪಿಟಲ್‌ ಆಂಡ್‌ ರಿಸರ್ಚ್‌ ಸೆಂಟರ್‌ನ ಅಧ್ಯಕ್ಷರಾಗಿದ್ದಾರೆ.

ಆರು ಮಕ್ಕಳ ತಂದೆ ಓವೈಸಿ

ಅಸಾದುದ್ದೀನ್‌ ಓವೈಸಿ ಫರ್ಹೀನ್‌ ಓವೈಸಿ ಅವರನ್ನು ವಿವಾಹವಾಗಿದ್ದು, ದಂಪತಿಗೆ ಓರ್ವ ಪುತ್ರ ಹಾಗೂ ಐವರು ಪುತ್ರಿಯರಿದ್ದಾರೆ. ಇವರಲ್ಲಿ ಮೂವರಿಗೆ ಮದುವೆಯಾಗಿದ್ದು, ಮೂವರನ್ನೂ ಓವೈಸಿ ಶ್ರೀಮಂತ, ಪ್ರತಿಷ್ಠಿತ ಕುಟುಂಬಗಳಿಗೆ ಮದುವೆ ಮಾಡಿಕೊಟ್ಟಿದ್ದಾರೆ.

ಅಸಾದುದ್ದೀನ್ ಓವೈಸಿ ಚುನಾವಣಾ ಫಲಿತಾಂಶ 

ವರ್ಷಚುನಾವಣೆಸ್ಥಾನಕ್ಷೇತ್ರಫಲಿತಾಂಶ
2024ಲೋಕಸಭಾ ಚುನಾವಣೆಎಂಪಿಹೈದರಾಬಾದ್
awaited
2019ಲೋಕಸಭಾ ಚುನಾವಣೆಎಂಪಿHyderabad
won

ಅಸಾದುದ್ದೀನ್ ಓವೈಸಿ ಪ್ರತಿಸ್ಫರ್ಧಿ ವಿವರ

  • 2024
  • 2019
ಕ್ಷೇತ್ರ ವ್ಯಾಪ್ತಿಯ ವಿವರ : ಹೈದರಾಬಾದ್ (ತೆಲಂಗಾಣ)
ಅಸಾದುದ್ದೀನ್ ಓವೈಸಿ
AIMIMawaited
ಅಭ್ಯರ್ಥಿ ಹೆಸರುಫಲಿತಾಂಶ
ಮಾಧವಿ ಲತಾ ಕೊಂಪೆಲ್ಲಾ
BJPawaited
ಶ್ರೀನಿವಾಸ ಯಾದವ್ ಗಡ್ಡಂ
BRSawaited
ಮೊಹಮ್ಮದ್ ವಲಿಯುಲ್ಲಾ ಸಮೀರ್
CONGawaited
ಕೆ.ಎಸ್.ಕೃಷ್ಣ
BSPawaited
ಅಶೋಕ್ ಕುಮಾರ್ ಮಾಂಬಾ
MTPawaited
ಎಲ್.ಅಶೋಕನಾಥ್
TPJRPawaited
ಅಂದೆ ಉಷಾ ಕಣ್ಣಾ
BMUPawaited
ಅಂಬಿ ಹನುಮಂತ ರಾವ್
SP(I)awaited
ಕ್ರಾಂತಿ ಕುಮಾರ್ ಬಂದೇಲ
INYJPawaited
ಖಾಜಾ ಮೊಯಿನುದ್ದೀನ್
AIMEIEMawaited
ಗಡ್ಡಂ ಹರೀಶ್ ಗೌಡ್
DHRMSMJPawaited
ಜಮೀಲ್ ಸೈಯದ್
AODRPawaited
ಎಂ.ಜಾನ್ಸನ್
AIMEPawaited
ಸರಾಫ್ ತುಳಸಿ ಗುಪ್ತಾ
PEPawaited
ಡಾ.ಜೆ.ಪದ್ಮಜಾ
VCKawaited
ಮೇಕಲ ರಘುಮ ರೆಡ್ಡಿ
YGATLSIPawaited
ರಮೇಶ್ ಕುಮಾರ್ ಮಾತಂಗಿ
SKJLPawaited
ಡಾ.ಲುಬ್ನಾ ಸರ್ವತ್
VTRPawaited
ವಿ.ಶಂಕರ್
YVTPawaited
ಶೇಕ್ ಬಾಷಾ
DABAPawaited
ಸಾಳ್ವೇರು ರಮೇಶ್
INDPJCawaited
ಸಿಲಿವೇರು ನರೇಶ್
TJPawaited
ಅನಿಲ್ ಸೇನ್
INDawaited
ಅಮ್ಜದ್ ಖಾನ್
INDawaited
ಚೈತನ್ಯ ಕುಮಾರ್ ರೆಡ್ಡಿ ಪೆಳ್ಳಕೂರು
INDawaited
ಎಂ.ಕೆ.ಅಹಮದ್
INDawaited
ಜೆ.ಶ್ಯಾಮಸುಂದರ್ ರಾವ್
INDawaited
ಸತ್ತಿ ಶಾಬಾಬು ರೆಡ್ಡಿ
INDawaited
ಸೈಯದ್ ಅನ್ವರ್
INDawaited
NOTA
NOTAawaited

ಪ್ರಮುಖ ಅಭ್ಯರ್ಥಿಗಳು