Please enable javascript.ಗೀತೆಗಳ ಮದರ್ ಮಾಧುರಿ - ಗೀತೆಗಳ ಮದರ್ ಮಾಧುರಿ - Vijay Karnataka

ಗೀತೆಗಳ ಮದರ್ ಮಾಧುರಿ

Vijaya Karnataka Web 9 May 2013, 4:39 am
Subscribe

ನಿರ್ಮಾಪಕ ಕರಣ್ ಜೋಹರ್ ಡಾನ್ಸ್ ಕ್ವೀನ್ ಮಾಧುರಿ ದೀಕ್ಷಿತ್‌ಗೊಂದು ಹೊಸ ವಿಶೇಷಣ ಸೇರಿಸಿದ್ದಾರೆ. ಅವರ ಪ್ರಕಾರ ಮಾಧುರಿ ಚಲನಚಿತ್ರ ಗೀತೆಗಳ ತಾಯಿ.

ಗೀತೆಗಳ ಮದರ್ ಮಾಧುರಿ
ನಿರ್ಮಾಪಕ ಕರಣ್ ಜೋಹರ್ ಡಾನ್ಸ್ ಕ್ವೀನ್ ಮಾಧುರಿ ದೀಕ್ಷಿತ್‌ಗೊಂದು ಹೊಸ ವಿಶೇಷಣ ಸೇರಿಸಿದ್ದಾರೆ. ಅವರ ಪ್ರಕಾರ ಮಾಧುರಿ ಚಲನಚಿತ್ರ ಗೀತೆಗಳ ತಾಯಿ.

ಅವರ ಏ ಜವಾನಿ ಹೈ ದಿವಾನಿ ಚಿತ್ರದಲ್ಲಿ ವಿಶೇಷ ಡ್ಯಾನ್ಸ್ ನಂಬರ್ ಮಾಡಿರುವ ಮಾಧುರಿ ಮೋಡಿ ಮಾಡಿರುವುದರ ಪರಿಣಾಮ ಇದು. ‘ಮಾಧುರಿ ದೀಕ್ಷಿತ್ ನೃತ್ಯದ ರಾಣಿ. ಆಕೆಯ ಹಾಡುಗಳು ಅನನ್ಯ. ಆಕೆ ಮದರ್ ಆಫ್ ಆಲ್ ಎಂಟರ್‌ಟೇನಿಂಗ್ ಸಾಂಗ್ಸ್’ ಎಂದು ತಮ್ಮ ಗಿಪ್ಪಿ ಚಿತ್ರದ ಸ್ಕ್ರೀನಿಂಗ್ ವೇಳೆ ಕರಣ್ ಹೇಳಿದ್ದಾರೆ.

‘ಆಕೆ ಅದನ್ನು (ಡಾನ್ಸ್) ಕಂಡು ಹಿಡಿದರು. ಆವಿಷ್ಕರಿಸಿದರು. ಮತ್ತದನ್ನೇ ಬದುಕುತ್ತಿದ್ದಾರೆ. ಈಗ ಮತ್ತೆ ದೊಡ್ಡ ಪರದೆಗೆ ಮರಳಿದ್ದಾರೆ. ತೆರೆ ಮೇಲೆ ಅವರ ಹಾಡನ್ನು ನೋಡಲು ನಾನು ತುಂಬಾ ಉತ್ಸುಕನಾಗಿದ್ದೇನೆ’ ಎಂದರು.

ತೇಝಾಬ್ ನ ಏಕ್ ದೋ ತೀನ್ ನಂತರ ಹಿಂತಿರುಗಿ ನೋಡದ ಮಾಧುರಿ ನಂತರ ಅನೇಕ್ ಹಿಟ್ ಗೀತೆಗಳನ್ನು ಹಿಂದಿ ಚಲನಚಿತ್ರ ರಂಗಕ್ಕೆ ನೀಡಿದರು. ಹಮ್ ಆಪ್ ಕೆ ಹೈ ಕೌನ್ ಚಿತ್ರದ ದೀದಿ ತೇರ ದೇವರ್ ದೀವಾನ, ದೇವ್ ದಾಸ್ ಚಿತ್ರದ ಮಾರ್ ಡಾಲಾ, ಪುಕಾರ್ ಚಿತ್ರದ ಕೆ ಸೇರ ಸೇರ, ಖಳನಾಯಕ್ ಚಿತ್ರದ ಚೋಲಿ ಕೆ ಪೀಚೆ ಕ್ಯಾ ಹೈ, ರಾಜ ಚಿತ್ರದ ಅಖಿಯಾ ಮಿಲಾವ್ ಹೀಗೆ ಅವರ ಹಿಟ್ ನಂಬರ್‌ಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ