Please enable javascript.ಅದೃಷ್ಟ ಪರೀಕ್ಷೆ - farah karimi - Vijay Karnataka

ಅದೃಷ್ಟ ಪರೀಕ್ಷೆ

Vijaya Karnataka Web 24 Feb 2016, 4:00 am
Subscribe

ಯುವ ನಟಿ ಫರ‌್ಹಾ ಕರಿಮೀ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಹಿಮೇಶ್ ರೇಷಮಿಯಾ ಜತೆಗೆ ಆಕೆ ನಟಿಸಿರುವ ‘ತೇರಾ ಸರೂರ್’ ಸದ್ಯದಲ್ಲೇ ತೆರೆಕಾಣುತ್ತಿದ್ದು, ಫರ‌್ಹಾ ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಕಾತರರಾಗಿದ್ದಾರಂತೆ.

farah karimi
ಅದೃಷ್ಟ ಪರೀಕ್ಷೆ
ಯುವ ನಟಿ ಫರ‌್ಹಾ ಕರಿಮೀ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಹಿಮೇಶ್ ರೇಷಮಿಯಾ ಜತೆಗೆ ಆಕೆ ನಟಿಸಿರುವ ‘ತೇರಾ ಸರೂರ್’ ಸದ್ಯದಲ್ಲೇ ತೆರೆಕಾಣುತ್ತಿದ್ದು, ಫರ‌್ಹಾ ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಕಾತರರಾಗಿದ್ದಾರಂತೆ.

ಹಿಮೇಶ್ ಜತೆಗಿನ ಚಿತ್ರ ತಮಗೆ ವರವಾಗಲಿದೆ ಎನ್ನುವುದು ಅವರ ದೃಢವಾದ ನಂಬಿಕೆ. ಇದಕ್ಕವರು ಸೂಕ್ತ ಕಾರಣವನ್ನೂ ಕೊಡುತ್ತಾರೆ.

ಹಿಮೇಶ್‌ರ ‘ಆಪ್ ಕಾ ಸರೂರ್’ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ ಪಡುಕೋಣೆ ಮತ್ತು ಇದೇ ಶೀರ್ಷಿಕೆಯಡಿ ತೆರೆಕಂಡ ‘ಆಪ್ ಕಾ ಸರೂರ್’ ಚಿತ್ರದಲ್ಲಿ ಪರಿಚಯವಾದ ಹನ್ಸಿಕಾ ಮೋಟ್ವಾನಿ ಇಬ್ಬರೂ ನಾಯಕಿಯರಾಗಿ ದೊಡ್ಡ ಹೆಸರು ಮಾಡುತ್ತಿದ್ದಾರೆ. ಹಾಗಾಗಿ ಹಿಮೇಶ್ ಸಿನಿಮಾ ತಮಗೂ ಅದೃಷ್ಟ ತಂದುಕೊಡುತ್ತದೆ ಎನ್ನುವುದು ಫರ‌್ಹಾ ಸಂಭ್ರಮ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ