ಆ್ಯಪ್ನಗರ

ಐಂದ್ರಿತಾ ರೇ-ದಿಗಂತ್‌ ಅರಿಶಿಣ ಶಾಸ್ತ್ರದ ಚಿತ್ರಗಳನ್ನು ನೋಡಿ

ಬೆಂಗಳೂರಿನ ನಂದಿಬೆಟ್ಟದ ಹತ್ತಿರವಿರುವ ಖಾಸಗಿ ರೆಸಾರ್ಟ್‌ನಲ್ಲಿ ಈ ಜೋಡಿಯ ವಿವಾಹ ನಡೆಯಲಿದೆ

Vijaya Karnataka Web 11 Dec 2018, 7:53 pm
ಈಗಾಗಲೇ ಸಿಂಪಲ್‌ ಆಗಿ ನಿಶ್ಚಿತಾರ್ಥ ಮುಗಿಸಿರುವ ಐಂದ್ರಿತಾ ರೇ ಮತ್ತು ದಿಗಂತ್‌, ಮದುವೆಯನ್ನೂ ಅಷ್ಟೇ ಸರಳವಾಗಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಮಂಗಳವಾರ ಅರಿಶಿಣ ಶಾಸ್ತ್ರ ನೆರವೇರಿದ್ದು, ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
Vijaya Karnataka Web diganth


ಬೆಂಗಳೂರಿನ ನಂದಿಬೆಟ್ಟದ ಹತ್ತಿರವಿರುವ ಖಾಸಗಿ ರೆಸಾರ್ಟ್‌ನಲ್ಲಿ ಈ ಜೋಡಿಯ ವಿವಾಹ ನಡೆಯಲಿದೆ. ಡಿ.12 ರಂದು ಸಾಯಂಕಾಲ 6 ಗಂಟೆಗೆ ದಿಗಿ ಮತ್ತು ಐಂಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಡಿ.15 ರಂದು ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಆರತಕ್ಷತೆ ಹಮ್ಮಿಕೊಳ್ಳಲಾಗಿದೆ.


'ನಾನು ಮತ್ತು ದಿಗಂತ್‌ ಸಿಂಪಲ್‌ ಆಗಿ ಬದುಕುವುದಕ್ಕೆ ಇಷ್ಟಪಡುವವರು. ಆದಷ್ಟು ನಿಸರ್ಗಕ್ಕೆ ತೊಂದರೆ ಆಗದೇ ಇರುವ ರೀತಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಮದುವೆ ಕೂಡ ಹಾಗೆಯೇ ಇರಬೇಕು ಎಂಬ ಆಸೆ ನಮ್ಮದು. ಹಾಗಾಗಿ ನಿಸರ್ಗದ ಮಧ್ಯೆಯೇ ಸತಿಪತಿಗಳಾಗುತ್ತಿದ್ದೇವೆ. ಖಾಸಗಿಯಾಗಿ ಇರಲಿ ಎನ್ನುವ ಕಾರಣಕ್ಕಾಗಿ ರೆಸಾರ್ಟ್‌ ಬುಕ್‌ ಮಾಡಿದ್ದೇವೆ. ಆದರೆ, ಮದುವೆ ಮಾತ್ರ ಇಕೋ ಫ್ರೆಂಡ್ಲಿಯಾಗಿಯೇ ಇರುತ್ತದೆ' ಎಂದು ಐಂದ್ರಿತಾ ರೇ ಹೇಳಿಕೊಂಡಿದ್ದಾರೆ.


ಎರಡು ದಿನಗಳ ಕಾಲ ನಡೆಯಲಿರುವ ವಿವಾಹ ಮಹೋತ್ಸವ ವಿಭಿನ್ನತೆಯಿಂದ ಕೂಡಿದ್ದು, ಎರಡೂ ಕುಟುಂಬದ ಸದಸ್ಯರು ಮತ್ತು ಆತ್ಮೀಯ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ವಿವಿಧ ದೇಶಗಳಲ್ಲಿರುವ ಐಂದ್ರಿತಾ ಸ್ನೇಹಿತೆಯರು ಕೂಡ ಮದುವೆ ಆಗಮಿಸುತ್ತಿದ್ದಾರೆ.


ಐಂದ್ರಿತಾ ಮತ್ತು ದಿಗಂತ್‌ ಎರಡೂ ಕುಟುಂಬಗಳ ಸಂಪ್ರದಾಯದಂತೆ ಮದುವೆ ನಡೆಯುತ್ತಿದ್ದು, ನಟ ಸುದೀಪ್‌, ದರ್ಶನ್‌, ಗಣೇಶ್‌, ಪ್ರೇಮ್‌, ಪ್ರಜ್ವಲ್‌ ದೇವರಾಜ್‌, ನಿರ್ದೇಶಕ ಯೋಗರಾಜ್‌ ಭಟ್‌ ಸೇರಿದಂತೆ ಹಲವು ತಾರೆಯರು ಶುಭ ಮುಹೂರ್ತಕ್ಕೆ ಸಾಕ್ಷಿಯಾಗಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌