ಆ್ಯಪ್ನಗರ

ಮಲ್ಟಿ ಸ್ಟಾರ್ಸ್‌ ಜತೆ ಶ್ರದ್ಧಾ ಶ್ರೀನಾಥ್‌

ಯು ಟರ್ನ್‌ನಿಂದ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ಶ್ರದ್ಧಾ ಶ್ರೀನಾಥ್‌ ಈಗ ಫುಲ್‌ ಬಿಝಿ. ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿರುವ ಅವರು ಈಗ ಕನ್ನಡದಲ್ಲಿ ಎರಡು ಚಿತ್ರಗಳಲ್ಲಿ ನಟಿಸಲಿದ್ದಾರೆ. ಅದರಲ್ಲಿ ಒಂದು ಮಲ್ಟಿ ಸ್ಟಾರ್ಸ್‌ ಚಿತ್ರ ಅನ್ನೋದು ವಿಶೇಷ.

Vijaya Karnataka Web 23 Sep 2016, 4:00 am

ಯು ಟರ್ನ್‌ನಿಂದ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ಶ್ರದ್ಧಾ ಶ್ರೀನಾಥ್‌ ಈಗ ಫುಲ್‌ ಬಿಝಿ. ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿರುವ ಅವರು ಈಗ ಕನ್ನಡದಲ್ಲಿ ಎರಡು ಚಿತ್ರಗಳಲ್ಲಿ ನಟಿಸಲಿದ್ದಾರೆ. ಅದರಲ್ಲಿ ಒಂದು ಮಲ್ಟಿ ಸ್ಟಾರ್ಸ್‌ ಚಿತ್ರ ಅನ್ನೋದು ವಿಶೇಷ.

---

ಶ್ರದ್ಧಾ ಶ್ರೀನಾಥ್‌ ಯು ಟರ್ನ್‌ ಚಿತ್ರದಲ್ಲಿ ನಟಿಸುತ್ತಿರುವಾಗಲೇ ಊರ್ವಿ ಚಿತ್ರದಲ್ಲೂ ಅವಕಾಶ ಪಡೆದುಕೊಂಡರು. ಈಗ ಕನ್ನಡದಲ್ಲಿ ಗೆಳೆಯನ ಗೆಳತಿ ಎಂಬ ಇನ್ನೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ. ಪ್ರಭು ಮತ್ತು ಅಕ್ಷಯ್‌ ಎಂಬ ಇಬ್ಬರು ನಾಯಕ ನಟರ ಜತೆ ಡ್ಯುಯೆಟ್‌ ಹಾಡಲಿದ್ದಾರೆ. ಲವ್‌ ಸ್ಟೋರಿ ಕಿಶೋರ್‌ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರಲಿದೆ. ರೋಮಾಂಟಿಕ್‌ ಕಾಮಿಡಿ ಚಿತ್ರದಲ್ಲಿ ಕಾಲೇಜು ಹುಡುಗಿಯಾಗಿ ಅವರು ನಟಿಸಲಿದ್ದಾರೆ. ಸ್ನೇಹ ಮತ್ತು ಲವ್‌ ಬಗ್ಗೆ ಹೇಳೋ ಕತೆ ಇದೆ.

ಶ್ರದ್ಧಾ ಈಗ ಇನ್ನೊಂದು ಮಲ್ಟಿ ಸ್ಟಾರ್ಸ್‌ ಚಿತ್ರಕ್ಕೂ ಸಹಿ ಮಾಡಿದ್ದಾರೆ. ಇದುವರೆಗೆ ನಾನು ನಟಿಸಿರುವ ಚಿತ್ರಗಳಿಗಿಂತ ಇದು ಬಹಳ ವಿಭಿನ್ನವಾಗಿದೆ ಎಂದಿದ್ದಾರೆ ಶ್ರದ್ಧಾ. ಆದರೆ, ಚಿತ್ರದ ಬಗ್ಗೆ ಈಗಲೇ ಉಳಿದ ವಿವರ ನೀಡಲು ಅವರು ಸಿದ್ಧರಿಲ್ಲ. ತಮಿಳಿನಲ್ಲೂ ಇನ್ನೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ. ಗೌತಮ್‌ ಕಾರ್ತಿಕ್‌ಗೆ ನಾಯಕಿಯಾಗಿ ನಟಿಸುತ್ತಿರೋದು ವಿಶೇಷ. ಈ ಚಿತ್ರವನ್ನು ಕಣ್ಣನ್‌ ನಿರ್ದೇಶನ ಮಾಡಲಿದ್ದಾರೆ. ಉಳಿದವರು ಕಂಡಂತೆ ಚಿತ್ರದ ತಮಿಳು ರಿಮೇಕ್‌ನಲ್ಲೂ ಅವರು ನಟಿಸಿದ್ದಾರೆ. ಚಿತ್ರದ ರಿಲೀಸ್‌ಗೆ ಕಾದಿದ್ದಾರೆ.

ಶ್ರದ್ಧಾ ಶ್ರೀನಾಥ್‌ ಆಪರೇಷನ್‌ ಅಲಮೇಲಮ್ಮ ಚಿತ್ರದ ಶೂಟಿಂಗ್‌ ಮುಗಿಸಿದ್ದಾರೆ. ಇದು ಹಿರೋಯಿನ್‌ ಓರಿಯೆಂಟೆಂಡ್‌ ಸಿನಿಮಾ. ಊರ್ವಿಯಲ್ಲಿ ಸೆಕ್ಸ್‌ ವರ್ಕರ್‌ ಆಗಿ ನಟಿಸಿದ್ದಾರೆ. 'ಸೆಕ್ಸ್‌ ವರ್ಕರ್‌ ಪಾತ್ರವಾಗಿದ್ದರೂ ಅವರ ಪ್ರೊಫೆಷನಲ್‌ ಬಗ್ಗೆ ಏನೂ ತೋರಿಸುತ್ತಿಲ್ಲ. ಅವಳ ಭಾವನೆಗಳ ಬಗ್ಗೆ, ಕುಟುಂಬದ ಬಗ್ಗೆ ತೋರಿಸಲಾಗಿದೆ. ಸೆಕ್ಸ್‌ ವರ್ಕರ್‌ ಬಗ್ಗೆ ಬಹಳ ಸಿನಿಮಾಗಳು ಬಂದಿವೆ. ಆ ರೀತಿಯ ಸಿನಿಮಾ ಇದಲ್ಲ' ಎಂದಿದ್ದಾರೆ ಅವರು.

ಮಣಿರತ್ನಂ ಅವರ ಜತೆ ನಟಿಸಬೇಕನ್ನೋ ಆಸೆ ಈಡೇರಿಸಿಕೊಂಡಿರುವ ಅವರು, ಈಗಾಗಲೇ ಚಿತ್ರದ ಮೊದಲ ಶೆಡ್ಯೂಲ್‌ ಊಟಿಯಲ್ಲಿ ಮುಗಿಸಿ ಬಂದಿದ್ದಾರೆ. ಅಕ್ಟೋಬರ್‌ನಲ್ಲಿ 2ನೇ ಶೆಡ್ಯೂಲ್‌ ಪ್ರಾರಂಭವಾಗಲಿದೆ. ಹೊಸ ಚಿತ್ರಗಳೂ ಮುಂದಿನ ತಿಂಗಳು ಸೆಟ್ಟೇರಲಿದೆ ಎಂದಿದ್ದಾರೆ ಅವರು.

---

ತುಂಬಾ ಒಳ್ಳೆಯ ಆಫರ್‌ಗಳನ್ನು ರಿಜೆಕ್ಟ್ ಮಾಡಬೇಕಾಯ್ತು. ನನ್ನ ಕೆರಿಯರ್‌ ಶುರುವಾಗುತ್ತಿರುವ ಸಮಯದಲ್ಲಿ ಇಂಥ ಪಾತ್ರಗಳನ್ನು ಒಪ್ಪಿಕೊಳ್ಳೋದು ಬೇಡ ಅನ್ನಿಸಿತು. ಹಾಗಂತ ನಾನು ಪಿಕ್ಕಿ ಅಲ್ಲ. ಕತೆ ಅಥವಾ ಪಾತ್ರದಲ್ಲಿ ಕಿಕ್‌ ಇದೆ ಅನ್ನಿಸಬೇಕು. ಅಂಥದ್ದನ್ನು ಒಪ್ಪಿಕೊಳ್ಳುತ್ತಿದ್ದೇನೆ.

-ಶ್ರದ್ಧಾ ಶ್ರೀನಾಥ್‌, ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌