Please enable javascript.ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರದ ಪರದಾಟ - No theatre for national award winning movie Naanu Avanalla Avalu - Vijay Karnataka

ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರದ ಪರದಾಟ

Vijaya Karnataka Web 1 Oct 2015, 3:56 am
Subscribe

ರಾಷ್ಟ್ರ ಪ್ರಶಸ್ತಿಗಳನ್ನು ತಂದುಕೊಟ್ಟ ಲಿಂಗದೇವರು ನಿರ್ದೇಶನದ ‘ನಾನು ಅವನಲ್ಲ ಅವಳು’ ಚಿತ್ರವು ಬಿಡುಗಡೆಯಾದ 5ನೇ ದಿನವೇ ಮಲ್ಟಿಪ್ಲೆಕ್ಸ್‌ನಿಂದ ಎತ್ತಂಗಡಿಯಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಆನ್‌ಲೈನ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

no theatre for national award winning movie naanu avanalla avalu
ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರದ ಪರದಾಟ
ರಾಷ್ಟ್ರ ಪ್ರಶಸ್ತಿಗಳನ್ನು ತಂದುಕೊಟ್ಟ ಲಿಂಗದೇವರು ನಿರ್ದೇಶನದ ‘ನಾನು ಅವನಲ್ಲ ಅವಳು’ ಚಿತ್ರವು ಬಿಡುಗಡೆಯಾದ 5ನೇ ದಿನವೇ ಮಲ್ಟಿಪ್ಲೆಕ್ಸ್‌ನಿಂದ ಎತ್ತಂಗಡಿಯಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಆನ್‌ಲೈನ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುನಾಮಿಯಂತೆ ಬಂದಪ್ಪಳಿಸಿರುವ ಪರಭಾಷಾ ಚಿತ್ರವು ಚಿತ್ರಮಂದಿರವನ್ನು ಕಬಳಿಸಿದೆ. ಕೊಳ್ಳುಬಾಕ ಮನೋಭಾವದಿಂದ ಉತ್ತಮ ಕನ್ನಡ ಚಿತ್ರಗಳಿಗೆ ಮತ್ತೆ ಕೊಡಲಿ ಪೆಟ್ಟು ಬಿದ್ದಿದೆ ಎಂದು ನಿರ್ದೇಶಕ ಲಿಂಗದೇವರು ಬೇಸರ ವ್ಯಕ್ತಪಡಿಸಿದ್ದಾರೆ.

‘ನಾನು ಅವನಲ್ಲ ಅವಳು’ ಚಿತ್ರ ಕಳೆದ ಶುಕ್ರವಾರವಷ್ಟೇ ಬಿಡುಗಡೆಯಾಗಿದೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನಗೊಂಡ ಚಿತ್ರ ತನ್ನೆಡೆಗೆ ಪ್ರೇಕ್ಷಕರನ್ನು ಸೆಳೆದಿತ್ತು. ಅಷ್ಟರಲ್ಲಾಗಲೇ ಚಿತ್ರಮಂದಿರಗಳಿಂದ ತೆಗೆಯಲಾಗುತ್ತಿದೆ. ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನೋಡಬೇಕೆಂದಿದ್ದ ಪ್ರೇಕ್ಷಕರಿಗೆ ನಿರಾಶೆ ಉಂಟಾಗಿದೆ.

ತೆಲುಗು ಮತ್ತು ತಮಿಳು ಭಾಷೆಗಳೆರಡರಲ್ಲೂ ತೆರೆ ಕಂಡಿರುವ ಪುಲಿ ಮತ್ತು ದರ್ಶನ್ ಅಭಿನಯದ ಐರಾವತ ಚಿತ್ರಗಳು ಸುಮಾರು 400 ಕ್ಕೂ ಹೆಚ್ಚು ಚಿತ್ರಮಂದಿರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿವೆ. ‘ಎರಡು ದೊಡ್ಡ ಬಜೆಟ್‌ನ ಸಿನಿಮಾಗಳ ಬಲದ ಮುಂದೆ ನಾವು ಸೋಲಬೇಕಾಗಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಸ್ಥಳೀಯ ಭಾಷೆಗೆ, ಜನರಿಗೆ ಸ್ಪಂದಿಸಬೇಕಿತ್ತು. ಲಾಭ ಮಾಡಿಕೊಂಡ ಇವರು ಸಾಮಾಜಿಕ ಕಾಳಜಿಗೂ ಸ್ಪಂದಿಸಬೇಕು ಅಂತ ಕಾನೂನೇ ಇದೆ. ನಾವು ನೂರಾರು ಚಿತ್ರಮಂದಿರಗಳನ್ನು ಕೊಡಿ ಎಂದು ಕೇಳುತ್ತಿಲ್ಲ. ಒಂದು ಶೋ ಅನ್ನೂ ಕೊಡೋಕೆ ಆಗೋಲ್ಲ ಅಂದ್ರೆ ಹೇಗೆ?’ ಎಂದು ಪ್ರಶ್ನಿಸುತ್ತಾರೆ ನಿರ್ದೇಶಕ.

ಈ ಚಿತ್ರ ಶುಕ್ರವಾರ ರಿಲೀಸ್ ಆಗಿದೆ. ಒಂದು ದಿನ ಸ್ಟ್ರೈಕ್ ಅಂತ ಶೋ ಇರಲಿಲ್ಲ. ಭಾನುವಾರದ ನಂತರವೇ ಎಲ್ಲರಿಗೂ ಸಿನಿಮಾದ ಬಗ್ಗೆ ಗೊತ್ತಾಗೋದು. ಮೂರು ದಿನಗಳಲ್ಲಿ ಎತ್ತಂಗಡಿ ಮಾಡುತ್ತಾರೆ ಅಂದ್ರೆ ಹೇಗೆ ಅನ್ನೋದು ಅವರ ಪ್ರಶ್ನೆ.

‘ಇದರ ಜತೆ ಕನ್ನಡ ಚಿತ್ರರಂಗನಾದ್ರೂ ಪ್ರೋತ್ಸಾಹಿಸಬಹುದಿತ್ತು. ಒಳ್ಳೆಯ ಚಿತ್ರಗಳಿರುವಾಗ ತಮ್ಮ ಚಿತ್ರವನ್ನು ಮುಂದಕ್ಕೆ ಹಾಕಬಹುದಿತ್ತು. ಅಥವಾ ನಮ್ಮಂಥವರ ಸಿನಿಮಾನ ಡಿಸ್ಟರ್ಬ್ ಮಾಡೋದು ಬೇಡ ಅಂತ ಒಂದು 10 ಚಿತ್ರಮಂದಿರಗಳನ್ನಾದರೂ ಬಿಟ್ಟುಕೊಡಬಹುದಿತ್ತು. ಅದಾಗಲಿಲ್ಲ. ಪ್ರತಿಭಟನೆ ಮಾಡೋಕೆ ನಮ್ಮದು ದೊಡ್ಡ ಸಂಘಟನೆ ಅಲ್ಲ. ನಾವು ಸ್ಟಾರ್ ನಟರಲ್ಲ. ಕಂಪ್ಲೇಟ್ ಮಾಡೋಕೂ ಇಲ್ಲಿ ಅವಕಾಶ ಇಲ್ಲ. ಏನು ಮಾಡೋದು ಅಂತ ಗೊತ್ತಾಗುತ್ತಿಲ್ಲ’ ಎಂದು ನೊಂದು ನುಡಿದಿದ್ದಾರೆ. ಈಗ ಫಿಲ್ಮ್ ಚೇಂಬರ್‌ಗೆ ಮನವಿ ಸಲ್ಲಿಸಿರುವ ಲಿಂಗದೇವರು ತಮ್ಮ ಚಿತ್ರವನ್ನು ಉಳಿಸಿಕೊಳ್ಳಲು ಓಡಾಡುತ್ತಿದ್ದಾರೆ.

ನಿರ್ಲಕ್ಷ್ಯಕ್ಕೊಳಗಾದ ಸಮುದಾಯದ ಬಗ್ಗೆ ಸಮಾಜದಲ್ಲಿ ಮನಪರಿವರ್ತನೆ ಮಾಡುತ್ತಿರುವ ಚಿತ್ರ ಜನರಿಗೆ ಸರಿಯಾಗಿ ತಲುಪದೆ ವ್ಯರ್ಥವಾಗುತ್ತಿದೆ. ಸರಕಾರ ಮತ್ತು ಚಿತ್ರರಂಗ ಸರಿಯಾದ ರೀತಿಯಲ್ಲಿ ಈ ಸಮಸ್ಯೆಗೆ ಸ್ಪಂದಿಸಬೇಕಾದ ಅಗತ್ಯವಿದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ