Please enable javascript.ಶತಕದ ರವಿಚೇತನ್ - Ravi Chetan century - Vijay Karnataka

ಶತಕದ ರವಿಚೇತನ್

Vijaya Karnataka Web 17 Dec 2015, 4:19 am
Subscribe

ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ರವಿ ಚೇತನ್, ನೂರು ಚಿತ್ರಗಳನ್ನು ಪೂರೈಸುತ್ತಿದ್ದಾರೆ. ಸುದೀಪ್ ಅಭಿನಯದ ಕೋಟಿಗೊಬ್ಬ -2 ರವಿಚೇತನ್ ಅವರ ನೂರನೇ ಸಿನಿಮಾ.

ravi chetan century
ಶತಕದ ರವಿಚೇತನ್
ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ರವಿ ಚೇತನ್, ನೂರು ಚಿತ್ರಗಳನ್ನು ಪೂರೈಸುತ್ತಿದ್ದಾರೆ. ಸುದೀಪ್ ಅಭಿನಯದ ಕೋಟಿಗೊಬ್ಬ -2 ರವಿಚೇತನ್ ಅವರ ನೂರನೇ ಸಿನಿಮಾ. ವಿಷ್ಣುವರ್ಧನ್ ಅವರ ಕೋಟಿಗೊಬ್ಬ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಪರಿಚಯವಾದ ಇವರು, ಅದೇ ಹೆಸರಿನ ಸಿನಿಮಾದ ಮೂಲಕ ಶತಕ ಸಿಡಿಸಿದ್ದಾರೆ.

ಪೊಲೀಸ್ ಆಫೀಸರ್, ಖಳ ನಟ, ಸಂತ ಲಾರೆನ್ಸ್, ಮಂಗಳ ಮುಖಿ ಹೀಗೆ ನಾನಾ ವೇಷಗಳಲ್ಲಿ ಕಾಣಿಸಿಕೊಂಡಿರುವ ರವಿ ಚೇತನ್, ಈಗ ಮತ್ತೊಂದು ಸಾಹಸಕ್ಕೂ ಕೈ ಹಾಕಿದ್ದಾರೆ. ಮೀಟ್ ಅಂಡ್ ಈಟ್ ಹೆಸರಿನ ರೆಸ್ಟೋರೆಂಟ್ ಪ್ರಾರಂಭಿಸಿದ್ದಾರೆ. ಸಿನಿಮಾ ಮತ್ತು ಹೊಟೇಲ್ ಎರಡನ್ನೂ ಒಟ್ಟಿಗೆ ನಿಭಾಯಿಸುವುದಾಗಿ ಹೇಳಿದ್ದಾರೆ. ಜತೆಗೆ ಒಳ್ಳೊಳ್ಳೆ ಪಾತ್ರಗಳು ಬಂದಾಗ ಖಂಡಿತಾ ನಟಿಸುತ್ತೇನೆ ಅಂತಾರೆ.

ವಿಷ್ಣುವರ್ಧನ್, ಶಿವರಾಜ್ ಕುಮಾರ್, ಸುದೀಪ್ ಹೀಗೆ ಸಾಕಷ್ಟು ಸ್ಟಾರ್ ನಟರ ಜತೆ ಗುರುತಿಸಿಕೊಂಡಿರುವ ರವಿ ಚೇತನ್ ಸಿಲಿಬ್ರೆಟಿ ಕ್ರಿಕೆಟ್ ಲೀಗ್‌ನ ಸದಸ್ಯ ಕೂಡ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ