Please enable javascript.ರಿಂಗ್‌ರೋಡ್ ರಿಲೀಸ್‌ ಅತಂತ್ರ - ring road movie release problem - Vijay Karnataka

ರಿಂಗ್‌ರೋಡ್ ರಿಲೀಸ್‌ ಅತಂತ್ರ

Vijaya Karnataka Web 1 Jul 2015, 4:00 am
Subscribe

ಹುಡುಗಿಯರ ಸಿನಿಮಾ ಎಂದು ಕ್ರೇಜ್ ಹುಟ್ಟಿಸಿದ ‘ರಿಂಗ್‌ರೋಡ್’ ಚಿತ್ರ ತುಂಬ ಚರ್ಚೆಗೀಡಾಗಿದೆ. ಜುಲೈ 10ಕ್ಕೆ ಬಿಡುಗಡೆ ಆಗುವುದು ಡೌಟು ಎಂಬ ಮಾಹಿತಿಯೂ ಹೊರಬಿದ್ದಿದೆ.

ring road movie release problem
ರಿಂಗ್‌ರೋಡ್ ರಿಲೀಸ್‌ ಅತಂತ್ರ
* ಶರಣು ಹುಲ್ಲೂರು
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ರಿಂಗ್‌ರೋಡ್’ ಸಿನಿಮಾ ಇದೇ ಜುಲೈ 10ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ, ರಿಲೀಸ್ ಆಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಕಾರಣ, ಸೆನ್ಸಾರ್ ಮಂಡಳಿಯು ಚಿತ್ರದ ಪೋಸ್ಟರ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಅದೂ ಸೆನ್ಸಾರ್ ಆಗಿ ಬರೋಬ್ಬರಿ ಎರಡೂವರೆ ತಿಂಗಳ ಬಳಿಕ.

ಸಾಮಾನ್ಯವಾಗಿ ಟೈಟಲ್ ಜತೆ ಟ್ಯಾಗ್‌ಲೈನ್ ಅಳವಡಿಸುವುದು ಕನ್ನಡ ಚಿತ್ರೋದ್ಯಮದಲ್ಲಿ ಕಾಮನ್. ಟ್ಯಾಗ್‌ಲೈನ್ ಇಲ್ಲದೇ ಸಿನಿಮಾಗಳು ಬಿಡುಗಡೆ ಆಗಿದ್ದು ಕಡಿಮೆ. ಅದೇ ಹಾದಿಯಲ್ಲೇ ‘ರಿಂಗ್‌ರೋಡ್’ ತಂಡ ಸಾಗಿತ್ತು. ಟೈಟಲ್ ಜತೆ ‘ಇದು ಸುಮಾಳ ಕತೆ’ ಎಂಬ ಟ್ಯಾಗ್‌ಲೈನ್ ಇಟ್ಟಿತ್ತು. ಇದೇ ಈಗ ಆಕ್ಷೇಪಣೆಗೆ ಕಾರಣ ಆಗಿದೆ. ಟ್ಯಾಗ್‌ಲೈನ್ ತೆಗೆದು ಸಿನಿಮಾ ಬಿಡುಗಡೆ ಮಾಡಲು ಸೆನ್ಸಾರ್ ಮಂಡಳಿಯ ಅಧಿಕಾರಿ ಕಟ್ಟಪ್ಪಣೆ ವಿಧಿಸಿದ್ದರಿಂದ, ಚಿತ್ರತಂಡ ಇಕ್ಕಟ್ಟಿಗೆ ಸಿಲುಕಿದೆ.

‘ನಾವು ಜುಲೈ 10ಕ್ಕೆ ಸಿನಿಮಾ ರಿಲೀಸ್ ಮಾಡಲು ಸರ್ವಸಿದ್ಧತೆ ಮಾಡಿದ್ದೆವು. ಮೂವತ್ತು ಲಕ್ಷಕ್ಕೂ ಹೆಚ್ಚು ಹಣ ವ್ಯಯಿಸಿ ಪೋಸ್ಟರ್ ಪ್ರಿಂಟ್ ಹಾಕಿಸಿದ್ದೇವೆ. ಅಲ್ಲದೇ ಕನ್ನಡ ಸ್ಟಾರ್ ನಟರು ಕತೆ ಮೆಚ್ಚಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಕೆಲವು ತಾಂತ್ರಿಕ ತೊಂದರೆ ನಮ್ಮ ಸಿನಿಮಾಗೆ ಅಡೆತಡೆಯುಂಟು ಮಾಡುತ್ತಿದೆ. ಹೀಗಾಗಿ ನಿರ್ದೇಶಕಿ ಸೇರಿದಂತೆ, ಹಲವು ತಂತ್ರಜ್ಞರು ಇದರಿಂದಾಗಿ ಬೇಸರಗೊಂಡಿದ್ದಾರೆ. ಮಹಿಳೆಯರೇ ಸೇರಿ ಮಾಡಿದ ಒಳ್ಳೆಯ ಚಿತ್ರವೊಂದು ತೆರೆ ಕಾಣಲು ಇಷ್ಟೊಂದು ಅಡೆತಡೆಯೇ’ ಎಂದು ಪ್ರಶ್ನೆ ಮಾಡುತ್ತಾರೆ ನಿರ್ಮಾಪಕಿ ರಂಜಿನಿ ರವೀಂದ್ರ.

ಟ್ಯಾಗ್‌ಲೈನ್ ಬಳಸಿ, ಸಿನಿಮಾ ರಿಲೀಸ್ ಮಾಡುತ್ತಿರುವುದು ಇದೇ ಮೊದಲೇನೂ ಅಲ್ಲ. ಸೆನ್ಸಾರ್ ಮಂಡಳಿಯ ಅಧಿಕಾರಿ ನಾಗೇಂದ್ರಸ್ವಾಮಿ ಬಂದ ಮೇಲೆ ಅದೆಷ್ಟೋ ಸಿನಿಮಾಗಳಿಗೆ ಟ್ಯಾಗ್‌ಲೈನ್ ಬಳಸಿದ್ದಾರೆ. ಅದಾವ ಚಿತ್ರಗಳಿಗೂ ಇವರು ಆಕ್ಷೇಪಣೆ ಎತ್ತಿಲ್ಲ. ಹೀಗಾಗಿ ಸಹಜವಾಗಿಯೇ ಚಿತ್ರತಂಡಕ್ಕೆ ಬೇಸರ ತಂದಿದೆ.

ತಡೆ ಹಿಡಿಯುವ ಅಧಿಕಾರ ಇದೆಯಾ?
ಆಕ್ಷೇಪಾರ್ಹ ಟೈಟಲ್ ಇದ್ದರೆ, ಅದನ್ನು ಬದಲಿಸುವಂತೆ ಸೆನ್ಸಾರ್ ಮಂಡಳಿಯು ಸೂಚಿಸಬಹುದು. ಆ ಕೆಲಸವನ್ನು ಈವರೆಗಿನ ಅಧಿಕಾರಿಗಳು ಕಟ್ಟುನಿಟ್ಟಾಗಿ ಮಾಡಿಲ್ಲ. ಕೆಲವು ಸಿನಿಮಾಗಳಿಗೆ ಇದು ಅನ್ವಯವಾಗಿಲ್ಲ. ಹೀಗಾಗಿ ನಿಯಮದ ಅನ್ವಯಕ್ಕೆ ಒಳಪಡುವ ನಿರ್ಮಾಪಕರು ಪೇಚಿಗೆ ಸಿಲುಕಿಕೊಳ್ಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ