ಆ್ಯಪ್ನಗರ

Upendra Interview: ಸದಾಶಿವನಗರದಲ್ಲಿ ಹೊಸ ಮನೆ, ‘ಯುಐ’, ಕನಕದಾಸರ ಸಿನಿಮಾ ಬಗ್ಗೆ ಉಪೇಂದ್ರ ಹೇಳಿದ್ದೇನು?

ರಿಯಲ್‌ ಸ್ಟಾರ್‌ ಉಪೇಂದ್ರ ಇತ್ತೀಚೆಗಷ್ಟೇ ಹೊಸ ಮನೆ ಖರೀದಿಸಿದ್ದಾರೆ. ಜತೆಗೆ ಕನಕದಾಸರ ಪಾತ್ರ ಒಪ್ಪಿಕೊಂಡಿದ್ದಾರೆ. ಈ ಎರಡೂ ವಿಷಯಗಳ ಜತೆಗೆ ತಮ್ಮ ಸಿನಿಮಾಗಳು, ಆಲೋಚನೆ, ಮುಂದಿನ ಯೋಜನೆ ಹೀಗೆ ಹಲವು ವಿಚಾರಗಳನ್ನು ಉಪ್ಪಿ ಲವಲವಿಕೆಯ ಮಾತನಾಡಿದ್ದಾರೆ. ಚಿತ್ರರಂಗಕ್ಕೆ ಬಂದು ಮೂವತ್ತು ವರ್ಷ ಆಗುತ್ತಾ ಬಂದಿರುವ ಬಗ್ಗೆ ಉಪೇಂದ್ರ ಮಾತನಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Vijaya Karnataka 17 Jun 2023, 9:35 am

ಹೈಲೈಟ್ಸ್‌:


  • ಇತ್ತೀಚೆಗಷ್ಟೇ ಹೊಸ ಮನೆ ಖರೀದಿಸಿದ 'ರಿಯಲ್‌ ಸ್ಟಾರ್‌' ಉಪೇಂದ್ರ
  • ಕನಕದಾಸರ ಪಾತ್ರ ಒಪ್ಪಿಕೊಂಡ ಉಪೇಂದ್ರ
  • ಸಿನಿಮಾಗಳು, ಆಲೋಚನೆ, ಮುಂದಿನ ಯೋಜನೆ ಬಗ್ಗೆ ಮಾತನಾಡಿದ ಉಪ್ಪಿ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web upendra new movie
ಹರೀಶ್‌ ಬಸವರಾಜ್‌
ನಟ ಉಪೇಂದ್ರ ಸಂದರ್ಶನ

ಹೊಸ ಮನೆ ಖರೀದಿಸಿದ್ದೀರಿ, ಅದರ ಬಗ್ಗೆ ಸಂತಸವನ್ನು ಹಂಚಿಕೊಳ್ಳಿ.

ಖಂಡಿತ ಖುಷಿಯ ವಿಚಾರ. ಕನಸಲ್ಲಿಯೂ ನಾನು ಸದಾಶಿವನಗರದಲ್ಲಿ ಬಂದು ನೆಲೆಸುತ್ತೇನೆ ಎಂದುಕೊಂಡಿರಲಿಲ್ಲ. ಸದಾಶಿವನಗರ ಅಂದರೆ ಅಣ್ಣಾವ್ರ ಮನೆಗೆ ಬರುತ್ತಿದ್ದ ನೆನಪು. ಈಗ ಮನೆ ತೆಗೆದುಕೊಂಡಿರುವ ಪಕ್ಕದ ರಸ್ತೆಯಲ್ಲಿ ಸಿನಿಮಾಗಳನ್ನು ಚಿತ್ರೀಕರಿಸಿದ್ದೇನೆ. ಅಷ್ಟು ಬಿಟ್ಟರೆ ಬೇರೆ ಏನೂ ಗೊತ್ತಿರಲಿಲ್ಲ. ಈಗ ಇಲ್ಲಿಯೇ ಮನೆ ತೆಗೆದುಕೊಂಡು ವಾಸ ಮಾಡಲು ಆರಂಭಿಸಿದ್ದೇನೆ. ಇವೆಲ್ಲವೂ ಮಣ್ಣಿನ ಋುಣ ಎನ್ನಬಹುದು. ಅದೃಷ್ಟ ನನ್ನ ಹಣೆಯಲ್ಲಿ ಬರೆದಿತ್ತು, ಆಗಿದೆ ಅಷ್ಟೇ.

‘ಯುಐ’ ಸಿನಿಮಾ ಯಾವ ಹಂತದಲ್ಲಿದೆ?

25 ದಿನಗಳ ಚಿತ್ರೀಕರಣ ಬಾಕಿ ಇದೆ, ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಜತೆ ಜತೆಯಲ್ಲಿಯೇ ಸಾಗುತ್ತಿದೆ. ಜತೆಗೆ ಗ್ರಾಫಿಕ್ಸ್‌ ಕೆಲಸ ಹೆಚ್ಚಾಗಿರುವುದರಿಂದ ಕೆಲ ತಿಂಗಳುಗಳು ಹಿಡಿಯಲಿದೆ.

ಚಿತ್ರರಂಗಕ್ಕೆ ಬಂದು ಮೂವತ್ತು ವರ್ಷ ಆಗುತ್ತಾ ಬಂದಿದೆ. ಈ ಬದಲಾವಣೆಗಳನ್ನು ಹೇಗೆ ಗುರುತಿಸುತ್ತೀರಿ?

ತುಂಬಾ ಬದಲಾವಣೆಗಳಾಗಿವೆ. ಆದರೆ ಆ ಬದಲಾವಣೆಗಳಿಂದ ಒಳ್ಳೆಯ ಸಾರವನ್ನು ಕಳೆದುಕೊಂಡಿದ್ದೇವೆ ಎನಿಸುತ್ತದೆ. ಆಗೆಲ್ಲಾಒಂದು ದೋಸೆ ತಿನ್ನುವುದೇ ಒಂದು ಖುಷಿ, ಈಗ ಅದು ಸಾಮಾನ್ಯವಾಗಿಬಿಟ್ಟಿದೆ. ಸಿನಿಮಾ ಕೂಡಾ ಹಾಗೆಯೇ. ಬಹಳ ಕಷ್ಟಪಟ್ಟು ಮಾಡುತ್ತಿದ್ದೆವು. ರಿಲೀಸ್‌ ಆದಾಗ ಏನೋ ಥ್ರಿಲ್‌, ಆನಂದವಾಗುತ್ತಿತ್ತು. ಲೈವ್‌ ಸೌಂಡ್ಸ್‌, ನೇರವಾಗಿ ರೀರೆಕಾರ್ಡಿಂಗ್‌ ಮಾಡುತ್ತಿದ್ದೆವು. ಈಗ ಅವನ್ನೆಲ್ಲಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎನಿಸುತ್ತದೆ.

'Real Star' Upendra: 'ಕನಕದಾಸ' ಆಗಲಿರುವ ಉಪೇಂದ್ರ; ನಾಗಣ್ಣ ಜೊತೆ ಮತ್ತೊಂದು ಸಿನಿಮಾ

ಉಪೇಂದ್ರ ಸಿನಿಮಾಗಳೆಂದರೆ ಡಿಫರೆಂಟ್‌ ಎಂಬ ಮಾತು ಇದೆ. ಅದನ್ನು ಜನ ರಿಸೀವ್‌ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ಹೇಗೆ ಬರುತ್ತದೆ?

ನಾನು ಬೇರೆ ಏನನ್ನೂ ಯೋಚನೆ ಮಾಡಲು ಹೋಗುವುದಿಲ್ಲ. ನನಗೆ ಇಷ್ಟವಾದರೆ ಮತ್ತು ಜನರಿಗೆ ಇದು ಹೊಸ ವಿಷಯ ಅನಿಸಿದರೆ ಅದನ್ನು ಹೇಳುತ್ತೇನೆ. ಕೆಲ ಬಾರಿ ರಿಸ್ಕ್‌ ಅನಿಸುತ್ತದೆ. ಆದರೆ, ಅದೇ ನನಗೆ ಸುಲಭ ಎಂದು ಸಹ ಅನಿಸುತ್ತದೆ.

ನಿಮ್ಮ ಪ್ರಜಾಕೀಯದ ಉದ್ದೇಶ ಜನರನ್ನು ರೀಚ್‌ ಆಗಿದೆ ಎನಿಸುತ್ತದಾ?

ಖಂಡಿತಾ ಆಗಿದೆ. ಆದರೆ ಜನರಿಗೆ ಅಷ್ಟು ಪರಿಶುದ್ಧವಾದ ವ್ಯವಸ್ಥೆ ಬರುತ್ತದಾ ಎಂಬ ಅನುಮಾನ. ಹಾಗಾಗಿ ಅದು ಜಾರಿಗೆ ಬರಲು ಆಗುತ್ತಿಲ್ಲ. ವಿಶೇಷ ಎಂದರೆ ನನ್ನ ಮೂಲ ಉದ್ದೇಶವೇ ಪ್ರಜಾಕೀಯ ಆಗಿತ್ತು. ಸಿನಿಮಾದಲ್ಲಿ ಸಕ್ಸಸ್‌ ಆದರೆ ಇಲ್ಲೂ ಏನನ್ನಾದರೂ ಹೇಳಬಹುದು ಎಂದು ಸಿನಿಮಾ ರಂಗದಲ್ಲಿ ಸಕ್ರಿಯನಾದೆ.

ಕನಕದಾಸರ ಪಾತ್ರವನ್ನು ಒಪ್ಪಿಕೊಂಡಿದ್ದೀರಿ. ಅವರು ಈ ಹೊತ್ತಿಗೆ ಎಷ್ಟು ಪ್ರಸ್ತುತ?

ಕನಕದಾಸರು ಎಲ್ಲಾ ಕಾಲಕ್ಕೂ ಪ್ರಸ್ತುತ. ಆಗ ಕುಲ ಕುಲ ಎಂದು ಹೊಡೆದಾಡಬೇಡಿ ಎಂದಿದ್ದರು. ಈಗಲೂ ಅದನ್ನೇ ಹೇಳುತ್ತಿದ್ದೇವೆ. ನಾಗಣ್ಣ ಮತ್ತು ಭಾರವಿ ಬಂದು ಕಥೆ ಹೇಳಿದಾಗ ಥ್ರಿಲ್‌ ಆದೆ. ಕನಕದಾಸರು ಒಬ್ಬ ವೀರ ಯೋಧ ಕೂಡ. ಅಂತಹ ಪಾತ್ರ ನನ್ನನ್ನು ಹುಡುಕಿಕೊಂಡು ಬಂತಲ್ಲ ಎಂದು ಖುಷಿಯಿಂದ ಒಪ್ಪಿಕೊಂಡೆ. ಸಾಮಾಜಿಕವಾಗಿ ಸಾಕಷ್ಟು ವಿಷಯಗಳನ್ನು ಈ ಸಿನಿಮಾದಲ್ಲಿ ಹೇಳುತ್ತಿದ್ದೇವೆ. ಇದು ನನಗೆ ಸಂಪೂರ್ಣ ಹೊಸ ಅನುಭವದ ಸಿನಿಮಾ.

'ಲವ್‌ಲಿ' ವಸಿಷ್ಠ ಸಿಂಹಗೆ ಸಾಥ್ ನೀಡಿದ ರವಿಚಂದ್ರನ್- ಉಪೇಂದ್ರ; ಪತಿಗೆ ಹಾರೈಸಿದ ಹರಿಪ್ರಿಯಾ

ಇತ್ತೀಚಿನ ದಿನಗಳಲ್ಲಿ ಕಂಟೆಂಟ್‌ ಬಗ್ಗೆ ಹೆಚ್ಚಿನ ಮಾತುಗಳು ಕೇಳಿಬರುತ್ತಿವೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯ?

ಕಂಟೆಂಟ್‌ ಯಾವತ್ತಿಗೂ ಕಿಂಗ್‌. ಆ ಕಾಲದಿಂದ ಈ ಕಾಲಕ್ಕೂ ಕಂಟೆಂಟ್‌ ಗಟ್ಟಿಯಾಗಿದ್ದರೆ ಮಾತ್ರ ಸಿನಿಮಾ ಮಾಡಲು ಸಾಧ್ಯ. ಕಂಟೆಂಟ್‌ ಬಗ್ಗೆ ಈಗಲ್ಲ, ಯಾವಾಗಲೂ ಮಾತನಾಡಲೇಬೇಕು. ಸಿನಿಮಾ ಮಾಡುವುದು ಸುಲಭ, ಕಥೆ ಮಾಡುವುದು ಕಷ್ಟ ಎಂಬುದು ನನ್ನ ಅಭಿಪ್ರಾಯ.

ನಾಯಕ ಉಪೇಂದ್ರ, ನಿರ್ದೇಶಕ ಉಪೇಂದ್ರ ಇವರಿಬ್ಬರಲ್ಲಿ ಯಾರು ಇಷ್ಟ?

ನಿರ್ದೇಶಕ ಉಪೇಂದ್ರನೇ ಇಷ್ಟ.

UI: ಉಪ್ಪಿ ಯೋಚನೆಗಳೇ ವಿಭಿನ್ನ: ‘ಯುಐ’ ಚಿತ್ರದಲ್ಲಿ ಹೊಸ ಸಂಗೀತ ಲೋಕವೇ ಸಿಗಬಹುದು - ಅಜನೀಶ್ ಲೋಕನಾಥ್

ಕೃತಕ ಬುದ್ಧಿಮತ್ತೆ ಸಿನಿಮಾ ಕ್ಷೇತ್ರಕ್ಕೂ ಕಾಲಿಡುತ್ತಿದೆ. ಹಾಲಿವುಡ್‌ನಲ್ಲಿಇದರ ಸಂಬಂಧ ಚರ್ಚೆಗಳು ನಡೆಯುತ್ತಿವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?

ಎಚ್ಚರವಾಗಿರಬೇಕು, ಹೆಚ್ಚೆಚ್ಚು ತಿಳಿದುಕೊಳ್ಳಬೇಕು ಮತ್ತು ಅದರ ಜತೆ ಹೋರಾಡುವಂತಹ ಶಕ್ತಿಯನ್ನು ಗಳಿಸಿಕೊಳ್ಳಬೇಕು. ನಾನು ಅದರ ಬಗ್ಗೆ ತಿಳಿದುಕೊಳ್ಳಲು ಹೆಚ್ಚೆಚ್ಚು ಓದುತ್ತಿದ್ದೇನೆ.

" ‘ಯುಐ’ ಸಿನಿಮಾದಲ್ಲಿ ಬೇರೆಯದ್ದೇ ಲೋಕವನ್ನು ಜನರಿಗೆ ತೋರಿಸಲು ಪ್ರಯತ್ನಪಡುತ್ತಿದ್ದೇನೆ. ವಿಷುಯಲಿ ಸಿನಿಮಾ ಬೇರೆಯದ್ದೇ ಫಾರ್ಮ್ಯಾಟ್‌ನಲ್ಲಿದೆ. ಹೊಸ ಪ್ರಯತ್ನ ಮಾಡಿದ್ದೇನೆ, ಜನರಿಗೆ ಯಾವ ರೀತಿ ಇಷ್ಟವಾಗುತ್ತದೆ ಎಂಬುದನ್ನು ಕಾದು ನೋಡಬೇಕು" ಎಂದಿದ್ದಾರೆ ನಟ, ನಿರ್ದೇಶಕ ಉಪೇಂದ್ರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌