Please enable javascript.Actor Anushka Shetty Age,ಕನ್ನಡ ನಿರ್ಮಾಪಕನ ಜೊತೆ Anushka Shetty ಮದುವೆ? 42ನೇ ವಯಸ್ಸಿನಲ್ಲಾದ್ರೂ ವಿವಾಹ ಆಗ್ತಾರಾ? - actress anushka shetty marriage rumors with kannada producer - Vijay Karnataka

ಕನ್ನಡ ನಿರ್ಮಾಪಕನ ಜೊತೆ Anushka Shetty ಮದುವೆ? 42ನೇ ವಯಸ್ಸಿನಲ್ಲಾದ್ರೂ ವಿವಾಹ ಆಗ್ತಾರಾ?

Authored byಪದ್ಮಶ್ರೀ ಭಟ್ | Vijaya Karnataka Web 17 May 2024, 3:43 pm
Subscribe

ತೆಲುಗು, ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಸ್ಟಾರ್ ನಟರ ಜೊತೆ ನಟಿಸಿ, ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವ ಅನುಷ್ಕಾ ಶೆಟ್ಟಿ ಮದುವೆ ಆಗಲಿದ್ದಾರಂತೆ. ಈಗಾಗಲೇ ಸಾಕಷ್ಟು ಬಾರಿ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಗಾಳಿಸುದ್ದಿ ಕೇಳಿಬಂದಿತ್ತು. ಈಗ ಕನ್ನಡ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ ಆಗಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. ಲೇಖನ ಓದಿ.

ಹೈಲೈಟ್ಸ್‌:

  • ದೊಡ್ಡ ಮಟ್ಟದ ಅಭಿಮಾನಿ ಬಳಗ ಹೊಂದಿರುವ ಅನುಷ್ಕಾ ಶೆಟ್ಟಿ
  • 42 ವರ್ಷದ ಅನುಷ್ಕಾ ಶೆಟ್ಟಿ ಮದುವೆ ಆಗಲಿದ್ದಾರಂತೆ
  • ಕನ್ನಡಿಗನನ್ನು ಮದುವೆ ಆಗಲಿದ್ದಾರಾ ಅನುಷ್ಕಾ ಶೆಟ್ಟಿ?
anushka shetty
ಅನುಷ್ಕಾ ಶೆಟ್ಟಿ ಅವರಿಗೆ ಮದುವೆಯಾಗಲಿದೆ, ಆ ಹೀರೋ ಜೊತೆಗೆ, ಆ ನಿರ್ದೇಶಕ, ಆ ನಿರ್ಮಾಪಕನ ಜೊತೆಗೆ ಮದುವೆ ನಿಶ್ಚಿಯವಾಗಿದೆ ಅಂತ ಆಗಾಗ ಮಾತು ಕೇಳಿಬರುತ್ತಿರುತ್ತದೆ. 42 ವರ್ಷದ ಅನುಷ್ಕಾ ಶೆಟ್ಟಿ ಇನ್ನೂ ಮದುವೆಯಾಗಿಲ್ಲ.


ಅನುಷ್ಕಾ ಶೆಟ್ಟಿ ಮದುವೆ ಚರ್ಚೆ

ನಟ ಪ್ರಭಾಸ್, ಅನುಷ್ಕಾ ಶೆಟ್ಟಿ ಪ್ರೇಮಿಗಳು, ಇವರಿಬ್ಬರು ಮದುವೆ ಆಗ್ತಾರೆ ಅಂತ ಹೇಳಲಾಗಿತ್ತು. ಅದಿನ್ನೂ ನಿಜವಾಗಿಲ್ಲ. ಈಗ ಅನುಷ್ಕಾ ಶೆಟ್ಟಿ ಅವರು 42 ವರ್ಷದ ಕನ್ನಡ ನಿರ್ಮಾಪಕನ ಜೊತೆ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಈ ಥರದ ಗಾಳಿಸುದ್ದಿ ಹೇಗೆ ಹರಡಿತೋ ಏನೋ! ಟಾಲಿವುಡ್ ಅಂಗಳದಲ್ಲಿ ಅನುಷ್ಕಾ ಶೆಟ್ಟಿ ಮದುವೆ ಚರ್ಚೆ ಜೋರಾಗಿ ಕೇಳಿ ಬರುತ್ತಿದೆ. ಈ ಬಗ್ಗೆ ಅನುಷ್ಕಾ ಅಂತೂ ಪ್ರತಿಕ್ರಿಯೆ ನೀಡಿಲ್ಲ.


‘ಬಾಹುಬಲಿ’ ಸಿನಿಮಾ ನಾಯಕಿ

‘ಬಾಹುಬಲಿ’ ಸಿನಿಮಾ ನಂತರದಲ್ಲಿ ಅನುಷ್ಕಾ ಶೆಟ್ಟಿ ಸಿನಿಮಾಗಳ ಸಂಖ್ಯೆ ಕಡಿಮೆಯಾಯ್ತು. ಈಗ ವರ್ಷಕ್ಕೆ ಎರಡು ಸಿನಿಮಾ ಮಾಡುವ ಅನುಷ್ಕಾ ಮದುವೆ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.


ನಟ ಪ್ರಭಾಸ್‌ ಲೈಫ್‌ಗೆ 'ಸ್ಪೆಷಲ್' ವ್ಯಕ್ತಿಯ ಎಂಟ್ರಿ! ಮದುವೆ ಆಗ್ತಿದ್ದಾರಾ 'ಡಾರ್ಲಿಂಗ್' ಹೀರೋ?
ಎರಡು ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿ ಅಭಿನಯ

ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿಯ ಹೊಸ ಚಿತ್ರದ ಪೋಸ್ಟರ್‌ ಅನಾವರಣಗೊಂಡಿದೆ. ‘ಘಾಟಿ’ ಎಂಬ ಶೀರ್ಷಿಕೆಯ ಈ ಮಹಿಳಾ ಪ್ರಧಾನ ಚಿತ್ರವನ್ನು ಕ್ರಿಶ್‌ ನಿರ್ದೇಶನ ಮಾಡುತ್ತಿದ್ದಾರೆ. ಇದರ ಪೋಸ್ಟರ್‌ನಲ್ಲಿತಲೆಯ ಮೇಲೆ ಸೀರೆ ಹೊದ್ದಿರುವ ಮಹಿಳೆಯ ಚಿತ್ರ ಗಮನ ಸೆಳೆದಿದೆ. ಸೇಡು, ವಿಮೋಚನೆ ಮತ್ತು ಪ್ರತೀಕಾರದ ಅಂಶಗಳನ್ನು ಈ ಚಿತ್ರ ಒಳಗೊಂಡಿದೆ ಎನ್ನಲಾಗಿದೆ. kathanar – the wild sorcerer ಸಿನಿಮಾದಲ್ಲಿಯೂ ಅನುಷ್ಕಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಅನುಷ್ಕಾ ಶೆಟ್ಟಿ ನಟನೆಯ ಎರಡು ಸಿನಿಮಾಗಳು ರಿಲೀಸ್ ಆಗಬೇಕಿವೆ.

263%! ಗೋ ಡಿಜಿಟ್‌ ಮೇಲಿನ ಹೂಡಿಕೆಯಿಂದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾಗೆ ಬಂಪರ್‌ ಲಾಭ
ಜ್ಯೋತಿಷಿ ಹೇಳಿದ್ದೇನು?

ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರು 2021ರಲ್ಲಿಯೇ ‘ಆದಷ್ಟು ಬೇಗ ಅನುಷ್ಕಾ ಅವರು ಮದುವೆಯಾಗಲಿದ್ದಾರೆ’ ಅಂತ ಭವಿಷ್ಯ ನುಡಿದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅನುಷ್ಕಾ ಶೆಟ್ಟಿ ಅವರು “ನನಗೆ ಇನ್ನೂ ಕೆಲ ವರ್ಷ ಮದುವೆಯಾಗುವ ಯೋಚನೆ ಇಲ್ಲ, ನಾನು ಕೆಲಸಗಳಲ್ಲಿ ಬ್ಯುಸಿ ಆಗಿದ್ದೇನೆ. ಚಿತ್ರರಂಗಕ್ಕೆ ಸಂಬಂಧಪಡದ ವ್ಯಕ್ತಿಯನ್ನೇ ನಾನು ಮದುವೆ ಆಗ್ತೀನಿ” ಅಂತ ಸ್ಪಷ್ಟನೆ ನೀಡಿದ್ದರು. ವೇಣು ಸ್ವಾಮಿ ಅವರು ನಾಗಚೈತನ್ಯ-ಸಮಂತಾ ವಿಚ್ಛೇದನ ಆಗಲಿದೆ ಅಂತ ಮೊದಲೇ ಹೇಳಿದ್ದರು, ಅದರಂತೆಯೇ ವಿಚ್ಛೇದನ ಆಗಿದೆ.


ದೊಡ್ಡ ಮಟ್ಟದ ಅಭಿಮಾನಿ ಬಳಗ ಹೊಂದಿರುವ ಅನುಷ್ಕಾ ಶೆಟ್ಟಿ

‘ಸೂಪರ್’ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ನಟಿ ಅನುಷ್ಕಾ ಶೆಟ್ಟಿ ಅವರು ಅಲ್ಲಿಯೇ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅನುಷ್ಕಾ ಶೆಟ್ಟಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಅಂದಹಾಗೆ ಕೊನೆಯದಾಗಿ ತೆರೆ ಮೇಲೆ ‘ಮಿ ಶೆಟ್ಟಿ ಮಿಸ್ಟರ್ಸ್ ಪೊಲಿಶೆಟ್ಟಿ’ ಸಿನಿಮಾದಲ್ಲಿಯೂ ಅನುಷ್ಕಾ ಶೆಟ್ಟಿ ಕಾಣಿಸಿಕೊಂಡಿದ್ದರು.
ಪದ್ಮಶ್ರೀ ಭಟ್
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ