ಆ್ಯಪ್ನಗರ

'Powder' ಹಚ್ಚಲು ರೆಡಿಯಾದ ದಿಗಂತ್, ಧನ್ಯಾ ರಾಮ್‌ಕುಮಾರ್; ವೀಕ್ಷಕರು ನಗೋದಂತೂ ಪಕ್ಕಾ!

Upcoming Kannada Movies List: ದಿಗಂತ್, ಧನ್ಯಾ ರಾಮ್‌ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ದೀಕ್ಷಿತ್ ಶೆಟ್ಟಿ, ಶರ್ಮಿಳಾ ಮಾಂಡ್ರೆ ನಟನೆಯ ‘ಪೌಡರ್’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈಗಾಗಲೇ ತನ್ನ ಟೀಸರ್‌ ಮೂಲಕ ‘ಪೌಡರ್’ ಜನರ ಮನದಲ್ಲಿ ಕಚಗುಳಿ ಇಟ್ಟಿದೆ. ಈ ಚಿತ್ರ ಜುಲೈ 12ಕ್ಕೆ ರಿಲೀಸ್ ಆಗಲಿದೆಯಂತೆ. ವಿಭಿನ್ನ ಕಥೆಯಿಟ್ಟುಕೊಂಡು ಈ ಚಿತ್ರ ನಿರ್ಮಾಣವಾಗಿದೆ.

Authored byಪದ್ಮಶ್ರೀ ಭಟ್ | Vijaya Karnataka Web 17 May 2024, 4:33 pm

ಹೈಲೈಟ್ಸ್‌:


  • ದಿಗಂತ್, ಧನ್ಯಾ ರಾಮ್‌ಕುಮಾರ್ ನಟನೆಯ ‘ಪೌಡರ್’ ಸಿನಿಮಾ
  • ‘ಪೌಡರ್’ ಸಿನಿಮಾದ ಟೀಸರ್ ರಿಲೀಸ್ ಆಗಿದೆ, ಪ್ರೇಕ್ಷಕರಿಂದ ಪ್ರೀತಿಯೂ ಸಿಗುತ್ತಿದೆ
  • ಜುಲೈ 12ಕ್ಕೆ ‘ಪೌಡರ್’ ಸಿನಿಮಾ ರಿಲೀಸ್ ಆಗಲಿದೆ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web powder movie
ಇಬ್ಬರು ಯುವಕರು ಒಂದು ನಿಗೂಢವಾದ ‘ಪೌಡರ್’ ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕಥೆಯೇ ‘ಪೌಡರ್’.‌ ಆ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಹುವುದೇ? ‘ಪೌಡರ್’ ಹಿಂದಿನ ‘ಪವರ್’ ಅವರಿಗೆ ತಿಳಿಯುವುದೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಜುಲೈ 12ಕ್ಕೆ ಥಿಯೇಟರ್‌ನಲ್ಲಿ ಸಿಗಲಿದೆ.


ಯಾರು, ಯಾರು ನಟಿಸಿದ್ದಾರೆ?

‘ಪೌಡರ್’ ಸಿನಿಮಾದಲ್ಲಿ ದಿಗಂತ್, ಧನ್ಯಾ ರಾಮ್‌ಕುಮಾರ್, ದೀಕ್ಷಿತ್ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ.


‘ಪೌಡರ್’ ಸಿನಿಮಾ

ಆಗಸ್ಟ್‌ ತಿಂಗಳಲ್ಲಿ KRG ಮತ್ತು TVF ಘೋಷಿಸಿದ ಮೊದಲ ಚಿತ್ರವಾದ ‘ಪೌಡರ್’ ಇದೀಗ ತನ್ನ ಟೀಸರ್‌ ಬಿಡುಗಡೆ ಮಾಡಿದೆ. ಈಗಾಗಲೇ ತನ್ನ ಟೀಸರ್‌ ಮೂಲಕ ‘ಪೌಡರ್’ ಎಲ್ಲೆಡೆ ನಗೆ ಚಟಾಕಿ ಹತ್ತಿಸಿದ್ದು, ಚಿತ್ರ ಬಿಡುಗಡೆಯ ನಂತರ ಈ ಹಾಸ್ಯ, ನಗು ದುಪ್ಪಟ್ಟುಗೊಳ್ಳಲಿದೆ ಎಂದರೆ ಉತ್ಪ್ರೇಕ್ಷೆಯಲ್ಲ.

ಸ್ಕಾಟ್ಲೆಂಡ್‌ ಕ್ರಿಕೆಟ್‌ ತಂಡದ ಜೆರ್ಸಿ ಮೇಲೆ ಕರ್ನಾಟಕದ ನಂದಿನಿ, ಐರ್ಲೆಂಡ್‌ ಜೊತೆಗೂ ಒಪ್ಪಂದ
‘ಪೌಡರ್’ ಚಿತ್ರವನ್ನು KRG ಸ್ಟೂಡಿಯೋಸ್‌ & TVF ಮೋಷನ್‌ ಪಿಕ್ಚರ್ಸ್‌ನ ಸಹಯೋಗದಲ್ಲಿ ಮೂಡಿ ಬಂದಿರುವ ಮೊದಲ ಚಿತ್ರವಾಗಿದೆ. ಚಿರಪರಿಚಿತ ಚಿತ್ರ ನಿರ್ಮಾಣ, ವಿತರಣಾ ಸಂಸ್ಥೆಯಾದ KRG ಸ್ಟುಡಿಯೋಸ್ ವಿಭನ್ನ ಕಥಾವಸ್ತುವನ್ನು ಸಿನಿ ಪ್ರೇಕ್ಷಕರ ಮುಂದಿಡುವ ಗುರಿಯೊಂದಿಗೆ ಈಗಾಗಲೇ ಹಲವಾರು ಪ್ರಖ್ಯಾತ ಚಿತ್ರಗಳನ್ನು ನಿರ್ಮಿಸಿವೆ. ಇನ್ನು TVF ಮೋಷನ್‌ ಪಿಕ್ಚರ್ಸ್‌ ಹಲವಾರು ವೆಬ್‌ ಸೀರೀಸ್‌ಗಳ ಮೂಲಕ ತನ್ನದೇ ಛಾಪನ್ನು ಮೂಡಿಸಿರುವ ಸಂಸ್ಥೆಯಾಗಿದ್ದು, ಇವರಿಬ್ಬರ ಸಹಯೋಗದಲ್ಲಿ ಮೂಡಿ ಬಂದಿರುವ ‘ಪೌಡರ್’ ಬಹುನಿರೀಕ್ಷಿತ ಚಿತ್ರವಾಗಿದೆ.


ಪ್ರೇಕ್ಷಕರ 'ದಿ ಜಡ್ಜ್‌ಮೆಂಟ್‌'ಗೋಸ್ಕರ ಕಾದು ಕೂತ ರವಿಚಂದ್ರನ್, ದಿಗಂತ್, ಧನ್ಯಾ ರಾಮ್‌ಕುಮಾರ್, ಮೇಘನಾ!

ಕಾರ್ತಿಕ್‌ ಗೌಡ ಏನು ಹೇಳಿದರು?

KRG ಸ್ಟೂಡಿಯೋಸ್‌ನ ಮಾಲಿಕ ಕಾರ್ತಿಕ್‌ ಗೌಡ, TVF ಮೋಷನ್‌ ಪಿಕ್ಚರ್ಸ್‌ನ ಮಾಲಿಕ ಅರುನಭ್‌ ಕುಮಾರ್‌ ಮಾತನಾಡಿ, "ಯುವಕರಿಗೆ, ಸಿನಿ ಪ್ರೇಕ್ಷಕರಿಗೆ ಹೊಸ ರೀತಿಯ ಕಥೆಗಳನ್ನು, ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಚಿತ್ರಗಳನ್ನು ನೀಡುವುದು ನಮ್ಮ ಮುಖ್ಯ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ‘ಪೌಡರ್’ ನಮ್ಮ ಸಹಯೋಗದ ಚೊಚ್ಚಲ ಪ್ರಯತ್ನ. ‘ಮಡ್ಗಾನ್‌ ಎಕ್ಸ್‌ ಪ್ರೆಸ್‌ʼ , ʼಫುಕ್ರೇ’ ,ʼಗೋ ಗೋವಾ ಗಾನ್‌ʼ, ʼಡೆಲ್ಲಿ ಬೆಲ್ಲಿʼ ನಂತಹ ಹಾಸ್ಯ ಚಿತ್ರಗಳ ಅಭಿಮಾನಿಗಳಾಗಿ ಕನ್ನಡದಲ್ಲಿ ಅಂತಹದ್ದೇ ನಗೆ ಚಟಾಕಿಯನ್ನು ಹತ್ತಿಸುವ ಚಿತ್ರವನ್ನು ನಿರ್ಮಿಸಿದ್ದೇವೆ ಎಂದು ನಂಬಿದ್ದೇವೆ. ಚಿತ್ರವನ್ನು ನೋಡಿ ಪ್ರೇಕ್ಷಕರು ತಮ್ಮ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ ಎಂಬ ಭರವಸೆ ನಮಗಿದೆ. ಮುಂಬರುವ ದಿನಗಳಲ್ಲಿ ಇದೇ ರೀತಿಯ ಇನ್ನಷ್ಟು ವಿಭಿನ್ನ ಕಥೆಗಳನ್ನು ತರಲು ಬಯಸುತ್ತೇವೆ” ಎಂದು ಹೇಳಿದ್ದಾರೆ.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌