ಆ್ಯಪ್ನಗರ

ಚಿತ್ರಮಂದಿರದ ಬದಲು ನೇರ ಆನ್‌ಲೈನ್‌ನಲ್ಲೇ ರಿಲೀಸ್ ಆಗಲಿದೆ 'ಕನ್ನಡದ ನಟಿ'ಯ ಈ ಸಿನಿಮಾ!

ನಮ್ಮ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ ಅಂತ ಹೊಸ ತಂಡಗಳು ಆಗಾಗ ಹೇಳಿಕೊಳ್ಳುವುದನ್ನು ಕೇಳಿದ್ದೇವೆ. ಬಹುಶಃ ಇನ್ನುಮುಂದೆ ಅದು ತಪ್ಪಲಿದೆ ಎನಿಸುತ್ತಿದೆ. ಯಾಕೆಂದರೆ, ಕನ್ನಡ ನಟಿಯೊಬ್ಬರ ತೆಲುಗು ಸಿನಿಮಾ ನೇರ ಡಿಜಿಟಲ್‌ ವೇದಿಕೆಯಲ್ಲಿ ರಿಲೀಸ್ ಆಗುತ್ತಿದೆ.

Vijaya Karnataka Web 25 Apr 2020, 12:20 am
ಕೊರೊನಾ ವೈರಸ್‌ ಹಾವಳಿಯಿಂದಾಗಿ ಇಡೀ ದೇಶವೇ ಸಂಕಷ್ಟದಲ್ಲಿದೆ. ಒಬ್ಬರಿಂದ ಒಬ್ಬರಿಗೆ ವೈರಸ್ ಹರಡಬಾರದು ಎಂಬ ಉದ್ದೇಶದಿಂದ ಈಗಾಗಲೇ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಹಾಗಾಗಿ, ಎಲ್ಲವೂ ಬಂದ್ ಆಗಿದೆ. ಚಿತ್ರ ಪ್ರದರ್ಶನ ನಿಂತು ತಿಂಗಳುಗಳೇ ಕಳೆದಿವೆ. ಹಾಗಾಗಿ, ಸಾಕಷ್ಟು ಜನ ನಿರ್ಮಾಪಕರು ಸಿನಿಮಾ ಸಿದ್ಧವಿಟ್ಟುಕೊಂಡು ಕಾಯುತ್ತಿದ್ದಾರೆ. ಆದರೆ, ಕನ್ನಡದ ನಟಿ ಅಮಿತಾ ರಂಗನಾಥ್ ನಟಿಸಿರುವ ತೆಲುಗು ಸಿನಿಮಾವೊಂದು ನೇರ ಆನ್‌ಲೈನ್‌ ವೇದಿಕೆಗೆ ಎಂಟ್ರಿ ನೀಡಲು ಸಜ್ಜಾಗಿದೆ.
Vijaya Karnataka Web ಚಿತ್ರಮಂದಿರದ ಬದಲು ನೇರ ಆನ್‌ಲೈನ್‌ನಲ್ಲೇ ರಿಲೀಸ್ ಆಗಲಿದೆ ಕನ್ನಡ ನಟಿಯ ಈ ಸಿನಿಮಾ!


ಚಿತ್ರಮಂದಿರಗಳು ಓಪನ್ ಆಗೋದು ಯಾವಾಗ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹಾಗಾಗಿ, ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎಂದು ಚಿತ್ರಮಂದಿರಗಳ ಬದಲು ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲೇ ರಿಲೀಸ್ ಮಾಡೋಕೆ ನಿರ್ಧಾರ ಮಾಡಿದ್ದಾರೆ ನಿರ್ಮಾಪಕರು. ಅಂದಹಾಗೆ, ಈ ಸಿನಿಮಾದ ಹೆಸರು 'ಅಮೃತರಾಮಮ್'. ಕನ್ನಡದ 'ಡೇಸ್ ಆಫ್‌ ಬೋರಾಪುರ', 'ಪ್ರಯಾಣಿಕರ ಗಮನಕ್ಕೆ', 'ಶಿವಾಜಿ ಸುರತ್ಕಲ್' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಅಮಿತಾ ರಂಗನಾಥ್‌, ತೆಲುಗಿನ ಈ 'ಅಮೃತಾರಾಮಂ'ಗೆ ನಾಯಕಿ.

ಏಪ್ರಿಲ್‌ 29ರಂದು ಜೀ5ನಲ್ಲಿ 'ಅಮೃತಾರಾಮಂ' ಪ್ರಸಾರ ಆರಂಭಿಸಲಿದೆ. ಅಂದಹಾಗೆ, ಕನ್ನಡದ 'ಭಿನ್ನ' ಚಿತ್ರ ಕೂಡ ಚಿತ್ರಮಂದಿರದಲ್ಲಿ ರಿಲೀಸ್ ಆಗುವ ಬದಲು, ನೇರ ಜೀ5ನಲ್ಲಿ ರಿಲೀಸ್ ಆಗಿತ್ತು. ಸದ್ಯ ಇದೇ ಥರ ಆನ್‌ಲೈನ್‌ನಲ್ಲಿ ರಿಲೀಸ್ ಮಾಡೋಕೆ ಅನುಷ್ಕಾ ಶೆಟ್ಟಿಯ 'ನಿಶ್ಯಬ್ಧಂ', 'ವಿ', 'ರೆಡ್' ಮುಂತಾದ ಸಿನಿಮಾಗಳ ನಿರ್ಮಾಪಕರು ಪ್ಲ್ಯಾನ್ ಮಾಡುತ್ತಿದ್ದಾರಂತೆ.

ರಣ ರೋಚಕ ರಣಗಿರಿ ರಹಸ್ಯ: ಶಿವಾಜಿ ಸುರತ್ಕಲ್ ಚಿತ್ರ ವಿಮರ್ಶೆ

View this post on Instagram ❤️ A post shared by Amita Ranganath | Actress (@amitaranganath) on Apr 24, 2020 at 1:26am PDT

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌