ಆ್ಯಪ್ನಗರ

ಕಿಚ್ಚನ ವೃತ್ತಿ ಬದುಕಿಗೆ 27 ವರ್ಷ; ಅವಕಾಶ ನೀಡಿದ ಚಿತ್ರರಂಗಕ್ಕೆ ಧನ್ಯವಾದ ಹೇಳಿದ ನಟ ಸುದೀಪ್‌

ನಟ 'ಕಿಚ್ಚ' ಸುದೀಪ್ ಅವರಿಗೆ ಕನ್ನಡದ ಜೊತೆಗೆ ಪರಭಾಷೆಯಲ್ಲೂ ದೊಡ್ಡ ಅಭಿಮಾನಿ ಬಳಗವಿದೆ. ಬಹುಭಾಷಾ ಕಲಾವಿದರಾಗಿ ಅವರು ಹೆಸರು ಮಾಡಿದ್ದಾರೆ. ಅಂದಹಾಗೆ, ಸುದೀಪ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 27 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಒಂದು ವಿಶೇಷ ಪೋಸ್ಟ್ ಅನ್ನು ಅವರು ಹಂಚಿಕೊಂಡಿದ್ದಾರೆ.

Authored byಅವಿನಾಶ್ ಜಿ. ರಾಮ್ | Vijaya Karnataka Web 31 Jan 2023, 12:16 pm

ಹೈಲೈಟ್ಸ್‌:

  • ಬಣ್ಣದ ಲೋಕಕ್ಕೆ 'ಕಿಚ್ಚ' ಸುದೀಪ್ ಎಂಟ್ರಿ ಕೊಟ್ಟು 27 ವರ್ಷ ತುಂಬಿದೆ
  • 'ತಾಯವ್ವ' ಸಿನಿಮಾದ ಮೂಲಕ ವೃತ್ತಿ ಬದುಕು ಆರಂಭಿಸಿದ ಸುದೀಪ್‌
  • 27 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡ ನಟ 'ಕಿಚ್ಚ' ಸುದೀಪ್‌

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web sudeep
ಕಿಚ್ಚನ ವೃತ್ತಿ ಬದುಕಿಗೆ 27 ವರ್ಷ; ಅವಕಾಶ ನೀಡಿದ ಚಿತ್ರರಂಗಕ್ಕೆ ಧನ್ಯವಾದ ಹೇಳಿದ ನಟ ಸುದೀಪ್‌
ನಟ 'ಕಿಚ್ಚ' ಸುದೀಪ್ ಅವರ ವೃತ್ತಿ ಬದುಕಿನಲ್ಲಿ ಜನವರಿ ತಿಂಗಳು ವಿಶೇಷವಾಗಿದೆ. ಕಾರಣ, ಅವರು ಚಿತ್ರರಂಗಕ್ಕೆ ಬಂದಿದ್ದು ಇದೇ ತಿಂಗಳು. ಇದೀಗ ಅವರ ಬಣ್ಣದ ಲೋಕದ ಜರ್ನಿಗೆ 27 ವರ್ಷ ತುಂಬಿದೆ. ಅಂದಹಾಗೆ, 1997ರಲ್ಲಿ ಸುದೀಪ್ ನಟನೆಯ ಮೊದಲ ಸಿನಿಮಾ 'ತಾಯವ್ವ' ತೆರೆಕಂಡಿತ್ತು. ಆದರೆ ಅದಕ್ಕೂ ಮುನ್ನ ಸುದೀಪ್ ಅವರು 'ಬ್ರಹ್ಮ' ಮತ್ತು 'ಓ ಕುಸುಮ ಬಾಲೆ' ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಅದ್ಯಾಕೋ ಆ ಸಿನಿಮಾಗಳು ತೆರೆಕಾಣಲೇ ಇಲ್ಲ. ಇದೀಗ ತಮ್ಮ ವೃತ್ತಿ ಬದುಕಿಗೆ 27 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ನಟ ಸುದೀಪ್ ಅವರು ವಿಶೇಷ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್‌ ಮೂಲಕ ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
ಸುದೀಪ್ ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ?
'ಖಂಡಿತವಾಗಿಯೂ ಇದೊಂದು ಸ್ಮರಣೀಯ ಜರ್ನಿ ಆಗಿದೆ. ಈ 27 ವರ್ಷಗಳಲ್ಲಿ ಸಿನಿಮಾರಂಗದ ಹಲವು ಅದ್ಭುತ ಪ್ರತಿಭೆಗಳ ಜೊತೆಗೆ ನಾನು ಕೆಲಸ ಮಾಡಿದ್ದೇನೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಇನ್ನೂ ಉತ್ತಮವಾದದನ್ನು ನೀಡಲು ನನಗೆ ಸ್ಫೂರ್ತಿ ನೀಡಿದ್ದಕ್ಕಾಗಿ ಆ ಎಲ್ಲಾ ಅದ್ಭುತ ಪ್ರತಿಭೆಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಬೆನ್ನಿಗೆ ನಿಂತ ಎಲ್ಲರಿಗೂ ನನ್ನ ಧನ್ಯವಾದಗಳು..' ಎಂದು 'ಕಿಚ್ಚ' ಸುದೀಪ್ ಬರೆದುಕೊಂಡಿದ್ದಾರೆ.

ಡಾ ವಿಷ್ಣುವರ್ಧನ್ ಸ್ಮಾರಕ; ಶಿವಣ್ಣ & 'ಕಿಚ್ಚ' ಸುದೀಪ್‌ ಹೇಳಿದ ಪ್ರೀತಿಯ ಮಾತುಗಳೇನು?
'ಎಲ್ಲರಿಂದ ನಾನು ಆಶೀರ್ವದಿಸಲ್ಪಟ್ಟಿದ್ದೇನೆ ಮತ್ತು ಎಲ್ಲರಿಂದಲೂ ತುಂಬಾ ಪ್ರೀತಿಯಿಂದ ಪ್ರೀತಿಸಲ್ಪಟ್ಟಿದ್ದೇನೆ. ನನಗೆ ಅವಕಾಶಗಳನ್ನು ನೀಡಿದ ಕನ್ನಡ ಚಿತ್ರರಂಗಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟ ಹಿಂದಿ, ತಮಿಳು ಹಾಗೂ ತೆಲುಗು ಚಿತ್ರರಂಗಗಳ ಬಂಧುಗಳಿಗೆ ಧನ್ಯವಾದ ಹೇಳದೇ ಇದ್ದರೆ ಅಪೂರ್ಣ ಎನಿಸುತ್ತದೆ...' ಎಂದು ಸುದೀಪ್ ಹೇಳಿದ್ದಾರೆ.

ಆಸ್ಕರ್ ನಾಮಿನೇಶನ್ ಖುಷಿಯಲ್ಲಿ ಶೀಘ್ರದಲ್ಲಿಯೇ ಹೊಸ ಸಿನಿಮಾ ಘೋಷಣೆ ಮಾಡ್ತಾರಾ ಕಿಚ್ಚ ಸುದೀಪ್?
ಅಂದಹಾಗೆ, 'ತಾಯವ್ವ' ಸಿನಿಮಾದಲ್ಲಿ ರಾಮು ಎಂಬ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಸುದೀಪ್‌ಗೆ ಒಂದು ಗುರುತು ನೀಡಿದ್ದು 'ಸ್ಪರ್ಶ' ಸಿನಿಮಾ. ಸುದೀಪ್‌ ಅವರಿಗೆ ಮಾಸ್ ಹೀರೋ ಇಮೇಜ್ ನೀಡಿದ್ದು 'ಹುಚ್ಚ' ಸಿನಿಮಾ. ಆ ಸಿನಿಮಾದ ನಂತರ ಅವರು ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದರು. 'ಮೈ ಆಟೋಗ್ರಾಫ್‌' ಸಿನಿಮಾದ ಮೂಲಕ ನಿರ್ದೇಶಕರಾಗಿ ಹೆಸರು ಮಾಡಿದರು. ರಾಜಮೌಳಿಯ 'ಈಗ' ಚಿತ್ರದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದೀಪ್ ಫೇಮಸ್ ಆದರು. ಹಿಂದಿ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲೂ ತಮ್ಮ ಪ್ರತಿಭೆಯನ್ನು ಸುದೀಪ್ ತೋರಿದ್ದಾರೆ.

View this post on Instagram A post shared by KicchaSudeepa (@kichchasudeepa)


ಪಬ್ಲಿಕ್ ಫಿಗರ್ ಅಂತ ಕಲ್ಲು ಹೊಡೆದು ರಕ್ತ ಬಂದ್ರೆ...: ಕಿಚ್ಚ ಸುದೀಪ್ ಮಾತಿಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ
ಕಳೆದ ವರ್ಷ ತೆರೆಕಂಡ 'ವಿಕ್ರಾಂತ್ ರೋಣ' ಸಿನಿಮಾದಿಂದ ಅವರಿಗೆ ದೊಡ್ಡ ಗೆಲುವು ಸಿಕ್ಕಿದೆ. ಆದರೆ ಆ ಸಿನಿಮಾ ತೆರೆಕಂಡು 6 ತಿಂಗಳು ಕಳೆದರೂ, ಮುಂದಿನ ಸಿನಿಮಾ ಯಾವುದು ಎಂಬ ಮಾಹಿತಿಯನ್ನು ಮಾತ್ರ ಸುದೀಪ್ ನೀಡಿಲ್ಲ. ಸದ್ಯ ಅವರ ಅಭಿಮಾನಿಗಳು ಕೂಡ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದಾರೆ.
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌