Please enable javascript.2nd half reviewಹೆಸರಿಗೆ ತಕ್ಕಂತ್ತಿರುವ ಸಿನಿಮಾ, Rating:{2/5} , kannada movie 2nd half review and rating , Rating:{2/5} : ಪ್ರಿಯಾಂಕಾ ಉಪೇಂದ್ರ,ಶಾಲಿನಿ,ನಿರಂಜನ್‌,ಸುರಭಿ,ಶರತ್‌ ಲೋಹಿತಾಶ್ವ,ಕಲಾಗಂಗೋತ್ರಿ ಮಂಜು,ಮಾಲತಿಶ್ರೀ ಮೈಸೂರು Star | Vijay Karnataka

ಸಿನಿಮಾ ವಿಮರ್ಶೆ

ಹೆಸರಿಗೆ ತಕ್ಕಂತ್ತಿರುವ ಸಿನಿಮಾ

Vijaya Karnataka Web 1 Jun 2018, 7:02 pm
ನಟ:
ಪ್ರಿಯಾಂಕಾ ಉಪೇಂದ್ರ,ಶಾಲಿನಿ,ನಿರಂಜನ್‌,ಸುರಭಿ,ಶರತ್‌ ಲೋಹಿತಾಶ್ವ,ಕಲಾಗಂಗೋತ್ರಿ ಮಂಜು,ಮಾಲತಿಶ್ರೀ ಮೈಸೂರು
ನಿರ್ದೇಶಕ :ಯೋಗಿ ದೇವಗಂಗೆಚಿತ್ರದ ವಿಧ:Kannada, Political, Thrillerಅವಧಿ:2 Hrs 16 Minವಿಮರ್ಶೆ

ಕ್ರಿಟಿಕ್‌ ರೇಟಿಂಗ್

2.0/5

ನಿಮ್ಮ ರೇಟಿಂಗ್‌

3.5/5

ಚಿತ್ರಕ್ಕೆ ರೇಟಿಂಗ್ ನೀಡಲು ಸ್ಲೈಡ್ ಮಾಡಿ

0.5 1 1.5 2 2.5 3 3.5 4 4.5 5
2.5/5
*ಶರಣು ಹುಲ್ಲೂರುಶೀರ್ಷಿಕೆಯ ಕಾರಣದಿಂದಾಗಿಯೇ ಗಮನ ಸೆಳೆದಿತ್ತು ಪ್ರಿಯಾಂಕಾ ಉಪೇಂದ್ರ ನಟನೆಯ 'ಸೆಕೆಂಡ್‌ ಹಾಫ್‌' ಸಿನಿಮಾ. ಹಾಗಾಗಿ ಏನೋ ನಿಗೂಢವಾಗಿದ್ದನ್ನು ನಿರ್ದೇಶಕರು ಹೇಳಲು ಹೊರಟಿದ್ದಾರೆ ಎಂಬ ಕುತೂಹಲ ಮೂಡಿತ್ತು. ಸಿನಿಮಾ ನೋಡಿದ ನಂತರ ಮನಸ್ಸಲ್ಲಿ ಉಳಿಯುವ ಏಕೈಕ ಪ್ರಶ್ನೆ ಶೀರ್ಷಿಕೆ ನೋಡಿ ಸಿನಿಮಾಗೆ ಹೋಗಬಾರದು.ಹೌದು, ಸಿನಿಮಾದ ಫಸ್ಟ್‌ ಹಾಫ್‌ ಏನಂದರೂ ಏನೂ ಇಲ್ಲ. ಪೊಲೀಸ್‌ ಪೇದೆ ಅನುರಾಧ (ಪ್ರಿಯಾಂಕಾ ಉಪೇಂದ್ರ) ಮತ್ತು ರತ್ನಾ (ಶಾಲಿನಿ) ಸಿಸಿ ಟಿವಿಗಳನ್ನು ನೋಡುವುದರಲ್ಲೇ ಕಾಲಹರಣ ಮಾಡುತ್ತಾರೆ. ಬಹುತೇಕ ಪಾತ್ರಗಳನ್ನು ಇದೇ ಸಿಸಿ ಟಿವಿಯಲ್ಲೇ ತೋರಿಸುವುದರಿಂದ ಬೋರೋ ಬೋರು. ಸಬ್‌ಇನಸ್ಪೆಕ್ಟರ್‌ ಎಲ್‌.ಎನ್‌.ಶಾಸ್ತ್ರಿ ಖಾಕಿ ವೇಷದಲ್ಲಿ ನಗಿಸುವುದಕ್ಕೆ ಪ್ರಯತ್ನ ಪಡುತ್ತಾರೆ. ದಿಢೀರ್‌ ಅಂತ ಶರಣ್ಯ (ಸುರಭಿ) ಮತ್ತು ನಿರಂಜನ ಪಾತ್ರಗಳು ಎಂಟ್ರಿ ಕೊಡುತ್ತವೆ. ಈ ಯುವ ಜೋಡಿಯ ಪ್ರೇಮ ಪ್ರಕರಣವನ್ನೂ ಇದೇ ಅನುರಾಧ ಮತ್ತು ರತ್ನ ನಿರೂಪಿಸುವುದರಿಂದ ಸೆಕೆಂಡ್‌ ಹಾಫ್‌ಗಾಗಿ ಕಾಯುವಂಥ ಮನಸ್ಥಿತಿಗೆ ತಲುಪಿ ಬಿಡುತ್ತಾನೆ ಪ್ರೇಕ್ಷಕ. ಅಲ್ಲಿಗೆ ಅಂತೂ ಮೊದಲರ್ಧಕ್ಕೆ ಮಂಗಳ ಹಾಡುತ್ತದೆ.ಸೆಕೆಂಡ್‌ ಹಾಫ್‌ನಲ್ಲಿ ಏನಾದರೂ ಇರಬಹುದಾ ಎಂಬ ನಿರೀಕ್ಷೆಯೊಂದಿಗೆ ಮತ್ತೆ ಕೂತಾಗ, ಅದದೇ ಪಾತ್ರಗಳು ಬಂದರೂ ಶರಣ್ಯ ಕಳೆದು ಹೋಗುತ್ತಾಳೆ. ಒಳ್ಳೆಯ ಹುಡುಗ ನಿರಂಜನ್‌ ವಿಲನ್‌ ರೀತಿಯಲ್ಲಿ ಕಾಣುತ್ತಾನೆ. ಶರಣ್ಯಳ ಹುಡುಕಾಟಕ್ಕೆ ಸ್ವತಃ ಪೊಲೀಸ್‌ಪೇದೆ ಅನುರಾಧ ಹೊರಡುತ್ತಾಳೆ. ಆ ಹುಡುಗಿಯ ಹಿನ್ನೆಲೆ ಕೆದುಕುತ್ತಾಳೆ. ಅಲ್ಲಷ್ಟು ತಿರುವುಗಳು ಸಿಗುತ್ತವೆ. ರಿಯಲ್‌ ಸಿನಿಮಾ ಶುರುವಾಗುವುದು ಸೆಕೆಂಡ್‌ ಹಾಫ್‌ನಿಂದ. ಹಾಗಾಗಿ ಚಿತ್ರಕ್ಕೆ ಇಂಥದ್ದೊಂದು ಹೆಸರು ಇಟ್ಟಿರಬಹುದು ಎಂಬ ಸಮಾಧಾನ ಆಗುತ್ತದೆ.ಈ ಚಿತ್ರದಲ್ಲಿ ನಿರ್ದೇಶಕರು ಹೇಳಹೊರಟಿದ್ದಿಷ್ಟೆ. ಅಪ್ಪನ ಪ್ರೀತಿಯನ್ನು ಕಾಣದ ಮಗಳು ಮತ್ತು ಪುತ್ರಿಯು ತನ್ನ ರಾಜಕೀಯ ಭವಿಷ್ಯಕ್ಕೆ ಮುಳ್ಳಾಗುತ್ತಾಳೆ ಎಂಬ ಅಪ್ಪನ ನಡುವಿನ ಕದನ ಇಲ್ಲಿದೆ. ಆಯ್ದುಕೊಂಡಿರುವ ಎಳೆಯು ಚೆನ್ನಾಗಿದ್ದರೂ, ಅದನ್ನು ಹೇಳುವ ರೀತಿಯಲ್ಲಿ ಎಡವಿದ್ದಾರೆ ನಿರ್ದೇಶಕರು. ಈ ಚಿತ್ರದ ಮೂಲಕ ಉಪೇಂದ್ರರ ಸಹೋದರನ ಮಗ ನಿರಂಜನ್‌ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಗೆದ್ದಿದ್ದಾರೆ. ಪೊಲೀಸ್‌ ಪಾತ್ರದಲ್ಲಿ ಪ್ರಿಯಾಂಕಾ ಕೂಡ ಮನಸ್ಸು ಗೆಲ್ಲುತ್ತಾರೆ. ಕಲಾಗಂಗೋತ್ರಿ ಮಂಜು ಮತ್ತು ಮಾಲತಿಶ್ರೀ ಮೈಸೂರು ಜೋಡಿಯು ಕೆಲವು ಕಡೆ ಕಣ್ಣುಗಳನ್ನು ತೇವಗೊಳಿಸುತ್ತಾರೆ.ಸಿಸಿ ಟಿವಿಯಲ್ಲೇ ಮುಕ್ಕಾಲು ಸಿನಿಮಾ ಮುಗಿದು ಹೋಗುವುದರಿಂದ ಸಿನಿಮಾಟೋಗ್ರಫಿ ಅಷ್ಟಕಷ್ಟೆ. ಹಿನ್ನೆಲೆ ಸಂಗೀತ ಬಿಟ್ಟು, ಹಾಡುಗಳ ಸಂಯೋಜನೆಗೆ ಮಾರ್ಕ್ಸ್‌ ಕೊಡಬಹುದು.

ಸಿನಿಮಾ ವಿಮರ್ಶೆ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ