ಆ್ಯಪ್ನಗರ

ವಿಧವಾ ವೇತನ ಯೋಜನೆ : 18 ವರ್ಷ ಮೇಲ್ಪಟ್ಟ ನಿರ್ಗತಿಕ ವಿಧವೆಯರಿಗೆ ₹800 ಮಾಸಿಕ ವೇತನ! ಅರ್ಜಿ ಸಲ್ಲಿಕೆ ಹೇಗೆ?

ನಿರ್ಗತಿಕ ವಿಧವೆಯರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ 'ವಿಧವಾ ವೇತನ ಯೋಜನೆ' ಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಪ್ರತಿ ತಿಂಗಳು ವಿಧವೆಯರಿಗೆ ವೇತನ ನೀಡಲಾಗುತ್ತಿದೆ. ಹದಿನೆಂಟು ವರ್ಷಕ್ಕಿಂತ ಹೆಚ್ಚು ವಯಸ್ಸಿನ ನಿರ್ಗತಿಕ ವಿಧವೆಯರಿಗೆ ಪ್ರಸ್ತುತ ಮಾಸಿಕ ₹800 ವಿಧವಾ ವೇತನ ನೀಡಲಾಗುತ್ತಿದೆ. ವಿಧವಾ ವೇತನ ಯೋಜನೆಯನ್ನು1984ರ ಏಪ್ರಿಲ್‌ 1ರಿಂದ ಕಾರ್ಯಗತ ಮಾಡಲಾಗಿದೆ. 18 ವರ್ಷ ಮೇಲ್ಪಟ್ಟ ನಿರ್ಗತಿಕ ವಿಧವೆಯರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಪ್ರಸ್ತುತ 17 ಲಕ್ಷ ವಿಧವೆಯರು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ.

Authored byಬಾನುಪ್ರಸಾದ ಕೆ.ಎನ್\u200c. | Vijaya Karnataka Web 25 Mar 2022, 8:23 pm

ಹೈಲೈಟ್ಸ್‌:

  • ನಿರ್ಗತಿಕ ವಿಧವೆಯರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ವಿಧವಾ ವೇತನ ಯೋಜನೆ
  • ಅರ್ಹ ಫಲಾನುಭವಿಗಳಿಗೆ ಮಾಸಿಕ ₹800 ವಿಧವಾ ವೇತನ ನೀಡಲಾಗುತ್ತಿದೆ
  • ಅರ್ಜಿ ಸಲ್ಲಿಕೆ ಹೇಗೆ? ಅರ್ಹತೆಗಳೇನು? ಇಲ್ಲಿದೆ ಪೂರ್ಣ ಮಾಹಿತಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Pension
ನಿರ್ಗತಿಕ ವಿಧವೆಯರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ 'ವಿಧವಾ ವೇತನ ಯೋಜನೆ' ಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಪ್ರತಿ ತಿಂಗಳು ವಿಧವೆಯರಿಗೆ ವೇತನ ನೀಡಲಾಗುತ್ತಿದೆ. ಹದಿನೆಂಟು ವರ್ಷಕ್ಕಿಂತ ಹೆಚ್ಚು ವಯಸ್ಸಿನ ನಿರ್ಗತಿಕ ವಿಧವೆಯರಿಗೆ ಪ್ರಸ್ತುತ ಮಾಸಿಕ ₹800 ವಿಧವಾ ವೇತನ ನೀಡಲಾಗುತ್ತಿದೆ. ವಿಧವಾ ವೇತನ ಯೋಜನೆಯನ್ನು1984ರ ಏಪ್ರಿಲ್‌ 1ರಿಂದ ಕಾರ್ಯಗತ ಮಾಡಲಾಗಿದೆ. 18 ವರ್ಷ ಮೇಲ್ಪಟ್ಟ ನಿರ್ಗತಿಕ ವಿಧವೆಯರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಫಲಾನುಭವಿಗಳ ಅರ್ಹತೆಗಳು
  • ನಿರ್ಗತಿಕ ವಿಧವೆ ಅಂದರೆ, ಪತಿಯ ಜೀವಿಸಿಲ್ಲದ ಅಥವಾ ಕಾನೂನು ರೀತ್ಯಾ ಮೃತಪಟ್ಟಿರುವನೆಂದು ಭಾವಿಸುವವನ ಪತ್ನಿ ಮತ್ತು ಅವಳ ಸಂಬಂಧಿಕ ಒಬ್ಬ ಸ್ತ್ರೀ.
  • ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ ರೂ.12,000/- ಹಾಗೂ ನಗರ ಪ್ರದೇಶಗಳಲ್ಲಿ ರೂ.17,000/- ಕ್ಕಿಂತ ಕಡಿಮೆ ಇರಬೇಕು.
  • ಅರ್ಜಿದಾರಳು ಅಥವಾ ಆಕೆಯ ಮರಣ ಹೊಂದಿದ ಪತಿಯು ಅರ್ಜಿ ದಿನಾಂಕದಿಂದ ಹಿಂದಿನ ನಿರಂತರ ಮೂರು ವರ್ಷಗಳ ಅವಧಿಗೆ ಕಡಿಮೆ ಇಲ್ಲದಂತೆ ಈ ರಾಜ್ಯದ ನಿವಾಸಿಯಾಗಿಬೇಕು.
  • ವಿಧವಾ ವೇತನದ ಮೊಬಲಗು ತಿಂಗಳಿಗೆ 800 ರೂಪಾಯಿ
  • ವಿಧವಾ ವೇತನಕ್ಕಾಗಿ ಸಲ್ಲಿಸುವ ಅರ್ಜಿಯು ಗೊತ್ತುಪಡಿಸಿದ ನಮೂನೆಯಲ್ಲಿರಬೇಕು ಮತ್ತು ಅದನ್ನು ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರರಿಗೆ ಸಲ್ಲಿಸಬೇಕು. ಬೇರೆ ಪಿಂಚಣಿ ಪಡೆಯುತ್ತಿರುವವರು ವಿಧವಾ ಅರ್ಹರಾಗುವುದಿಲ್ಲ.
  • ಮೃತರಾಗುವವರೆಗೆ ಅಥವಾ ಪುನರ್ವಿವಾಹವಾಗುವವರೆಗೆ ಅಥವಾ ಉದ್ಯೋಗ ಪಡೆದು ನಿಗಧಿತ ವಾರ್ಷಿಕ ಆದಾಯಕ್ಕಿಂತ ಹೆಚ್ಚಿನ ಆದಾಯ ಪಡೆಯುವವರೆಗೆ ವಿಧವೆಯ ವಿಧವಾ ವೇತನವನ್ನು ಪಡೆಯಬಹುದು.
  • ಜನನ ಪ್ರಮಾಣ ಪತ್ರ, ವೈದ್ಯಕೀಯ ದೃಢೀಕರಣ ಪತ್ರ ಅಥವಾ ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಗುರುತಿನ ಚೀಟಿಯಲ್ಲಿರುವ ಜನ್ಮ ದಿನಾಂಕವು ವಯಸ್ಸಿಗೆ ಸಂಬಂಧಿಸಿದ ದಾಖಲೆಯಾಗಿರುತ್ತದೆ.

ಸಂಧ್ಯಾ ಸುರಕ್ಷಾ ಯೋಜನೆ : 65 ವರ್ಷ ಮೇಲ್ಪಟ್ಟ ವೃದ್ಧರಿಗೆ ₹1200 ಮಾಸಾಶನ! ಅರ್ಜಿ ಸಲ್ಲಿಕೆ ಹೇಗೆ?

ಅಗತ್ಯ ದಾಖಲೆಗಳು
  • ಪತಿಯ ಮರಣ ಪ್ರಮಾಣ ಪತ್ರ
  • ವಾಸಸ್ಥಳ ದೃಢೀಕರಣ ಪತ್ರ
  • ಆದಾಯ ಪ್ರಮಾಣ ಪತ್ರ
  • ವಯಸ್ಸಿನ ದೃಡೀಕರಣ ಪತ್ರ

ಬೇರೆ ಪಿಂಚಣಿ ಪಡೆಯುತ್ತಿರುವವರು ವಿಧವಾ ವೇತನ ಪಡೆಯಲು ಅರ್ಹರಾಗುವುದಿಲ್ಲ. ಮೃತರಾಗುವವರೆಗೆ ಅಥವಾ ಮರುವಿವಾಹವಾಗುವವರೆಗೆ ವಿಧವಾ ವೇತನ ಪಡೆಯಬಹುದು. ಇಲ್ಲವೇ, ಉದ್ಯೋಗ ಪಡೆದು ನಿಗದಿತ ಆದಾಯ ಮಿತಿಗಿಂತ ಹೆಚ್ಚು ಆದಾಯ ಪಡೆಯುವವರೆಗೆ ವಿಧವಾ ವೇತನ ಪಡೆಯಲು ಅವಕಾಶವಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಹಲವು ದಾಖಲಾತಿಗಳು ಬೇಕಾಗುತ್ತವೆ. ಜನನ ಪ್ರಮಾಣಪತ್ರ, ವೈದ್ಯಕೀಯ ದೃಢಿಕರಣ ಪತ್ರ, ಪತಿಯ ಮರಣ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವಯಸ್ಸಿನ ದೃಢೀಕರಣ ಪತ್ರ, ಅಥವಾ ಭಾರತ ಚುನಾವಣಾ ಆಯೋಗ ನೀಡುವ ಮತದಾರರ ಗುರುತಿನ ಚೀಟಿಯಲ್ಲಿರುವ ಜನ್ಮ ದಿನಾಂಕವು ವಯಸ್ಸಿಗೆ ಸಂಬಂಧಿಸಿದ ದಾಖಲೆಯಾಗಿರುತ್ತದೆ.

ಕರ್ನಾಟಕ ಕಾಯಕ ಯೋಜನೆ: ಸ್ತ್ರೀ ಶಕ್ತಿ ಸಂಘಗಳಿಗೆ ₹5 ಲಕ್ಷ ಬಡ್ಡಿರಹಿತ ಸಾಲ!

ಮಾಸಿಕ ವೇತನ 800 ರೂಪಾಯಿಗೆ ಹೆಚ್ಚಳ
ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ವಿಧವೆಯರ ಮಾಸಿಕ ವೇತನವನ್ನು 600 ರೂಪಾಯಿಯಿಂದ 800 ರೂಪಾಯಿಗೆ ಹೆಚ್ಚಿಸಿದ್ದಾರೆ. ಇದರಿಂದ ರಾಜ್ಯಾದ್ಯಂತ ಸುಮಾರು 17 ಲಕ್ಷ ವಿಧವೆಯರಿಗೆ ಪ್ರಯೋಜನವಾಗಿದೆ.
ಲೇಖಕರ ಬಗ್ಗೆ
ಬಾನುಪ್ರಸಾದ ಕೆ.ಎನ್\u200c.
ವಿಜಯ ಕರ್ನಾಟಕ ಡಿಜಿಟಲ್\u200c ಪತ್ರಕರ್ತ. ವಿಜ್ಞಾನ ತಂತ್ರಜ್ಞಾನ, ರಾಷ್ಟ್ರೀಯ- ಅಂತಾರಾಷ್ಟ್ರೀಯ, ಸಾಹಿತ್ಯ-ಕಲೆ, ಶಿಕ್ಷಣ, ಆಸಕ್ತಿಯ ವಿಷಯಗಳು... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ