ಆ್ಯಪ್ನಗರ

ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸಂಬಳ ಎಷ್ಟು ಗೊತ್ತೇ?

ಕರ್ನಾಟಕ ರಾಜ್ಯದ ಡಿಗ್ರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಮಾಸಿಕವಾಗಿ ನೀಡುವ ಗೌರವಧನ ಎಷ್ಟು ಎಂದು ಈ ಕೆಳಗಿನಂತೆ ಅನುಭವ, ಅರ್ಹತೆಯ ಆಧಾರದಲ್ಲಿ ನೀಡಲಾಗಿದೆ. ಈ ಹುದ್ದೆಯ ಆಕಾಂಕ್ಷಿಗಳು ತಪ್ಪದೇ ಓದಿಕೊಳ್ಳಿ.

Authored byಸುನೀಲ್ ಬಿ ಎನ್ | Vijaya Karnataka Web 26 Aug 2023, 4:10 pm

ಹೈಲೈಟ್ಸ್‌:

  • ಡಿಗ್ರಿ ಕಾಲೇಜು ಅತಿಥಿ ಉಪನ್ಯಾಸಕರ ಸಂಬಳ ಎಷ್ಟು?
  • ಅತಿಥಿ ಉಪನ್ಯಾಸಕರಿಗೆ ವೇತನ ಎಷ್ಟು?
  • ಇಲ್ಲಿದೆ ನೋಡಿ ಡೀಟೇಲ್ಸ್‌.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web karnataka degree college guest lecturers monthly salary by hand in 2023
karnataka degree college guest lecturers monthly salary by hand in 2023
ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆ ಪ್ರತಿ ವರ್ಷವು ಸಹ ರಾಜ್ಯದ ಎಲ್ಲ ವಿಶ್ವಿವಿದ್ಯಾಲಯಗಳಡಿ ಕಾರ್ಯನಿರ್ವಹಿಸುವ ಪದವಿ ಕಾಲೇಜುಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುತ್ತದೆ. ಅಂತೆಯೇ ಈ ವರ್ಷವು ಸಹ ಈಗಾಗಲೇ ಸದರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ನಿಗದಿತ ಅರ್ಹತೆಗಳನ್ನು ಹೊಂದಿದ್ದಲ್ಲಿ, ದಿನಾಂಕ 02-09-2023 ರೊಳಗೆ ಆನ್‌ಲೈನ್‌ ಅರ್ಜಿ ಸಲ್ಲಿಸಿ. ಈ ಹುದ್ದೆಗಳಿಗೆ ವೇತನ ಎಷ್ಟು ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.
ಕರ್ನಾಟಕ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಗೌರವಧನ ಮಾಹಿತಿ
  • 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಗೆಸ್ಟ್‌ ಲೆಕ್ಚರರ್‌ ಆಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿತ ಶೈಕ್ಷಣಿಕ ಅರ್ಹತೆ ಹೊಂದಿರುವವರಿಗೆ ರೂ.32,000 ಮಾಸಿಕ ಗೌರವಧನ ನೀಡಲಾಗುತ್ತದೆ.
  • 5 ವರ್ಷಕ್ಕಿಂತ ಕಡಿಮೆ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಅನುಭವ ಹೊಂದಿರುವ ಮತ್ತು ಯುಜಿಸಿ ನಿಗದಿತ ಶೈಕ್ಷಣಿಕ ಅರ್ಹತೆ ಹೊಂದಿರುವವರಿಗೆ ರೂ.30,000 ಮಾಸಿಕ ಗೌರವಧನ ನೀಡಲಾಗುತ್ತದೆ.
  • 5 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ ಮತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗವು ನಿಗದಿತ ವಿದ್ಯಾರ್ಹತೆ ಹೊಂದಿಲ್ಲದವರಿಗೆ ರೂ.28,000 ಮಾಸಿಕ ಗೌರವಧನ ನೀಡಲಾಗುತ್ತದೆ.
  • 5 ವರ್ಷಕ್ಕಿಂತ ಕಡಿಮೆ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ ಹಾಗೂ ಯುಜಿಸಿ ನಿಗಧಿಪಡಿಸಿದ ಶೈಕ್ಷಣಿಕ ಅರ್ಹತೆ ಹೊಂದಿಲ್ಲದವರಿಗೆ ರೂ.26,000 ಮಾಸಿಕ ಗೌರವಧನ ನೀಡಲಾಗುತ್ತದೆ.

ಅತಿಥಿ ಉಪನ್ಯಾಸಕರ ನೇಮಕಾತಿ: ಅರ್ಜಿ ಆಹ್ವಾನ

ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಹತೆಗಳೇನು?
ಕನಿಷ್ಠ ಸ್ನಾತಕೋತ್ತರ ಪದವಿ ಹೊಂದಿರಬೇಕು. ಯುಜಿಸಿ ಎನ್‌ಇಟಿ / ಎಸ್‌ಎಲ್‌ಇಟಿ / ಪಿಹೆಚ್‌ಡಿ / ಕೆಎಸ್‌ಇಟಿ / ಜತೆಗೆ ಕರ್ತವ್ಯ ಅನುಭವಗಳು ಹೆಚ್ಚಿನ ಅರ್ಹತೆಗಳಾಗಲಿದ್ದು, ಈ ಅರ್ಹತೆಗಳಿಗೆ ಅಂಕಗಳನ್ನು ನೀಡಿ, ಮೆರಿಟ್‌ ಆಧಾರದಲ್ಲಿ ಆಯ್ಕೆ ನಡೆಸಲಾಗುತ್ತದೆ.

420 ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗೆ ಲಿಖಿತ ಪರೀಕ್ಷೆ ದಿನಾಂಕ ಪ್ರಕಟ
ಲೇಖಕರ ಬಗ್ಗೆ
ಸುನೀಲ್ ಬಿ ಎನ್
"ಸುನೀಲ್ ಬಿ ಎನ್ ರವರು ಅನುಭವಿ ಬರಹಗಾರರಾಗಿದ್ದು, ಕಳೆದ 7 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು 2015 ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ನಂತರ ಹಲವು ಡೊಮೈನ್‌ಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಸುನೀಲ್ ರವರು ವೈವಿಧ್ಯಮಯ ಪರಿಣತಿಯನ್ನು ಹೊಂದಿದ್ದು, ತಂತ್ರಜ್ಞಾನ, ಸಿನಿಮಾ, ಉದ್ಯೋಗ, ಶಿಕ್ಷಣ, ಜೀವನಶೈಲಿ ಸೇರಿದಂತೆ ಸುದ್ದಿ ವಿಭಾಗದಲ್ಲೂ ಕೆಲಸದ ಅನುಭವ ಹೊಂದಿದ್ದಾರೆ. ಕಳೆದ 3.6 ವರ್ಷಗಳಿಂದ ಸುನೀಲ್‌ ರವರು ಉದ್ಯೋಗ ಮತ್ತು ಶಿಕ್ಷಣ ವಿಭಾಗದಲ್ಲಿ ತಮ್ಮ ಬರವಣಿಗೆ ಕೃಷಿಯನ್ನು ಕೇಂದ್ರೀಕರಿಸಿದ್ದು, ಈ ವಿಷಯಗಳಲ್ಲಿ ಉದ್ಯಮದ ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಬೆಳೆಸಿಕೊಂಡಿದ್ದಾರೆ. ಈ ಎರಡು ಡೊಮೇನ್‌ಗಳಲ್ಲಿನ ಬೆಳವಣಿಗೆ ಹಾಗೂ ಬದಲಾವಣೆ ಕುರಿತು ಲೇಟೆಸ್ಟ್‌ ಮಾಹಿತಿಗಳನ್ನು ರಚಿಸುವ ಮೂಲಕ ಓದುಗರಿಗೆ ಸಹಾಯ ಮಾಡುವ ಹಾಗೂ ಅವರಿಗೆ ಉಪಯುಕ್ತ ಮಾಹಿತಿ ನೀಡುವಲ್ಲಿ ಸದಾ ಉತ್ಸುಕರಾಗಿ ಕೆಲಸ ಮಾಡುತ್ತಿದ್ದಾರೆ. ಬರವಣಿಗೆ ಹೊರತಾಗಿ, ಸುನೀಲ್‌ ಬಿ ಎನ್‌ ರವರು ಹಲವು ಉತ್ತಮ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಿಡುವಿನ ವೇಳೆ ಪ್ರಯಾಣಿಸಲು ಹಾಗೂ ಹೊಸ ಸ್ಥಳಗಳನ್ನು ಅನ್ವೇಷಿಸಲು ಇಷ್ಟಪಡುತ್ತಾರೆ. ಪ್ರಯಾಣವನ್ನು ಶಿಕ್ಷಣದ ಒಂದು ಭಾಗ ಎಂದುಕೊಂಡಿರುವ ಇವರು, ತಮ್ಮ ಈ ಹವ್ಯಾಸದಿಂದ ಅವರ ದೃಷ್ಟಿಕೋನವನ್ನು ವಿಸ್ತರಿಸಲು ಮತ್ತು ವಿಭಿನ್ನ ಸಂಸ್ಕೃತಿಗಳ ಉತ್ತಮ ತಿಳುವಳಿಕೆಯನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಭಾವಿಸಿದ್ದಾರೆ. ಅತ್ಯಾಸಕ್ತಿಯ ಓದುಗರು ಆಗಿದ್ದು ಕಥೆ, ಕಾದಂಬರಿ, ನಾಟಕಗಳ ಪುಸ್ತಕಗಳನ್ನು ಓದುವುದನ್ನು ಇಷ್ಟಪಡುತ್ತಾರೆ. ಬಿಡುವಿನ ವೇಳೆ ಚೆಸ್‌ ಆಡುವುದು ಮತ್ತು ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕವು ವಿಶ್ರಾಂತಿ ಪಡೆಯುತ್ತಾರೆ. "... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ