Please enable javascript.ಸ್ವಲ್ಪ 'ಮ್ಯಾನೇಜ್’ ಮಾಡ್ಕೊಂಡು ಓದಿಬಿಡಿ - ಸ್ವಲ್ಪ 'ಮ್ಯಾನೇಜ್’ ಮಾಡ್ಕೊಂಡು ಓದಿಬಿಡಿ - Vijay Karnataka

ಸ್ವಲ್ಪ 'ಮ್ಯಾನೇಜ್’ ಮಾಡ್ಕೊಂಡು ಓದಿಬಿಡಿ

Vijaya Karnataka Web 10 Sep 2012, 5:32 pm
Subscribe

ಈಗ ಮ್ಯಾನೇಜ್‌ಮೆಂಟ್ ಕೋರ್ಸ್ ಕೇವಲ ನೇರ ಶಿಕ್ಷಣದಲ್ಲಿ ಮಾತ್ರವಲ್ಲ ದೂರ ಶಿಕ್ಷಣದಲ್ಲೂ ಮಾಡಬಹುದು. ಹಾಗೆಯೇ ಆನ್‌ಲೈನ್ ಮುಖಾಂತರವೂ ಮಾಡಬಹುದು. ಮ್ಯಾನೇಜ್‌ಮೆಂಟ್ ಕೋರ್ಸ್‌ನ ವ್ಯಾಪ್ತಿ ಸುಮಾರು ನಲವತ್ತರಿಂದ ಐವತ್ತು ಸ್ಪೆಷಲೈಸೇಷನ್ಸ್‌ಗಳಿಗೆ ವಿಸ್ತರಿಸಿದೆ.

ಸ್ವಲ್ಪ 'ಮ್ಯಾನೇಜ್’ ಮಾಡ್ಕೊಂಡು ಓದಿಬಿಡಿ
* ರೂಪಾ ಎಲ್. ರಾವ್ ಕಳೆದ ಹತ್ತು ಹದಿನೈದು ವರ್ಷಗಳಿಂದೀಚೆಗೆ ಮ್ಯಾನೇಜ್‌ಮೆಂಟ್ ಶಿಕ್ಷಣ ಎನ್ನುವುದು ತನ್ನ ಅಸ್ತಿತ್ವವನ್ನು ಎಲ್ಲೆಡೆ ಹರಡಿಕೊಂಡಿದೆ. ನೇರ ಶಿಕ್ಷಣದಡಿ ಬಿಬಿಎ ಎಮ್‌ಬಿಎ ಬಿಬಿಎಮ್ ಪದವಿಗಳು ಅತೀ ಸುಲಭಕ್ಕೆ ದಕ್ಕುತ್ತಿವೆ. ಆದರೆ ಯಾವುದೋ ಒಂದು ಘಟ್ಟದಲ್ಲಿ ಮುಂದೆ ಓದಲಾಗದೆ ಪದವಿಯನ್ನೋ ಅಥವಾ ಪಿಯುಸಿಯನ್ನೋ ಮುಗಿಸಿ ಒಳ್ಳೆಯ ಸಂಬಳವನ್ನೂ ಪಡೆಯುತ್ತಿರುವವರಿಗೆ ಇತ್ತ ಕೆಲಸವನ್ನೂ ಬಿಡಲಾಗದೆ ಅತ್ತ ಬಡ್ತಿ ಹೊಂದಿ ಉನ್ನತ ಹುದ್ದೆಗೆ ಏರಬೇಕೆನ್ನುವ ಆಸೆಯನ್ನೂ ತೊರೆಯಲಾಗದಂತಹ ಸ್ಥಿತಿ. ದಶಕದ ಹಿಂದೆ ಕೇವಲ ಬಿಎ, ಬಿಕಾಮ್, ಎಮ್‌ಎ, ಎಮ್ ಕಾಂ ಪದವಿಗಳನ್ನು ಮಾತ್ರ ದೂರ ಶಿಕ್ಷಣದಲ್ಲಿ ಮಾಡಿ ತೃಪ್ತಿ ಪಡೆಯುವಂತಹ ಸ್ಥಿತಿ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.

ಈಗ ಮ್ಯಾನೇಜ್‌ಮೆಂಟ್ ಕೋರ್ಸ್ ಕೇವಲ ನೇರ ಶಿಕ್ಷಣದಲ್ಲಿ ಮಾತ್ರವಲ್ಲ ದೂರ ಶಿಕ್ಷಣದಲ್ಲೂ ಮಾಡಬಹುದು. ಹಾಗೆಯೇ ಆನ್‌ಲೈನ್ ಮುಖಾಂತರವೂ ಮಾಡಬಹುದು. ಮ್ಯಾನೇಜ್‌ಮೆಂಟ್ ಕೋರ್ಸ್‌ನ ವ್ಯಾಪ್ತಿ ಕೇವಲ ಬಿಬಿಎ, ಬಿಬಿಎಮ್, ಎಮ್‌ಬಿಎಗೆ ಸೀಮಿತವಾಗಿರದೆ ಸುಮಾರು ನಲವತ್ತರಿಂದ ಐವತ್ತು ಸ್ಪೆಷಲೈಸೇಷನ್ಸ್‌ಗಳಿಗೆ ವಿಸ್ತರಿಸಿದೆ.

ಪ್ರಮುಖ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು * ಡಿಬಿಎ: ಡಿಪ್ಲೋಮಾ ಇನ್ ಬಿಸಿನೆಸ್ ಆಡ್ಮಿನಿಸ್ಟೇಶನ್ . ಒಂದು ವರ್ಷದ ಕೋರ್ಸ್. ಅರ್ಹತೆ-ಪಿಯುಸಿ/ಹತ್ತನೇ ತರಗತಿ. ಪ್ರವೇಶ ಹಂತದ ಕೆಲಸಕ್ಕೆ ಇದು ಸಹಾಯಕಾರಿ

* ಬಿಬಿಎಮ್: ಬ್ಯಾಚುಲರ್ ಆಫ್ ಬಿಸಿನೆಸ್ ಮ್ಯಾನೆಜ್‌ಮೆಂಟ್. ಅರ್ಹತೆ-ದ್ವಿತೀಯ ಪಿಯುಸಿ

* ಬಿಬಿಎ: ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟೇಷನ್. ಅರ್ಹತೆ-ದ್ವಿತೀಯ ಪಿಯುಸಿ/ಅವವಾ ಹದಿನೆಂಟು ವರ್ಷಗಳು

* ಬಿಬಿಎಮ್ ಮತ್ತು ಬಿಬಿಎ ಕೋರ್ಸ್‌ಗಳು ಬಹುತೇಕ ಒಂದೇ ಸಿಲಬಸ್ ಹಾಗೂ ಉದ್ಯೋಗ ಮಾನ್ಯತೆ ಹೊಂದಿವೆಯಾದರೂ - ಬಿಬಿಎ ಮಾಡಿದವರಿಗೆ ಅಡ್ಮಿನಿಸ್ಟ್ರೇಷನ್ ಬಗ್ಗೆ ಕೊಂಚ ಹೆಚ್ಚಾಗಿ ತಿಳಿವಳಿಕೆ ಇರುವುದರಿಂದ ಕೆಲವು ಕಂಪೆನಿಗಳಲ್ಲಿ ಬಿಬಿಎ ಹೊಂದಿರುವವರಿಗೆ ಆದ್ಯತೆ ನೀಡುವುದುಂಟು

ಈ ಎರಡೂ ಕೋರ್ಸ್‌ಗಳಲ್ಲೂ ವಿವಿಧ ಸ್ಪೆಷಲೈಸೇಶನ್‌ಗಳನ್ನೂ ನೀಡಲಾಗುತ್ತದೆ

ಎಕ್ಸಿಕ್ಯೂಟಿವ್ ಕೆಲಸಕ್ಕೆ ಇದು ಏಣಿ ಎಮ್‌ಬಿಎ: ಅರ್ಹತೆ- ಪದವಿ. ಅವಧಿ-ಎರಡು ವರ್ಷ

ದೂರಶಿಕ್ಷಣ ಕ್ರಮದಲ್ಲಿ ಬಹುತೇಕ ಜನ ಮಾಡಬಯಸುವ ಕೋರ್ಸ್ ಇದು. ಸಾಮಾನ್ಯವಾಗಿ ಒಂದು ಕಡೆ ಒಂದೆರೆಡು ವರ್ಷ ಕೆಲಸ ಮಾಡಿದ ಮೇಲೆ ಉನ್ನತ ಹುದ್ದೆಗೇರುವ ಅವಕಾಶಗಳಿರುತ್ತವೆ. ಅಂತಹ ಸಮಯದಲ್ಲಿ ಒಂದು ಮಾಸ್ಟರ್ ಡಿಗ್ರಿಯನ್ನು ಅದೂ ಆಡ್ಮಿನಿಸ್ಟ್ರೇಷನ್‌ನಲ್ಲೇ ಪಡೆದರೆ ಅಂತಹವರಿಗೆ ಅನುಭವದ ಜೊತೆಗೆ ಅರ್ಹತೆಯ ಮಟ್ಟವೂ ಹೆಚಾಗುತ್ತೆ. ಆದ್ದರಿಂದ ಈ ಕೋರ್ಸ್ ಮಾಡಬಯಸುವವರು ಹೆಚ್ಚು.

ಬಹಳ ಜನ ಎಮ್‌ಬಿಎ ಎಂದರೆ ಎಚ್‌ಆರ್, ಸೇಲ್ಸ್ ಮಾರ್ಕೆಟಿಂಗ್, ಫೈನಾನ್ಸ್ , ಇವಿಷ್ಟೇ ಎಂದುಕೊಂಡಿದ್ದಾರೆ ಆದರೆ ನಲವತ್ತಕ್ಕೂ ಹೆಚ್ಚು ಸ್ಪೆಷಲೈಸೇಶನ್ಸ್‌ಗಳೂ ಲಭ್ಯ ಅದಲ್ಲದೇ ಡ್ಯೂಯೆಲ್ ಸ್ಪೆಷಲೈಸೇಶನ್ಸ್ ಅಂದರೆ ಒಂದೇ ಸಲ ಎರಡು ಸ್ಪೆಷಲೈಸೇಶನ್ ಪಡೆಯುವ ಅವಕಾಶ. ಈಗೀಗ ಎಮ್‌ಬಿಎ ಆನಲೈನ್‌ನಲ್ಲೂ ಲಭ್ಯ. ಈ ಮೂಲಕ ಪದವಿಯ ಜತೆಗೆ ಐದು ವರ್ಷಗಳ ಅನುಭವವಿದ್ದಲ್ಲಿ ಲ್ಯಾಟರಲ್ ಎಂಟ್ರಿ ಅಂದರೆ ಎರಡನೇ ವರ್ಷಕ್ಕೆ ನೇರ ಪ್ರವೇಶ ಸಿಗುವುದು.

ಎಕ್ಸಿಕ್ಯೂಟಿವ್ ಎಮ್‌ಬಿಎ ಅರ್ಹತೆ- ಮೂರು ವರ್ಷದ ತಾಂತ್ರಿಕ ಡಿಪ್ಲೋಮಾ ಮತ್ತು ಐದು ವರ್ಷಗಳ ಅನುಭವ/ಪದವಿ ಮತ್ತು ಮೂರು ವರ್ಷದ ಅನುಭವ ಅವಧಿ ಒಂದು ವರ್ಷ. ಬಹಳಷ್ಟು ಕಂಪೆನಿಗಳಲ್ಲಿ ಎಮ್ ಬಿಎ ಮಾಡಿರುವವರಿಗೂ ಬೇಡಿಕೆ ಇದೆ

ಉದ್ಯೋಗ ಅವಕಾಶಗಳು ಸಧ್ಯ ಕೆಲಸ ಮಾಡುವ ಕಂಪೆನಿಗಳಲ್ಲೇ ಮ್ಯಾನೇಜರ್ ಆಗಿ ಬಡ್ತಿ ಹೊಂದಬಹುದು. ಹೊಸ ಸ್ಪೆಷಲೈಸೇಷನ್ಸ್‌ಗಳನ್ನು ಹೊಂದುವುದರಿಂದ ಬೇರೆ ಕಡೆ ಬೇಡಿಕೆಯೂ ಹೆಚ್ಚುತ್ತದೆ. ಬ್ಯಾಂಕ್, ಸರಕಾರಿ ಕ್ಷೇತ್ರಗಳು, ಎಮ್‌ಎನ್‌ಸಿಗಳು, ಪ್ರೈವೇಟ್ ಕಂಪೆನಿಗಳು ಸಣ್ಣ ಮತ್ತು ದೊಡ್ಡ ಕೈಗಾರಿಕೋದ್ಯಗಳು ಇಲ್ಲೆಲ್ಲಾ ಮ್ಯಾನೇಜ್‌ಮೆಂಟ್ ಎಜುಕೇಶನ್ ಜತೆಗೆ ಅನುಭವವೂ ಇದ್ದಲ್ಲಿ ನೇರ ಶಿಕ್ಷಣ ಮುಗಿಸಿ ಬರುವರಿಗಿಂತ ಜಾಸ್ತಿ ಮನ್ನಣೆ ದೊರೆಯುತ್ತದೆ.

ಪ್ರಮುಖ ಸ್ಪೆಷಲೈಸೇಷನ್‌ಗಳು * ಬ್ಯಾಂಕಿಂಗ್- ಆಪರೇಷನ್ಸ್-ಪರ್ಚೇಸ್ ಮತ್ತು ಮೆಟೀರಿಯಲ್ಸ್ * ಹಾಸ್ಪಿಟಾಲಿಟಿ- ಫೆಸಿಲಿಟಿ ಮತ್ತು ಇನ್‌ಫಾಸ್ಟ್ರಕ್ಚರ್ ಹಾಸ್ಪಿಟಲ್ * ರೀಟೇಲ್- ಪ್ರಾಜೆಕ್ಟ್ -ಟೋಟಲ್ ಕ್ವಾಲಿಟಿ- ಹ್ಯೂಮನ್ ರಿಸೋರ್ಸ್ * ಫೈನಾನ್ಸ್-ಐಟಿ (ಮಾಹಿತಿ ತಂತ್ರಜ್ಞಾನ)-ಮಾರ್ಕೆಟಿಂಗ್ * ಮೀಡಿಯಾ - ಇನ್‌ಶೂರೆನ್ಸ್ -ಟೂರಿಸಂ * ಪ್ರೊಡಕ್ಷನ್-ಇಂಟರ್‌ನ್ಯಾಶನಲ್ ಬಿಸಿನೆಸ್ * ದೂರ ಶಿಕ್ಷಣದಡಿ ಪ್ರವೇಶ ನೀಡುವ ಪ್ರಮುಖ ವಿಶ್ವವಿದ್ಯಾನಿಲಯಗಳು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಪಂಜಾಬ್ ಟೆಕ್ನಿಕಲ್ ಯೂನಿವರ್ಸಿಟಿ, ಬೆಂಗಳೂರು ವಿಶ್ವವಿದ್ಯಾನಿಲಯ ಮತ್ತು ಕುವೆಂಪು ವಿಶ್ವವಿದ್ಯಾಲಯ ಇತ್ಯಾದಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ