Please enable javascript.ಕ್ವಿಕ್ ಬೈಟ್: ಇಡ್ಲಿ ಉಪಮಾ - ಕ್ವಿಕ್ ಬೈಟ್: ಇಡ್ಲಿ ಉಪಮಾ - Vijay Karnataka

ಕ್ವಿಕ್ ಬೈಟ್: ಇಡ್ಲಿ ಉಪಮಾ

Vijaya Karnataka Web 17 Jan 2014, 4:43 am
Subscribe

ಉಳಿದ 5 ಇಡ್ಲಿಗಳು, 3 ಟೇಬಲ್ ಸ್ಪೂನ್ ಅಡುಗೆ ಎಣ್ಣೆ, ಅರ್ಧ ಟೀ ಚಮಚ ಅರಿಶಿಣ, ತಲಾ ಕಾಲು ಚಮಚ ಸಾಸಿವೆ, ಉದ್ದಿನ ಬೇಳೆ, ಹುರಿಗಡಲೆ, 2 ರಿಂದ 3 ಕೆಂಪು ಮೆಣಸಿನ–ಕಾಯಿ, ಒಂದು ಎಸಳು ಕರಿಬೇವು, ಸಣ್ಣದಾಗಿ ಹೆಚ್ಚಿದ ಒಂದು ದೊಡ್ಡ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು. ಇಡ್ಲಿಗಳನ್ನು ಕೈಯಿಂದ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿಡಿ.

ಕ್ವಿಕ್ ಬೈಟ್: ಇಡ್ಲಿ ಉಪಮಾ
ಉಳಿದ 5 ಇಡ್ಲಿಗಳು, 3 ಟೇಬಲ್ ಸ್ಪೂನ್ ಅಡುಗೆ ಎಣ್ಣೆ, ಅರ್ಧ ಟೀ ಚಮಚ ಅರಿಶಿಣ, ತಲಾ ಕಾಲು ಚಮಚ ಸಾಸಿವೆ, ಉದ್ದಿನ ಬೇಳೆ, ಹುರಿಗಡಲೆ, 2 ರಿಂದ 3 ಕೆಂಪು ಮೆಣಸಿನ–ಕಾಯಿ, ಒಂದು ಎಸಳು ಕರಿಬೇವು, ಸಣ್ಣದಾಗಿ ಹೆಚ್ಚಿದ ಒಂದು ದೊಡ್ಡ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು. ಇಡ್ಲಿಗಳನ್ನು ಕೈಯಿಂದ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿಡಿ. ದಪ್ಪ ತಳದ ಕಡಾಯಿಗೆ ಎಣ್ಣೆ ಹಾಕಿ ಕಾಯಲು ಇಡಿ, ಕಾದ ಎಣ್ಣೆಗೆ ಸಾಸಿವೆ, ಉದ್ದಿನ ಬೇಳೆ, ಹುರಿಗಡಲೆ, ಕೆಂಪು ಮೆಣಸಿನಕಾಯಿ, ಕರಿಬೇವು, ಹಾಕಿ ಕೈಯ್ಯಾಡುತ್ತಿರ–ಬೇಕು. ಉದ್ದಿನ ಬೇಳೆ ಚಿನ್ನದ ಬಣ್ಣಕ್ಕೆ ಬಂದ ಮೇಲೆ ಈರುಳ್ಳಿ, ಅರಿಶಿಣ ಪುಡಿ ಸೇರಿಸಬೇಕು. ನಂತರ ಈರುಳ್ಳಿ ಸ್ವಲ್ಪ ಕ್ರಿಸ್ಪಿಯಾಗುವವರೆಗೆ ಹುರಿದು ಇಡ್ಲಿ ಪುಡಿಯನ್ನು ಸೇರಿಸಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. (ಇಡ್ಲಿಗೆ ಈಗಾಗಲೇ ಉಪ್ಪು ಹಾಕಲಾಗಿರುತ್ತದೆ). ಇದಕ್ಕೆ ಬೇಕಾದರೆ ತರಕಾರಿಗಳನ್ನು ಕೂಡ ಸೇರಿಸಿಕೊಳ್ಳಬಹುದು. 7 ರಿಂದ 10 ನಿಮಿಷದಲ್ಲಿ ತಯಾರಾಗುವ ಇದನ್ನು ಇಬ್ಬರಿಗೆ ಸರ್ವ್ ಮಾಡಬಹುದು. ಬೆಳಗಿನ ಉಪಾಹಾರಕ್ಕೆ ಬಿಸಿ ಬಿಸಿ ಇಡ್ಲಿ ಮಾಡಿ ತಿಂದಿರುತ್ತೇವೆ. ಉಳಿದ ಇಡ್ಲಿಗಳನ್ನು ಏನು ಮಾಡುವುದಪ್ಪಾ ಎನ್ನುವ ಪ್ರಶ್ನೆ ಒಂದಲ್ಲ ಒಂದು ಸಾರಿ ಎಲ್ಲರಿಗೂ ಬಂದಿರುತ್ತದೆ. ಆಗ ಇಡ್ಲಿ ಉಪಮಾ ಟ್ರೈ ಮಾಡಬಹುದು.
-ಹೇಮಾ ಖುರ್ಸಾಪೂರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ