Please enable javascript.ಎಸ್‌ವಿಸಿ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ - vacancies in Shamrao Vithal Co-operative Bank - Vijay Karnataka

ಎಸ್‌ವಿಸಿ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ

Vijaya Karnataka Web 22 Feb 2016, 4:00 am
Subscribe

ಶ್ಯಾಮರಾವ್ ವಿಠಲ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಖಾಲಿ ಇರುವ 104 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

vacancies in shamrao vithal co operative bank
ಎಸ್‌ವಿಸಿ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ
ಕರ್ನಾಟಕದಲ್ಲಿ ಹಲವು ಶಾಖೆಗಳನ್ನು ಹೊಂದಿರುವ ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಸ್‌ವಿಸಿ ಕೋ-ಅಪರೇಟೀವ್ ಬ್ಯಾಂಕ್ ಲಿಮಿಟೆಡ್, ಸುಮಾರು 104 ಗ್ರಾಹಕ ಸೇವಾ ಅಧಿಕಾರಿ (ಸಿಎಸ್‌ಒ) ಮತ್ತು ಪ್ರತಿನಿಧಿ (ಸಿಎಸ್‌ಆರ್) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಉದ್ದೇಶಿಸಿದೆ. ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್‌ಗಳಲ್ಲಿ ಪ್ರಮುಖವಾಗಿರುವ, 109 ವರ್ಷ ಹಳೆಯದಾದ ಶಾಮ್‌ರಾವ್ ವಿಟಲ್ ಬ್ಯಾಂಕ್(ಎಸ್‌ವಿಸಿ) ತನ್ನ ಜೂನಿಯರ್ ಮ್ಯಾನೇಜ್‌ಮೆಂಟ್ ಗ್ರೇಡ್ ಮತ್ತು ಕ್ಲರಿಕಲ್ ಗ್ರೇಡ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಿದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಯಾವೆಲ್ಲ ಹುದ್ದೆಗಳಿವೆ?
* ಕಸ್ಟಮರ್ ಸರ್ವೀಸ್ ಆಫೀಸರ್-24 ಹುದ್ದೆಗಳು

* ಕಸ್ಟಮರ್ ಸರ್ವೀಸ್ ರೆಪ್ರಸೆಂಟೇಟಿವ್- 80 ಹುದ್ದೆಗಳು

ಈ ದಿನಾಂಕಗಳನ್ನು ನೆನಪಿನಲ್ಲಿಡಿ

* ಆನ್‌ಲೈನ್ ಅರ್ಜಿ ಮತ್ತು ಶುಲ್ಕ ಪಾವತಿ ಮಾಡಲು ಆರಂಭಿಕ ದಿನಾಂಕ: ಫೆಬ್ರವರಿ 26, 2016.

* ಆನ್‌ಲೈನ್ ಅರ್ಜಿ ಮತ್ತು ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ: ಮಾರ್ಚ್ 14, 2016

* ಪರೀಕ್ಷೆ ನಡೆಯುವ ದಿನ: ಏಪ್ರಿಲ್ 23, 2016

ಅರ್ಹತೆಗಳೇನು?

ವಿದ್ಯಾರ್ಹತೆ: ರೆಪ್ರಸೆಂಟಿಟೇಟಿವ್ ಹುದ್ದೆಗೆ ಅಂಗೀಕೃತ ವಿವಿಯಿಂದ ಪದವಿ ( ಕನಿಷ್ಠ ಶೇ. 45 ಅಂಕ) ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಇರುವುದು ಕಡ್ಡಾಯ. ಕಸ್ಟಮರ್ ಸರ್ವೀಸ್ ಆಫೀಸರ್ ಹುದ್ದೆಗೆ ಪದವಿ (ಕನಿಷ್ಠ ಶೇ. 50 ಅಂಕ) ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು.

ವಯೋಮಿತಿ: ರೆಪ್ರಸೆಂಟಿಟೀವ್ ಹುದ್ದೆಗೆ ಗರಿಷ್ಠ ವಯೋಮಿತಿ 30 ವರ್ಷ ಮತ್ತು ಕಸ್ಟಮರ್ ಸರ್ವೀಸ್ ಆಫೀಸರ್ ಹುದ್ದೆಗೆ ಗರಿಷ್ಠ ವಯೋಮಿತಿ 32 ವರ್ಷ.

ಅರ್ಜಿ ಶುಲ್ಕ: 600 ರೂಪಾಯಿ.

ಶುಲ್ಕ ಪಾವತಿ ಹೇಗೆ?: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್‌ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್ಸ್/ಮೊಬೈಲ್ ವ್ಯಾಲೆಟ್‌ಗಳನ್ನು ಬಳಸಿ ಅರ್ಜಿ ಶುಲ್ಕ ಪಾವತಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

1. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮುನ್ನ ಬಳಕೆಯಲ್ಲಿರುವ ಇಮೇಲ್ ಐಡಿ ನಿಮ್ಮಲ್ಲಿರಲಿ. ನಿಮ್ಮ ಸಹಿ ಮತ್ತು ಫೋಟೊಗ್ರಾಫ್ ಅನ್ನು ಸ್ಕ್ಯಾನ್ ಮಾಡಿಡಿ.

2. ಡಿಡಿಡಿ.ಡ್ಚಚಿಚ್ಞ.್ಚಟಞ ವೆಬ್‌ಸೈಟ್‌ಗೆ ಲಾಗಿನ್ ಆಗಿ.

3. ಕರಿಯರ್ ವಿಭಾಗದಲ್ಲಿ ನಿಮ್ಮ ಆಯ್ಕೆಯ ಉದ್ಯೋಗವನ್ನು ಆಯ್ಕೆ ಮಾಡಿ.

4. ಗೈಡ್‌ಲೈನ್ಸ್ ವಿಭಾಗವನ್ನು ಕ್ಲಿಕ್ ಮಾಡಿ ಪ್ರತಿಯೊಂದು ವಿವರಗಳನ್ನೂ ಎಚ್ಚರಿಕೆಯಿಂದ ಓದಿ.

5. ನಿಮ್ಮ ಮಾಹಿತಿಗಳನ್ನು ಫಾರ್ಮ್‌ನಲ್ಲಿ ಎಚ್ಚರಿಕೆಯಿಂದ ತುಂಬಿ.

6. ಯಾವುದೇ ತಪ್ಪಿಲ್ಲವೆಂದು ಖಾತ್ರಿಮಾಡಿಕೊಂಡು ಸಬ್‌ಮಿಟ್ ಬಟನ್ ಒತ್ತಿ.

6. ಆನ್‌ಲೈನ್ ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ.

ಸೂಚನೆಗಳು

* ಎಲ್ಲಾದರೂ ಅಭ್ಯರ್ಥಿಗೆ ಯೂನಿವರ್ಸಿಟಿಯು ಸಿಜಿಪಿಎ/ಸಿಪಿ ಸ್ಕೋರ್ ನೀಡಿದ್ದರೆ ಕಳೆದ ಎರಡು ಸೆಮಿಸ್ಟಾರ್‌ಗಳ ಎಲ್ಲಾ ಅಂಕಗಳನ್ನು ಒಟ್ಟುಗೂಡಿಸಿ ಎಲ್ಲಾ ಸಬ್ಜೆಕ್ಟ್‌ಗಳನ್ನು ಲೆಕ್ಕ ಹಾಕಿ ಪರ್ಸಂಟೇಜ್ ಕಂಡುಹಿಡಿಯಬೇಕು.

* ಕನಿಷ್ಠ ಜಿಎಐಐಬಿ/ಸಿಎಐಐಬಿ ಪರೀಕ್ಷೆ ಪಾಸಾಗಿ ಇತರ ಬ್ಯಾಂಕ್‌ಗಳಲ್ಲಿ ಕ್ಲರಿಕಲ್ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರಿಗೆ ವಯೋಮಿತಿಯಲ್ಲಿ 3 ವರ್ಷಗಳವರೆಗೆ ವಿನಾಯಿತಿ ಇರುತ್ತದೆ. ಅಂದರೆ, ಇತರ ಬ್ಯಾಂಕ್‌ಗಳಲ್ಲಿ ಕ್ಲರಿಕಲ್ ಕೇಡರ್‌ನಲ್ಲಿ ಎಷ್ಟು ವರ್ಷ ಕೆಲಸ ಮಾಡಿರುತ್ತಾರೋ ಅಷ್ಟು ವಯೋಮಿತಿ ವಿನಾಯಿತಿ ನೀಡಲಾಗುತ್ತದೆ. ಈ ವಿನಾಯಿತಿಯನ್ನು ಮೂರು ವರ್ಷಕ್ಕಿಂತ ಹೆಚ್ಚು ನೀಡಲಾಗುವುದಿಲ್ಲ.

* ಸಂದರ್ಶನದ ಸಮಯದಲ್ಲಿ ಪಾನ್ ಕಾರ್ಡ್/ಪಾಸ್‌ಪೋರ್ಟ್/ ಡ್ರೈವಿಂಗ್ ಲೈಸನ್ಸ್/ಪೋಟೊಗ್ರಾಫ್ ಇರುವ ಬ್ಯಾಂಕ್ ಪಾಸ್‌ಪೋರ್ಟ್/ ಮತದಾರರ ಗುರುತಿನ ಚೀಟಿ/ಆಧಾರ್ ಕಾರ್ಡ್ ಇತ್ಯಾದಿಗಳನ್ನು ಐಡೆಂಟಿಟಿ ಪ್ರೂಫ್ ಆಗಿ ನೀಡಬಹುದು. ರೇಷನ್ ಕಾರ್ಡ್ ಮತ್ತು ಇ-ಆಧಾರ್ ಕಾರ್ಡ್ ಅನ್ನು ವ್ಯಾಲಿಡ್ ಐಡಿ ಪ್ರೂಫ್ ಎಂದು ಪರಿಗಣಿಸಲಾಗುವುದಿಲ್ಲ.

* ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಫೆಬ್ರವರಿ 26, 2016ರಿಂದ ಮಾರ್ಚ್ 14, 2016ರ ತನಕ ಅರ್ಜಿ ಸಲ್ಲಿಸಬಹುದು. ನೀಡಿರುವ ಸಲಹೆ, ಸೂಚನೆಗಳನ್ನು ಎಚ್ಚರಿಕೆಯಿಂದ ಗಮನಿಸಿ ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಂಚೆ, ಕೊರಿಯರ್ ಇತ್ಯಾದಿಗಳಲ್ಲಿ ಅರ್ಜಿ ಸಲ್ಲಿಸಿದರೆ ತಿರಸ್ಕರಿಸಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ