Please enable javascript.ಇಂಟೀರಿಯರ್‌ಗೆ ಮರದ ಮೆರುಗು - wood for interior decoration - Vijay Karnataka

ಇಂಟೀರಿಯರ್‌ಗೆ ಮರದ ಮೆರುಗು

Vijaya Karnataka Web 15 Oct 2016, 4:00 am
Subscribe

ಎರಡು ಕವಲು ಮರ ಕೇವಲ ಮನೆಯ ಬಾಗಿಲು, ಕಿಟಕಿಗಳಿಗೆ ಸೀಮಿತವಲ್ಲ ಬದಲಾಗಿ ಇಂಟೀರಿಯರ್‌ ಅಂಲಕಾರದಲ್ಲಿ ಕೂಡ ಈಗ ಮಹತ್ವದ ಪಾತ್ರ ವಹಿಸುತ್ತಿದೆ...

wood for interior decoration
ಇಂಟೀರಿಯರ್‌ಗೆ ಮರದ ಮೆರುಗು

ಮರ ಕೇವಲ ಮನೆಯ ಬಾಗಿಲು, ಕಿಟಕಿಗಳಿಗೆ ಸೀಮಿತವಲ್ಲ. ಬದಲಾಗಿ ಇಂಟೀರಿಯರ್‌ ಅಂಲಕಾರದಲ್ಲಿ ಕೂಡ ಈಗ ಮಹತ್ವದ ಪಾತ್ರ ವಹಿಸುತ್ತಿದೆ. ಮರದಿಂದಲೇ ಡೆಕೊರೇಶನ್‌ ಎಂಬ ಪರಿಕಲ್ಪನೆ ಸಂಗ್ರಹದ ಸ್ಥಳವಾಗಿ ಕೂಡ ಬಳಕೆಯಾಗುವ ಮೂಲಕ ಹೊಸ ರೂಪದೊಂದಿಗೆ ಈಗ ಕಾಣಿಸಿಕೊಳ್ಳುತ್ತಿದೆ.

ಸುಂದರ ಕೆತ್ತನೆಗಳುಳ್ಳ ಮರದ ಪೆಟ್ಟಿಗೆಯೊಂದನ್ನು ಅಲಂಕಾರಿಕವಾಗಿ ಮತ್ತು ಸಂಗ್ರಹ ಸ್ಥಳವಾಗಿ ಎರಡೂ ವಿಧದಲ್ಲಿ ಉಪಯೋಗಕ್ಕೆ ಬರುತ್ತದೆ. ಮರದ ಪೆಟ್ಟಿಗೆಯು ಮನೆಯ ಇಂಟೀರಿಯರ್‌ಗೆ ಸಾಂಪ್ರದಾಯಿಕ, ಪ್ರಾಚೀನ ಕಾಲದ ಲುಕ್‌ ನೀಡುವುದರಲ್ಲಿ ಸಂದೇಹವಿಲ್ಲ. ಶತಶತಮಾನಗಳಿಂದ ಇಂತಹ ಪೆಟ್ಟಿಗೆಗಳು ಅಲಂಕಾರ ಮತ್ತು ಉಪಯೋಗ ಎರಡರಲ್ಲೂ ಬಳಕೆಯಾಗುತ್ತಲೇ ಬಂದಿದೆ. ಸಾಮಾನ್ಯವಾಗಿ ಇಂತಹ ಪೆಟ್ಟಿಗೆಗಳು ಸೆಂಟರ್‌ ಟೇಬಲ್‌ ಪಾತ್ರ ಪಡೆಯುವುದೇ ಹೆಚ್ಚು. ಅದರಲ್ಲೂ ಆಧುನಿಕ ಕಾಲದಲ್ಲಿ ಮೇಲ್ಬಾಗದಲ್ಲಿ ಗಾಜಿನ ಮುಚ್ಚಳವಿರುವ ಪೆಟ್ಟಿಗೆ ಇಡೀ ಕೊಠಡಿಯ ಶೋಭೆಯನ್ನು ಹೆಚ್ಚಿಸುತ್ತದೆ. ಇಂತಹ ಪೆಟ್ಟಿಗೆಗಳಿಂದ ಹೆಚ್ಚುವ ಅಂದದ ಬಗ್ಗೆ ಗಮನ ಹರಿಸೋಣ.

ವಿಷುವಲ್‌ ಅಪೀಲ್‌: ಸಾಮಾನ್ಯವಾಗಿರುವ ಸಂಗ್ರಹ ಪೆಟ್ಟಿಗೆಗಳಿಗೆ ಭಿನ್ನವಾಗಿ ಇಂತಹ ಅಂದದ ಮರ ಪೆಟ್ಟಿಗೆ ಉಪಯೋಗ ಮತ್ತು ಆಸ್ತೆಟಿಕ್‌ ಅಪೀಲ್‌ ಎರಡರಲ್ಲೂ ನೆರವು ನೀಡುತ್ತದೆ. ಚೆಸ್ಟ್‌ ಎಂದು ಕರೆಯಲ್ಪಡುವ ಇವುಗಳ ಮೂಲ ಉದ್ದೇಶವೇ ಸಂಗ್ರಹ ಸ್ಥಳ. ಮಕ್ಕಳ ಆಟಿಕೆಗಳಿಂದ ಹಿಡಿದು ಕಿಚನ್‌ನ ಸಾಮಗ್ರಿಗಳವರೆಗೆ ಯಾವುದನ್ನು ಬೇಕಾದರೂ ಇದರಲ್ಲಿ ಸಂಗ್ರಹಿಸಬಹುದು.

ಪ್ರವೇಶ ದ್ವಾರ : ಮನೆಯೊಳಗೆ ಪ್ರವೇಶಿಸುವ ಪ್ಯಾಸೇಜ್‌ನಲ್ಲಿ ಕೂಡ ಇದನ್ನು ಇಡಬಹುದು. ಆಗ ಅದರ ಮೇಲೊಂದು ಕನ್ನಡಿ, ಪಕ್ಕದಲ್ಲಿ ಫ್ಲವರ್‌ ವಾಜ್‌ ಅದರಲ್ಲೂ ಫ್ರೆಶ್‌ ಹೂಗಳಿರುವ ವಾಜ್‌ ಇಟ್ಟರೆ ಮನೆಯೊಳಗೆ ಪ್ರವೇಶಿಸುತ್ತಲೇ ಮುದ ನೀಡುವ ಅನುಭವ ಪಡೆಯಬಹುದು.

ಲೀವಿಂಗ್‌ ರೂಮ್‌: ಅಲಂಕೃತ ಮರದ ಚೆಸ್ಟ್‌ ಲೀವಿಂಗ್‌ ರೂಮ್‌ಗೆ ಹೆಚ್ಚು ಹೊಂದಿಕೆಯಾಗುತ್ತದೆ. ಇದಕ್ಕೆ ಕಂಚು ಅಥವಾ ತಾಮ್ರದ ಅಂಚುಗಳನ್ನು ಜೋಡಿಸಿದ್ದರೆ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ. ಸಿದ್ಧವಾಗಿರುವ ಚೆಸ್ಟ್‌ಗಳು ಕೂಡ ಈಗ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇವುಗಳಲ್ಲಿ ಕ್ರಿಯೇಟಿವ್‌ ಡೆಕೊರೇಟಿವ್‌ ಡಿಸೈನ್‌ಗಳು ಕೂಡ ಇರುತ್ತವೆ.

ಇನ್ನು ಲೀವಿಂಗ್‌ ರೂಮ್‌ನಲ್ಲಿ ಕಾಫಿ ಟೇಬಲ್‌ ಆಗಿ ಕೂಡ ಇದನ್ನು ಇಟ್ಟುಕೊಳ್ಳಬಹುದು. ಅಷ್ಟೇ ಏಕೆ ಡೈನಿಂಗ್‌ ಹಾಲ್‌, ಬೆಡ್‌ ರೂಮ್‌ಗಳಿಗೆ ಕೂಡ ಇದು ಕಾಫಿ ಟೇಬಲ್‌ ಕೆಲಸವನ್ನು ನಿರ್ವಹಿಸುತ್ತದೆ. ಲೀವಿಂಗ್‌ ರೂಮ್‌ ಸಾಮಾನ್ಯವಾಗಿ ಉದ್ದವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಡ್ರವರ್‌ಗಳಿರುವ ಚೆಸ್ಟ್‌ನ್ನು ಸೋಫಾ ಸೆಟ್‌ ಹಿಂದೆ ಇಡಬಹುದು. ಇವು ಪೋರ್ಟೆಬಲ್‌ ಆಗಿರುವುದರಿಂದ ಎಲ್ಲೆಂದರಲ್ಲಿ ಸಾಗಿಸುವುದು ಕೂಡ ತುಂಬಾ ಸುಲಭ. ಟಿವಿ ಸ್ಟ್ಯಾಂಡ್‌ ಆಗಿ ಕೂಡ ಇದನ್ನು ಬಳಸಬಹುದು. ಅದರಲ್ಲಿರುವ ಡ್ರವರ್‌ಗಳು ಸಿಡಿ, ರಿಮೋಟ್‌ ಕಂಟ್ರೋಲ್‌ ಮುಂದಾವನ್ನು ಇಡಲು ಅನುಕೂಲಕರವಾಗಿರುತ್ತದೆ.

ಡ್ರವರ್‌ ಚೆಸ್ಟ್‌: ಇದು ಹಲವಾರು ಉದ್ದೇಶಗಳನ್ನು ಪೂರ್ಣಗೊಳಿಸುತ್ತದೆ. ಅಂದರೆ ರೂಮ್‌ನ ಆಕಾರಕ್ಕೆ ಅನುಗುಣವಾಗಿ ಎಲ್ಲಾ ಆಕಾರಗಳ, ಗಾತ್ರ, ಎತ್ತರ, ಗಿಡ್ಡದ ಚೆಸ್ಟ್‌ಗಳು ಸಿಗುತ್ತವೆ.

ಚೆಸ್ಟ್‌ ವೈವಿಧ್ಯಗಳು: ಅಲಂಕೃತ ಮರದ ಪೆಟ್ಟಿಗೆಗಳಲ್ಲಿ ಹಲವು ವಿಧಗಳಿವೆ. ಅದರಲ್ಲಿ ಹೆಚ್ಚು ಜನಪ್ರಿಯವಾಗಿರುವುದು ಮರದ ಟ್ರೆಶರ್‌ ಚೆಸ್ಟ್‌. ಬೀಟೆ ಅಥವಾ ತೇಗದ ಮರದಿಂದ ಮಾಡಿದ ಚೆಸ್ಟ್‌ಗಳು ಸಾಮಾನ್ಯವಾಗಿ ಬಳಕೆಯಲ್ಲಿವೆ. ಸ್ಟೆಪ್‌ ಚೆಸ್ಟ್‌ ಅನ್ನುವುದು ಮತ್ತೊಂದು ವಿಧ. ಇದು ರೂಮ್‌ ಡಿವೈಡರ್‌ ಆಗಿ ಕೆಲಸ ಮಾಡುತ್ತದೆ. ಜೊತೆಗೆ ಹಲವು ಕಂಪಾರ್ಟ್‌ಮೆಂಟ್‌ಗಳಿರುವ ಇದರಲ್ಲಿ ಏನನ್ನು ಬೇಕಾದರೂ ಸಂಗ್ರಹಿಸಿಡಬಹುದು.

ರೆಗ್ಯುಲರ್‌ ಚೆಸ್ಟ್‌ಗಳನ್ನು ನೈಟ್‌ಸ್ಟ್ಯಾಂಡ್‌, ವಿಂಡೋ ಸೀಟ್‌, ಮಿನಿ ಟೇಬಲ್‌ ಆಗಿ ಕೂಡ ಬಳಸಿಕೊಳ್ಳಬಹುದು. ಮಕ್ಕಳ ರೂಮಿದ್ದರೆ ಅದರಲ್ಲಿ ಅವರ ಆಟಿಕೆ, ಶಾಲೆಯ ಸಾಮಗ್ರಿಗಳನ್ನು ಇಡಬಹುದು. ಇನ್ನು ಇದರ ಮೇಲೊಂದು ಲ್ಯಾಂಪ್‌ ಅಳವಡಿಸಿದರೆ ಆಗ ಅದು ನೈಟ್‌ ಟೇಬಲ್‌ ಆಗಿ ಮಾರ್ಪಡುತ್ತದೆ. ಒಟ್ಟಿನಲ್ಲಿ ಅಲಂಕೃತ ಮರದ ಪೆಟ್ಟಿಗೆ ಅಥವಾ ಚೆಸ್ಟ್‌ ಇಂಟೀರಿಯರ್‌ ಸೌಂದರ್ಯ ಹೆಚ್ಚಿಸುವುದರ ಜೊತೆಗೆ ಹಲವು ವಿಧದಲ್ಲಿ ಉಪಯುಕ್ತವಾಗಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ