ಆ್ಯಪ್ನಗರ

ಈರುಳ್ಳಿ ತಿಂದರೆ ಹೊಟ್ಟೆ ಕೊಬ್ಬು ಕರಗಿ ಸಣ್ಣ ಆಗುತ್ತೆ! ಬೇಕಾದರೆ ಟ್ರೈ ಮಾಡಿ...

ಪ್ರತಿದಿನ ನಮ್ಮ ಅಡುಗೆಯಲ್ಲಿ ಈರುಳ್ಳಿಯನ್ನು ಬಳಸುತ್ತೇವೆ. ಆದರೆ ಇದರ ಪ್ರಯೋಜನಗಳು ಮಾತ್ರ ನಮಗೆ ಅಷ್ಟಾಗಿ ಗೊತ್ತಿರುವುದಿಲ್ಲ. ಆದರೆ ನಿಜ ಹೇಳಬೇಕೆಂದರೆ, ಈರುಳ್ಳಿಯಲ್ಲಿ ಕಂಡು ಬರುವ ಆರೋಗ್ಯಕಾರಿ ಅಂಶಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಕಡಿಮೆ ಮಾಡುವುದು ಮಾತ್ರ ವಲ್ಲದೆ, ಹೃದಯದ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಜೊತೆಗೆ ದೇಹದ ತೂಕ ಇಳಿಸಿ, ಬೊಜ್ಜಿನ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ...

Vijaya Karnataka Web 26 Jul 2022, 5:25 pm
ಆಧುನಿಕ ಜೀವನಶೈಲಿಗಳಿಂದಾಗಿ ಇಂದಿನ ದಿನಗಳಲ್ಲಿ ಹೆಚ್ಚಿನವರಿಗೆ ದೇಹದ ತೂಕ ಹಾಗೂ ಬೊಜ್ಜಿನ ಸಮಸ್ಯೆ ಹೆಚ್ಚಿನವರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಅದರಲ್ಲೂ ಹೊಟ್ಟೆಯ ಸುತ್ತ ಬೊಜ್ಜು ಆವರಿಸಿಕೊಂಡು ಬಿಟ್ಟರೆ, ಇದನ್ನು ಕರಗಿಸುವುದು ಅಷ್ಟು ಸುಲಭದ ಮಾತಲ್ಲ.
Vijaya Karnataka Web add onion in your daily diet to loss weight an burn your belly fat naturally
ಈರುಳ್ಳಿ ತಿಂದರೆ ಹೊಟ್ಟೆ ಕೊಬ್ಬು ಕರಗಿ ಸಣ್ಣ ಆಗುತ್ತೆ! ಬೇಕಾದರೆ ಟ್ರೈ ಮಾಡಿ...


ಅಷ್ಟೇ ಅಲ್ಲದೆ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುತ್ತಾ ಹೋದರೆ, ಮುಂದಿನ ದಿನಗಳಲ್ಲಿ ಇದರಿಂದಾಗಿ ದೀರ್ಘಕಾಲದ ಕಾಯಿಲೆಗಳು ಕೂಡ ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ದೇಹದ ತೂಕ ಮತ್ತು ಹೊಟ್ಟೆಯ ಭಾಗದ ಬೊಜ್ಜನ್ನು ಬೆಳೆಸಲು ಬಿಡಬಾರದು. ಇದಕ್ಕಾಗಿ ಆರೋಗ್ಯಕಾರಿ ಆಹಾರ ಪದ್ಧತಿಯ ಜೊತೆಗೆ ಸರಿಯಾದ ಜೀವನ ಶೈಲಿಯನ್ನು ಅನುಸರಿಸಬೇಕು. ಬನ್ನಿ ಇಂದಿನ ಲೇಖನದಲ್ಲಿ ಅಡುಗೆಯಲ್ಲಿ ಈರುಳ್ಳಿ ಬಳಸುವುದರಿಂದ, ಆರೋಗ್ಯ ವೃದ್ಧಿಯಾಗುವುದರ ಜೊತೆಗೆ, ಬೊಜ್ಜನ್ನು ಕರಗಿಸುವುದು ಹೇಗೆ ಎನ್ನುವುದನ್ನು ನೋಡೋಣ...

ಈರುಳ್ಳಿಯ ಪ್ರಯೋಜನಗಳು

  • ಈರುಳ್ಳಿ ಹೆಚ್ಚಿದರೆ ಕಣ್ಣಿನಲ್ಲಿ ನೀರು ಬರುತ್ತದೆ, ಎನ್ನುವ ಒಂದು ಕಾರಣ ಬಿಟ್ಟರೆ, ಉಳಿದೆಲ್ಲಾ ವಿಷ್ಯ ದಲ್ಲೂ ಕೂಡ ಈರುಳ್ಳಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮುಖ್ಯವಾಗಿ ಮುನುಷ್ಯನ ಜೀರ್ಣಾಂಗ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಜೊತೆಗೆ ಅಜೀರ್ಣ ಹಾಗೂ ಮಲ ಬದ್ಧತೆಯನ್ನು ದೂರ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
  • ಅಷ್ಟೇ ಅಲ್ಲದೆ ನಮ್ಮ ರಕ್ತದಲ್ಲಿ ಕಂಡು ಬರುವ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ದೂರ ಮಾಡಿ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಇನ್ನು ದೇಹದ ತೂಕದ ವಿಚಾರದಲ್ಲಿ ಕೂಡ ಅಷ್ಟೇ, ತನ್ನಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಗಳು ಇರುವುದರಿಂದ ದೇಹದ ತೂಕವನ್ನು ನಿಯಂತ್ರಣ ದಲ್ಲಿಟ್ಟು, ಬೊಜ್ಜಿನ ಸಮಸ್ಯೆ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಹೀಗಾಗಿ ಈರುಳ್ಳಿ ಯನ್ನು ಅಡುಗೆಯಲ್ಲಿ ಬಳಸಿಕೊಂಡರೆ, ಆಹಾರದ ರುಚಿ ಹೆಚ್ಚಾಗುವುದು ಮಾತ್ರವಲ್ಲದೆ, ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳು ಕೂಡ ಸಿಗುತ್ತದೆ.

ಈರುಳ್ಳಿಯಲ್ಲಿ ಕಂಡು ಬರುವ ಆರೋಗ್ಯಕಾರಿ ಅಂಶಗಳು

  • ಪ್ರತಿದಿನದ ಅಡುಗೆಯಲ್ಲಿ ಬಳಸುವ ಈರುಳ್ಳಿಯಲ್ಲಿ, ಮೊದಲೇ ಹೇಳಿದ ಹಾಗೆ ಕಡಿಮೆ ಪ್ರಮಾಣದ ಕ್ಯಾಲೋರಿ ಅಂಶಗಳು ಇರುವ ಜೊತೆಗೆ, ಕರಗುವ ನಾರಿನಾಂಶ ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಹೀಗಾಗಿ ಇದನ್ನು ಹಸಿಯಾಗಿ ತಿಂದರೂ ಅಥವಾ ಸಾಂಬರ್‌ ಜೊತೆಗೆ ಬಳಸಿ, ಸೇವನೆ ಮಾಡಿದೆರೆ ಪ್ರಯೋಜನಕಾರಿ ಎಂದು ಹೇಳಬಹುದು.
  • ಒಂದು ಕಪ್ ಹೆಚ್ಚಿದ ಈರುಳ್ಳಿಯಲ್ಲಿ ದೇಹಕ್ಕೆ ಅಗತ್ಯವಾಗಿ ಬೇಕಾದ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಂ, ಕಬ್ಬಿಣಾಂಶ, ವಿಟಮಿನ್ಸ್‌ಗಳು, ನಾರಿನಾಂಶಗಳು ಹಾಗೂ ಇನ್ನಿತರ ಆರೋಗ್ಯಕಾರಿ ಅಂಶಗಳು ಸಿಗುವುದರಿಂದ ದೇಹದ ತೂಕ ಇಳಸಿ, ಬೊಜ್ಜು ಕರಗಿಸುವಲ್ಲಿ ಇವುಗಳ ಪಾತ್ರ ಸಹಾಯಕ್ಕೆ ಬರುತ್ತದೆ.
  • ಮುಖ್ಯವಾಗಿ ಇದರಲ್ಲಿ ಕರಗುವ ನಾರಿನಾಂಶ ಯಥೇಚ್ಛವಾಗಿ ಕಂಡು ಬರುವುದರಿಂದ, ದೀರ್ಘಕಾಲ ತುಂಬಿದ ಅನುಭವವನ್ನು ಉಂಟು ಮಾಡುತ್ತದೆ. ಇದರಿಂದ ಪದೇ ಪದೇ ತಿನ್ನುವ ಬಯಕೆ ನಿಯಂತ್ರಣಕ್ಕೆ ಬಂದು, ದೇಹದ ತೂಕ ಕೂಡ ಕಂಟ್ರೋಲ್‌ನಲ್ಲಿರುತ್ತದೆ.

ಈರುಳ್ಳಿ ಜ್ಯೂಸ್ ಮಾಡಿ ಸೇವನೆ ಮಾಡಬಹುದು

ಒಂದು ಮಧ್ಯಮ ಗಾತ್ರದ ಈರುಳ್ಳಿಯ ಸಿಪ್ಪೆ ತೆಗೆದು, ಸಣ್ಣದಾಗಿ ಹೆಚ್ಚಿ ನೀರಿನಲ್ಲಿ ಸ್ವಲ್ಪ ಹೊತ್ತು ಕುದಿಸಿ. ಆಮೇಲೆ, ಸ್ವಲ್ಪ ನೀರಿನೊಂದಿಗೆ ಮಿಕ್ಸಿಯ ಜಾರ್‌ಗೆ ಹಾಕಿಕೊಂಡು, ಚೆನ್ನಾಗಿ ರುಬ್ಬಿಕೊಂಡು ಜ್ಯೂಸ್ ರೀತಿ ಮಾಡಿಕೊಂಡು ಸೇವನೆ ಮಾಡಬಹುದು. ಇಲ್ಲಾಂದ್ರೆ ನಿತ್ಯದ ತರಕಾರಿ ಸಲಾಡ್ ಜೊತೆಗೆ ಹಸಿ ಈರುಳ್ಳಿ ಯನ್ನು ಕೂಡ ಇದಕ್ಕೆ ಬೆರೆಸಿ, ಸೇವನೆ ಮಾಡುವುದರಿಂದ, ದೇಹದ ಬೊಜ್ಜು ಇಳಿಸಲು ನೆರವಾಗುತ್ತದೆ.

ಹಸಿ ಈರುಳ್ಳಿ ಕಟ್ ಮಾಡಿ ಸೇವನೆ ಮಾಡಿ

  • ಪ್ರತಿದಿನ ಒಂದು ಸಣ್ಣ ಗಾತ್ರದ ಈರುಳ್ಳಿಯನ್ನು ಕತ್ತರಿಸಿಕೊಂಡು, ಇದಕ್ಕೆ ಒಂದು ಚಮಚ ನಿಂಬೆಹಣ್ಣಿನ ರಸ ಹಾಗೂ ಚಿಟಿಕೆಯಷ್ಟು ಉಪ್ಪನ್ನು ಬೆರೆಸಿ ಸೇವನೆ ಮಾಡುವ ಅಭ್ಯಾಸ ಇಟ್ಟು ಕೊಂಡರೆ ಬಹಳ ಒಳ್ಳೆಯದು. ಮಧ್ಯಾಹ್ನ ಊಟ ಮಾಡುವ ಸಮಯದಲ್ಲಿ ಅಥವಾ ರಾತ್ರಿಯ ಊಟದ ಸಂದರ್ಭದಲ್ಲಿ, ಈರುಳ್ಳಿಯನ್ನು ಹೀಗೆ ಸೇವನೆ ಮಾಡುವುದರಿಂದ ದೇಹದ ತೂಕ ಇಳಿಸಲು ನೆರವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ