Please enable javascript.Covid Vaccine,ಕೋವಿಶೀಲ್ಡ್ ಲಸಿಕೆ ತೆಗೆದುಕೊಳ್ಳುವ ಸಮಯ ಬದಲಾವಣೆ ಆಗಿರುವುದು ನಿಮಗೆ ಗೊತ್ತೇ? - covishield gap changed again, some people to get jab early - Vijay Karnataka

ಕೋವಿಶೀಲ್ಡ್ ಲಸಿಕೆ ತೆಗೆದುಕೊಳ್ಳುವ ಸಮಯ ಬದಲಾವಣೆ ಆಗಿರುವುದು ನಿಮಗೆ ಗೊತ್ತೇ?

Vijaya Karnataka Web 10 Jun 2021, 9:48 am
Subscribe

ಎರಡು ಬಾರಿ ಲಸಿಕೆಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಅಂತರ ಹೆಚ್ಚಾದರೆ ಆರೋಗ್ಯದ ಮೇಲೆ ಏನಾದರೂ ತೊಂದರೆ ಉಂಟಾಗುವುದೇ?

covishield gap changed again some people to get jab early
ಕೋವಿಶೀಲ್ಡ್ ಲಸಿಕೆ ತೆಗೆದುಕೊಳ್ಳುವ ಸಮಯ ಬದಲಾವಣೆ ಆಗಿರುವುದು ನಿಮಗೆ ಗೊತ್ತೇ?
ನಮ್ಮ ಭಾರತ ದೇಶದ ಎಲ್ಲಾ ಕಡೆ ಈಗಾಗಲೇ ಲಸಿಕೆ ಅಭಿಯಾನ ಪ್ರಾರಂಭವಾಗಿರುವುದು ಮತ್ತು ಯಶಸ್ವಿಯಾಗಿ ನಡೆಯುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಒಬ್ಬ ವ್ಯಕ್ತಿಗೆ ಆತನ ದೇಹದ ರೋಗ - ನಿರೋಧಕ ಶಕ್ತಿ ಹೆಚ್ಚಾಗುವಂತೆ ಎರಡು ಬಾರಿ ಎರಡು ಡೋಸ್ ಗಳಲ್ಲಿ ಲಸಿಕೆ ನೀಡಲಾಗುತ್ತದೆ. ಮೊದಲನೆಯ ಡೋಸ್ ತೆಗೆದುಕೊಂಡ ನಂತರದಲ್ಲಿ ಕನಿಷ್ಠ ನಾಲ್ಕು ವಾರಗಳ ಅಂತರ ಕಾಯ್ದುಕೊಂಡು ಮತ್ತೊಂದು ಡೋಸ್ ಲಸಿಕೆ ತೆಗೆದುಕೊಳ್ಳಬೇಕು ಎಂದು ಮೊದಲು ಹೇಳಿದ್ದರು. ಆದರೆ ಲಸಿಕೆಯ ಅಭಾವ ಕಂಡು ಬರುತ್ತಿದ್ದಂತೆ ಎರಡನೇ ಡೋಸ್ ಲಸಿಕೆ ಪಡೆಯಲು ಸುಮಾರು 12 ರಿಂದ 16 ವಾರ ಸಮಯಾವಕಾಶ ಇರುತ್ತದೆ ಎಂಬ ಮಾತು ಕೇಳಿಬಂದಿತ್ತು. ಅಂದರೆ ಒಬ್ಬ ವ್ಯಕ್ತಿ ಮೊದಲನೇ ಡೋಸ್ ಲಸಿಕೆ ತೆಗೆದುಕೊಂಡ 84 ದಿನಗಳಲ್ಲಿ ಮತ್ತೊಂದು ಡೋಸ್ ಲಸಿಕೆ ತೆಗೆದುಕೊಳ್ಳಬಹುದು ಎಂದು ಹೇಳಿದ್ದರು.

ಆದರೆ ಇತ್ತೀಚೆಗೆ ಬಿಡುಗಡೆಯಾದ ಆರೋಗ್ಯ ಸಚಿವಾಲಯದ ವರದಿಯಂತೆ ಕೆಲವು ವರ್ಗದ ಜನರು ಕೋವಿಡ್ - 19 ಲಸಿಕೆಯ ಎರಡನೇ ಡೋಸ್ ಅನ್ನು 28 ದಿನಗಳಲ್ಲಿ ಪಡೆಯ ಬೇಕಾಗಿರುತ್ತದೆ. ಎಲ್ಲರಿಗೂ ಇದು ಅನ್ವಯವಾಗುತ್ತದೆ ಎಂಬ ಆಶ್ಚರ್ಯ ಬೇಡ. ಯಾರು ಬೇರೆ ದೇಶಗಳಿಗೆ ತಮ್ಮ ವಿದ್ಯಾಭ್ಯಾಸಕ್ಕಾಗಿ, ಕೆಲಸಕ್ಕಾಗಿ ಅಥವಾ ಸ್ಪೋರ್ಟ್ಸ್ ಆಡಲು ಹೊರಡಲು ತಯಾರಿರುತ್ತಾರೆ ಅಂತಹವರು ಈಗಾಗಲೇ ಮೊದಲನೆಯ ಕೊರೋನಾ ಲಸಿಕೆ ಪಡೆದಿದ್ದರೆ, ಎರಡನೇ ಬಾರಿಗೆ ಪಡೆಯಲು 84 ದಿನಗಳು ಕಾಯಬೇಕಾದ ಅವಶ್ಯಕತೆ ಇಲ್ಲ. ಕೇವಲ 28 ದಿನಗಳಲ್ಲಿ ಎರಡು ಡೋಸ್ ಲಸಿಕೆಗಳನ್ನು ಮುಗಿಸಿಕೊಂಡು ಹೊರ ದೇಶಕ್ಕೆ ಪ್ರಯಾಣ ಬೆಳೆಸಬಹುದು.

ಸರ್ಕಾರಿ ಆರೋಗ್ಯ ಅಧಿಕಾರಿಗಳು ಲಸಿಕೆಯ ಇಂತಹ ನಿರ್ಧಾರದ ಬಗ್ಗೆ ಪ್ರಾಯೋಗಿಕವಾಗಿ ಹಲವು ಆಯಾಮಗಳಲ್ಲಿ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಏಕೆಂದರೆ ಇಂತಹ ಒಂದು ನಿರ್ಧಾರ ಈಗಾಗಲೇ ಹೊಸ ಬಗೆಯ ಪ್ರಶ್ನೆಗಳನ್ನು ಮತ್ತು ಸವಾಲುಗಳನ್ನು ಹುಟ್ಟು ಹಾಕಿದೆ. ಈ ಹಿಂದೆ ಹೇಳಿದ ಹಾಗೆ ಸುಮಾರು 12 ರಿಂದ 16 ವಾರಗಳ ಅಂತರವನ್ನು ಕಾಯ್ದುಕೊಳ್ಳುವ ಹೊರತಾಗಿ ಬಹಳ ಬೇಗನೆ ಅಂದರೆ ಕೇವಲ ನಾಲ್ಕು ವಾರಗಳಲ್ಲಿ ಎರಡನೆಯ ಡೋಸ್ ಲಸಿಕೆ ತೆಗೆದುಕೊಳ್ಳುವುದರಿಂದ ಏನಾದರೂ ಸಮಸ್ಯೆ ಇದೆಯೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

​ಹಾಗಾದರೆ ಲಸಿಕೆ ನೀಡುವ ವಿಚಾರದಲ್ಲಿ ಸರ್ಕಾರದ ನಿರ್ಧಾರ ಬದಲಾಗಲು ಕಾರಣವೇನು?

​ಹಾಗಾದರೆ ಲಸಿಕೆ ನೀಡುವ ವಿಚಾರದಲ್ಲಿ ಸರ್ಕಾರದ ನಿರ್ಧಾರ ಬದಲಾಗಲು ಕಾರಣವೇನು?

ಬಹಳಷ್ಟು ಜನರು ಈಗಾಗಲೇ ಭಾರತ ದೇಶದಿಂದ ಬೇರೆ ದೇಶಗಳಿಗೆ ತಮ್ಮ ತಮ್ಮ ಕೆಲಸ - ಕಾರ್ಯಗಳಿಗೆ ಅನುಸಾರವಾಗಿ ತೆರಳಲು ಎಲ್ಲಾ ಸಿದ್ಧತೆ ನಡೆಸಿಕೊಂಡಿದ್ದಾರೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಲಸಿಕೆ ನೀಡುವ ವಿಚಾರದಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಅದೇನೆಂದರೆ ಹೊರ ದೇಶದ ಪ್ರಯಾಣ ಮಾಡುವವರು ಬೇರೆಯವರ ರೀತಿ ಸುಮಾರು 12 ರಿಂದ 16 ವಾರಗಳ ತನಕ ಎರಡನೇ ಡೋಸ್ ಲಸಿಕೆಗಾಗಿ ಕಾಯುವ ಬದಲು ಕೇವಲ ನಾಲ್ಕು ವಾರಗಳ ಅಂತರ ತೆಗೆದುಕೊಂಡು ಲಸಿಕೆ ಪಡೆದು ಪ್ರಯಾಣ ಬೆಳೆಸಬಹುದು.

ಇನ್ನೊಂದು ವಿಚಾರ ಎಂದರೆ ನಮ್ಮ ದೇಶದಲ್ಲಿ ನೀಡಲಾಗುತ್ತಿರುವ ಕೋವ್ಯಾಕ್ಸಿನ್ ಲಸಿಕೆ ಅಂತರಾಷ್ಟ್ರೀಯ ಅನುಮೋದನೆ ಪಡೆದಿದೆ. ಆದರೆ ಕೋವಿಶೀಲ್ಡ್ ಲಸಿಕೆ ಮಾತ್ರ ಇದಕ್ಕೆ ತದ್ವಿರುದ್ಧ. ಆದರೂ ಕೂಡ ಆರೋಗ್ಯ ತಜ್ಞರು ಹೇಳುತ್ತಿರುವ ಹಾಗೆ ಕೋವಿಶೀಲ್ಡ್ ಲಸಿಕೆ ಪಡೆದು ಜನರು ಯಾವುದೇ ರೀತಿಯಲ್ಲೂ ಭಯ ಪಡದೆ ಅಂತರಾಷ್ಟ್ರೀಯ ಪ್ರಯಾಣ ಮಾಡಬಹುದಾಗಿದೆ. ಈಗಾಗಲೇ ಕಂಡು ಬರುತ್ತಿರುವ ಹೊಸ ಕೋವಿಡ್ - 19 ತಳಿಗಳಿಗೆ ರಕ್ಷಣಾತ್ಮಕವಾಗಿ ಈ ಲಸಿಕೆ ಕೆಲಸ ಮಾಡಲಿದೆ.

ಸರ್ಕಾರದ ಪ್ರಕಾರ ಎರಡನೇ ಡೋಸ್ ಲಸಿಕೆಗೆ ಸಂಬಂಧಪಟ್ಟಂತೆ ಬಂದಿರುವ ಈ ಹೊಸ ನೀತಿ ಭಾರತ ದೇಶದ ಎಲ್ಲಾ ನಾಗರೀಕರಿಗೂ ಅನ್ವಯವಾಗುವುದಿಲ್ಲ. ಯಾರು ವಿದೇಶ ಪ್ರಯಾಣದ ತಯಾರಿಯಲ್ಲಿರುತ್ತಾರೆ ಅಂತಹವರಿಗೆ ಮಾತ್ರ ಅನ್ವಯಿಸುತ್ತದೆ.

ಕೊರೋನಾ ಮೂರನೇ ಅಲೆಯ ಭೀತಿ: 12 ರಿಂದ 15 ವರ್ಷದ ಮಕ್ಕಳಿಗೆ Pfizer ಎಂಬ ಹೊರದೇಶದ ಲಸಿಕೆ

​ಮತ್ತೊಮ್ಮೆ ಹಿಂದಿನ ನಿಯಮಗಳು ಜಾರಿಗೆ ಬಂದಿದ್ದೇಕೆ?

​ಮತ್ತೊಮ್ಮೆ ಹಿಂದಿನ ನಿಯಮಗಳು ಜಾರಿಗೆ ಬಂದಿದ್ದೇಕೆ?

ಈಗ ಜಾರಿಗೆ ಬಂದಿರುವ ಹೊಸ ನಿಯಮಗಳು ಕೇವಲ ಕೆಲವು ಜನರಿಗೆ ಮಾತ್ರ ಅನ್ವಯವಾಗುತ್ತವೆ. ಸುಮಾರು 84 ದಿನಗಳ ಅಂತರವನ್ನು ಕಾಯ್ದುಕೊಳ್ಳುತ್ತಾ ಕುಳಿತರೆ ಕೇವಲ ಕೆಲವು ಜನರಿಗೆ ಮಾತ್ರ ಎರಡನೇ ಬಾರಿಗೆ ಲಸಿಕೆಯ ಲಭ್ಯತೆ ಇರುತ್ತದೆ. ಹಾಗಾಗಿ ಹೊರ ದೇಶದ ಪ್ರಯಾಣ ಮಾಡುವ ಎಲ್ಲರಿಗೂ ಪೂರ್ಣ ಪ್ರಮಾಣದಲ್ಲಿ 2 ಬಾರಿ ಲಸಿಕೆ ಸಿಗುವಂತಾಗಬೇಕು ಎನ್ನುವ ಉದ್ದೇಶದಿಂದ ಮತ್ತೆ ಹಳೆಯ ನಿಯಮಗಳನ್ನು ಜಾರಿಗೆ ತರಲಾಯಿತು. ಇದು ಒಬ್ಬ ವ್ಯಕ್ತಿಯ ಸಂಪೂರ್ಣ ಆರೋಗ್ಯ ರಕ್ಷಣೆಯಲ್ಲಿ ಗುರುತರವಾಗಿ ಕೆಲಸ ಮಾಡುತ್ತದೆ.

ಇದರ ಹೊರತಾಗಿ ಉಳಿದ ಭಾರತೀಯರಿಗೆ ನೀಡಲಾಗುವ 84 ದಿನಗಳ ಅಂತರದ ಲಸಿಕೆ ವಿಚಾರದಲ್ಲಿ ಸಂಶೋಧಕರಿಗೆ ತಮ್ಮ ಅಧ್ಯಯನಕ್ಕೆ ಅನುಕೂಲವಾಗುವಂತೆ ಹಲವಾರು ಅಂಶಗಳು ದೊರೆಯಲಿವೆ. ಇಷ್ಟು ದೀರ್ಘ ಕಾಲದಲ್ಲಿ ಸಮಯ ಸಿಗುವುದರಿಂದ ಮೊದಲನೆಯ ಡೋಸ್ ಲಸಿಕೆ ತೆಗೆದುಕೊಂಡ ಜನರಲ್ಲಿ ಆಂಟಿಬಾಡಿಗಳು ಯಾವ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲು ಅನುಕೂಲವಾಗುತ್ತದೆ. ಬೇರೆ ದೇಶಗಳ ವರದಿಗಳ ಜೊತೆ ನಮ್ಮ ದೇಶದ ವರದಿ ತಾಳೆ ಹಾಕಿ ನೋಡುವ ಅವಕಾಶ ಸಂಶೋಧಕರಿಗೆ ಸಿಗಲಿದೆ.

​ಲಸಿಕೆಗಳ ಮಧ್ಯೆ ಅಂತರ ಹೆಚ್ಚಾದರೆ, ದೇಹದಲ್ಲಿ ರೋಗ - ನಿರೋಧಕ ಶಕ್ತಿ ಹೆಚ್ಚಾಗುವುದೇ? ಈ ಬಗ್ಗೆ ಅಧ್ಯಯನಗಳು ಏನು ಹೇಳುತ್ತವೆ?

​ಲಸಿಕೆಗಳ ಮಧ್ಯೆ ಅಂತರ ಹೆಚ್ಚಾದರೆ, ದೇಹದಲ್ಲಿ ರೋಗ - ನಿರೋಧಕ ಶಕ್ತಿ ಹೆಚ್ಚಾಗುವುದೇ? ಈ ಬಗ್ಗೆ ಅಧ್ಯಯನಗಳು ಏನು ಹೇಳುತ್ತವೆ?

ಸಂಶೋಧಕರಿಗೆ ಲಸಿಕೆಗಳ ಅಂತರ ಹೆಚ್ಚಾಗುವ ಸಂದರ್ಭದಲ್ಲಿ ಉಂಟಾಗುವ ಸಕಾರಾತ್ಮಕ ಬದಲಾವಣೆಗಳ ಮುನ್ಸೂಚನೆ ಸಿಕ್ಕಿದೆ. ಏಕೆಂದರೆ ಒಂದು ಬಾರಿ ನೀಡುವ ಲಸಿಕೆ ಮತ್ತು ಮತ್ತೊಂದು ಬಾರಿ ತೆಗೆದುಕೊಳ್ಳುವ ಲಸಿಕೆಯ ಮಧ್ಯೆ ಸ್ವಲ್ಪ ಅಂತರ ಹೆಚ್ಚಾದರೆ ದೇಹದಲ್ಲಿ ಆಂಟಿಬಾಡಿಗಳು ಉತ್ಪತ್ತಿಯಾಗಲು ಹೆಚ್ಚು ಸಮಯಾವಕಾಶ ಸಿಗುತ್ತದೆ. ಇದರಿಂದ ಲಸಿಕೆಯ ಪರಿಣಾಮ ದೇಹದಲ್ಲಿ ಶೇಕಡ 81% ಇರುತ್ತದೆ. ಆದರೆ ಈ ಮೊದಲು ನೀಡಲಾಗುತ್ತಿದ್ದ ನಾಲ್ಕು ವಾರಗಳ ಅಂತರದ ಲಸಿಕೆಯಲ್ಲಿ ಕೇವಲ 50 ರಿಂದ 60% ಮಾತ್ರ ಪರಿಣಾಮಕಾರಿ ಪ್ರಭಾವ ಇದ್ದದ್ದು ಬೆಳಕಿಗೆ ಬಂದಿದೆ.

ಆದರೆ ಚುಚ್ಚುಮದ್ದಿಗೆ ಸಂಬಂಧ ಪಟ್ಟಂತೆ ಇದೇ ಮೊದಲ ಬಾರಿಗೆ ಸಮಯಾವಕಾಶದ ಬದಲಾವಣೆ ಮಾಡಿಲ್ಲ. ಈ ಹಿಂದೆಯೂ ಕೂಡ 2 ರಿಂದ 3 ಬಾರಿ ಬೇರೆ ಬೇರೆ ಅಂತರಗಳನ್ನು ನೀಡಿ ಸರ್ಕಾರ ಬದಲಾವಣೆಯನ್ನು ತಂದಿತ್ತು.

ಕೋವಿಡ್ 19 ನಿಮ್ಮಋತುಚಕ್ರದ ಮೇಲೆ ಪರಿಣಾಮ ಬೀರಬಹುದೇ?

​ಹೊಸ ನೀತಿಯಿಂದ ಜನರು ಯಾವ ನಿರೀಕ್ಷೆ ಮಾಡಬಹುದು?

​ಹೊಸ ನೀತಿಯಿಂದ ಜನರು ಯಾವ ನಿರೀಕ್ಷೆ ಮಾಡಬಹುದು?

ಹೊರ ದೇಶಗಳಿಗೆ ಪ್ರಯಾಣ ಮಾಡುವ ಜನರಿಗೆ ನಮ್ಮ ಭಾರತ ಸರ್ಕಾರ 4 ವಾರಗಳ ಅಂತರವನ್ನು ಕಾಯ್ದುಕೊಂಡು ಎರಡನೇ ಬಾರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚಿಸಿದೆ. ಆದರೆ ಇಲ್ಲಿ ಲಸಿಕೆಯ ಪರಿಣಾಮಕಾರಿ ಪ್ರಭಾವದ ಬಗ್ಗೆ ಪ್ರಶ್ನೆ ಉದ್ಭವ ಆಗಲಿದೆ. ಬೇರೆ ಜನರು ತೆಗೆದುಕೊಳ್ಳುವ 84 ದಿನಗಳ ಅಂತರದಲ್ಲಿ ಅವರ ದೇಹದಲ್ಲಿ ಆಗುವ ಹಲವಾರು ಸಕಾರಾತ್ಮಕ ಬದಲಾವಣೆಗಳು ವಿದೇಶ ಪ್ರಯಾಣ ಮಾಡುವವರ ದೇಹದಲ್ಲಿ ಆಗುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆದರೆ ಸಂಶೋಧಕರು ಒಂದು ವಿಚಾರವನ್ನು ಸ್ಪಷ್ಟ ಪಡಿಸಿದ್ದಾರೆ. ಅದೇನೆಂದರೆ ಬಹಳ ಬೇಗನೆ ಅಂದರೆ ಕೇವಲ ನಾಲ್ಕು ವಾರಗಳಲ್ಲಿ ಮತ್ತೊಂದು ಬಾರಿ ಲಸಿಕೆ ತೆಗೆದುಕೊಳ್ಳುವ ಜನರಲ್ಲಿ ಕೇವಲ ರಕ್ಷಣೆಯ ಕೊರತೆ ಸ್ವಲ್ಪ ಮಟ್ಟಿಗೆ ಕಂಡು ಬರಬಹುದು ಅಷ್ಟೇ. ಆದರೆ ಸಂಪೂರ್ಣವಾಗಿ ಲಸಿಕೆ ವಿಫಲ ಎಂದು ಹೇಳಲು ಸಾಧ್ಯವಿಲ್ಲ. ಎರಡು ಲಸಿಕೆಗಳ ಅಂತರ ಹೆಚ್ಚಾದರೆ ದೇಹದಲ್ಲಿ ಆಂಟಿಬಾಡಿಗಳು ಹೆಚ್ಚು ಉತ್ಪತ್ತಿ ಆಗುತ್ತವೆ ಎಂದು ಹೇಳಬಹುದು. ಆದರೆ ಎರಡನೇ ಬಾರಿಗೆ ಲಸಿಕೆಯನ್ನು ಬೇಗ ಅಥವ ಸ್ವಲ್ಪ ತಡವಾಗಿ ತೆಗೆದುಕೊಂಡರೂ ಸಹ ಅದರ ಪರಿಣಾಮಕಾರಿ ಪ್ರಭಾವ ಮಾತ್ರ ಕಡಿಮೆಯಾಗುವುದಿಲ್ಲ.

​ಜನರು ಎರಡನೇ ಬಾರಿಗೆ ಲಸಿಕೆ ತೆಗೆದುಕೊಳ್ಳದಿದ್ದರೆ ಏನಾಗುತ್ತದೆ?

​ಜನರು ಎರಡನೇ ಬಾರಿಗೆ ಲಸಿಕೆ ತೆಗೆದುಕೊಳ್ಳದಿದ್ದರೆ ಏನಾಗುತ್ತದೆ?

ಕೆಲವು ಜನರಿಗೆ ವಿದೇಶ ಪ್ರಯಾಣವನ್ನು ಎರಡನೇ ಬಾರಿಗೆ ಲಸಿಕೆ ಹಾಕಿಸಿಕೊಳ್ಳುವ ಮುಂಚೆಯೇ ಕೈಗೊಳ್ಳಬೇಕಾಗಿ ಬರುತ್ತದೆ. ಇನ್ನು ಕೆಲವರಿಗೆ ಮೊದಲನೇ ಬಾರಿಗೆ ಲಸಿಕೆ ಹಾಕಿಸಿಕೊಂಡ ನಂತರ ಎದುರಾಗುವ ಕೆಲವೊಂದು ಅಡ್ಡ ಪರಿಣಾಮಗಳು ಎರಡನೇ ಬಾರಿಗೆ ಲಸಿಕೆ ಹಾಕಿಸಿಕೊಳ್ಳುವ ಅಂತರವನ್ನು ಹೆಚ್ಚಿಸಬಹುದು.

ಇಂತಹ ಪ್ರಕರಣಗಳಲ್ಲಿ ವಿದೇಶಿ ಪ್ರಯಾಣ ಮಾಡುವ ಜನರನ್ನು ಬೇರೆ ದೇಶದ ಸರ್ಕಾರ ಸಂಪೂರ್ಣ ಲಸಿಕೆ ತೆಗೆದುಕೊಂಡಿರದ ಕಾರಣ ಐಸೋಲೇಶನ್ ನಲ್ಲಿ ಇಡಬಹುದು. ಆದರೆ ಮೊದಲನೇ ಡೋಸ್ ಕೋವ್ಯಾಕ್ಸಿನ್ ದೇಹದಲ್ಲಿ ಸಾಕಷ್ಟು ಆಂಟಿಬಾಡಿ ಗಳನ್ನು ಉತ್ಪತ್ತಿ ಮಾಡುವ ಶಕ್ತಿಯನ್ನು ಪಡೆದಿದೆ. ಆದರೂ ಕೂಡ ಸಾಧ್ಯವಾದಷ್ಟು ಹೊರದೇಶ ಪ್ರಯಾಣ ಮಾಡುವ ಪ್ರಯಾಣಿಕರು ಎರಡು ಡೋಸ್ ಲಸಿಕೆಗಳನ್ನು ತೆಗೆದುಕೊಂಡು ಹೊರಡುವುದು ಕ್ಷೇಮ.

​ಲಸಿಕೆಗಳ ವಿಚಾರದಲ್ಲಿ ಅಂತರಾಷ್ಟ್ರೀಯ ನಿಯಮಗಳು ಯಾವ ರೀತಿ ಇರುತ್ತವೆ?

​ಲಸಿಕೆಗಳ ವಿಚಾರದಲ್ಲಿ ಅಂತರಾಷ್ಟ್ರೀಯ ನಿಯಮಗಳು ಯಾವ ರೀತಿ ಇರುತ್ತವೆ?

ಆಕ್ಸ್ಫರ್ಡ್ ನಿಂದ ತಯಾರಾಗಿರುವ ಲಸಿಕೆ ತುಂಬಾ ಶಕ್ತಿಶಾಲಿ ಆಗಿದ್ದು ಲಂಡನ್, ಯುರೋಪ್, ಶ್ರೀಲಂಕಾ, ಕೆನಡಾ ಮತ್ತು ಇನ್ನೂ ಕೆಲವು ದೇಶಗಳಲ್ಲಿ ಬಳಕೆಗೆ ಅನುಮೋದನೆ ಪಡೆದಿದೆ. ಅಲ್ಲಿಯೂ ಸಹ ಮೊದಲನೇ ಹಾಗೂ ಎರಡನೇ ಡೋಸ್ ನಡುವಿನ ಅಂತರವನ್ನು ಹೆಚ್ಚಿಸುವ ಹೊಸ ನಿಯಮಗಳು ಜಾರಿಗೆ ಬಂದಿವೆ. ಉದಾಹರಣೆಗೆ ಹೇಳುವುದಾದರೆ ಲಂಡನ್ ಮತ್ತು ಕೆನಡಾ ದೇಶಗಳಲ್ಲಿ ನಮ್ಮ ಭಾರತದಲ್ಲಿ ಅನುಸರಿಸುತ್ತಿರುವ ಹಾಗೆ ಎರಡು ಡೋಸ್ ಲಸಿಕೆಗಳ ಮಧ್ಯೆ ಸುಮಾರು ನಾಲ್ಕು ತಿಂಗಳ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ. ಬೇರೆ ಬೇರೆ ದೇಶಗಳಲ್ಲಿ ಕೂಡ ಇದು ಜಾರಿಯಲ್ಲಿದೆ.

To Read in English Click: Covishield vaccine gap reduced for travellers; here's what we know about the gap extension rules

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ