ಆ್ಯಪ್ನಗರ

ನೆನೆಸಿಟ್ಟ ಕೊತ್ತಂಬರಿ ಬೀಜದ ನೀರಿನ ಆರೋಗ್ಯಕರ ಪ್ರಯೋಜನಗಳು

ವಿಶಿಷ್ಟ ಆರೋಗ್ಯ ಗುಣವನ್ನು ಹೊಂದಿರುವ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನೆನೆಸಿ ಬಳಸುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಬಹುದು.

Vijaya Karnataka Web 9 Jun 2020, 4:12 pm
ನಿತ್ಯ ಮನೆಯಲ್ಲಿ ಬಳಸುವ ಮಸಾಲೆಯ ಪದಾರ್ಥಗಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಒಳಗೊಂಡಿರುತ್ತವೆ. ಅವುಗಳನ್ನು ಸಮ ಪ್ರಮಾಣದಲ್ಲಿ ಪಾಕವಿಧಾನಗಳಲ್ಲಿ ಬಳಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಣೆ ದೊರೆಯುವುದು. ಅಂತಹ ಮಸಾಲ ಪದಾರ್ಥಗಳಲ್ಲಿ ಕೆಲವು ಮಸಾಲ ಪದಾರ್ಥಗಳು ಯಾವುದೇ ಮಿಶ್ರಣ ಇಲ್ಲದೆಯೇ ವಿಶೇಷ ಪೋಷಣೆಯನ್ನು ನೀಡುತ್ತವೆ. ಆ ಬಗೆಯ ಮಸಾಲ ಪದಾರ್ಥಗಳಲ್ಲಿ ಕೊತ್ತಂಬರಿ ಬೀಜವೂ ಒಂದು. ಇದನ್ನು ಧನಿಯಾ ಎಂದು ಸಹ ಕರೆಯುತ್ತಾರೆ.
Vijaya Karnataka Web ನೆನೆಸಿಟ್ಟ ಕೊತ್ತಂಬರಿ ಬೀಜದ ನೀರಿನ ಆರೋಗ್ಯಕರ ಪ್ರಯೋಜನಗಳು


ಸಾಮಾನ್ಯವಾಗಿ ಎಲ್ಲಾ ರೆಸಿಪಿಯಲ್ಲೂ ಕೊತ್ತಂಬರಿ ಬೀಜವನ್ನು ಕಡ್ಡಾಯವಾಗಿ ಬಳಸುತ್ತಾರೆ. ಉತ್ತಮ ಪರಿಮಳ ಹಾಗೂ ರುಚಿಯನ್ನು ನೀಡುವ ಮಸಾಲ ಪದಾರ್ಥ ಕೊತ್ತಂಬರಿ. ಇದು ದಕ್ಷಿಣ ಯುರೋಪ್ ಮತ್ತು ಕ್ಯಾಪ್ಸಿಯನ್ ಸಮುದ್ರ ತೀರದ ಲ್ಯಾಟಿನ್ ಭಾಷೆಯಿಂದ ಕೊರಿಯಾಂಡ್ರಮ್ ಸ್ಯಾಟಿವಮ್ ಎನ್ನುವ ಹೆಸರು ಬಂದಿದೆ. ವಿಶ್ವದಾದ್ಯಂತ ಅಡುಗೆಯಲ್ಲಿ ಬಳಸುವ ಪ್ರದಾನ ಮಸಾಲ ಉತ್ಪನ್ನ ಎಂದು ಹೇಳಬಹುದು. ಇದನ್ನು ಆಹಾರ ಉತ್ಪನ್ನಗಳಲ್ಲಿ ಹಾಗೂ ಆಯುರ್ವೇದ ಔಷಧಗಳಲ್ಲೂ ಬಳಸಲಾಗುವುದು.

ವಿಶಿಷ್ಟ ಆರೋಗ್ಯ ಗುಣವನ್ನು ಹೊಂದಿರುವ ಧನಿಯಾ/ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನೆನೆಸಿ ಬಳಸುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಮನೆಯಲ್ಲಿಯೇ ಸುಲಭವಾಗಿ ಕೊತ್ತಂಬರಿ ಬೀಜವನ್ನು ನೆನೆಸಿ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇದರಿಂದ ಆರೋಗ್ಯದಲ್ಲಿ ಯಾವುದೇ ಅಡ್ಡ ಪರಿಣಾಮ ಉಂಟಾಗದು. ಹಾಗಾದರೆ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನೆನೆಸಿ ಸೇವಿಸಿದರೆ ಯಾವ ಬಗೆಯ ಅನಾರೋಗ್ಯಗಳನ್ನು ತಡೆಯಬಹುದು? ಎನ್ನುವುದನ್ನು ತಿಯೋಣ ಬನ್ನಿ.

ಬಹುಪಯೋಗಿ ಕೊತ್ತಂಬರಿ ಸೊಪ್ಪು


ಆಂಟಿಡೈಯಾಬೆಟಿಕ್ ಸಮಸ್ಯೆ ನಿವಾರಣೆಗೆ
ಕೊತ್ತಂಬರಿ ಬೀಜವನ್ನು ಆಂಟಿ ಡೈಯಾಬಿಟಿಕ್ ರೂಪದಲ್ಲಿ ಬಳಸಬಹುದು ಎಂದು ಅನೇಕ ವೈದ್ಯರು ಸೂಚಿಸುತ್ತಾರೆ. ಕೊತ್ತಂಬರಿ ಬೀಜವು ರಕ್ತದಲ್ಲಿನ ಗ್ಲೂಕೋಸ್ ಅನ್ನು ಸಮತೋಲನದಲ್ಲಿ ಇರುವಂತೆ ಮಾಡುತ್ತದೆ. ಅಲ್ಲದೆ ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಆರೋಗ್ಯಕರವಾಗಿ ಇಡಲು ಸಹಾಯ ಮಾಡುವುದು. ಕೊತ್ತಂಬರಿ ಬೀಸಜದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (ಎಲ್‍ಡಿಎಲ್) ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಉತ್ತಮ ಕೊಲೆಸ್ಟ್ರಾಲ್(ಎಚ್‍ಡಿಎಲ್)ಅನ್ನು ಪ್ರೇರೇಪಿಸುತ್ತದೆ ಎಂದು ಹೇಳಲಾಗುವುದು. ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್ ನಿಂದ ಬಳಲುತ್ತಿರುವವರು ಪ್ರತಿದಿನ ಕೊತ್ತಂಬರಿ ಬೀಜ ನೆನೆಸಿದ ನೀರನ್ನು ಕುಡಿಯಬೇಕು. ಅದರಿಂದ ಸಮಸ್ಯೆಯು ಅದ್ಭುತ ರೀತಿಯಲ್ಲಿ ನಿಯಂತ್ರಣಕ್ಕೆ ಬರುತ್ತವೆ.
ವಿಧಾನ:
*ಒಂದು ಪಾತ್ರೆಯಲ್ಲಿ ಒಂದು ಟೇಬಲ್ ಚಮಚ ಕೊತ್ತಂಬರಿ ಬೀಜವನ್ನು ಹಾಕಿ.
*ಅದಕ್ಕೆ ಒಂದು ಗ್ಲಾಸ್ ನೀರನ್ನು ಸೇರಿಸಿ, ರಾತ್ರಿ ಪೂರ್ತಿ ನೆನೆಯಲು ಬಿಡಿ.
*ಮರುದಿನ ಬೆಳಿಗ್ಗೆ ಆ ನೀರನ್ನು ಸೋಸಿ, ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
*ನಿಯಮಿತವಾಗಿ ಈ ವಿಧಾನವನ್ನು ಅನುಸರಿಸಿದರೆ ಪರಿಣಾಮಕಾರಿ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ಅಡುಗೆಯಲ್ಲಿ ಕೊತ್ತಂಬರಿ ಬೀಜ ಮಿಸ್‌ ಮಾಡಬೇಡಿ!

ಬಿಳಿ ಹೋಗುವುದನ್ನು ನಿಯಂತ್ರಿಸಲು
ಕೆಲವು ಮಹಿಳೆಯರು ಮೈಯಿಂದ ಬಿಳಿ ಹೋಗುವ ಸಮಸ್ಯೆಯನ್ನು ಅನುಭವಿಸುತ್ತಿರುತ್ತಾರೆ. ಅದು ಕೆಲವೊಮ್ಮೆ ದುರ್ವಾಸನೆ ಹಾಗೂ ಸೋಂಕು ಉಂಟಾಗುವಂತಹ ಸಮಸ್ಯೆಯನ್ನು ಸಹ ತರುವುದು. ಕೆಲವರು ಅತಿಯಾದ ಬಿಳಿ ಹೋಗುವುದರ ಪರಿಣಾಮದಿಂದ ತುರಿಕೆ ಹಾಗೂ ದೇಹದಲ್ಲಿ ಶಕ್ತಿಯನ್ನು ಕಳೆದುಕೊಳ್ಳುವರು. ಅಂತಹವರು ಮನೆಯಲ್ಲಿಯೇ ಕುತ್ತಂಬರಿ ನೀರನ್ನು ಕುಡಿಯುವುದರಿಂದ ಸಮಸ್ಯೆಯನ್ನು ನಿಯಂತ್ರಿಸಿಕೊಳ್ಳಬಹುದು.
ವಿಧಾನ:
*ಒಂದು ಪಾತ್ರೆಯಲ್ಲಿ ಒಂದು ಟೇಬಲ್ ಚಮಚ ಕೊತ್ತಂಬರಿ ಬೀಜವನ್ನು ಹಾಕಿ.
*ಅದಕ್ಕೆ ಒಂದು ಗ್ಲಾಸ್ ನೀರನ್ನು ಸೇರಿಸಿ, ರಾತ್ರಿ ಪೂರ್ತಿ ನೆನೆಯಲು ಬಿಡಿ.
*ಮರುದಿನ ಬೆಳಿಗ್ಗೆ ಆ ನೀರನ್ನು ಸೋಸಿ, ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
*ಈ ಕ್ರಮವನ್ನು ಒಂದು ವಾರಗಳ ಕಾಲ ಮಾಡಿದರೆ ಬಹುಬೇಗ ಉತ್ತಮ ಬದಲಾವಣೆಯನ್ನು ಕಂಡುಕೊಳ್ಳುವಿರಿ.


ಅಜೀರ್ಣ ಸಮಸ್ಯೆ
ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸಲು ಕೊತ್ತಂಬರಿ ಬೀಜವು ಅತ್ಯುತ್ತಮ ರೀತಿಯಲ್ಲಿ ಸಹಾಯ ಮಾಡುವುದು. ಕೊತ್ತಂಬರಿ ಬೀಜದಲ್ಲಿ ಇರುವ ಬೋರ್ನಿಯೋಲ್ ಮತ್ತು ಲಿನೂಲ್ ಸಂಯುಕ್ತಗಳು ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತವೆ.
ವಿಧಾನ:
*ಒಂದು ಪಾತ್ರೆಯಲ್ಲಿ 150 ಮಿ.ಲೀ ನೀರನ್ನು ಕುದಿಸಿ.
*ಅದಕ್ಕೆ 1.2 ಗ್ರಾಂ ನಷ್ಟು ಒಣ ಕೊತ್ತಂಬರಿ/ಧನಿಯಾ ಬೀಜವನ್ನು ಸೇರಿಸಿ.
*ಕೆಲ ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ.
*ನಂತರ ಉರಿಯನ್ನು ಆರಿಸಿ 20 ನಿಮಿಷಗಳ ಕಾಲ ಆರಲು ಬಿಡಿ.
- ಬಳಿಕ ನೀರನ್ನು ಸೋಸಿ ಕುಡಿಯಿರಿ.
*ಕೊತ್ತಂಬರಿ ಬೀಜವನ್ನು ಕುದಿಸಿ, ಅರ್ಧ ಗಂಟೆಯ ಒಳಗೆ ಬೆಚ್ಚಗಿರುವಾಗಲೇ ಸೇವಿಸಬೇಕು.
*ನಿಯಮಿತವಾಗಿ ಈ ಕ್ರಮವನ್ನು ಅನುಸರಿಸಿದರೆ ಜೀರ್ಣ ಕ್ರಿಯೆಯ ಸಮಸ್ಯೆ ನಿವಾರಣೆಯಾಗುವುದು.

ಅಜೀರ್ಣ ಸಮಸ್ಯೆ ನಿವಾರಣೆಗೆ ಬದಲಾಗಲಿ ಜೀವನಶೈಲಿ

ಮುಟ್ಟಿನ ಸಮಸ್ಯೆ ಇದ್ದರೆ
ಈಸ್ಟ್ರೋಜನ್ ಸ್ರವಿಕೆಯಲ್ಲಿ ತೊಂದರೆ ಅಥವಾ ದೋಷಗಳು ಇದ್ದಾಗ ಋತುಚಕ್ರದ ಸಮಸ್ಯೆ ಅಥವಾ ಮುಟ್ಟಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕ್ರಮಬದ್ಧತೆ ಇಲ್ಲದೆ ಋತುಚಕ್ರ ಉಂಟಾಗುವ ಸಮಸ್ಯೆಗೂ ಕೊತ್ತಂಬರಿ ಬೀಜ ಉತ್ತಮ ಆರೈಕೆ ನೀಡುವುದು.
ವಿಧಾನ:
*500 ಮಿ.ಲೀ ನೀರಿಗೆ, 6 ಗ್ರಾಂ ಕೊತ್ತಂಬರಿ ಬೀಜವನ್ನು ಸೇರಿಸಿ, ಚೆನ್ನಾಗಿ ಕುದಿಸಿ.
*ಚೆನ್ನಾಗಿ ಕುದಿ ಬಂದ ಬಳಿಕ ಉರಿಯನ್ನು ಆರಿಸಿ.
*ನೀರನ್ನು ಸೋಸಿ, ಒಂದು ಚಮಚ ಸಕ್ಕರೆಯನ್ನು ಸೇರಿಸಿ.
*ಬೆಚ್ಚಗಿರುವಾಗಲೇ ಕುಡಿಯಿರಿ.
*ನಿಯಮಿತವಾಗಿ ಈ ಕ್ರಮವನ್ನು ಅನುಸರಿಸಿದರೆ ಮುಟ್ಟಿಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ.


ಆಕಸ್ಮಾತ್ ಆಗಿ ಕಣ್ಣು ಕೆಂಪಾಗಿದ್ದರೆ
ಕೆಲವರು ಕೆಂಪು ಕಣ್ಣಿನ ಸಮಸ್ಯೆಯನ್ನು ಹೊಂದಿರುತ್ತಾರೆ. ಅಂತಹ ಸಮಸ್ಯೆನ್ನು ನಿವಾರಿಸಿಕೊಳ್ಳಲು ಮನೆ ಮದ್ದು ಎಂದರೆ ಕೊತ್ತಂಬರಿ ಬೀಜ. ಕೊತ್ತಂಬರಿ ಬೀಜದಲ್ಲಿ ಇರುವ ಪೋಕಾಂಶಗಳು ಹಾಗೂ ಉತ್ಕರ್ಷಣ ನಿರೋಧಕ ಅಂಶಗಳು ಕಣ್ಣಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತವೆ. ಕಣ್ಣು ಕೆಂಪಗಾಗುವುದು, ತುರಿಕೆ, ಕಣ್ಣಿನ ಸೋಂಕು, ಕಣ್ಣಿನ ಉಬ್ಬು ಸೇರಿದಂತೆ ಇನ್ನಿತರ ಸಮಸ್ಯೆಗಳು ಸಹ ನಿವಾರಣೆಯಾಗುತ್ತವೆ.
ವಿಧಾನ:
*ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್ ನೀರು ಮತ್ತು ಒಂದು ಟೇಬಲ್ ಚಮಚ ಕೊತ್ತಂಬರಿ ಬೀಜವನ್ನು ಸೇರಿಸಿ, ಕುದಿಸಿ.
*ಚೆನ್ನಾಗಿ ಕುದಿ ಬಂದ ಬಳಿಕ ಉರಿಯನ್ನು ಆರಿಸಿ.
*ಮಿಶ್ರಣವನ್ನು ಆರಲು ಬಿಡಿ.
*ಸಂಪೂರ್ಣವಾಗಿ ತಣ್ಣಗಾದ ಮೇಲೆ ನೀರನ್ನು ಸೋಸಿ.
*ಸೋಸಿಕೊಂಡ ನೀರಿನಿಂದ ಕೆಂಪು ಕಣ್ಣು ಅಥವಾ ಸೋಂಕಿಗೆ ಒಳಗಾದ ಕಣ್ಣುಗಳನ್ನು ತೊಳೆಯಿರಿ.
*ಸಮಸ್ಯೆ ಉಂಟಾದಾಗ ಈ ವಿಧಾನದಿಂದ ಆಗಾಗ ಕಣ್ಣನ್ನು ಸ್ವಚ್ಛಗೊಳಿಸಿದರೆ ಅಥವಾ ತೊಳೆದರೆ ಸಮಸ್ಯೆ ಗುಣವಾಗುವುದು.


ಸಂಧಿವಾತ ನಿವಾರಣೆಗೆ
ಕೊತ್ತಂಬರಿ ಬೀಜವು ವಿವಿಧ ಬಗೆಯ ಸಕ್ರಿಯ ಸಂಯುಕ್ತಗಳನ್ನು ಒಳಗೊಂಡಿದೆ. ಅವು ಅತ್ಯುತ್ತಮ ಆರೋಗ್ಯಕರವಾದ ಸಂಗತಿಗಳು. ಕೊತ್ತಂಬರಿಯಲ್ಲಿ ಇರುವ ಸಿಲೋನ್ ಮತ್ತು ಲಿನೋಲಿಕ್ ಆಮ್ಲವು ಸಂಧಿವಾತದಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುವುದು.
ವಿಧಾನ:
*ಒಂದು ಪಾತ್ರೆಯಲ್ಲಿ 150 ಮಿ.ಲೀ ನೀರನ್ನು ಹಾಕಿ ಕುದಿಯಲು ಇಡಿ.
*ಅದರೊಂದಿಗೆ 3 ಗ್ರಾಂ ಕೊತ್ತಂಬರಿ ಬೀಜದ ಪುಡಿಯನ್ನು ಸೇರಿಸಿ, ಕುದಿಸಿ.
*ಚೆನ್ನಾಗಿ ಕುದಿ ಬಂದ ನಂತರ ನೀರನ್ನು ಸೋಸಿ, ಕುಡಿಯಬೇಕು.
*ಈ ವಿಧಾನವನ್ನು ನಿಯಮಿತವಾಗಿ ಅನುಸರಿಸುವುದರಿಂದ ಸಂಧಿ ನೋವು, ಸಂಧಿ ವಾತಗಳಂತಹ ಸಮಸ್ಯೆಗಳನ್ನು ನಿಯಂತ್ರಿಸಬಹುದು.

ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುವುದು
ಕೊತ್ತಂಬರಿ ಬೀಜದಲ್ಲಿ ಇರುವ ಕುಮಿನ್ ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸುವುದು. ನಂತರ ಅಂತಃಸ್ರಾವಕ ಗ್ರಂಥಿಗಳನ್ನು ಉತ್ತೇಜಿಸುತ್ತದೆ. ಕೊತ್ತಂಬರಿ ಬೀಜವು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.
ವಿಧಾನ:
*ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್ ನೀರನ್ನು ಮತ್ತು 1 ಟೇಬಲ್ ಚಮಚ ಕೊತ್ತಂಬರಿ ಬೀಜವನ್ನು ಹಾಕಿ.
*ರಾತ್ರಿ ಪೂರ್ತಿ ನೆನೆಯಲು ಬಿಡಿ.
*ಮುಂಜಾನೆ ನೆನೆಯಿಟ್ಟ ನೀರನ್ನು ಸೋಸಿ.
*ಸೋಸಿಕೊಂಡ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
*ನಿಯಮಿತವಾಗಿ ಈ ಕ್ರಮವನ್ನು ಅನುಸರಿಸಿದರೆ ರಕ್ತದಲ್ಲಿ ಸಕ್ಕರೆ ಪ್ರಮಾಣವು ಸಮತೋಲನಕ್ಕೆ ಬರುವುದು.

ರಕ್ತಹೀನತೆ ನಿವಾರಿಸಲು
ರಕ್ತ ಹೀನತೆಯಿಂದ ಬಳಲುತ್ತಿರುವವರಿಗೆ ಕೊತ್ತಂಬರಿ ಬೀಜವು ಅತ್ಯುತ್ತಮ ಆರೈಕೆ ಮಾಡುವುದು. ಇದು ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುವುದು.
ವಿಧಾನ:
*ಒಂದು ಪಾತ್ರೆಯಲ್ಲಿ 150 ಮಿ.ಲೀ ನೀರನ್ನು ಹಾಕಿ ಕುದಿಯಲು ಇಡಿ.
*ಅದರೊಂದಿಗೆ 1 ಟೇಬಲ್ ಚಮಚ ಕೊತ್ತಂಬರಿ ಬೀಜವನ್ನು ಸೇರಿಸಿ, ಕುದಿಸಿ.
*ಚೆನ್ನಾಗಿ ಕುದಿ ಬಂದ ನಂತರ ನೀರನ್ನು ಸೋಸಿ, ಕುಡಿಯಬೇಕು.
*ಹೀಗೆ ನಿಯಮಿತವಾಗಿ ಕುಡಿಯುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಯಾಗುವುದು.

ಮುಟ್ಟಿನ ಸಮಯದಲ್ಲಿ ಕಾಡುವ ನೋವಿಗೆ ಇಲ್ಲಿದೆ ಸಿಂಪಲ್ ಟಿಪ್ಸ್undefined

ಮುಟ್ಟಿನ ಸಮಯದಲ್ಲಿ ಕಾಣುವ ಹೊಟ್ಟೆ ನೋವು ನಿವಾರಣೆಗೆ
ಪ್ರತಿ ತಿಂಗಳು ನೀವು ಮುಟ್ಟಿನ ನೋವಿನಿಂದ ಬಳಲುತ್ತೀರಿ ಎಂದಾದರೆ ಕುತ್ತೊಂಬರಿ ಬೀಜದ ಆರೈಕೆಯನ್ನು ಪಡೆದುಕೊಳ್ಳಿ.
ವಿಧಾನ:
*500 ಮಿ.ಲೀ ನೀರಿಗೆ, 6 ಗ್ರಾಂ ಕೊತ್ತಂಬರಿ ಬೀಜವನ್ನು ಸೇರಿಸಿ, ಚೆನ್ನಾಗಿ ಕುದಿಸಿ.
*ಚೆನ್ನಾಗಿ ಕುದಿ ಬಂದ ಬಳಿಕ ಉರಿಯನ್ನು ಆರಿಸಿ.
*ನೀರನ್ನು ಸೋಸಿ, ಒಂದು ಚಮಚ ಸಕ್ಕರೆಯನ್ನು ಸೇರಿಸಿ.
*ಬೆಚ್ಚಗಿರುವಾಗಲೇ ಕುಡಿಯಿರಿ.
*ನಿಯಮಿತವಾಗಿ ಈ ಕ್ರಮವನ್ನು ಅನುಸರಿಸಿದರೆ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವು ನಿವಾರಣೆಯಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ