ಆ್ಯಪ್ನಗರ

ಕುಳ್ಳಗಿದ್ದರೆ ಬೇಸರಿಸದಿರಿ…ಇಲ್ಲಿವೆ ನಿಮಗೆ ಹಲವಾರು ಲಾಭಗಳು…

ಉದ್ದಗಿನ ವ್ಯಕ್ತಿಗಳು ಯಾವುದೇ ಜನಜಂಗುಳಿಯಲ್ಲಿ ಎದ್ದು ಕಂಡರೂ ಅವರ ಜೀವಿತಾವಧಿ ಕಡಿಮೆ!

Vijaya Karnataka Web 24 Jul 2021, 6:15 pm
ದೇವರು ಒಬ್ಬೊಬ್ಬರನ್ನು ಒಂದೊಂದು ರೀತಿಯಿಂದ ಸೃಷ್ಟಿ ಮಾಡಿರುವನು, ಕೆಲವರು ತುಂಬಾ ದಪ್ಪ, ಇನ್ನು ಕೆಲವರು ಸಪೂರ, ಕೆಲವರು ಉದ್ದ ಹಾಗೂ ಇನ್ನು ಕೆಲವು ಮಂದಿ ಕುಳ್ಳಗೆ ಇರುವರು. ಹೆಚ್ಚಾಗಿ ಕುಳ್ಳರನ್ನು ಕಡೆಗಣಿಸುವುದೇ ಹೆಚ್ಚು. ಹೀಗಾಗಿ ಅವರು ತುಂಬಾ ಅಪಮಾನಕ್ಕೆ ಒಳಗಾಗಿ, ಆತ್ಮವಿಶ್ವಾಸ ಕಳೆದುಕೊಳ್ಳುವರು.
Vijaya Karnataka Web surprising health benefits of being a short person you didnt know about
ಕುಳ್ಳಗಿದ್ದರೆ ಬೇಸರಿಸದಿರಿ…ಇಲ್ಲಿವೆ ನಿಮಗೆ ಹಲವಾರು ಲಾಭಗಳು…


ಆದರೆ ಕುಳ್ಳಗಿನ ವ್ಯಕ್ತಿಗಳಿಗೆ ಒಂದು ಒಳ್ಳೆಯ ಸುದ್ದಿಯು ಇಲ್ಲಿದ್ದು, ಕುಳ್ಳಗಿನ ವ್ಯಕ್ತಿಗಳಿಗೆ ಉದ್ದಗಿನ ವ್ಯಕ್ತಿಗಳಿಗಿಂತ ಹೆಚ್ಚಿನ ಆರೋಗ್ಯ ಲಾಭಗಳು ಇವೆ ಎಂದು ಅಧ್ಯಯನಗಳು ಹೇಳಿವೆ. ಅಂತಹ ಲಾಭಗಳು ಏನು ಎಂದು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲು ಪ್ರಯತ್ನಿಸಿದ್ದೇವೆ.

​ದೀರ್ಘಾಯುಷ್ಯ

  • ಹೆಚ್ಚು ಉದ್ದ ಇರುವವರ ಜೀವಿತಾವಧಿಯು ತುಂಬಾ ಕಡಿಮೆ ಆಗಿರುವುದು ಎಂದು ಅಧ್ಯಯನಗಳು ಹೇಳಿವೆ. ಸುಮಾರು 8 ಸಾವಿರ ಮಂದಿ ಜಪಾನ್ ಮತ್ತು ಅಮೆರಿಕಾದ ಜನರನ್ನು ಸಮೀಕ್ಷೆಗೆ ಒಳಪಡಿಸಿದ ವೇಳೆ ಕುಳ್ಳಗಿನ ವ್ಯಕ್ತಿಗಳು ದೀರ್ಘಾಯುಷ್ಯ ಹೊಂದಿರುವರು ಎಂದು ತಿಳಿದುಬಂದಿದೆ.
  • ಉದ್ದಗಿನ ವ್ಯಕ್ತಿಗಳಲ್ಲಿ ಕೆಲವೊಂದು ದೀರ್ಘಾವಧಿ ಕಾಯಿಲೆಗಳು ಕಂಡುಬರುವುದು ಹೆಚ್ಚು ಎಂದು ಅಧ್ಯಯನಗಳು ಹೇಳಿವೆ.

​ಕ್ಯಾನ್ಸರ್ ಅಪಾಯ ಕಡಿಮೆ

  • ಉದ್ದಗಿನ ವ್ಯಕ್ತಿಗಳಿಗೆ ಕ್ಯಾನ್ಸರ್ ಅಪಾಯವು ಹೆಚ್ಚು ಎಂದು 2014ರಲ್ಲಿ ನಡೆಸಿದ ಅಧ್ಯಯನವೊಂದು ಹೇಳಿದೆ. ಇದಕ್ಕಾಗಿ ಸುಮಾರು 38,862 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು.
  • ಇದರಲ್ಲಿ ಉದ್ದಗಿನ ಮಹಿಳೆಯರಲ್ಲಿ ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್ ಅಪಾಯವು ಹೆಚ್ಚು ಎಂದು ಹೇಳಿವೆ. ಉದ್ದಗಿರುವ ವ್ಯಕ್ತಿಗಳಲ್ಲಿ ಕರುಳು, ಗುದ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವು ಇರುವುದು.

ಧೂಮಪಾನ-ತಂಬಾಕು ಸೇವನೆಯಿಂದ ದೂರವಿರಿ, ಇಲ್ಲಾಂದ್ರೆ ಕ್ಯಾನ್ಸರ್ ಪಕ್ಕಾ!

​ರಕ್ತ ಹೆಪ್ಪುಗಟ್ಟುವ ಆಗುವ ಅಪಾಯ ಕಡಿಮೆ

ಜಡ ಜೀವನಶೈಲಿ ನಡೆಸುವಂತಹ ಕೆಲವು ಉದ್ದಗಿನ ಪುರುಷರಲ್ಲಿ ಹೆಚ್ಚಾಗಿ ರಕ್ತ ಹೆಪ್ಪುಗಟ್ಟುವ ಅಪಾಯವು ಇದೆ. 195-200 ಸೆ.ಮೀ. ಉದ್ದಗಿನ ವ್ಯಕ್ತಿಗಳಲ್ಲಿ ರಕ್ತಹೆಪ್ಪುಗಟ್ಟುವಿಕೆ ಸಮಸ್ಯೆಯು ಕುಳ್ಳಗಿನ ವ್ಯಕ್ತಿಗಳಿಗಿಂತ ಕಡಿಮೆ ಎಂದು ಅಧ್ಯಯನಗಳು ಹೇಳಿವೆ.

​ಮೆದುಳಿಗೆ ಬೇಗ ಸಂದೇಶ ರವಾನೆ

  • ಉದ್ದಗಿನ ವ್ಯಕ್ತಿಗಳಿಗಿಂತ ಕುಳ್ಳಗಿನ ವ್ಯಕ್ತಿಗಳಲ್ಲಿ ಸಂಕೇತಗಳು ಬೇಗನೆ ಮೆದುಳಿಗೆ ರವಾನೆ ಆಗುವುದು. ಉದ್ದಗಿನ ಜನರು ಕಣ್ಣು, ಕಿವಿ, ನಾಲಗೆ ಮತ್ತು ಚರ್ಮದ ಸಂಜ್ಞೆಯನ್ನು ಸೆಕೆಂಡಿನ ಹತ್ತನೇ ಒಂದು ಭಾಗವನ್ನು ತೆಗೆದುಕೊಳ್ಳುವರು.
  • ಯಾಕೆಂದರೆ ಉದ್ದಗಿನ ವ್ಯಕ್ತಿಗಳಲ್ಲಿ ಮೆದುಳಿಗೆ ಸಂಜ್ಞೆಯು ರವಾನೆಯಾಗಲು ಹೆಚ್ಚು ನರಗಳನ್ನು ದಾಟಿ ಹೋಗಬೇಕಾಗುತ್ತದೆ ಎಂದು ನರ ತಜ್ಞರು ಹೇಳಿರುವರು.

ಮೆದುಳಿನ ಆರೋಗ್ಯ ಹೆಚ್ಚಿಸುವ ಆಹಾರಗಳು, ಇವುಗಳನ್ನು ಮಿಸ್ ಮಾಡದೇ ಸೇವಿಸಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ