Please enable javascript.Cancer Types And Symptoms,ಅಷ್ಟು ಸುಲಭವಾಗಿ ಮನುಷ್ಯನನ್ನು ಬಿಟ್ಟು ಹೋಗದ, 5 ವಿಧದ ಕ್ಯಾನ್ಸರ್ ಕಾಯಿಲೆಗಳಿವು! - these are these most dangerous types of cancer - Vijay Karnataka

ಅಷ್ಟು ಸುಲಭವಾಗಿ ಮನುಷ್ಯನನ್ನು ಬಿಟ್ಟು ಹೋಗದ, 5 ವಿಧದ ಕ್ಯಾನ್ಸರ್ ಕಾಯಿಲೆಗಳಿವು!

Produced byಮನೋಹರ್ ಶೆಟ್ಟಿ | Vijaya Karnataka Web 29 Aug 2023, 11:27 am
Subscribe

ಕ್ಯಾನ್ಸರ್ ಜಾತಿಗಳು ಮತ್ತು ಲಕ್ಷಣಗಳು: ಕ್ಯಾನ್ಸರ್ ಎನ್ನುವ ಪದ, ಕೇಳಿದರೆ ನಮ್ಮನ್ನು ಬೆಚ್ಚಿಬೀಳಿಸುವಂತೆ ಮಾಡುತ್ತದೆ! ಯಾಕೆಂದ್ರೆ ಈ ಕಾಯಿಲೆ ಕಾಣಿಸಿಕೊಂಡ ಮೇಲೆ, ಮನುಷ್ಯ ಬದುಕಿ ಉಳಿಯುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ!

these are these most dangerous types of cancer
ಅಷ್ಟು ಸುಲಭವಾಗಿ ಮನುಷ್ಯನನ್ನು ಬಿಟ್ಟು ಹೋಗದ, 5 ವಿಧದ ಕ್ಯಾನ್ಸರ್ ಕಾಯಿಲೆಗಳಿವು!
ಮನುಷ್ಯನಿಗೆ ಇದ್ದಕ್ಕಿದಂತೆ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದರೆ, ಏನೋ ಆಂತರಿಕ ವಾಗಿ ಸಮಸ್ಯೆಗಳು ಕಂಡು ಬರುತ್ತಿದೆ ಎಂದರ್ಥ! ಇಂದಿನ ದಿನಗಳಲ್ಲಿ ಬಂದಿರುವ ಕಾಯಿಲೆಗಳು ಸಣ್ಣದು ಅಥವಾ ದೊಡ್ಡದು ಎಂಬುದನ್ನು ಕೆಲವೊಂದು ರೋಗ ನಿರ್ಣಯದ ಮೂಲಕ ಪತ್ತೆ ಹಚ್ಚಬಹುದಾಗಿದೆ.

ಇಂದಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆ, ಹೆಚ್ಚಿನ ಜನರಲ್ಲಿ ಸೈಲೆಂಟ್ ಆಗಿ ಕಾಣಿಸಿಕೊಳ್ಳುತ್ತಿದೆ. ಈ ಭಯಾನಕ ಕಾಯಿಲೆ, ಆರೋಗ್ಯಕ್ಕೆ ತೊಂದರೆ ಉಂಟು ಮಾಡುವುದರ ಸಹಿತ ಮನುಷ್ಯನ ಜೀವವನ್ನು ಇಲ್ಲವಾಗಿಸುವ ಮಾರಕ ಕಾಯಿಲೆ, ಎಂದರೆ ತಪ್ಪಾಗಲಾರದು. ಈ ಲೇಖನದಲ್ಲಿ, ಸೈಲೆಂಟ್ ಆಗಿ ಕಾಡುವ ಕೆಲವೊಂದು ಭಯಾನಕ ಕಾಯಿಲೆಯ ಬಗ್ಗೆ ಮಾಹಿತಿ ಯನ್ನು ನೀಡಿದ್ದೇವೆ, ಮುಂದೆ ಓದಿ...

ಕ್ಯಾನ್ಸರ್ ಕಾಯಿಲೆಯ ರೋಗ ಲಕ್ಷಣಗಳು

ಕ್ಯಾನ್ಸರ್ ಕಾಯಿಲೆಯ ರೋಗ ಲಕ್ಷಣಗಳು

ಕ್ಯಾನ್ಸರ್ ಕಾಣಿಸಿಕೊಂಡ ವ್ಯಕ್ತಿಗೆ ಸುಸ್ತು ಮತ್ತು ಆಯಾಸ ಹೆಚ್ಚಾಗಿ ಕಾಡುತ್ತದೆ.
ಇದ್ದಕ್ಕಿದ್ದಂತೆ ದೇಹದ ತೂಕ ಕಡಿಮೆಯಾಗುವುದು!
ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಅತಿಯಾದ ನೋವು ಕಂಡುಬರುವುದು.
ಮಹಿಳೆಯರಿಗೆ ಸ್ತನದಲ್ಲಿ ಬದಲಾವಣೆ, ಮೊಲೆ ತೊಟ್ಟುಗಳಲ್ಲಿ ನೋವು ಕಂಡು ಬರುವುದು, ಸ್ತನದಲ್ಲಿ ಗಡ್ಡೆಗಳು ಕಾಣಿಸಿ ಕೊಳ್ಳುವುದು.
ಚರ್ಮದಲ್ಲಿ ತುರಿಕೆ, ಅಥವಾ ಚರ್ಮದ ಕೆಂಪು ಬಣ್ಣಕ್ಕೆ ತಿರುಗುವುದು.

ದೇಹದಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ, ಅದು ಕ್ಯಾನ್ಸರ್‌ ಕಾಯಿಲೆ ಇರಬಹುದು!

ಕ್ಯಾನ್ಸರ್ ರೋಗವನ್ನ ಸುಲಭವಾಗಿ ಕಂಡುಹಿಡಿಯಬಹುದೇ?

ಕಿಡ್ನಿ ಕ್ಯಾನ್ಸರ್

ಕಿಡ್ನಿ ಕ್ಯಾನ್ಸರ್
  • ಆರೋಗ್ಯ ತಜ್ಞರು ಹೇಳುವ ಪ್ರಕಾರ, ಕಿಡ್ನಿ ಕ್ಯಾನ್ಸರ್ ಕಂಡು ಬರುವ ವ್ಯಕ್ತಿಯಲ್ಲಿ ಮೊದಲಿಗೆ ಯಾವುದೇ ರೀತಿಯ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ.
  • ಆನಂತರದಲ್ಲಿ ದೇಹದಲ್ಲಿ ತುಂಬಾ ಗಂಭೀರವಾದ ರೋಗ ಲಕ್ಷಣಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಕಿಡ್ನಿ ಕ್ಯಾನ್ಸರ್‌ನಲ್ಲಿ ಎರಡು ವಿಧಗಳಿವೆ. ಒಂದು ರೀನಲ್ ಸೆಲ್ ಕ್ಯಾನ್ಸರ್ ಹಾಗೂ ಇನ್ನೊಂದು transitionalಸೆಲ್ ಕ್ಯಾನ್ಸರ್.ಲಕ್ಷಣಗಳು: ಮೂತ್ರ ಮಾಡುವಾಗ ರಕ್ತ ಬರುವುದು ಇಲ್ಲಾಂದ್ರೆ ಮೂತ್ರ ಮಾಡುವಾಗ ನೋವು ಕಾಣಿಸಿಕೊಳ್ಳುವುದು, ಆಗಾಗ ಸೊಂಟ, ಬೆನ್ನು ನೋವು ಬರುವುದು, ಇವೆಲ್ಲವೂ ಕೂಡ ಕಿಡ್ನಿ ಕ್ಯಾನ್ಸರ್‌ನ ಲಕ್ಷಣಗಳು. ​

ಕರುಳಿನ ಕ್ಯಾನ್ಸರ್

ಕರುಳಿನ ಕ್ಯಾನ್ಸರ್
  • ಕರುಳಿನ ಕ್ಯಾನ್ಸರ್ ತುಂಬಾನೇ ಅಪಾಯಕಾರಿ ಎಂದು ಹೇಳಲಾಗುತ್ತದೆ. ಇಂದಿನ ದಿನಗಳಲ್ಲಿ ಯುವ ಜನತೆ ಯರು, ಈ ಕಾಯಿಲೆಗೆ ಗುರಿಯಾಗುತ್ತಿದ್ದಾರೆ ಯಾಕೆ ಈ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಎಂಬುದಕ್ಕೆ, ಸ್ಪಷ್ಟ ಕಾರಣವು ತಿಳಿದು ಬಂದಿಲ್ಲ.
  • ಆದರೆ ಕಟ್ಟ ಆಹಾರಪದ್ಧತಿ, ದುರಾಭ್ಯಾಸಗಳು, ಜಡ ಜೀವನಶೈಲಿ, ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗಿದೆ.
  • ತಜ್ಞರು ಹೇಳುವ ಪ್ರಕಾರ, ದೈನಂದಿನ ಆಹಾರ ಪದ್ಧತಿ ಯಲ್ಲಿ ನಾರಿನಾಂಶವು ಕಡಿಮೆ ಇರುವುದು, ಅಧಿಕ ಸಂಸ್ಕರಿತ ಕೊಬ್ಬು ಹಾಗೂ ಕ್ಯಾಲೋರಿ ಅಂಶ ಹೆಚ್ಚಿರುವ ಆಹಾರಗಳು, ಧೂಮ ಪಾನ ಹಾಗೂ ಮದ್ಯಪಾನವು ಕರುಳಿನ ಕ್ಯಾನ್ಸರ್ ನ ಸಮಸ್ಯೆಯನ್ನು ಹೆಚ್ಚಿಸುವುದು.
  • ಲಕ್ಷಣಗಳು: ಮಲವಿಸರ್ಜನೆಯಲ್ಲಿ ರಕ್ತ ಕಂಡು ಬರುವುದು, ಭೇದಿ, ಮಲಬದ್ಧತೆ ಪ್ರತಿನಿತ್ಯ ಕಾಣಿಸಿ ಕೊಳ್ಳುವುದು.

ಕರುಳಿನ ಕ್ಯಾನ್ಸರ್ ಬರೋದಿದ್ರೆ ಎರಡು ವರ್ಷ ಮುಂಚೇನೆ ಗೊತ್ತಾಗುತ್ತಂತೆ!


ಶ್ವಾಸಕೋಶದ ಕ್ಯಾನ್ಸರ್

ಶ್ವಾಸಕೋಶದ ಕ್ಯಾನ್ಸರ್
  • ಮನುಷ್ಯನಿಗೆ ಶ್ವಾಸಕೋಶದ ಭಾಗದಲ್ಲಿ ಕ್ಯಾನ್ಸರ್ ಜೀವಕೋಶಗಳು ಕಂಡು ಬಂದರೆ ಅದನ್ನು ಶ್ವಾಸ ಕೋಶದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ.
  • ಪ್ರಮುಖವಾಗಿ ವಿಪರೀತ ಧೂಮಪಾನ ಮಾಡುವವರಲ್ಲಿ ಶೇಕಡ 90% ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ.
  • ಲಕ್ಷಣಗಳು: ಪದೇ ಪದೇ ಕೆಮ್ಮು ಬರುವುದು. ಆ ಬಳಿಕ ಇದ್ದಕ್ಕಿ ದಂತೆ ಜಾಸ್ತಿ ಆಗುವುದು, ಕೆಮ್ಮುವಾಗ ಕಫದ ಜೊತೆಗೆ, ರಕ್ತ ಕಾಣಿಸಿಕೊಳ್ಳುವುದು, ಕೆಲವರಿಗೆ ಕುತ್ತಿಗೆ ಭಾಗದಲ್ಲಿ ಗಂಟು ಕಂಡು ಬರುವುದು.​

ಬೆಳ್ಳಂಬೆಳಗ್ಗೆ ಹೀಗಾದರೆ ಅದು ಶ್ವಾಸಕೋಶದ ಕ್ಯಾನ್ಸರ್ ಇರಬೇಕು ನೋಡಿ!

ಸ್ತನ ಕ್ಯಾನ್ಸರ್

ಸ್ತನ ಕ್ಯಾನ್ಸರ್
  • ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಎನ್ನುವುದು ಕಾಮನ್ ಕಾಯಿಲೆ ಆಗಿ ಬಿಟ್ಟಿದೆ. ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ನಿಜಕ್ಕೂ ಆತಂಕ ಮೂಡಿಸುತ್ತಿದೆ.
  • ಹೀಗಾಗಿ ಆರಂಭದಲ್ಲಿಯೇ ಈ ಕಾಯಿಲೆಯ ರೋಗ ಲಕ್ಷಣಗಳನ್ನು ಪತ್ತೆ ಹಚ್ಚಿ ಸರಿಯಾದ ಚಿಕಿತ್ಸೆ ಪಡೆದು ಕೊಂಡರೆ ಸಾವಿನ ಹಂತಕ್ಕೆ ಹೋಗುವುದರಿಂದ ತಪ್ಪಿಸಿ ಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.
  • ಲಕ್ಷಣಗಳು: ಸ್ತನಗಳ ಗಾತ್ರದಲ್ಲಿ ಅಥವಾ ಆಕಾರದಲ್ಲಿ ಬದಲಾವಣೆ ಆಗುವುದು, ಮೊಲೆ ತೊಟ್ಟುಗಳಿಂದ ದ್ರವ ವಿಸರ್ಜನೆ ಆಗುವುದು, ದೇಹದ ತೂಕದಿಂದ ಕೂಡ ಸ್ತನದ ಕ್ಯಾನ್ಸರ್ ನ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ.

ಮಹಿಳೆಯರಿಗೆ ಈ ಲಕ್ಷಣಗಳಿದ್ದರೆ ಅದು ಸ್ತನ ಕ್ಯಾನ್ಸರ್ ಗ್ಯಾರಂಟಿ!!
ಮನೋಹರ್ ಶೆಟ್ಟಿ
ಲೇಖಕರ ಬಗ್ಗೆ
ಮನೋಹರ್ ಶೆಟ್ಟಿ
"ಕನ್ನಡದ ಲೇಖನ ಬರವಣಿಗೆಯಲ್ಲಿ 9 ವರ್ಷಗಳ ಸುದೀರ್ಘ ವೃತ್ತಿಪರ ಅನುಭವದೊಂದಿಗೆ ಭಾಷೆಯ ಅನುವಾದದೊಂದಿಗೆ ಪ್ರಾರಂಭಿಸಿ ಇಂದಿಗೆ ವಿವಿಧ ವಿಭಾಗಗಳಲ್ಲಿ ಅಂದರೆ ಜೀವನಶೈಲಿ, ಆರೋಗ್ಯ, ಸೌಂದರ್ಯ, ಸಂಬಂಧ, ಜಾಹೀರಾತು ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸಿದ ಹೆಮ್ಮೆ ನನ್ನದು. ಭಾಷೆಯ ಬಗೆಗಿನ ಹಿಡಿತ, ವಿಚಾರದ ಕುರಿತಾದ ಜ್ಞಾನಾಸಕ್ತಿಯೊಂದಿಗೆ ಓದುಗರಿಗೆ ಅತ್ಯುತ್ತಮ ವಿಷಯಗಳನ್ನೊಳಗೊಂಡ ಲೇಖನಗಳನ್ನು ನೀಡುವಲ್ಲಿ ನನಗೆ ತೃಪ್ತಿಯಿದೆ. ಅದು ವಿಚಾರವಿರುವ ಲೇಖನವಾದರೂ ಅಥವಾ ಸಾಧಾರಣ ಮುಖ್ಯಾಂಶವಾದರೂ ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಬರವಣಿಗೆಯನ್ನು ತರಲು ನಾನು ಪ್ರಯತ್ನಿಸುತ್ತೇನೆ. ಸದ್ಯದ ಡಿಜಿಟಲ್ ವಿದ್ಯಮಾನಗಳ ಬಗ್ಗೆ ನನ್ನನ್ನು ನಾನು ಕ್ರೂಢೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಇತರ ಲೇಖಕರ ವಿಷಯಗಳನ್ನು, ವಿಚಾರಗಳನ್ನು ಅನುಸರಿಸಿ ನನ್ನ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುತ್ತಾ ನನ್ನ ಬರವಣಿಗೆಯ ಗುಣಮಟ್ಟವನ್ನು ಈಗಿನ ಓದುಗರ ಆಸಕ್ತಿಗೆ ತಕ್ಕಂತೆ ಕಾಪಾಡಿಕೊಳ್ಳುತ್ತೇನೆ. ಬಿಡುವಿನ ಸಮಯದಲ್ಲಿ ನನ್ನ ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆಯುವ ಮೂಲಕ ಉತ್ತಮ ವೃತ್ತಿಪರತೆಗಾಗಿ ನನ್ನನ್ನು ನಾನು ಚೈತನ್ಯದಿಂದ ಕೂಡಿರುವಂತೆ ನೋಡಿಕೊಳ್ಳುತ್ತೇನೆ."... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ