ಆ್ಯಪ್ನಗರ

ನೀವು ಓದಲೇ ಬೇಕಾದ ಕನ್ನಡದ ಪ್ರಮುಖ ಪುಸ್ತಕಗಳು

ಕನ್ನಡದಲ್ಲಿ ಹಲವು ಲೇಖಕರು ಬರೆದಂತಹ ಪುಸ್ತಕಗಳಿವೆ. ಅವುಗಳಲ್ಲಿ ಒಂದಿಷ್ಟು ಪ್ರಮುಖವಾಗಿವೆ. ಇವುಗಳನ್ನು ನೀವು ಓದಲೇಬೇಕು. ಅಂತಹ ಕನ್ನಡದ ಪ್ರಮುಖ ಲೇಖಕರ ಪುಸ್ತಕಗಳ ಬಗ್ಗೆ ಇಲ್ಲಿದೆ ಮಾಹಿತಿ.

Vijaya Karnataka Web 24 Dec 2021, 4:01 pm
GET THIS Get ThisGet Thisಕನ್ನಡದ ಲೇಖಕರಾದ ಡಿವಿಜಿ, ಶಿವರಾಮ ಕಾರಂತ, ಕುವೆಂಪು, ಪೂರ್ಣ ಚಂದ್ರ ತೇಜಸ್ವಿ ಅವರು ಪ್ರಸಿದ್ಧ ಲೇಖಕರು, ಇವರ ಬಗ್ಗೆ ನಿಮಗೆ ತಿಳಿದೇ ಇದೆ. ಇವರು ಬರೆದಂತಹ ಪ್ರಶಸ್ತಿ ಪಡೆದಂತಹ ಕೆಲವು ಪುಸ್ತಕಗಳ ಬಗ್ಗೆ ಇಲ್ಲಿದೆ ಮಾಹಿತಿ, ಅವುಗಳನ್ನು ನೀವು ಓದಲೇಬೇಕು.
Vijaya Karnataka Web ನೀವು ಓದಲೇ ಬೇಕಾದ ಕನ್ನಡದ ಪ್ರಮುಖ ಪುಸ್ತಕಗಳು


Manku Thimmana kagga-by D.V.


ಮಂಕು ತಿಮ್ಮನ ಕಗ್ಗ - ಡಿ.ವಿ.ಜಿ.ಯವರ ಪದ್ಯ ಪುಸ್ತಕ. ಇದು ಕನ್ನಡದ ಭಗವದ್ಗೀತೆ ಎಂದೂ ಕೆಲವರಲ್ಲಿ ಜನಪ್ರಿಯವಾಗಿದೆ. ಇದರಲ್ಲಿ ಡಿ.ವಿ.ಜಿ.ಯವರು ಜೀವನದ ವಿಶಿಷ್ಟ ಆಯಾಮಗಳನ್ನು,ಜೀವನದ ರೀತಿ ನೀತಿಗಳನ್ನು ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ. ಇದರಲ್ಲಿ ಮಹಾಭಾರತ, ರಾಮಾಯಣಗಳಲ್ಲದೆ ಪ್ರಸಕ್ತ ಕಾಲದ ಘಟನೆಗಳನ್ನು ಉಲ್ಲೇಖಿಸಿ ಜೀವನದ ಮೌಲ್ಯಗಳನ್ನು ವಿವರಿಸಲಾಗಿದೆ. GET THIS


Mookajjiya Kanasugalu:

ಮೂಕಜ್ಜಿಯ ಕನಸುಗಳು ಡಾ. ಶಿವರಾಮ ಕಾರಂತರು ರಚಿಸಿರುವ ಒಂದು ಕಾದಂಬರಿ. ಈ ಕಾದಂಬರಿಗೆ ೧೯೭೭ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಅಜ್ಜಿ ಮತ್ತು ಮೊಮ್ಮಗನ ನಡುವೆ ನಡೆಯೋ ಸಂಭಾಷಣೆಯನ್ನು ಶಿವರಾಮ ಕಾರಂತರು ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. ಮೊಮ್ಮಗನ ಪ್ರಶ್ನೆಗಳಿಗೆ ಅಜ್ಜಿ ತನ್ನ ಅನಿಸಿಕೆಗಳನ್ನು ಹೇಳುತ್ತಾ ಇಂದಿನ ಜಮಾನದ ಜನತೆಗೆ ಇರುವ ಹಲವು ಬಗೆಯ ಗೊಂದಲಗಳನ್ನು ಬಿಡಿಸಿ ತಿಳಿಸಿದ್ದಾರೆ.ಈ ಕಾದಂಬರಿಯಲ್ಲಿ ಬರುವ ಮೂಕಜ್ಜಿಗೆ ಒಂದು ಅಚ್ಚರಿಯಾದ ಶಕ್ತಿ ಇರುತ್ತದೆ.ಅದೇನೆಂದರೆ,ಯಾವುದೇ ವಸ್ತು ಅಥವಾ ಮನುಷ್ಯನನ್ನು ಕಂಡರೆ ಅವರ ಬಗ್ಗೆ ಕನಸುಗಳು ಮೂಡುತ್ತವೆ.ಅಂದರೆ ಇವು ನಿದ್ದೆಯಲ್ಲಿ ಬರೋ ಕನಸುಗಳು ಅಲ್ಲ.ಎಚ್ಚರವಿದ್ದಾಗ ಬರುವ ಕನಸುಗಳು. GET THIS


Karvalo

ಕರ್ವಾಲೋ ಪೂರ್ಣಚಂದ್ರ ತೇಜಸ್ವಿಯವರ ಒಂದು ಪ್ರಮುಖ ಕಾದಂಬರಿ. ಇದು ಒಂದು ಹಾರುವ ಓತಿಯ ಬೆನ್ನು ಹತ್ತಿದ ವಿಜ್ಞಾನಿಯ ಕಥೆ. ಈ ಕತೆಯ ನಿರೂಪಕ, ಮಂದಣ್ಣ ಮತ್ತು ಕರ್ವಾಲೋ ಎಂಬ ಸಂಶೋಧಕ ಈ ಮೂವರು ತಮ್ಮ ಪರಿಸರದಲ್ಲಿ ಕಂಡುಕೊಂಡ ವಿಸ್ಮಯಕರ ಸಂಗತಿಗಳೇ ‘ಕರ್ವಾಲೋ’ ಕಾದಂಬರಿಯ ವಸ್ತು; ಇದರ ಸರಳ ಸುಂದರ ಹಂದರ. ಈ ಕೃತಿಯನ್ನು ಓದುತ್ತಿದ್ದರೆ ಕಣ್ಣಮುಂದೆ ಒಂದು ಚಿತ್ರದಂತೆ ಬರುತ್ತದೆ. ವಿಶೇಷವಾಗಿ ಮಂದಣ್ಣ ಮತ್ತು ಅವನ ಮದುವೆಯ ಸನ್ನಿವೇಶಗಳು ಹಾಸ್ಯದ ಹೊನಲನ್ನೇ ಹರಿಸುತ್ತವೆ. GET THIS


Marali Mannige

ಮರಳಿ ಮಣ್ಣಿಗೆ ಶಿವರಾಮ ಕಾರಂತರ ಒಂದು ಕಾದಂಬರಿ. ಈ ಕಾದಂಬರಿ ಒಂದು ಸಂಸಾರದ ಮೂರು ತಲೆಮಾರುಗಳ ಬಗ್ಗೆ ಕಥೆಯನ್ನು ಒಳಗೊಂಡಿದೆ. ಕೊಂಚ ವಿಸ್ತಾರವಾದ ಕಾದಂಬರಿಯಾದರೂ, ಹಳ್ಳಿ ಜೀವನದ ಬಗ್ಗೆ ಬರೆದಿರುವ ಒಂದು ಒಳ್ಳೆಯ ಕೃತಿ. GET THIS


Amma Helida Entu Sullugalu


ಎ ಆರ್ ಮಣಿಕಾಂತ್ ಬರೆದಿರುವ ಅಮ್ಮ ಹೇಳಿದ ಎಂಟು ಸುಳ್ಳುಗಳು ಈ ಪುಸ್ತಕದ ಒಂದೊಂದು ಲೇಖನಗಳೂ ಜೀವನ ಪಯಣಕ್ಕೆ ದಾರಿ ದೀವಿಗೆಯಂತಿದೆ. ಸೋಲನ್ನು ಮೆಟ್ಟಿ ನಿಂತ ಜನರ ಕಥೆಗಳು ನಿಜಕ್ಕೂ ಸ್ಪೂರ್ತಿದಾಯಕ. ಒಮ್ಮೆ ಕಂಬನಿ ತರಿಸುವ, ಯೋಚನೆ ಮಾಡುವಂತೆ ಮಾಡಿದ, ಒಂದು ಸಣ್ಣ ಪಾಠ ಹೇಳಿ ಹೋಗುವ ಲೇಖನಗಳ ಭಂಡಾರ ಇದು. ಓದಿರದಿದ್ದಲ್ಲಿ ಒಮ್ಮೆ ಓದಿ ನೋಡಿ. GET THIS


Disclaimer :ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ